ಕನ್ನಡ ಸುದ್ದಿ  /  Nation And-world  /  Sources Says Centre Rejects 10 Choices For Judges From Supreme Court Panel

Supreme Court Collegium: ಸುಪ್ರೀಂಕೋರ್ಟ್‌ ಕೊಲಿಜಿಯಂ ಪದೋನ್ನತಿ ಶಿಫಾರಸ್ಸು ತಡೆಹಿಡಿದ ಕೇಂದ್ರ?

ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪದೋನ್ನತಿಗೆ ಶಿಫಾರಸು ಮಾಡಿರುವ 10 ನ್ಯಾಯಮೂರ್ತಿಗಳ ಹೆಸರುಗಳಿಗೆ, ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿಲ್ಲ ಎನ್ನಲಾಗಿದೆ. ನವೆಂಬರ್ 25 ರಂದು ಹಿಂದಿರುಗಿದ ಕಡತಗಳಲ್ಲಿ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿಎನ್ ಕಿರ್ಪಾಲ್ ಅವರ ಪುತ್ರ ಹಾಗೂ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರ ಹೆಸರೂ ಸೇರಿದೆ. ಕೇಂದ್ರದ ಈ ನಡೆಯನ್ನು ಸುಪ್ರೀಂಕೋರ್ಟ್‌ನ ಕೆಲವು ಹಿರಿಯ ವಕೀಲರು ವಿರೋಧಿಸಿದ್ದಾರೆ.

ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ) (HT_PRINT)

ನವದೆಹಲಿ: ಸುಪ್ರೀಂಕೋರ್ಟ್‌ನ ಕೊಲಿಜಿಯಂ ಪದೋನ್ನತಿಗೆ ಶಿಫಾರಸು ಮಾಡಿರುವ 10 ನ್ಯಾಯಮೂರ್ತಿಗಳ ಹೆಸರುಗಳಿಗೆ, ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿಲ್ಲ ಎನ್ನಲಾಗಿದೆ. ನವೆಂಬರ್ 25 ರಂದು ಹಿಂದಿರುಗಿದ ಕಡತಗಳಲ್ಲಿ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿಎನ್ ಕಿರ್ಪಾಲ್ ಅವರ ಪುತ್ರ ಹಾಗೂ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರ ಹೆಸರೂ ಸೇರಿದೆ.

ಸುಪ್ರೀಂಕೋರ್ಟ್ ಕೊಲಿಜಿಯಂ ಪುನರುಚ್ಚರಿಸಿದ ಕೆಲವು‌ ನ್ಯಾಯಮೂರ್ತಿಗಳ ಹೆಸರುಗಳನ್ನು, ಕೇಂದ್ರ ಸರ್ಕಾರ ಹಿಂತಿರುಗಿಸಿದೆ. ಕೇಂದ್ರದ ಈ ನಡೆಯನ್ನು ಸುಪ್ರೀಂಕೋರ್ಟ್‌ನ ಕೆಲವು ಹಿರಿಯ ವಕೀಲರು ವಿರೋಧಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸೌರಭ್ ಕಿರ್ಪಾಲ್, ನನ್ನ ಲೈಂಗಿಕತೆ ಕಾರಣಕ್ಕೆ ಕೇಂದ್ರ ಸರ್ಕಾರ ನನ್ನ ಪದೋನ್ನತಿಯನ್ನು ತಡೆಹಿಡಿದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರವು ಬಹಿರಂಗವಾಗಿ ಸಲಿಂಗಕಾಮಿ ವ್ಯಕ್ತಿಯನ್ನು ಸುಪ್ರೀಂಕೋರ್ಟ್‌ ಬೆಂಚ್‌ಗೆ ನೇಮಿಸಲು ಹಿಂದೇಟು ಹಾಕುತ್ತಿದೆ ಎಂದು 50 ವರ್ಷದ ಸೌರಭ್ ಕಿರ್ಪಾಲ್ ಆರೋಪಿಸಿದ್ದಾರೆ. 2017 ರಿಂದ ಅವರ ಉನ್ನತಿಯನ್ನು ಸ್ಥಗಿತಗೊಳಿಸಲಾಗಿದೆ.

ಸುಪ್ರೀಂಕೋರ್ಟ್‌ನ ಕೊಲಿಜಿಯಂ ನಡೆಸಿದ ಪದೋನ್ನತಿಗಾಗಿ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯ ಮೇಲೆ, ಕೇಂದ್ರ ಸರ್ಕಾರ ತಡೆ ನೀಡಿರುವುದು ಇದೀಗ ಗಮನ ಸೆಳೆದಿದೆ.

ಪ್ರಸ್ತುತ ದ್ವಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿರುವ ನೇಮಕಾತಿಗಳಲ್ಲಿ, ನ್ಯಾಯಾಲಯದ ಆದೇಶದ ಕಾಲಮಿತಿಯ "ಉದ್ದೇಶಪೂರ್ವಕ ಅಸಹಕಾರ" ಎಂದು ಆರೋಪಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಹಾಗೆಯೇ ನ್ಯಾಯಾಂಗ ನೇಮಕಾತಿಗಳಿಗೆ ಕೇಂದ್ರ ಅನುಮತಿ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ, ಸುಪ್ರೀಂಕೋರ್ಟ್ ತನ್ನ ಅಸಮಾಧಾನವನ್ನು ಹೊರಹಾಕಿದೆ.

"ಕೊಲಿಜಿಯಂ ಹೆಸರನ್ನು ಪುನರುಚ್ಚರಿಸಿದ ನಂತರ, ಅದು ಅಧ್ಯಾಯವೊಂದರ ಅಂತ್ಯವಾದಂತೆ. ಆದರೆ ಕೇಂದ್ರ ಸರ್ಕಾರ ಈ ಹೆಸರುಗಳನ್ನು ಬಾಕಿ ಇರಿಸುವ ಮೂಲಕ ತನ್ನ ಅಧಿಕಾರ ವ್ಯಾಪ್ತಿಯನ್ನು ಅನ್ನು ದಾಟುತ್ತಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. "ದಯವಿಟ್ಟು ಇದನ್ನು ಪರಿಹರಿಸಿ ಮತ್ತು ಈ ವಿಷಯದಲ್ಲಿ ನ್ಯಾಯಾಂಗ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬೇಡಿ" ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಎಸ್ ಓಕಾ ನೇತೃತ್ವದ ದ್ವಿಸದಸ್ಯ ಪೀಠ ಮಾರ್ಮಿಕವಾಗಿ ಹೇಳಿದೆ.

"ನೀವು ಹೆಸರುಗಳನ್ನು ತಡೆಹಿಡಿಯುವುದು ಸಾಧ್ಯವಿಲ್ಲ, ಇದು ಇಡೀ ವ್ಯವಸ್ಥೆಯನ್ನು ಹತಾಶೆಗೊಳಿಸುತ್ತದೆ. ಹಿರಿತನಕ್ಕೆ ಅಡ್ಡಿಪಡಿಸುವ ಈ ನಡೆ ಒಪ್ಪಲು ಸಾಧ್ಯವಿಲ್ಲ ಎಂದೂ ಸುಪ್ರೀಂಕೋರ್ಟ್‌ ಹೇಳಿದೆ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ, 1991ಕ್ಕಿಂತ ಮೊದಲು ಸರ್ಕಾರವು ನ್ಯಾಯಾಧೀಶರನ್ನು ಆಯ್ಕೆ ಮಾಡಿತ್ತು. ಪ್ರಸ್ತುತ ವ್ಯವಸ್ಥೆಯು ನ್ಯಾಯಾಂಗ ಆದೇಶದ ಫಲಿತಾಂಶವಾಗಿದೆ. ಇದು ಸಂವಿಧಾನದ ಆಶಯಗಳಿಗೆ ಹೊರತಾದುದು ಎಂದು ಕಿರಣ್‌ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ:

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇತರ ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಮೋಸದ ಮತಾಂತರದ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅಫಿಡವಿಟ್‌ ಸಲ್ಲಿಸಿದ್ದು, ದೇಶದಾದ್ಯಂತ ಮೋಸದ ಧಾರ್ಮಿಕ ಮತಾಂತರವು ವ್ಯಾಪಕವಾಗಿದೆ ಎಂದು ಹೇಳಿದೆ.

ಮೋಸದ ಮತಾಂತರದ ಸಮಸ್ಯೆಯನ್ನು ಭಾರತದ ಒಕ್ಕೂಟವು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಖಂಡಿತವಾಗಿಯೂ ವಂಚನೆ, ಬಲಾತ್ಕಾರ, ಆಮಿಷ ಅಥವಾ ಇತರ ವಿಧಾನಗಳ ಮೂಲಕ ವ್ಯಕ್ತಿಯನ್ನು ಪರಿವರ್ತಿಸುವ ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ.

IPL_Entry_Point

ವಿಭಾಗ