ತಿರುಪತಿಗೆ ಡಿಸೆಂಬರ್‌ನಲ್ಲಿ ಹೋಗುವ ಪ್ಲಾನ್ ಮಾಡ್ತಿದ್ದೀರಾ, ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ವೇಳಾಪಟ್ಟಿ ವಿವರ ಹೀಗಿದೆ-spiritual news tirupati tirumala darshan tickets for december 2024 available how to book tickets and other details uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಪತಿಗೆ ಡಿಸೆಂಬರ್‌ನಲ್ಲಿ ಹೋಗುವ ಪ್ಲಾನ್ ಮಾಡ್ತಿದ್ದೀರಾ, ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ವೇಳಾಪಟ್ಟಿ ವಿವರ ಹೀಗಿದೆ

ತಿರುಪತಿಗೆ ಡಿಸೆಂಬರ್‌ನಲ್ಲಿ ಹೋಗುವ ಪ್ಲಾನ್ ಮಾಡ್ತಿದ್ದೀರಾ, ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ವೇಳಾಪಟ್ಟಿ ವಿವರ ಹೀಗಿದೆ

ತಿರುಮಲ ತಿರುಪತಿ ದೇವರ ದರ್ಶನಕ್ಕೆ, ಸೇವೆ ಮಾಡಿಸುವ ಆಲೋಚನೆ ಇದೆಯಾ, ಡಿಸೆಂಬರ್ ಕೋಟಾದಲ್ಲಿ ತಿರುಮಲ ಶ್ರೀವಾರಿ ಆರ್ಜಿತಸೇವಾ ಟಿಕೆಟ್ ಬಿಡುಗಡೆಯಾಗಿದೆ. ಟಿಕೆಟ್ ವಿತರಣೆ ವೇಳಾಪಟ್ಟಿ ವಿವರ ಹೀಗಿದೆ.

ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ವೇಳಾಪಟ್ಟಿ ವಿವರ ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ)
ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ವೇಳಾಪಟ್ಟಿ ವಿವರ ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ) (TTD)

ತಿರುಮಲ: ವೆಂಕಟೇಶ್ವರನ ದರ್ಶನಕ್ಕಾಗಿ ಡಿಸೆಂಬರ್‌ನಲ್ಲಿ ತಿರುಪತಿಯ ತಿರುಮಲಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಯಾತ್ರಾರ್ಥಿಗಳು ಇದೀಗ ಟಿಕೆಟ್ ಬುಕ್ಕಿಂಗ್‌ಗೆ ಸಿದ್ಧರಾಗಬಹುದು. ಡಿಸೆಂಬರ್‌ ಕೋಟಾ ಟಿಕೆಟ್‌ಗಳು ಇಂದಿನಿಂದ (ಸೆಪ್ಟೆಂಬರ್ 19) ಲಭ್ಯವಿರುತ್ತವೆ. ತಿರುಮಲ ತಿರುಪತಿಗೆ ಭೇಟಿ ನೀಡುವುದಕ್ಕೆ ಡಿಸೆಂಬರ್ ಉತ್ತಮ ಸಮಯವೆಂದು ಪರಿಗಣಿಸಲಾಗಿದ್ದು, ಟಿಕೆಟ್‌ಗಳು ಬೇಗ ಮಾರಾಟವಾಗಿ ಮುಗಿಯುವ ಸಾಧ್ಯತೆ ಎಂದು ನಿರೀಕ್ಷಿಸಲಾಗುತ್ತಿದೆ.

ಡಿಸೆಂಬರ್ ತಿಂಗಳ ಶ್ರೀವಾರಿ ದರ್ಶನ ಟಿಕೆಟ್‌ಗಳ ಬಿಡುಗಡೆ ದಿನಾಂಕವನ್ನು ಟಿಟಿಡಿ ಪ್ರಕಟಿಸಿದ್ದು, ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ನಿನ್ನೆ (ಸೆಪ್ಟೆಂಬರ್ 18)ಯಿಂದ ಲಭ್ಯವಿದೆ. ಭಕ್ತರು ಈ ಟಿಕೆಟ್‌ಗಳನ್ನು https://ttdevasthanams.ap.gov.in ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳ ಕೋಟಾದ ಟಿಕೆಟ್ ಹಂಚಿಕೆ ವೇಳಾಪಟ್ಟಿ

ಈ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಲಕ್ಕಿಡಿಪ್‌ಗಾಗಿ, ನೀವು ಸೆಪ್ಟೆಂಬರ್ 20 ರಂದು ಬೆಳಿಗ್ಗೆ 10 ಗಂಟೆಯವರೆಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿ ಕೊಳ್ಳಬಹುದು. ಈ ಟಿಕೆಟ್‌ಗಳನ್ನು ಪಡೆದವರು ಸೆಪ್ಟೆಂಬರ್ 20 ರಿಂದ 22 ರ ಮಧ್ಯಾಹ್ನ 12 ಗಂಟೆಯ ಮೊದಲು ಅದಕ್ಕೆ ಹಣ ಪಾವತಿಸಿದರೆ ಲಕ್ಕಿಡಿಪ್‌ನಲ್ಲಿ ಟಿಕೆಟ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕರ ಸೇವಾ ಟಿಕೆಟ್‌ಗಳನ್ನು ಸೆಪ್ಟೆಂಬರ್ 21 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

1) ಸೆಪ್ಟೆಂಬರ್ 21 ರಂದು ವರ್ಚುವಲ್ ಸೇವೆಗಳ ಕೋಟಾ: ವರ್ಚುವಲ್ ಸೇವೆಗಳ ಡಿಸೆಂಬರ್ ಕೋಟಾ ಮತ್ತು ಅವುಗಳ ವೀಕ್ಷಣೆ ಸ್ಲಾಟ್‌ಗಳನ್ನು ಸೆಪ್ಟೆಂಬರ್ 21 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಎಂದು ಟಿಟಿಡಿ ತಿಳಿಸಿದೆ.

2) ಸೆಪ್ಟೆಂಬರ್ 23 ರಂದು ಅಂಗಪ್ರದಕ್ಷಿಣಂ ಟೋಕನ್‌ಗಳು: ಡಿಸೆಂಬರ್ ತಿಂಗಳ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಸೆಪ್ಟೆಂಬರ್ 23 ರಂದು ಬಿಡುಗಡೆ ಮಾಡಲಾಗುತ್ತಿದ್ದು, ಅಂದು ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್ ಬುಕ್ಕಿಂಗ್ ಮಾಡಬಹುದು.

3) ಶ್ರೀವಾಣಿ ಟಿಕೆಟ್‌ಗಳು ಆನ್‌ಲೈನ್ ಕೋಟಾ: ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಳಿಗಾಗಿ ಡಿಸೆಂಬರ್ ಆನ್‌ಲೈನ್ ಕೋಟಾವನ್ನು ಸೆಪ್ಟೆಂಬರ್ 23 ರಂದು ಲಭ್ಯಗೊಳಿಸಲಾಗುತ್ತದೆ. ಬೆಳಗ್ಗೆ 11 ಗಂಟೆಯಿಂದ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

4) ವೃದ್ಧರು ಮತ್ತು ಅಂಗವಿಕಲರಿಗೆ ದರ್ಶನ ಕೋಟಾ: ವಯೋವೃದ್ಧರು, ಅಂಗವಿಕಲರು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ತಿರುಮಲ ಶ್ರೀಗಳ ದರ್ಶನಕ್ಕೆ ಅನುಕೂಲವಾಗುವಂತೆ ನವೆಂಬರ್ ತಿಂಗಳ ಉಚಿತ ವಿಶೇಷ ದರ್ಶನ ಟೋಕನ್‌ಗಳ ಕೋಟಾವನ್ನು ಸೆಪ್ಟೆಂಬರ್ 23 ರಂದು ಬಿಡುಗಡೆ ಮಾಡಲಾಗುವುದು. ಮಧ್ಯಾಹ್ನ 3 ಗಂಟೆಯಿಂದಲೇ ಆನ್‌ಲೈನ್ ಬುಕಿಂಗ್ ಮಾಡಬೇಕು.

5) ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾ: ಡಿಸೆಂಬರ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಸೆಪ್ಟೆಂಬರ್ 24 ರಂದು ಬಿಡುಗಡೆ ಮಾಡಲಾಗುತ್ತದೆ. 10 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ.

6) ತಿರುಮಲ ಮತ್ತು ತಿರುಪತಿಯಲ್ಲಿ ರೂಮ್ ಕೋಟಾ: ತಿರುಮಲ ಮತ್ತು ತಿರುಪತಿಯಲ್ಲಿ ಡಿಸೆಂಬರ್ ತಿಂಗಳ ರೂಮ್ ಕೋಟಾವನ್ನು ಸೆಪ್ಟೆಂಬರ್ 24 ರಂದು ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಶ್ರೀವಾರಿ ಸೇವಾ ಕೋಟ ಮತ್ತು ಟಿಟಿಡಿ ವಿನಂತಿ

ಸೆಪ್ಟೆಂಬರ್ 27 ರಂದು, ತಿರುಮಲ - ತಿರುಪತಿ ಶ್ರೀವಾರಿ ಸೇವಾ ಕೋಟಾ ಟಿಕೆಟ್‌ಗಳನ್ನು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ನವನೀತ ಸೇವೆ ಹಾಗೂ 1 ಗಂಟೆಗೆ ಪರಕಾಮಣಿ ಸೇವೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ. ಶ್ರೀವಾರಿ ಆರ್ಜಿತಸೇವೆ ಮತ್ತು ದರ್ಶನ ಟಿಕೆಟ್‌ಗಳನ್ನು https://ttdevasthanams.ap.gov.in ವೆಬ್‌ಸೈಟ್ ಮೂಲಕ ಕಾಯ್ದಿರಿಸುವಂತೆ ಟಿಟಿಡಿ ಪ್ರಕಟಣೆಯಲ್ಲಿ ಕೋರಿದೆ.

ಮತ್ತೊಂದೆಡೆ ತಿರುಮಲದಲ್ಲಿ ಭಕ್ತರ ನೂಕುನುಗ್ಗಲು ಇಂದು ಕೂಡ ಮುಂದುವರಿದಿದೆ. ಕೃಷ್ಣ ತೇಜ ಅತಿಥಿ ಗೃಹದವರೆಗೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಶ್ರೀವಾರಿ ಸರ್ವದರ್ಶನಕ್ಕೆ 24 ಗಂಟೆ ಬೇಕು ಎಂದು ಟಿಟಿಡಿ ಮೂಲಗಳು ತಿಳಿಸಿವೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.