9 ತಿಂಗಳ ಬಾಹ್ಯಾಕಾಶ ವಾಸದ ನಂತರ ಸುನೀತಾ ವಿಲಿಯಮ್ಸ್‌ ಜತೆ ಮೂವರು ಇನ್ನು ಮೂರ್ನಾಲ್ಕು ದಿನದಲ್ಲಿ ಭೂಮಿಗೆ ವಾಪಸ್‌ ನಿರೀಕ್ಷೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  9 ತಿಂಗಳ ಬಾಹ್ಯಾಕಾಶ ವಾಸದ ನಂತರ ಸುನೀತಾ ವಿಲಿಯಮ್ಸ್‌ ಜತೆ ಮೂವರು ಇನ್ನು ಮೂರ್ನಾಲ್ಕು ದಿನದಲ್ಲಿ ಭೂಮಿಗೆ ವಾಪಸ್‌ ನಿರೀಕ್ಷೆ

9 ತಿಂಗಳ ಬಾಹ್ಯಾಕಾಶ ವಾಸದ ನಂತರ ಸುನೀತಾ ವಿಲಿಯಮ್ಸ್‌ ಜತೆ ಮೂವರು ಇನ್ನು ಮೂರ್ನಾಲ್ಕು ದಿನದಲ್ಲಿ ಭೂಮಿಗೆ ವಾಪಸ್‌ ನಿರೀಕ್ಷೆ

ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿಯೇ ಸಿಲುಕಿರುವ ಭಾರತ ಮೂಲಕ ಸುನೀತಾ ವಿಲಿಯಮ್ಸ್‌ ಸಹಿತ ನಾಲ್ವರನ್ನು ಭೂಮಿಗೆ ಮರಳಿ ಕರೆ ತರುವ ಪ್ರಯತ್ನಗಳು ಈ ಬಾರಿ ಗಂಭೀರವಾಗಿ ನಡೆದಿವೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಗಗನಯಾತ್ರಿಗಳನ್ನು ತಲುಪಿದ ನಾಸಾ ತಂಡ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಗಗನಯಾತ್ರಿಗಳನ್ನು ತಲುಪಿದ ನಾಸಾ ತಂಡ. (NASA)

ವಾಷಿಂಗ್ಟನ್‌: ಬಾಹ್ಯಾಕಾಶ ಕೇಂದ್ರದಲ್ಲಿಯೇ ಸಿಲುಕಿ ಸತತ ಒಂಬತ್ತು ತಿಂಗಳಿನಿಂದ ಹೊರಗೆ ಬರಲು ಪ್ರಯತ್ನಿಸುತ್ತಿರುವ ಭಾರತದ ಸುನೀತಾ ವಿಲಿಯಮ್ಸ್‌ ಸಹಿತ ವಿವಿಧ ದೇಶಗಳ ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ದಿನಾಂಕ ನಿಗದಿಯಾಗಿದೆ. ಈಗಾಗಲೇ ಮಾಡಿಕೊಂಡಿರುವ ಸಿದ್ದತೆಯಂತೆ ನಾಲ್ವರು ಮಾರ್ಚ್ 20ರ ಗುರುವಾರದಂದು ನಾಲ್ವರು ಬಾಹ್ಯಾಕಾಶದಿಂದ ಆಗಮಿಸುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಗಗನಯಾತ್ರಿಗಳ ಜೋಡಿ ಮನೆಗೆ ಮರಳಲು ಒಂದು ಹೆಜ್ಜೆ ಹತ್ತಿರದಲ್ಲಿದೆ. ಅಮೆರಿಕದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹವರ್ತಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ಯೋಜನೆಗೆ ಕೊನೆಗೂ ಮೊದಲ ಯಶಸ್ಸು ಸಿಕ್ಕಿದ್ದು. ಭಾನುವಾರದಂದು ಭಾರತೀಯ ಕಾಲಮಾನ 9.40ಕ್ಕೆ ನಾಸಾ ಸ್ಪೇಸ್‌ ಎಕ್ಸ್‌ನಲ್ಲಿ ಪ್ರಯಾಣಿಸಿದ ಕ್ರ್ಯೂ 10 ಸದಸ್ಯರು ಅಂತಾರಾಷ್ಟ್ರೀಯ ಬಾಹ್ಯಾಕಾಶವನ್ನು ತಲುಪಿದ್ದಾರೆ. ಅವರನ್ನು ಭೇಟಿಯಾಗಿರುವ ವಿಡಿಯೋಗಳು ವೈರಲ್‌ ಆಗಿವೆ.

ಕಳೆದ ವರ್ಷವೇ ಬಾಹ್ಯಾಕಾಶಕ್ಕೆ ತೆರಳಿ ಬೋಯಿಂಗ್‌ನ ಸ್ಟಾರ್‌ಲೈನರ್ ಸಮಸ್ಯೆಗಳಿಂದಾಗಿ ಒಂಬತ್ತು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳನ್ನು ಕರೆ ತರುವ ಪ್ರಯತ್ನಗಳು ಸಾಗಿದ್ದು, ನಾಸಾದ ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್‌ ವಿಲ್ ಮೋರ್ ಮತ್ತು ಗಾರ್ಬನೋ ವಾಪಸ್ ಬರುವ ಪಟ್ಟಿಯಲ್ಲಿದ್ದಾರೆ.

ಶುಕ್ರವಾರ ಸಂಜೆ 7:03 ಕ್ಕೆ ಅಂದರೆ ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ 4:30 ಕ್ಕೆ ಇಡಿಟಿಯು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಕ್ರೂ-10 ಮಿಷನ್ ಅನ್ನು ಪ್ರಾರಂಭಿಸಿತ್ತು. ಆ ಮಿಷನ್ ಭಾನುವಾರ ಬೆಳಗ್ಗೆಯ ಭಾರತೀಯ ಕಾಲಮಾನ 9.40ಕ್ಕೆ ನಾಸಾ ಸ್ಪೇಸ್‌ ಎಕ್ಸ್‌ನಲ್ಲಿ ಪ್ರಯಾಣಿಸಿದ ತಂಡದ 10 ಸದಸ್ಯರು ಅಂತಾರಾಷ್ಟ್ರೀಯ ಬಾಹ್ಯಾಕಾಶವನ್ನು ತಲುಪಿದ್ದಾರೆ. ಅದರಲ್ಲೂ ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಸ್ಪೇಸ್ ಕ್ರ್ಯಾಫ್ಟ್ ಐಎಸ್‌ಎಸ್‌ಗೆ ತಲುಪಿದ್ದು, ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ ಮೋರ್ ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. ಗಗನಯಾತ್ರಿಗಳು ತಮ್ಮ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್‌ಗೆ ಬಂದ ಸ್ವಲ್ಪ ಸಮಯದ ನಂತರ ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತಮ್ಮ ಸಹವರ್ತಿಗಳನ್ನು ಅಪ್ಪಿಕೊಂಡಿರುವುದನ್ನು ನೇರ ಟಿವಿಯಲ್ಲಿ ತೋರಿಸಲಾಯಿತು. ವಿಲಿಯಂ ಇದು "ಅದ್ಭುತ ದಿನ" ಮತ್ತು "ನಮ್ಮ ಸ್ನೇಹಿತರು ಬರುವುದನ್ನು ನೋಡಲು ಸಂತೋಷವಾಗಿದೆ" ಎಂದು ಹೇಳಿದರು.

ನಾಸಾ ಗಗನಯಾತ್ರಿ ಡಾನ್ ಪೆಟ್ಟಿಟ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ದೃಶ್ಯಗಳು ಕ್ರೂ ಡ್ರ್ಯಾಗನ್ ವಾಹನವು ಭೂಮಿಯ ಸುತ್ತ ಪರಿಭ್ರಮಿಸುತ್ತಿರುವಾಗ ಐಎಸ್‌ಎಸ್ ಅನ್ನು ಸಮೀಪಿಸುತ್ತಿರುವುದನ್ನು ತೋರಿಸಿದೆ.

ಈ ನಡುವೆ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಲು ಕಾತುರರಾಗಿದ್ದು ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿರುವ ಈ ಇಬ್ಬರು ಭೂಮಿಗೆ ಬಂದ ಮೇಲೆ ಇಲ್ಲಿನ ವಾತಾವರಣಕ್ಕೆ ಒಡ್ಡಿಕೊಳ್ಳುವುದಕ್ಕೆ ಸಮಯ ಬೇಕಾಗಿದೆ. ಭೂಮಿಗೆ ಮರಳಿದ ನಂತರ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಇಬ್ಬರು ದೈಹಿಕ ತೊಂದರೆ ಎದುರಿಸಬೇಕಾಗುತ್ತದೆ.

ಭೂಮಿಯ ಗುರುತ್ವಾಕರ್ಷಣೆ ಹಾಗೂ ಬಾಹ್ಯಾಕಾಶದ ಗುರುತ್ವಾಕರ್ಷಣೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರಲಿದೆ. ಭೂಮಿಯ ವಾತಾವರಣಕ್ಕೆ ಒಗ್ಗಿಕೊಳ್ಳುವಾಗ ಇಬ್ಬರು ಗಗನಯಾತ್ರಿಗಳು ಆರೋಗ್ಯದ ಸಮಸ್ಯೆಗೆ ಎದುರಿಸಬೇಕಾಗುತ್ತದೆ. ವಿಲಿಯಮ್ಸ್, ವಿಲ್ಮೋರ್ ಇಬ್ಬರ ಪಾದಗಳು ಮಗುವಿನ ಪಾದಗಳಂತೆ ಇರಲಿವೆ. ಈವರೆಗೂ ತೇಲಾಡಿಕೊಂಡೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರುತ್ತಿದ್ದವರು ಭೂಮಿಗೆ ಬಂದಾಗ ಅದೇ ಅನುಭವವಾಗಲಿದೆ. ಅವರ ಆರೋಗ್ಯ ತಪಾಸಣೆ, ಬದುಕಿಗೆ ಹೊಂದಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲು ಅಮೆರಿಕದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.