ಕನ್ನಡ ಸುದ್ದಿ  /  Nation And-world  /  Sources Says North Korea Fires Another Ballistic Missile Toward Sea

North Korea: ಉ.ಕೊರಿಯಾದಿಂದ ಮತ್ತೊಂದು ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ: ಸರ್ವಾಧಿಕಾರಿಯಿಂದ ಯುದ್ಧಕ್ಕೆ ಮಣೆ?

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಊನ್‌ ಯುದ್ಧೋನ್ಮಾದದಲ್ಲಿ ತೇಲುತ್ತಿರುವಂತೆ ಭಾಸವಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದ್ದ ಉ.ಕೊರಿಯಾ, ಇದೀಗ ಮತ್ತೊಂದು ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಮಾಡಿ ಹೂಂಕರಿಸಿದೆ. ಕಿಮ್‌ ಜಾಮಗ್‌ ಊನ್‌ನ ಈ ಯುದ್ಧೋನ್ಮಾದ ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳ ನಿದ್ದೆಗೆಡೆಸಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (AFP)

ಪ್ಯಾಂಗ್ಯಾಂಗ್:‌ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಊನ್‌ ಯುದ್ಧೋನ್ಮಾದದಲ್ಲಿ ತೇಲುತ್ತಿರುವಂತೆ ಭಾಸವಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದ್ದ ಉ.ಕೊರಿಯಾ, ಇದೀಗ ಮತ್ತೊಂದು ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಮಾಡಿ ಹೂಂಕರಿಸಿದೆ. ಕಿಮ್‌ ಜಾಮಗ್‌ ಊನ್‌ನ ಈ ಯುದ್ಧೋನ್ಮಾದ ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳ ನಿದ್ದೆಗೆಡೆಸಿದೆ.

ಹೌದು, ಎರಡು ದಿನಗಳ ಹಿಂದಷ್ಟೇ ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಮಾಡಿ ಆತಂಕ ಸೃಷ್ಟಿಸಿದ್ದ ಉತ್ತರ ಕೊರಿಯಾ, ಇದೀಗ ಮತ್ತೊಂದು ಬ್ಯಾಲಿಸ್ಟಿಕ್‌ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ. ದೇಶದ ಪೂರ್ವ ಕರಾವಳಿಯಲ್ಲಿ ಈ ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಮೂಲಗಳು ಖಚಿತಪಡಿಸಿವೆ.

ಎರಡು ದಿನಗಳ ಹಿಂದೆ ಉತ್ತರ ಕೊರಿಯಾ ಉಡಾವಣೆ ಮಾಡಿದ್ದ ಬ್ಯಾಲಿಸ್ಟಿಕ್‌ ಕ್ಷಿಪಣಿ ಜಪಾನ್‌ ರಾಜಧಾನಿ ಟೋಕಿಯೋದ ಆಗಸದ ಮೇಲೆ ಹಾರಿ ಹೋಗಿತ್ತು. ಕೂಡಲೇ ಎಚ್ಚೆತ್ತ ಜಪಾನ್‌ ಸರ್ಕಾರ, ಟೋಕಿಯೋದ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ಅಲ್ಲದೇ ಉತ್ತರ ಕೊರಿಯಾದ ಈ ನಡೆಯನ್ನು ಕಟುವಾಗಿ ಟೀಕಿಸಿತ್ತು. ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಕೂಡ ಉ.ಕೊರಿಯಾದ ನಡೆಯನ್ನು ಖಂಡಿಸಿದ್ದರು.

ಇದಾದ ಬಳಿಕ ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಸೇನೆ ಜಂಟಿ ಸಮರಾಭ್ಯಾಸ ನಡೆಸಿದ್ದವು. ಈ ವೇಳೆ ದಕ್ಷಿಣ ಕೊರಿಯಾ ಉಡಾಯಿಸಿದ್ದ ಬ್ಯಾಲಿಸ್ಟಿಕ್‌ ಕ್ಷಿಪಣಿಯೊಂದು ಜನವಸತಿ ಪ್ರದೇಶದ ಮೇಲೆ ಬಿದ್ದು ಆತಂಕ ಸೃಷ್ಟಿಸಿತ್ತು. ಆದರೆ ಈ ದುರಂತದಿಂದ ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.

ಇದೀಗ ಯುದ್ಧೋನ್ಮಾದತೆಯಿಂದ ಮತ್ತೆ ಹೂಂಕರಿಸಿರುವ ಉತ್ತರ ಕೊರಿಯಾ, ಕೇವಲ ಒಂದು ವಾರದ ಅವಧಿಯಲ್ಲಿ ಎರಡನೇ ಬ್ಯಾಲಿಸ್ಟಿಕ್‌ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆಸಿದೆ. ಇದು ಸಹಜವಾಗಿ ಕೊರಿಯನ್‌ ದ್ವೀಪ ಸಮೂಹದಲ್ಲಿ ಆತಂಕವನ್ನು ಸೃಷ್ಟಿಸಿದೆ. ದಕ್ಷಿಣ ಕೊರಿಯಾ ಮತ್ತು ಅಮೆರಿಕ ದೇಶಗಳು ಉತ್ತರ ಕೊರಿಯಾದ ಮಿಲಿಟರಿ ಆಕಾಂಕ್ಷೆಗಳ ಮೇಲೆ ನಿಗಾ ಇರಿಸಿವೆ.

ಉತ್ತರ ಕೊರಿಯಾದ ಮಿಲಿಟರಿ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದ್ದು, ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಮ್ಮ ಸೈನ್ಯ ಯುದ್ಧ ಸನ್ನದ್ಧ ಸ್ಥಿತಿಯಲ್ಲಿದ್ದು, ಯಾವುದೇ ಸಂಭಾವ್ಯ ಅಪಾಯವನ್ನು ಎದುರಿಸಲು ಸಿದ್ಧವಾಗಿದೆ ಎಂದು ದಕ್ಷಿಣ ಕೊರಿಯಾ ಸ್ಪಷ್ಟಪಡಿಸಿದೆ.

ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಹೇಳಿಕೆ ಉತ್ತರ ಕೊರಿಯಾ, ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಕವಾಯತು ಯುದ್ಧವನ್ನು ಪ್ರಚೋದಿಸುತ್ತಿದೆ. ಹೀಗಾಗಿ ದೇಶದ ಸುರಕ್ಷತೆ ದೃಷ್ಟಿಯಿಂದ ಸೈನ್ಯವನ್ನು ಸಜ್ಜುಗೊಳಿಸಲಾಗುತ್ತಿದೆ. ಒಂದು ವಾರದಲ್ಲಿ ಉಡಾವಣೆ ಮಾಡಲಾದ ಎರಡು ಬ್ಯಾಲಿಸ್ಟಿಕ್‌ ಕ್ಷಿಪಣಿಗಳು ನಮ್ಮ ಮಿಲಿಟರಿ ಸಿದ್ಧತೆಯ ಭಾಗ ಎಂದು ಸ್ಪಷ್ಟಪಡಿಸಿದೆ.

ಅಮೆರಿಕ-ದಕ್ಷಿಣ ಕೊರಿಯಾ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ನಾವು ಎಚ್ಚರಿಕೆ ಎಂದೇ ಪರಿಗಣಿಸುತ್ತೇವೆ. ನಮ್ಮ ಯುದ್ಧ ಸನ್ನದ್ಧತೆಯ ಸಂದೇ ರವಾನಿಸಲೆಂದೇ ನಾವು ಬ್ಯಾಲಿಸ್ಟಿಕ್‌ ಕ್ಷಿಪಣಿ ಉಡಾವಣೆ ಮಾಡಿದ್ದೇವೆ. ನಾವು ಯಾವುದೇ ಕಾರಣಕ್ಕೂ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಗೊಡ್ಡು ಬೆದರಿಕೆಗಳಿಗೆ ಮಣಿಯುವುದಿಲ್ಲ ಎಂದು ಉತ್ತರ ಕೊರಿಯಾ ಗುಡುಗಿದೆ.

ಒಟ್ಟಿನಲ್ಲಿ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಈ ಕ್ಷಿಪಣಿ ಸ್ಪರ್ಧೆ ಕೊರಿಯನ್‌ ದ್ವೀಪ ಸಮೂಹದಲ್ಲಿ ಯುದ್ಧದ ಕಾರ್ಮೋಡ ಕವಿಯಲು ಕಾರಣವಾಗಿದೆ. ಉತ್ತರ ಕೊರಿಯಾದ ಯುದ್ಧೋನ್ಮಾದ ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಜಾಗತಿಕ ಶಾಂತಿಪ್ರಿಯರ ನಿದ್ದೆಗೆಡೆಸಿದೆ.

IPL_Entry_Point

ವಿಭಾಗ