ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸಬೇಕು; ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸಬೇಕು; ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್

ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿವೆ ಎಂಬ ಚರ್ಚೆಗಳ ನಡುವೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಮಕ್ಕಳು ಸಾಮಾಜಿಕ ಮಾಧ್ಯಗಳ ಬಳಕೆಗೆ ವಯಸ್ಸಿನ ಮಿತಿ ವಿಧಿಸಬೇಕೆಂಬ ಹೇಳಿಕೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣವನ್ನು ನಿಷೇಧಿಸಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಆಲ್‌ನೈನ್‌ನಲ್ಲಿ ಸಾಮಾಜಿಕ ಜಾಲತಾಣಗಳ (Social Media) ಬಳಕೆ ಮಕ್ಕಳ ಮಾನಸಿಕ ಆರೋಗ್ಯಕ್ಕೆ (Children Mental Health) ಹಾನಿಕಾರವಾಗಿದೆ. ಹೀಗಾಗಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಖಾತೆಗಳ ನೋಂದಣಿಯನ್ನು ನಿಷೇಧಿಸಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ (Australia PM Anthony Albanese) ಹೇಳಿದ್ದಾರೆ. ಮಕ್ಕಳು ಆನ್‌ಲೈನ್ ಬಳಕೆಯಿಂದ ಸಾಮಾಜಿಕ ಒತ್ತಡಗಳಿಗೆ ಒಳಗಾಗುತ್ತಾರೆ. ಇದರಿಂದ ಮಕ್ಕಳನ್ನು ನಿಯಂತ್ರಿಸಿದರೆ ಬೆಳೆವಣಿಗೆಗೆ ಹೆಚ್ಚುವರಿ ಸಮಯವನ್ನು ನೀಡಿದಂತಾಗುತ್ತದೆ. ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ತೆರೆಯಲು ಕನಿಷ್ಠ ವಯಸ್ಸನ್ನು 13 ರಿಂದ 16ಕ್ಕೆ ಹೆಚ್ಚಿಸುಬೇಕೆಂಬ ಒತ್ತಾಯವನ್ನು ಆಸೀಸ್ ಪ್ರಧಾನಿ ಬೆಂಬಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಮ್ಮ ಕಿರಿಯ ಆಸ್ಟ್ರೇಲಿಯನ್ನರು ಕ್ರೀಡೆಯ ಹೊರಗೆ ಹೆಚ್ಚು ಸಮಯವನ್ನು ಕಳೆಯಬೇಕು. ಸಾಮಾನ್ಯ ರೀತಿಯಲ್ಲಿ ಪರಸ್ಪರ ಮಾತು, ಚರ್ಚೆಯಲ್ಲಿ ತೊಡಬೇಕು ಹಾಗೂ ಆನ್‌ಲೈನ್‌ನಲ್ಲಿ ಕಡಿಮೆ ಸಮಯವನ್ನು ಕಳೆಯಬೇಕು. ಇದಕ್ಕಾಗಿ ಉತ್ತಮ ಮಾರ್ಗವೆಂದರೆ ಸಾಮಾಜಿಕ ಮಾಧ್ಯಮಗಳ ನಿರ್ಬಂಧ ಎಂದು ಮಂಗಳವಾರ (ಮೇ 21) ನೋವಾ ಎಫ್‌ಎಂ ರೇಡಿಯೊಗೆ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕೆಟ್ಟ ಸಂದೇಶಗಳು, ಹೇಳಿಕೆಗಳು ವಯಸ್ಕರಿಗೆ ಹಾನಿ ಮಾಡುತ್ತದೆ. ಇದು ಮಕ್ಕಳ ಮೇಲೆ ಇನ್ನೂ ಕೆಟ್ಟ ಪರಿಣಾಮ ಬೀರುತ್ತದೆ. ಇದು ವಿನಾಶಕಾರಿಯಾಗಬಹುದು ಎಂದು ಹೇಳಿದ್ದಾರೆ. ನಾನು ನನ್ನ ಸಾಮಾಜಿಕ ಮಾಧ್ಯಮದಲ್ಲಿನ ಕಾಮೆಂಟ್‌ಗಳನ್ನು ನೋಡುವುದಿಲ್ಲ. ಏಕೆಂದರೆ ಹಾಗೆ ಮಾಡಿದರೆ ಬೆಳಿಗ್ಗೆ ಮನೆಯಿಂದ ಹೊರಬರಲು ನನಗೆ ಕಷ್ಟವಾಗುತ್ತದೆ. ಜನರು ಅನಾಮಧೇಯವಾಗಿ ಭಯಾನಕವಾದ ವಿಷಯಗಳನ್ನು ಹೇಳುತ್ತಾರೆ ಎಂದು ತಮ್ಮ ಸ್ವಂತ ಅನುಭವವನ್ನು ವಿವರಿಸಿದ್ದಾರೆ.

ನೋವಾ ರೇಡಿಯೊ ನಿರೂಪಕ ಮೈಕೆಲ್ ವಿಪ್‌ಫ್ಲಿ ಮತ್ತು ಫಿಂಚ್‌ ಕಂಪನಿ ಮುಖ್ಯ ಕಾರ್ಯನಿರ್ವಾಹಕ ರಾಬ್ ಗ್ಯಾಲುಝೋ ಅವರು ಸಾಮಾಜಿಕ ಜಾಲಾತಣಗಳ ಬಳಕೆಗೆ ಕನಿಷ್ಠ 16 ವಯಸ್ಸಿಗೆ ಹೆಚ್ಚಿಸಬೇಕೆಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನದ ಹೆಸರು '36 ತಿಂಗಳು'. ಮಕ್ಕಳು ಸಾಮಾಜಿಕ ಮಾಧ್ಯಮಗಳ ಖಾತೆಯನ್ನು ಹೊಂದಬಹುದಾದ ವಯಸ್ಸಿನ ಮಿತಿಯಲ್ಲಿ 3 ವರ್ಷಗಳನ್ನು ಹೆಚ್ಚಿಸಬೇಕು ಎಂಬುದು ಅಭಿಯಾನದ ಉದ್ದೇಶ. ಸದ್ಯ ಮಕ್ಕಳಿಗೆ 13 ವರ್ಷಗಳ ಮಿತಿ ಇದೆ. ಅದನ್ನು 16 ವರ್ಷಕ್ಕೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಪೋಷಕರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲೂ ಚರ್ಚೆಯಾಗುತ್ತಿದೆ.

ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಗೆ ವಯಸ್ಸಿನ ಮಿತಿಯನ್ನು 16 ವರ್ಷಕ್ಕೆ ಹೆಚ್ಚಿಸಬೇಕು ಎಂಬುದಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಈ ಅಭಿಯಾನದ ಅರ್ಜಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ. ಕಾರಣ ಅಂತಿಮವಾಗಿ ಮಕ್ಕಳ ಪೋಷಕರು ಮತ್ತು ಸಾಮಾಜಿಕ ಜಾಲತಾಣ ಬಳಸುವ ಮಕ್ಕಳಿಗೆ ಬಿಟ್ಟಿದ್ದು ಎಂದು ವಾದಿಸಿದ್ದಾರೆ. ತಮ್ಮ ಬೆಂಬಲವನ್ನು ನೀಡಿ ಇತರರು ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಈ ಅಭಿಯಾನಕ್ಕೆ ನನ್ನ ಬೆಂಬಲವಿದೆ. 36months.com.au ಗೆ ಭೇಟಿ ನೀಡುವಂತೆ ಜನರನ್ನು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿನ ಸ್ವತಂತ್ರ ಸೆನೆಟರ್ ಡೇವಿಡ್ ಪೊಕಾಕ್ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ಕನಿಷ್ಠ ವಯಸ್ಸನ್ನು 16ಕ್ಕೆ ಹೆಚ್ಚಿಸುವ ವಿಷಯಕ್ಕೆ ಪ್ರಸ್ತಾಸಿ ಬೆಂಬಲದ ಮಾತುಗಳನ್ನಾಡಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024