ಕನ್ನಡ ಸುದ್ದಿ  /  Nation And-world  /  Ssc Cgl 2022 Tier 1 Scorecards Tomorrow On Ssc.nic.in, Detais Here

SSC CGL 2022: ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಬರೆದವರು ಗಮನಿಸಿ, ನಾಳೆ ಸಿಬ್ಬಂದಿ ನೇಮಕ ಆಯೋಗದಿಂದ ಅಂಕಪಟ್ಟಿ ಬಿಡುಗಡೆ

SSC CGL Tier 1 Scorecard: ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆಯ ಅಂಕಪಟ್ಟಿ ವೀಕ್ಷಣೆಗೆ ನಾಳೆ ssc.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

SSC CGL 2022 tier 1 scorecards tomorrow on ssc.nic.in, detais here
SSC CGL 2022 tier 1 scorecards tomorrow on ssc.nic.in, detais here (ssc.nic.in)

SSC CGL 2022 Tier 1 Result: ಸಿಬ್ಬಂದಿ ನೇಮಕಾತಿ ಆಯೋಗವು ನಾಳೆ ಅಂದರೆ ಫೆಬ್ರವರಿ 27ರಂದು ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್‌ ಪರೀಕ್ಷೆಯ ಹಂತ ಒಂದರ ಅಂಕಪಟ್ಟಿಗಳನ್ನು ನಾಳೆ ಪ್ರಕಟಿಸಲಿದೆ. ಎಸ್‌ಎಸ್‌ಸಿ ಸಿಜಿಎಲ್‌ ಪರೀಕ್ಷೆ ಬರೆದ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ ssc.nic.inನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಎಸ್‌ಎಸ್‌ಸಿಯು ಅಂಕಪಟ್ಟಿಗಳ ಜತೆಗೆ ಅಂತಿಮ ಉತ್ತರ ಕೀಗಳನ್ನು ಪ್ರಕಟಿಸಲಿದೆ.

ಎಸ್‌ಎಸ್‌ಸಿ ಸಿಜಿಎಲ್‌ ಟೈರ್‌ 1 ಸ್ಕೋರ್‌ ಕಾರ್ಡ್‌ ಫೆಬ್ರವರಿ 22ರಂದು ಪ್ರಕಟವಾಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಇದನ್ನು ಮುಂದೂಡಲಾಗಿತ್ತು.

SSC CGL scorecards ಲಿಂಕ್‌ ನಾಳೆಯಿಂದ ಮಾರ್ಚ್‌ 13ರವರೆಗೆ ಸಕ್ರಿಯವಾಗಿರಲಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ನೋಂದಣಿ ಐಡಿ ಮತ್ತು ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ ಫಲಿತಾಂಶ ವೀಕ್ಷಿಸಬಹುದು.

"ಸಿಬ್ಬಂದಿ ನೇಮಕ ಆಯೋಗವು 09.02.2023 ರಂದು ಕಂಬೈನ್ಡ್‌ ಗ್ರಾಜುಯೇಟ್ ಲೆವೆಲ್ ಪರೀಕ್ಷೆ (ಟೈರ್-1), 2022 ರ ಫಲಿತಾಂಶವನ್ನು ಪ್ರಕಟಿಸಿದೆ ಮತ್ತು ಶ್ರೇಣಿ-I ಪರೀಕ್ಷೆಯ ಫಲಿತಾಂಶದಂದು ತಿಳಿಸಿದ ಪ್ರಕಾರ 22.02.2023 ರಂದು ಅಂಕಪಟ್ಟಿ ಮತ್ತು ಉತ್ತರ ಕೀಲಿಗಳನ್ನು ಪ್ರಕಟಿಸಬೇಕಿತ್ತು" ಎಂದು ಎಸ್‌ಎಸ್‌ಎಲ್‌ ಪ್ರಕಟಣೆ ನೀಡಿತ್ತು.

"ಈ ಮೂಲಕ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸುವುದೇನೆಂದರೆ, ಸಿಜಿಎಲ್ಇ, 2022 (ಟೈರ್-I) ಯ ಅಂಕಗಳು ಮತ್ತು ಅಂತಿಮ ಉತ್ತರ ಕೀಗಳನ್ನುಆಯೋಗದ ವೆಬ್‌ಸೈಟ್‌ನಲ್ಲಿ ಫೆಬ್ರವರಿ 27 ರಿಂದ 13 ನೇ ಮಾರ್ಚ್ 2023 ರವರೆಗೆ ಲಭ್ಯವಿರಲಿದೆ" ಎಂದು ಎಸ್‌ಎಸ್‌ಸಿ ತಿಳಿಸಿದೆ.

ಸ್ಕೋರ್‌ ಕಾರ್ಡ್‌ ಡೌನ್‌ಲೋಡ್‌ ಮಾಡುವುದು ಹೇಗೆ?

  • ಮೊದಲಿಗೆ ssc.nic.in ವೆಬ್‌ಸೈಟ್‌ಗೆ ಭೇಟಿ ನೀಡಿ
  • ರಿಸಲ್ಟ್‌ ವಿಭಾಗ ಕ್ಲಿಕ್‌ ಮಾಡಿ
  • SSC CGL 2022 scorecard ಡೌನ್‌ಲೋಡ್‌ ಕ್ಲಿಕ್‌ ಮಾಡಿ
  • ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನಮೂದಿಸಿ, ಸಬ್‌ಮಿಟ್‌ ಕೊಡಿ
  • ಸ್ಕೋರ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಿ
  • ಎಸ್‌ಎಸ್‌ಸಿಯು ಡಿಸೆಂಬರ್‌ 1ರಿಂದ ಡಿಸೆಂಬರ್‌ 13ರವರೆಗೆ ಕಂಪ್ಯೂಟರ್‌ ಆಧರಿತ ಪರೀಕ್ಷೆ ನಡೆಸಿತ್ತು.

ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಎಸ್‌ಎಸ್‌ಸಿ ಕಾನ್‌ಸ್ಟೇಬಲ್‌ (ಜಿಟಿ) ಪರೀಕ್ಷೆ 2022ರ ತಾತ್ಕಾಲಿಕ ವೇಕ್ಸೆನ್ಸಿ ಲಿಸ್ಟ್‌ ಪ್ರಕಟಗೊಂಡಿದೆ. ssc.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಈ ತಾತ್ಕಾಲಿಕ ಹುದ್ದೆಗಳ ಪಟ್ಟಿಯನ್ನು ಪರಿಶೀಲಿಸಬಹುದು. ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌),ಎಸ್‌ಎಸ್‌ಎಫ್‌, ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮೆನ್‌ (ಜಿಡಿ), ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೊ ಎಗ್ಸಾಮಿನೇಷನ್‌ನಲ್ಲಿ ಸಫಾಯಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹೆಚ್ಚಿನ ವಿವರವನ್ನು ಇಲ್ಲಿ ಪಡೆಯಿರಿ.

ಭಾರತೀಯ ತೈಲ ನಿಗಮದಲ್ಲಿ ಉದ್ಯೋಗಾವಕಾಶ

ಭಾರತೀಯ ತೈಲ ನಿಗಮದಲ್ಲಿ ವಿವಿಧ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಂದ ಮಾರ್ಚ್‌ 1ರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 1 ಆರಂಭಿಕ ದಿನಾಂಕವಾಗಿದ್ದು, ಮಾರ್ಚ್‌ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೇವಲ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

IPL_Entry_Point