ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಿಕ್ಕಿಂ ವಿಧಾನಸಭೆ ಚುನಾವಣೆ ಫಲಿತಾಂಶ; ಎಸ್‌ಕೆಎಂಗೆ ಭಾರಿ ಮುನ್ನಡೆ, 2ನೇ ಅವಧಿಗೆ ಸರ್ಕಾರ ರಚಿಸೋದು ಖಚಿತ

ಸಿಕ್ಕಿಂ ವಿಧಾನಸಭೆ ಚುನಾವಣೆ ಫಲಿತಾಂಶ; ಎಸ್‌ಕೆಎಂಗೆ ಭಾರಿ ಮುನ್ನಡೆ, 2ನೇ ಅವಧಿಗೆ ಸರ್ಕಾರ ರಚಿಸೋದು ಖಚಿತ

ನಿರೀಕ್ಷೆಯಂತೆ ಸಿಕ್ಕಿಂನಲ್ಲಿ ಆಡಳಿತ ಪಕ್ಷ ಎಸ್‌ಕೆಎಂ ಸ್ಪಷ್ಟ ಬಹುಮತದತ್ತ ದಾಪುಗಾಲು ಇಟ್ಟಿದ್ದು, ಎರಡನೇ ಬಾರಿಗೆ ಸರ್ಕಾರ ರಚಿಸೋದು ಪಕ್ಕಾಗಿ ಆಗಿದೆ.

ಸಿಕ್ಕಿಂ ವಿಧಾನಸಭೆ ಚುನಾವಣೆ ಫಲಿತಾಂಶ; ಆಡಳಿತ ಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, 2ನೇ ಅವಧಿಗೆ ಸರ್ಕಾರ ರಚಿಸೋದು ಖಚಿತವಾಗಿದೆ.
ಸಿಕ್ಕಿಂ ವಿಧಾನಸಭೆ ಚುನಾವಣೆ ಫಲಿತಾಂಶ; ಆಡಳಿತ ಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, 2ನೇ ಅವಧಿಗೆ ಸರ್ಕಾರ ರಚಿಸೋದು ಖಚಿತವಾಗಿದೆ.

ಸಿಕ್ಕಿಂನಲ್ಲಿ ಎಸ್‌ಕೆಎಂ ಮತ್ತೆ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಒಟ್ಟು 32 ವಿಧಾನಸಭಾ ಕ್ಷೇತ್ರಗಳ ಪೈಕಿ 31 ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುನ್ನಡೆ ಕಾಯ್ದುಕೊಂಡಿದೆ. ಇದರಲ್ಲಿ 7 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಇನ್ನ ವಿರೋಧ ಪಕ್ಷ ಎಸ್‌ಡಿಎಫ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಅಥವಾ ಇತರೆ ಪಕ್ಷಗಳ ಸಾಧನೆ ಶೂನ್ಯವಾಗಿದೆ. ತಮ್ಮ ಪಕ್ಷ ಗೆಲ್ಲೋದು ಪಕ್ಕಾ ಆಗುತ್ತಿದ್ದಂತೆ ಎಸ್‌ಕೆಎಂ ಕಾರ್ಯಕರ್ತರು ಚುನಾವಣಾ ಆಯೋಗದ ನಿಷೇಧದ ನಡುವೆಯೂ ಪಕ್ಷದ ಬಾವುಟ ಹಿಡಿದು ಸಂಭ್ರಮಿಸುತ್ತಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ಇಸಿ ನಿರ್ಬಂಧಿಸಿದೆ.

ಟ್ರೆಂಡಿಂಗ್​ ಸುದ್ದಿ

ಸಿಕ್ಕಿಂನಲ್ಲಿ ಎಸ್‌ಕೆಎಂ ಮತ್ತೆ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಒಟ್ಟು 32 ವಿಧಾನಸಭಾ ಕ್ಷೇತ್ರಗಳ ಪೈಕಿ 31 ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುನ್ನಡೆ ಕಾಯ್ದುಕೊಂಡಿದೆ. ಇದರಲ್ಲಿ 7 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಇನ್ನ ವಿರೋಧ ಪಕ್ಷ ಎಸ್‌ಡಿಎಫ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಅಥವಾ ಇತೆ ಪಕ್ಷಗಳ ಸಾಧನೆ ಶೂನ್ಯವಾಗಿದೆ.

ಸಿಕ್ಕಿಂ ಮುಂಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಸ್ಪರ್ಧಿಸಿರುವ ಎರಡೂ ಕಡೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ತಮಾಂಗ್ ಅವರು ರೆನಾಕ್ ಮತ್ತು ಸೊರೆಂಗ್-ಚಕುಂಗ್ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಜೊಂಗು ವಿಧಾನಸಭಾ ಕ್ಷೇತ್ರದಿಂದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಪಿಂಟ್ಸೊ ನಮ್ಗ್ಯಾಲ್ ಲೆಪ್ಚಾ ಅವರು ಗೆಲುವು ಸಾಧಿಸಿದ್ದಾರೆ. ನನ್ನನ್ನು ಬೆಂಬಲಿಸಿದ ಭಾರಿ ಅಂತರದ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಟಿಕೆಟ್ ನೀಡಿದ ಪಕ್ಷದ ಅಧ್ಯಕ್ಷರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲೆಪ್ಚಾ ಹೇಳಿದ್ದಾರೆ.

ಸಿಕ್ಕಿ ವಿಧಾನಸಭೆಯಲ್ಲಿ ಬಹುಮತಕ್ಕೆ 17 ಮ್ಯಾಜಿಕ್ ಸಂಖ್ಯೆಯಾಗಿದ್ದು, ಆಡಳಿತ ಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಬರೋಬ್ಬರಿ 31 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತ್ತೀಚಿನ ವರದಿ ಪ್ರಕಾರ 7 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದ ಲೋಕಸಭಾ ಚುನಾವಣೆಯ ಜೊತೆಗೆ ಮತದಾನ ನಡೆದಿತ್ತು. ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತು ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕಳೆದ ನವೆಂಬರ್‌ನಲ್ಲಿ ಫುಟ್ಬಾಲ್ ತಾರೆ ಬೈಚುಂಗ್ ಭುಟಿಯಾ ಅವರ ಹಮ್ರೊ ಸಿಕ್ಕಿಂ ಪಕ್ಷವು ಎಸ್‌ಟಿಎಫ್‌ನೊಂದಿಗೆ ವಿಲೀನಗೊಂಡಿತ್ತು.

ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆಗಳ ಅವಧಿ ಇಂದಿಗೆ (ಜೂನ್ 2, ಭಾನುವಾರ) ರಂದು ಕೊನೆಗೊಳ್ಳಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಹೀಗಾಗಿ ಲೋಕಸಭಾ ಚುನಾವಣೆ ಫಲಿತಾಂಶದ ಎರಡು ದಿನಗಳ ಮುನ್ನವೇ ಈ ಎರಡೂ ರಾಜ್ಯಗಳ ಮತ ಎಣಿಕೆಗೆ ಚುನಾವಣಾ ಆಯೋಗ ನಿರ್ಧರಿಸಿತ್ತು. ಭಾರತದ ಸಂವಿಧಾನದ 324, 172 (1) ನೇ ವಿಧಿ ಮತ್ತು 1951 ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 15 ಅನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗವು ಯಾವುದೇ ಒಂದು ಪಕ್ಷದ ಅಧಿಕಾರದ ಅವಧಿ ಮುಗಿಯುವ ಮೊದಲು ಚುನಾವಣೆಗಳನ್ನು ನಡೆಸುವುದು ಅವಶ್ಯಕ ಎಂದು ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024