Kannada News  /  Nation And-world  /  Ssc Chsl 2021 Result Out At Ssc.nic.in, 16,160 Candidates Qualified For Dv
SSC CHSL 2021 result: ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ 2021 ಫಲಿತಾಂಶ ಪ್ರಕಟ
SSC CHSL 2021 result: ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ 2021 ಫಲಿತಾಂಶ ಪ್ರಕಟ

SSC CHSL 2021 result: ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ 2021 ಫಲಿತಾಂಶ ಪ್ರಕಟ, ದಾಖಲೆ ಪರಿಶೀಲನೆ ಹಂತಕ್ಕೆ ತಲುಪಿದ 16,160 ಅಭ್ಯರ್ಥಿಗಳು

19 March 2023, 16:53 ISTHT Kannada Desk
19 March 2023, 16:53 IST

SSC CHSL 2021 result out at ssc.nic.in: 14873 ಅಭ್ಯರ್ಥಿಗಳು ಟೈಪಿಂಗ್‌ ಟೆಸ್ಟ್‌ಗೆ (ಲಿಸ್ಟ್‌ 1)ಗೆ ಆಯ್ಕೆಯಾಗಿದ್ದಾರೆ. 220 ಅಭ್ಯರ್ಥಿಗಳು ಡಿಇಎಸ್‌ಟಿಗೆ (ಸಿಎಜಿ) (ಲಿಸ್ಟ್‌ 2)ಗೆ ಆಯ್ಕೆಯಾಗಿದ್ದಾರೆ.

ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್‌ ಹೈಯರ್‌ ಸೆಕೆಂಡರಿ (10+2) ಹಂತದ 2021ರ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈಗ ಸ್ಕಿಲ್‌ ಟೆಸ್ಟ್‌ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆ ಉತ್ತೀರ್ಣರಾದವರು ಮುಂದೆ ದಾಖಲೆ ಪರಿಶೀಲನೆ ಹಂತಕ್ಕೆ ಹೋಗಬಹುದಾಗಿದೆ. ಸ್ಕಿಲ್‌ ಟೆಸ್ಟ್‌ ಪರೀಕ್ಷೆ ಬರೆದ ಅಭ್ಯರ್ಥಿಗಳು ssc.nic.inನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಟ್ರೆಂಡಿಂಗ್​ ಸುದ್ದಿ

14873 ಅಭ್ಯರ್ಥಿಗಳು ಟೈಪಿಂಗ್‌ ಟೆಸ್ಟ್‌ಗೆ (ಲಿಸ್ಟ್‌ 1)ಗೆ ಆಯ್ಕೆಯಾಗಿದ್ದಾರೆ. 220 ಅಭ್ಯರ್ಥಿಗಳು ಡಿಇಎಸ್‌ಟಿಗೆ (ಸಿಎಜಿ) (ಲಿಸ್ಟ್‌ 2)ಗೆ ಆಯ್ಕೆಯಾಗಿದ್ದಾರೆ. ಸಿಎಜಿ ಹೊರತುಪಡಿಸಿದ ಡಿಇಎಸ್‌ಟಿ ಪರೀಕ್ಷೆಗೆ ಅರ್ಹತೆ ಪಡೆದವರು ದಾಖಲೆ ಪರಿಶೀಲನೆಗೆ ಹಾಜರಾಗಬಹುದು. ಸಿಬ್ಬಂದಿ ನೇಮಕಾತಿ ಆಯೋಗದ ಆಯಾ ಪ್ರಾದೇಶಿಕ ಕಚೇರಿಗಳ ವೆಬ್‌ಸೈಟ್‌ಗಳಲ್ಲಿ ದಾಖಲೆ ಪರಿಶೀಲನೆ ಕುರಿತಾದ ಮಾಹಿತಿ ಪ್ರಕಟಗೊಳ್ಳಲಿದೆ.

ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ 2021 ಫಲಿತಾಂಶ ವೀಕ್ಷಣೆ ಹೇಗೆ?

  • ಮೊದಲು ssc.nic.in ವೆಬ್‌ಸೈಟ್‌ಗೆ ಹೋಗಿ
  • ಹೋಮ್‌ಪೇಜ್‌ನಲ್ಲಿ ರಿಸಲ್ಟ್‌ ಟ್ಯಾಬ್‌ ಕ್ಲಿಕ್‌ ಮಾಡಿ
  • ಅಲ್ಲಿ ಸಿಎಚ್‌ಎಸ್‌ಎಲ್‌ ಸ್ಕಿಲ್‌ ಟೆಸ್ಟ್‌ ಲಿಂಕ್‌ ಕ್ಲಿಕ್‌ ಮಾಡಿ
  • ಕ್ಲಿಕ್‌ ಮಾಡಿದಾಗ ಪಿಡಿಎಫ್‌ ಕಾಣಿಸುತ್ತದೆ.
  • ಫಲಿತಾಂಶ ಪರಿಶೀಲಿಸಿ, ಭವಿಷ್ಯದ ಅವಶ್ಯಕತೆಗಾಗಿ ಪ್ರಿಂಟೌಟ್‌ ತೆಗೆದುಕೊಳ್ಳಿ.

ಏನಿದು ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ ಪರೀಕ್ಷೆ?

ಲೋವರ್ ಡಿವಿಷನ್ ಕ್ಲರ್ಕ್‌, ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ , ಪೋಸ್ಟಲ್ ಅಸಿಸ್ಟಂಟ್ , ವಿಂಗಡಣೆ ಸಹಾಯಕ , ಡಾಟಾ ಎಂಟ್ರಿ ಆಪರೇಟರ್ , ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ ಮುಂತಾದ ಹುದ್ದೆಗಳನ್ನು ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತದೆ.

ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ ಪರೀಕ್ಷೆಯ ಹಂತಗಳು

ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್‌ ಹೈಯರ್‌ ಸೆಕೆಂಡರಿ (10+2) ಹಂತದ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 3 ಹಂತಗಳಲ್ಲಿ ಪರೀಕ್ಷೆ ಇರುತ್ತದೆ. ಅಂದರೆ, ಟೈಯರ್-1 ಪರೀಕ್ಷೆ (ಕಂಪ್ಯೂಟರ್ ಆಧಾರಿತ), - ಟೈಯರ್-2 ಪರೀಕ್ಷೆ (ವಿವರಣಾತ್ಮಕ), ಟೈಯರ್-3 ಪರೀಕ್ಷೆ (ಸ್ಕಿಲ್‌ ಟೆಸ್ಟ್‌ ಮತ್ತು ಟೈಪಿಂಗ್ ಟೆಸ್ಟ್‌) ಇರುತ್ತದೆ.

ಗಮನಿಸಬಹುದಾದ ಇತರೆ ಸುದ್ದಿಗಳು

ರಾಜ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆ ಬೆಳಗಾವಿಗೆ ಆಗಮಿಸುತ್ತಿದ್ದು, ಬೃಹತ್ ಶಕ್ತಿ ಪ್ರದರ್ಶನಕ್ಕೆ ಕೈ ನಾಯಕರು ಸಿಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ರಾಹುಲ್ ಗಾಂಧಿ ನಾಳೆಯಿಂದ ಪ್ರಾರಂಭವಾಗುವ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಮೇ ವೇಳೆಗೆ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಉತ್ತರ ಕರ್ನಾಟಕದ ಬೆಳಗಾವಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ (Team India) ಕಳಪೆ ಪ್ರದರ್ಶನ ನೀಡಿದೆ. ಆಸಿಸ್​​ ಬೌಲರ್​​ಗಳು ಮುಂದೆ ಶರಣಾದ ಭಾರತೀಯ ಬ್ಯಾಟರ್​​ಗಳು ಅಲ್ಪಮೊತ್ತಕ್ಕೆ ಕುಸಿತ ಕಂಡಿದ್ದಾರೆ. ಮೊದಲ ಪಂದ್ಯದಂತೆ 2ನೇ ಏಕದಿನ ಪಂದ್ಯದಲ್ಲಿ ಬ್ಯಾಟ್ಸ್​​​ಮನ್​​ಗಳು ತೀವ್ರ ವೈಫಲ್ಯ ಅನುಭವಿಸಿದ್ದು, ಟೀಕೆಗೆ ಕಾರಣವಾಗಿದೆ.