ಕನ್ನಡ ಸುದ್ದಿ  /  Nation And-world  /  Ssc Mts Exam 2022: Registration Ends On February 17, Apply At Ssc.nic.in

SSC MTS Exam 2022: ಸಿಬ್ಬಂದಿ ನೇಮಕ ಆಯೋಗದ ಎಂಟಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆದಿನ, ತಕ್ಷಣ ಅರ್ಜಿ ಸಲ್ಲಿಸಿ

SSC MTS Exam 2022: ತಾಂತ್ರಿಕೇತರ ಮಲ್ಟಿ ಟಾಸ್ಕಿಂಗ್‌ ಸಿಬ್ಬಂದಿ, ಹವಾಲ್ದಾರ್‌ ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ಪರೀಕ್ಷೆ ನಡೆಸುತ್ತದೆ. ಆಸಕ್ತರು ssc.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

SSC CHSL Exam 2022 notification: ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ ಅಧಿಸೂಚನೆ ಪ್ರಕಟ
SSC CHSL Exam 2022 notification: ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ ಅಧಿಸೂಚನೆ ಪ್ರಕಟ

ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) SSC MTS Exam 2022 ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ನಾಡಿದ್ದು ಅಂದರೆ, ಫೆಬ್ರವರಿ 17ರಂದು ಕೊನೆಗೊಳಿಸಲಿದೆ. ಇನ್ನೂ ಅರ್ಜಿ ಸಲ್ಲಿಸದೆ ಇರುವಂತಹ ಅಭ್ಯರ್ಥಿಗಳು ವಿಳಂಬ ಮಾಡದೆ ಅರ್ಜಿ ಸಲ್ಲಿಸಬಹುದು. ತಾಂತ್ರಿಕೇತರ ಮಲ್ಟಿ ಟಾಸ್ಕಿಂಗ್‌ ಸಿಬ್ಬಂದಿ, ಹವಾಲ್ದಾರ್‌ ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ಪರೀಕ್ಷೆ ನಡೆಸುತ್ತದೆ. ಆಸಕ್ತರು ssc.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆಯ ದಿನವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಫೆಬ್ರವರಿ 19ರ ತನಕ ಅವಕಾಶವಿದೆ. ಚಲನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಫೆಬ್ರವರಿ 20ರವರೆಗೆ ಕಾಲಾವಕಾಶ ನೀಡಲಾಗಿದೆ. ಫೆಬ್ರವರಿ 23-24ರವರೆಗೆ ಅರ್ಜಿ ತಿದ್ದುಪಡಿ ಮಾಡಲು ಅವಕಾಶವಿದೆ. ಕಂಪ್ಯೂಟರ್‌ ಆಧರಿತ ನೇಮಕ ಪರೀಕ್ಷೆಯು ಏಪ್ರಿಲ್‌ನಲ್ಲಿ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಶೈಕ್ಷಣಿಕ ಅರ್ಹತೆ ಬಯಸುವ ಎಸ್‌ಎಸ್‌ಸಿ ಎಂಟಿಎಸ್‌ ಮತ್ತು ಹವಾಲ್ದಾರ್‌ ಹುದ್ದೆಗಳಿಗೆ ಇಲ್ಲಿಯವರೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರಲಿಲ್ಲ. ಇದೇ ಮೊದಲ ಬಾರಿಗೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಪರೀಕ್ಷೆ ಬರೆಯುವ ಅವಕಾಶ ದೊರಕಿದೆ. ಕೇಂದ್ರ ಸಿಬ್ಬಂದಿ ನೇಮಕಾತಿ (ಎಸ್‌ಎಸ್‌ಸಿ) ಆಯೋಗವು ಇದೇ ಮೊದಲ ಬಾರಿಗೆ ಕನ್ನಡ ಮತ್ತು ಕೊಂಕಣಿ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಈ ನೇಮಕ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಹೀಗಾಗಿ, ಕೊನೆಯ ದಿನದೊಳಗೆ ಕನ್ನಡಿಗರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿನ ಒಟ್ಟು 10,880 ಎಂಟಿಎಸ್ ಹುದ್ದೆಗಳಿಗೆ ಹಾಗೂ ಸುಂಕ ಮತ್ತು ಪರೋಕ್ಷ ತೆರಿಗೆಯ ಕೇಂದ್ರೀಯ ಮಂಡಳಿ (ಸಿಬಿಐಸಿ) ಮತ್ತು ನರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (ಸಿಬಿಎನ್)ನಲ್ಲಿನ 529 ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 11,409 ಹುದ್ದೆಗಳಿವೆ.

ಈ ಹುದ್ದೆಗಳ ನೇಮಕಕ್ಕೆ ಇದೇ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಕಂಪ್ಯೂಟರ್‌ ಆಧರಿತ ನೇಮಕಾತಿ ಪರೀಕ್ಷೆ ನಡೆಯಲಿದೆ. ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಸಿಬಿಎನ್‌ನಲ್ಲಿನ ಎಂಟಿಸ್ ಮತ್ತು ಹವಾಲ್ದಾರ್ ಹುದ್ದೆಗಳಿಗೆ 18ರಿಂದ 25 ವರ್ಷ, ಸಿಬಿಐಸಿಯಲ್ಲಿನ ಹವಾಲ್ದಾರ್ ಮತ್ತು ಎಂಟಿಎಸ್ ಹುದ್ದೆಗಳಿಗೆ 18ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುತ್ತದೆ.

ಕರ್ನಾಟಕದ ಅಭ್ಯರ್ಥಿಗಳು ತಮ್ಮ ಮಾತೃಭಾಷೆಗೆ ತಕ್ಕಂತೆ ಕನ್ನಡ ಅಥವಾ ಕೊಂಕಣಿಯಲ್ಲಿಯೂ ಈ ಪರೀಕ್ಷೆ ಬರೆಯಬಹುದು. ಈ ಹಿಂದೆ ಕೇವಲ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿತ್ತು. 

ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಟಯರ್-1 (ಪತ್ರಿಕೆ-1) ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯಾಗಿದೆ. ಟಯರ್-2 (ಪತ್ರಿಕೆ-2) ಪರೀಕ್ಷೆಯು ವಿವರಣಾತ್ಮಕ ಅಥವಾ ಪ್ರಬಂಧ ಮಾದರಿಯಲ್ಲಿರುತ್ತದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.