ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Temple: ರಾಮ, ಸೀತಾ ವಿಗ್ರಹ ಕೆತ್ತನೆಗಾಗಿ ಅಯೋಧ್ಯೆಗೆ ತಂದ ಸಾಲಿಗ್ರಾಮ ಶಿಲೆಯ ದೃಶ್ಯಾವಳಿ | ವಿಡಿಯೋ

Ayodhya Ram Temple: ರಾಮ, ಸೀತಾ ವಿಗ್ರಹ ಕೆತ್ತನೆಗಾಗಿ ಅಯೋಧ್ಯೆಗೆ ತಂದ ಸಾಲಿಗ್ರಾಮ ಶಿಲೆಯ ದೃಶ್ಯಾವಳಿ | ವಿಡಿಯೋ

ಅಯೋಧ್ಯೆಗೆ ನಿನ್ನೆ ಎರಡು ಬೃಹತ್‌ ಸಾಲಿಗ್ರಾಮ ಶಿಲೆಗಳು ತಲುಪಿವೆ. ಇದೀಗ ಅದರ ವಿಡಿಯೋ ಕ್ಲಿಪ್‌ ಲಭ್ಯವಾಗಿದ್ದು, ರಾಮಸ್ಮರಣೆಯೊಂದಿಗೆ ಪವಿತ್ರ ಸಾಲಿಗ್ರಾಮ ಶಿಲೆಗಳನ್ನು ತರುವ ಸುಂದರ ದೃಶ್ಯ ಕಣ್ತುಂಬಿಕೊಳ್ಳಬಹುದು.

ರಾಮ, ಸೀತಾ ವಿಗ್ರಹ ಕೆತ್ತನೆಗಾಗಿ ಅಯೋಧ್ಯೆಗೆ ಸಾಲಿಗ್ರಾಮ ಶಿಲೆಯ ದೃಶ್ಯಾವಳಿ | ವಿಡಿಯೋ
ರಾಮ, ಸೀತಾ ವಿಗ್ರಹ ಕೆತ್ತನೆಗಾಗಿ ಅಯೋಧ್ಯೆಗೆ ಸಾಲಿಗ್ರಾಮ ಶಿಲೆಯ ದೃಶ್ಯಾವಳಿ | ವಿಡಿಯೋ (PTI)

ಅಯೋಧ್ಯೆ: ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಚಂದ್ರ ಮತ್ತು ಸೀತೆಯ ವಿಗ್ರಹ ಕೆತ್ತನೆಗಾಗಿ ನೇಪಾಳದಿಂದ ಅಯೋಧ್ಯೆಗೆ ನಿನ್ನೆ ಎರಡು ಬೃಹತ್‌ ಸಾಲಿಗ್ರಾಮ ಶಿಲೆಗಳು ತಲುಪಿವೆ. ಇದೀಗ ಅದರ ವಿಡಿಯೋ ಕ್ಲಿಪ್‌ ಲಭ್ಯವಾಗಿದ್ದು, ರಾಮಸ್ಮರಣೆಯೊಂದಿಗೆ ಪವಿತ್ರ ಸಾಲಿಗ್ರಾಮ ಶಿಲೆಗಳನ್ನು ತರುವ ಸುಂದರ ದೃಶ್ಯ ಕಣ್ತುಂಬಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ನಿನ್ನೆ ಸ್ಥಳೀಯರು ಮತ್ತು ಆರ್ಚಕರು ಸಾಲಿಗ್ರಾಮ ಶಿಲೆಗೆ ಪೂಜೆ ಸಲ್ಲಿಸಿದ್ದರು. ಬಳಿಕ ಹೂವಿನಿಂದ ಅಲಂಕಾರ ಮಾಡಿ ಸ್ವಾಗತಿಸಿದರು. ಬಳಿಕ ಈ ಸಾಲಿಗ್ರಾಮ ಶಿಲೆಗಳನ್ನು ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ.

ಇದೇ ಶಿಲೆಗಳನ್ನು ಬಳಸಿ ರಾಮ ಮತ್ತು ಸೀತೆಯ ಮೂರ್ತಿಗಳನ್ನು ನಿರ್ಮಿಸಿ ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ.

ಉತ್ತರ ಪ್ರದೇಶದ ಗೋರಖನಾಥ ದೇವಾಲಯದಿಂದ ಎರಡು ದೊಡ್ಡ ಸಾಲಿಗ್ರಾಮ ಕಲ್ಲುಗಳು ಅಯೋಧ್ಯೆಗೆ ನಿನ್ನೆ ತರಲಾಗಿತ್ತು. ಈ ಶಿಲೆಗಳನ್ನು ಅಯೋಧ್ಯೆಯಲ್ಲಿ ರಾಮ ಸೇವಕ ಪುರಂನಲ್ಲಿ (ದೇವಾಲಯದ ಕಟ್ಟಡ ಸಾಮಗ್ರಿಗಳ ಸಂಗ್ರಹಣಾ ಪ್ರದೇಶ) ಇರಿಸಲಾಗಿದೆ.

ಸೀತಾ ಮಾತೆ ಜನಿಸಿದ ನಗರವಾದ ನೇಪಾಳದ ಜನಕಪುರದ ಕಾಳಿ ಗಂಡಕಿ ನದಿಯಲ್ಲಿ ಮಾತ್ರ ಸಿಗುವ ಈ ಸಾಲಿಗ್ರಾಮ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿದೆ.

ವಿಷ್ಣುವಿನ ರೂಪ ಎಂದೇ ಪರಿಗಣನೆ ಮಾಡಲಾಗಿರುವ ಸಾಲಿಗ್ರಾಮದ ಶಿಲೆಗಳು ಕಂಡುಬರುವ ಏಕೈಕ ಮೂಲ, ಕಾಳಿ ಗಂಡಕಿ ನದಿಯ ತಟವಾಗಿದೆ. ಅಲ್ಲಿಂದ ಈ ಎರಡು ಬೃಹತ್‌ ಶಿಲೆಗಳನ್ನು ತರಲಾಗಿದೆ.

ನೇಪಾಳದಲ್ಲಿ ಪುರೋಹಿತರು, ಸ್ಥಳೀಯ ಮುಖಂಡರು ಮತ್ತು ಬೇನಿ ಪುರಸಭೆಯ ನಿವಾಸಿಗಳು ನೇಪಾಳದ ಮಯಾಗಡಿ ಜಿಲ್ಲೆಯ ಕಾಳಿ ಗಂಡಕಿ ನದಿಯ ದಡದಲ್ಲಿ ಹಿಮಾಲಯದ ಕಲ್ಲುಗಳಿಗೆ ಪೂಜೆ ನೆರವೇರಿಸಿ ಅವುಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದೀಗ ಈ ಶಿಲೆಗಳು ಅಯೋಧ್ಯೆಯಲ್ಲಿ ತಲುಪಿವೆ.

ಈಗ ತಂದಿರುವ ಎರಡು ಶಿಲೆಗಳಲ್ಲಿ ಒಂದು ಶಿಲೆಯ ತೂಕ 26 ಟನ್​ ಮತ್ತು ಇನ್ನೊಂದು ಶೀಲೆಯು 14 ಟನ್ ತೂಕವಿದೆ. ತೂಗುತ್ತದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ ಬಹುತೇಕ ವಿಷ್ಣು ದೇಗುಲಗಳಲ್ಲಿ ಸಾಲಿಗ್ರಾಮ ಶಿಲೆಗಳಲ್ಲಿ ವಿಷ್ಣು ಮೂರ್ತಿಗಳನ್ನು ನಿರ್ಮಿಸಲಾಗಿದೆ. ಉಡುಪಿಯ ಕೃಷ್ಣ ಮಠದಲ್ಲಿರುವ ಕೃಷ್ಣನ ವಿಗ್ರಹ, ವೃಂದಾವನದ ರಾಧಾ ರಮಣ ದೇವಸ್ಥಾನದ ಮೂರ್ತಿ, ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಿಷ್ಣು ವಿಗ್ರಹ ಮತ್ತು ಗಡವಾಲ್​ನ ಬದ್ರೀನಾಥ ಮಂದಿರದ ವಿಷ್ಣು ವಿಗ್ರಹಗಳನ್ನು ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗಿದೆ.

IPL_Entry_Point