ಕನ್ನಡ ಸುದ್ದಿ  /  Nation And-world  /  South African Rapper, Costa Titch, Collapses During Concert. Watch

Costa Titch: ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಬಿದ್ದು ದಕ್ಷಿಣ ಆಫ್ರಿಕಾದ ರಾಪರ್‌ ಮೃತ್ಯು | ವಿಡಿಯೋ ನೋಡಿ

27 ವರ್ಷದ ಯುವ ರಾಪರ್‌ ವೇದಿಕೆಯ ಮೇಲೆ ಜೋಶ್‌ನಿಂದ ಕುಣಿಯುತ್ತ ಹಾಡುತ್ತಿರುವಾಗ ಕುಸಿದುಬಿದ್ದರು. ಒಮ್ಮೆ ಕುಸಿದುಬಿದ್ದ ಬಳಿಕ ಎದ್ದುನಿಂತು ತಮ್ಮ ಪ್ರದರ್ಶನವನ್ನು ಮುಂದುವರೆಸಿದರು. ಬಳಿಕ ಮತ್ತೊಮ್ಮೆ ಕುಸಿದವರು ಎದ್ದೇಳಲಿಲ್ಲ.

Costa Titch:  ಸ್ಟೇಜ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಬಿದ್ದು ದಕ್ಷಿಣ ಆಫ್ರಿಕಾದ ರಾಪರ್‌ ಮೃತ್ಯು  |  ವಿಡಿಯೋ ನೋಡಿ
Costa Titch: ಸ್ಟೇಜ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಬಿದ್ದು ದಕ್ಷಿಣ ಆಫ್ರಿಕಾದ ರಾಪರ್‌ ಮೃತ್ಯು | ವಿಡಿಯೋ ನೋಡಿ

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ರಾಪರ್‌ ಮತ್ತು ಗೀತೆ ರಚನೆಕಾರ ಕೋಸ್ಟಾ ಟಿಚ್‌ ಅವರು ಜೋಹಾನ್ಸ್‌ಬರ್ಗ್‌ನಲ್ಲಿ ಸಂಗೀತ ಉತ್ಸವದಲ್ಲಿ ಕಾರ್ಯಕ್ರಮ ನೀಡುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

27 ವರ್ಷದ ಯುವ ರಾಪರ್‌ ವೇದಿಕೆಯ ಮೇಲೆ ಜೋಶ್‌ನಿಂದ ಕುಣಿಯುತ್ತ ಹಾಡುತ್ತಿರುವಾಗ ಕುಸಿದುಬಿದ್ದರು. ಒಮ್ಮೆ ಕುಸಿದುಬಿದ್ದ ಬಳಿಕ ಎದ್ದುನಿಂತು ತಮ್ಮ ಪ್ರದರ್ಶನವನ್ನು ಮುಂದುವರೆಸಿದರು. ಬಳಿಕ ಮತ್ತೊಮ್ಮೆ ಕುಸಿದವರು ಎದ್ದೇಳಲಿಲ್ಲ. ಅವರ ನಿಧನದ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇವರ ಸಾವಿನ ಸುದ್ದಿ ಕೇಳಿದ ಬಳಿಕ ದಕ್ಷಿಣ ಆಫ್ರಿಕಾದ ಸಂಸತ್ತಿನ ಸದಸ್ಯ ಜೂಲಿಯಸ್ ಸೆಲ್ಲೋ ಮಲೆಮಾ ಸೇರಿದಂತೆ ಹಲವಾರು ರಾಜಕಾರಣಿಗಳು, ಕಲಾವಿದರು, ಸೆಲೆಬ್ರಿಟಿಗಳು ಮತ್ತು ಇತರ ಜನರು ಸಂತಾಪ ಸೂಚಿಸಿದ್ದಾರೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಅಲ್ಟ್ರಾ ಸೌತ್ ಆಫ್ರಿಕಾ ಸಂಗೀತೋತ್ಸವದಲ್ಲಿ ಕೋಸ್ಟಾ ಟಿಚ್ ಪ್ರದರ್ಶನ ನೀಡುತ್ತಿದ್ದಾಗ ಈ ಘಟನೆ ನಡೆದಿದೆ.

ಈ ವಿಡಿಯೋದಲ್ಲಿ ಗಾಯಕ ಹಾಡುತ್ತಿರುವಾಗ ಕುಸಿದು ಬೀಳುತ್ತಾನೆ. ಬಳಿಕ ಎದ್ದು ನಿಂತು ಮತ್ತೆ ಹಾಡುತ್ತಾನೆ. ಒಮ್ಮೆ ಬಿದ್ದರೂ ತಕ್ಷಣ ಎದ್ದು ಹಾಡುವ ಈತನಿಗೆ ಅದು ಸಾವಿನ ಸೂಚನೆ ಎಂದು ತಿಳಿದಿರಲಿಲ್ಲ. ಒಮ್ಮೆ ಬಿದ್ದು ಬಳಿಕ ಎದ್ದು ಹಾಡಿದ ಈತ ಮತ್ತೆ ಕುಸಿದು ಬೀಳುತ್ತಾನೆ. ಬಳಿಕ ಆತ ಎದ್ದೇಳುವುದಿಲ್ಲ. ಈತ ಬಿದ್ದಾಗ ತಕ್ಷಣ ಆತನಲ್ಲಿಗೆ ಹಲವು ಜನರು ಓಡಿ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ರಾಪರ್‌ ಸಾವಿಗೆ ಕಾರಣ ಎನ್ನುವ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಯಾರು ಕೋಸ್ಟಾ ಟಿಚ್?

ದಕ್ಷಿಣ ಆಫ್ರಿಕಾದ ಉದಯೋನ್ಮುಖ ಕಲಾವಿದ. ಈತನ ಪೂರ್ತಿ ಹೆಸರು ಕೋಸ್ಟಾ ಟ್ಸೊಬಾನೊಗ್ಲೋ. ಜನತು ಪ್ರೀತಿಯಿಂದ ಕೋಸ್ಟಾ ಟಿಚ್ ಎಂದು ಕರೆಯುತ್ತಾರೆ/ ಮೂಲತಃ ಸ್ವಾತಿನಿ ಮತ್ತು ಮೊಜಾಂಬಿಕ್ ಗಡಿಯ ಸಮೀಪದಲ್ಲಿರುವ ಎಂಬೊಂಬೆಲಾ ನಗರಕ್ಕೆ ಸೇರಿದವರು. ಇವರ ಹಾಡುಗಳು ಯೂಟ್ಯೂಬ್‌ನಲ್ಲಿ ಹಲವು ಮಿನಿಯನ್‌ ವೀಕ್ಷಣೆಗಳನ್ನು ಪಡೆಯುತ್ತಿವೆ. ಸೋಷಿಯಲ್‌ ಮೀಡಿಯಾ ಮಾತ್ರವಲ್ಲದೆ ಸ್ಟೇಜ್‌ ಶೋಗಳಲ್ಲಿಯೂ ಇವರ ಕಾರ್ಯಕ್ರಮ ತುಂಬಾ ಫೇಮಸ್‌.

ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಹಲವು ಘಟನೆಗಳು ಇತ್ತೀಚೆಗೆ ವರದಿಯಾಗುತ್ತಿವೆ. ಕಳೆದ ವರ್ಷ ತಮಿಳುನಾಡಿನಲ್ಲಿ ಬೀದಿ ನಾಟಕ ಕಲಾವಿದರೊಬ್ಬರು ನಾಟಕ ಪ್ರದರ್ಶನ ನೀಡುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಕರ್ನಾಟಕದಲ್ಲಿ ಯಕ್ಷಗಾನ ಪಾತ್ರ ಮಾಡುತ್ತಲೇ ಕಲಾವಿದರೊಬ್ಬರು ಇತ್ತೀಚೆಗೆ ಮೃತಪಟ್ಟಿದ್ದರು.

ಗುಜರಾತ್‌ನ ಆನಂದ್‌ನಲ್ಲಿ 21 ವರ್ಷದ ಯುವಕನೊಬ್ಬ ಗಾರ್ಭಾ ನೃತ್ಯ ಮಾಡುತ್ತಿರುವಾಗಲೇ ಕುಸಿದು ಮೃತಪಟ್ಟಿದ್ದನು. ಒಡಿಶಾದ ಜನಪ್ರಿಯ ಗಾಅಯಕ ಮುರಳಿ ಮಹೋಪಾತ್ರ ಅವರು ವೇದಿಕೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನೀಡುತ್ತಿರುವಾಗಲೇ ಕುಸಿದು ಮೃತಪಟ್ಟಿದ್ದರು.

ದಿಲ್ ಇಬಾದತ್, ತೂ ಜೋ ಮಿಲಾ, ಖುದಾ ಜಾನೆ, ಲಾಬೊನ್ ಕೊ, ಮತ್ತು ಇನ್ನೂ ಹಲವಾರು ಹಾಡುಗಳ ಹಿಂದಿನ ಧ್ವನಿಯಾಗಿದ್ದ ಜನಪ್ರಿಯ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಅಕಾ ಕೆಕೆ ಕೂಡ ವೇದಿಕೆಯ ಮೇಲೆ ಹಾಡುತ್ತಿರುವಾಗಲೇ ಕುಸಿದು ಮೃತಪಟ್ಟಿದ್ದರು.

 

IPL_Entry_Point