ಕನ್ನಡ ಸುದ್ದಿ  /  Nation And-world  /  Shri Ram-janaki Yatra: Railways To Run Its Tourist Train Between Ayodhya And Janakpur In Nepal

Shri Ram-Janaki Yatra: ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ರೈಲು ಯಾತ್ರೆ; ದಿನಾಂಕ, ಬುಕ್ಕಿಂಗ್‌ ಶುರು ಯಾವಾಗ? ವಿವರ ಇಲ್ಲಿದೆ ನೋಡಿ

Shri Ram-Janaki Yatra: ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ಮುಂದಿನ ತಿಂಗಳಿಂದ ಪ್ರವಾಸಿ ರೈಲು ಯಾತ್ರೆ ಶುರುವಾಗಲಿದೆ. ಭಾರತೀಯ ರೈಲ್ವೆ ಈ ಉಪಕ್ರಮ ಜಾರಿಗೊಳಿಸಿದ್ದು, ಮೊದಲ ಯಾತ್ರೆ ಫೆ.17ರಂದು ಹೊರಡಲಿದೆ. ನವದೆಹಲಿಯಲ್ಲಿ ಇದಕ್ಕೆ ಚಾಲನೆ ಸಿಗಲಿದೆ.

ಭಾರತ್‌ ಗೌರವ್‌ ಟ್ರೈನ್‌
ಭಾರತ್‌ ಗೌರವ್‌ ಟ್ರೈನ್‌

ಶ್ರೀ ರಾಮ್‌ - ಜಾನಕಿ ಯಾತ್ರಾ: ಅಯೋಧ್ಯಾ ಟು ಜನಕಪುರ ('Shri Ram-Janaki Yatra: Ayodhya to Janakpur') ಸದ್ಯ ದೇಶವಾಸಿಗಳ ಗಮನ ಸೆಳೆಯುತ್ತಿರುವ ಯಾತ್ರಾ ವಿಚಾರ.

ಹೌದು… ಭಾರತದ ಅಯೋಧ್ಯೆಯಿಂದ ನೇಪಾಳದ ಜನಕಪುರಕ್ಕೆ ಮುಂದಿನ ತಿಂಗಳಿಂದ ಪ್ರವಾಸಿ ರೈಲು ಯಾತ್ರೆ ಶುರುವಾಗಲಿದೆ. ಭಾರತೀಯ ರೈಲ್ವೆ ಈ ಉಪಕ್ರಮ ಜಾರಿಗೊಳಿಸಿದ್ದು, ಮೊದಲ ಯಾತ್ರೆ ಫೆ.17ರಂದು ಹೊರಡಲಿದೆ. ನವದೆಹಲಿಯಲ್ಲಿ ಇದಕ್ಕೆ ಚಾಲನೆ ಸಿಗಲಿದೆ.

ಭಾರತ ಮತ್ತು ನೇಪಾಳಗಳ ನಡುವೆ ದ್ವಿಪಕ್ಷೀಯ ಸಂಬಂಧ, ಸಾಂಸ್ಕೃತಿಕ ಸಂಬಂಧ ಗಟ್ಟಿಗೊಳಿಸುವ ಕ್ರಮವಾಗಿ ಈ ಯಾತ್ರೆ ಆಯೋಜನೆಯಾಗಿದೆ. ಇದು ಧಾರ್ಮಿಕ ಯಾತ್ರೆಯಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲಿದೆ.

ಈ ರೈಲು ನಂದಿಗ್ರಾಮ, ಸೀತಾಮಡಿ, ಕಾಶಿ ಮತ್ತು ಪ್ರಯಾಗ್‌ರಾಜ್‌ಗಳಿಗೂ ಪ್ರವಾಸಿಗರನ್ನು ಕರೆದೊಯ್ಯಲಿದೆ. ಎರಡು ರಾತ್ರಿ ಜನಕಪುರ ಮತ್ತು ವಾರಾಣಸಿಯ ಹೋಟೆಲ್‌ಗಳಲ್ಲಿ ವಾಸ್ತವ್ಯ ಇರಲಿದೆ. ಅಯೋಧ್ಯೆಯಲ್ಲಿ ಅಯೋಧ್ಯಾ, ಸೀತಾಮಡಿ, ಪ್ರಯಾಗರಾಜ್‌ಗಳಿಗೆ ಭೇಟಿ ಇರಲಿದೆ.

ಭಾರತ್‌ ಗೌರವ ರೈಲು ಡಿಲೆಕ್ಸ್‌ ಎಸಿ ಟೂರಿಸ್ಟ್‌ ಟ್ರೇನ್‌ನಲ್ಲಿ ಎರಡು ಫೈನ್‌ ಡೈನಿಂಗ್‌ ರೆಸ್ಟೋರೆಂಟ್‌, ಮಾಡರ್ನ್‌ ಕಿಚನ್‌, ಶವರ್‌ ಕ್ಯುಬಿಕಲ್‌, ಸೆನ್ಸರ್‌ ಇರುವ ವಾಷರೂಮ್‌, ಫೂಟ್‌ ಮಸಾಜರ್‌ ಮುಂತಾದ ಸೌಕರ್ಯಗಳನ್ನು ಅಳವಡಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಪ್ರಸ್ತಾವಿತ ರೈಲು ಯಾತ್ರೆ ಏಳು ದಿನಗಳದ್ದಾಗಿದ್ದು, ಅಯೋಧ್ಯೆಗೆ ಮೊದಲ ಭೇಟಿ. ಶ್ರೀರಾಮನ ಜನ್ಮಭೂಮಿ ಅದು. ಅಲ್ಲಿ ಪ್ರವಾಸಿಗರು ಶ್ರೀರಾಮಜನ್ಮಭೂಮಿ ದೇವಸ್ಥಾನ, ಹನುಮಾನ್‌ ಗುಡಿಗೆ ಹೋಗಲಿದ್ದಾರೆ. ಅಲ್ಲದೆ. ನಂದಿಗ್ರಾಮದಲ್ಲಿ ಭಾರತ ಮಂದಿರಕ್ಕೂ ಭೇಟಿ ನೀಡಲಿದ್ದಾರೆ. ಅಯೋಧ್ಯೆ ಭೇಟಿ ಮುಗಿದ ಬಳಿಕ ರೈಲು ಬಿಹಾರದ ಸೀತಾಮಡಿ ರೈಲು ನಿಲ್ದಾಣಕ್ಕೆ ತಲುಪಲಿದೆ. ಅಲ್ಲಿಂದ ನೇಪಾಳದ ಜನಕಪುರಕ್ಕೆ 70 ಕಿ.ಮೀ. ಬಸ್‌ ಪ್ರಯಾಣ ಇರಲಿದೆ.

ಐಆರ್‌ಸಿಟಿಸಿ ಈ ಯಾತ್ರೆಯ ಬುಕ್ಕಿಂಗ್‌ ಶುರುಮಾಡಿದೆ. ಪೇಟಿಎಂ, ರೇಜರ್‌ಪೇ ಪಾವತಿ ಗೇಟ್‌ವೇ ಜತೆಗೆ ಐಆರ್‌ಸಿಟಿಸಿ ಒಪ್ಪಂದಕೊಂಡಿದ್ದು, ಇಎಂಐ ಆಪ್ಶನ್‌ ಒದಗಿಸಿದೆ. ಬಳಕೆದಾರರು 3,6,9,12,18 ಮತ್ತು 24 ತಿಂಗಳ ಇಎಂಐ ಆಪ್ಶನ್‌ ಬಳಸಿಕೊಂಡು ಟಿಕೆಟ್‌ ಕಾಯ್ದಿರಿಸಬಹುದು. ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿಪಾವತಿ ಮಾಡಬಹುದು ಎಂದು ರೈಲ್ವೆ ತಿಳಿಸಿದೆ.

ಯಾತ್ರೆಗೆ ಬರುವಂಥ 18 ವರ್ಷ ಮತ್ತು ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್‌ 19 ಅಂತಿಮ ಲಸಿಕೆ ಹಾಕಿಸಿಕೊಂಡಿರಬೇಕು. ಭಾರತ್‌ ಗೌರವ ರೈಲು ಯಾತ್ರೆಯನ್ನು ʻದೇಖೋ ಅಪ್ನಾ ದೇಶ್‌ʼ ಉಪಕ್ರಮದ ಭಾಗವಾಗಿ ದೇಶೀಯ ಪ್ರವಾಸವನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಆಯೋಜಿಸಿದೆ.

ಈ ಯಾತ್ರೆಯ ಟಿಕೆಟ್‌ ದರ ಪ್ರತಿವ್ಯಕ್ತಿಗೆ 39,775 ರೂಪಾಯಿಯಿಂದ ಶುರುವಾಗುತ್ತದೆ. ಇದರಲ್ಲಿ ಬಹುತೇಕ ಎಲ್ಲ ಖರ್ಚುವೆಚ್ಚಗಳು ಒಳಗೊಂಡಿದ್ದು, ಕೆಲವು ಸಣ್ಣಪುಟ್ಟ ಖರ್ಚುಗಳನ್ನು ಯಾತ್ರಿಕರೇ ಭರಿಸಬೇಕಾಗಬಹುದು. ಉಳಿದಂತೆ ಹೆಚ್ಚಿನ ಮಾಹಿತಿಗೆ ಐಆರ್‌ಸಿಟಿಸಿ ವೆಬ್‌ಸೈಟ್‌ ಗಮನಿಸಬಹುದು.

ಇತರೆ ಗಮನಸೆಳೆಯುವ ಸುದ್ದಿ

Gene fingerprinting: ರಾಜಕೀಯ ಭಿನ್ನಮತೀಯರನ್ನು ಟಾರ್ಗೆಟ್‌ ಮಾಡಲು ಜೀನ್‌ ಫಿಂಗರ್‌ ಪ್ರಿಂಟಿಂಗ್‌ ಬಳಸಬಹುದು!; ಹೇಗೆ ಟಾರ್ಗೆಟ್‌ ಮಾಡ್ತಾರೆ?

ರಾಜಕೀಯ ಭಿನ್ನಮತೀಯರನ್ನು ಗುರುತಿಸಲು ಮತ್ತು ಟಾರ್ಗೆಟ್‌ ಮಾಡಲು ಹೊಸ ಜೆನಿಟಿಕ್‌ ಸೀಕ್ವೆನ್ಸಿಂಗ್‌ ಐಡೆಂಟಿಫಿಕೇಶನ್‌ ಟೆಕ್ನಿಕ್‌ ಬಳಕೆಯಾಗಬಹುದು ಎಂಬುದು ಈಗ ಹೊಸ ಆತಂಕ. ಜೆನಿಟಿಕ್‌ ಸ್ವೀಕ್ವೆನ್ಸಿಂಗ್‌ ಮೂಲಕ ಅಪರಾಧ ಸನ್ನಿವೇಶದಲ್ಲಿದ್ದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಇದರಿಂದ ಸಾಧ್ಯವಾಗಬಹುದು ಎಂಬ ವಿಚಾರದ ಕಡೆಗೆ ಪುಲಿಟ್ಜೆರ್ ವಿಜೇತ ಡಾ.ಸಿದ್ಧಾರ್ಥ ಮುಖರ್ಜಿ ಗಮನಸೆಳೆದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point