ಸೆನ್ಸೆಕ್ಸ್ ಪತನ; 15 ನಿಮಿಷದಲ್ಲಿ 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು, ಮಧ್ಯಪ್ರಾಚ್ಯ ಸಂಘರ್ಷ ಸೇರಿ ಗಮನಸೆಳೆದ 3 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸೆನ್ಸೆಕ್ಸ್ ಪತನ; 15 ನಿಮಿಷದಲ್ಲಿ 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು, ಮಧ್ಯಪ್ರಾಚ್ಯ ಸಂಘರ್ಷ ಸೇರಿ ಗಮನಸೆಳೆದ 3 ಅಂಶಗಳು

ಸೆನ್ಸೆಕ್ಸ್ ಪತನ; 15 ನಿಮಿಷದಲ್ಲಿ 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು, ಮಧ್ಯಪ್ರಾಚ್ಯ ಸಂಘರ್ಷ ಸೇರಿ ಗಮನಸೆಳೆದ 3 ಅಂಶಗಳು

Sensex crash today: ಮಧ್ಯಪ್ರಾಚ್ಯ ಸಂಘರ್ಷದ ಸನ್ನಿವೇಶ, ಇಸ್ರೇಲ್ ಮೇಲೆ ಇರಾನ್ ದಾಳಿಯ ಪರಿಣಾಮ ಜಾಗತಿಕ ಷೇರುಪೇಟೆಗಳ ಮೇಲಾಗಿದೆ. ಭಾರತದಲ್ಲಿ ಕೂಡ ಷೇರುಪೇಟೆ ಕುಸಿತದೊಂದಿಗೆ ವಹಿವಾಟು ಶುರುಮಾಡಿದೆ. ಸೋಮವಾರ ಸೆನ್ಸೆಕ್ಸ್ ಪತನದಿಂದ 15 ನಿಮಿಷದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡರು. ಈ ನಡುವೆ, ಗಮನಸೆಳೆದ 3 ಅಂಶಗಳು ಹೀಗಿವೆ.

ಮುಂಬಯಿ ಬಾಂಬೆ ಸ್ಟಾಕ್ಸ್‌ಚೇಂಕ್ ಕಚೇರಿ ಮುಂಭಾಗ
ಮುಂಬಯಿ ಬಾಂಬೆ ಸ್ಟಾಕ್ಸ್‌ಚೇಂಕ್ ಕಚೇರಿ ಮುಂಭಾಗ (Reuters)

ಮುಂಬಯಿ: ಏಷ್ಯಾ ಮಾರುಕಟ್ಟೆಗಳ ಪೈಕಿ ಭಾರತದ ಷೇರುಪೇಟೆ ಸೂಚ್ಯಂಕಗಳು ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ (ಏಪ್ರಿಲ್ 15) ಭಾರಿ ಕುಸಿತದೊಂದಿಗೆ ದಿನದ ವಹಿವಾಟು ಶುರುಮಾಡಿವೆ. ಇಸ್ರೇಲ್‌ನ ಮೇಲೆ ಇರಾನ್‌ನ ಪ್ರತೀಕಾರದ ದಾಳಿಯು ಮಧ್ಯಪ್ರಾಚ್ಯದಲ್ಲಿ ವ್ಯಾಪಕ ಪ್ರಾದೇಶಿಕ ಸಂಘರ್ಷದ ಭಯವನ್ನು ಹುಟ್ಟುಹಾಕಿದ ನಂತರ ಹೂಡಿಕೆದಾರರ ಭಾವನೆಯು ದುರ್ಬಲವಾಗಿ ಉಳಿದಿರುವುದು ಇದಕ್ಕೆ ಮುಖ್ಯ ಕಾರಣ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆಕ್ಸ್‌ 800 ಅಂಶ ಅಥವಾ ಶೇ 0.86 ಕುಸಿತ ಕಂಡು 73,468.70ಯಲ್ಲಿ ವಹಿವಾಟು ನಡೆಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ50 ಯು 190 ಅಂಶ ಅಥವಾ 0.84% ಕುಸಿತ ಕಂಡು 22,330 ಅಂಶಗಳಲ್ಲಿ ವಹಿವಾಟು ನಡೆಸಿತ್ತು.

ವಾರಾಂತ್ಯದಲ್ಲಿ ಇಸ್ರೇಲ್‌ನ ಮೇಲೆ ಇರಾನ್‌ನ ಅನಿರೀಕ್ಷಿತ ದಾಳಿಯ ನಂತರ ಮಾರುಕಟ್ಟೆಗಳು ಆ ಉದ್ವಿಗ್ನತೆಯೊಂದಿಗೆ ಸ್ಪಂದಿಸಿದ ಕಾರಣ, ಅಮೆರಿಕದ ಷೇರುಪೇಟೆ ಕುಸಿತದ ಬೆನ್ನಿಗೆ ಏಷ್ಯಾದಲ್ಲಿ ಷೇರುಗಳು ಸೋಮವಾರ ಕುಸಿಯಿತು. ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದಲ್ಲಿನ ಷೇರುಪೇಟೆ ಸೂಚ್ಯಂಕಗಳು ಎಲ್ಲಾ ಕುಸಿದವು. ಅಷ್ಟೇ ಏಕೆ ಹಾಂಗ್ ಕಾಂಗ್ ಸ್ಟಾಕ್ ಫ್ಯೂಚರ್ಸ್ ಕೂಡ ಕುಸಿಯಿತು.

ಸೆನ್ಸೆಕ್ಸ್ ವಹಿವಾಟು ಹೇಗಿದೆ- ಯಾವ ವಲಯಗಳು ಕುಸಿತ ಕಂಡಿವೆ

ಬಾಂಬೆ ಸ್ಟಾಕ್ ಎಕ್ಸ್‌ಜೇಂಜ್‌ನಲ್ಲಿ ಲಿಸ್ಟ್ ಆಗಿರುವ ಕಂಪನಿಗಳ (BSE listed companies) ಮಾರುಕಟ್ಟೆ ಬಂಡವಾಳವು 5 ಲಕ್ಷ ಕೋಟಿ ರೂಪಾಯಿ ಕುಸಿದು 394.68 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್‌, ರಿಯಾಲ್ಟಿ, ಮೀಡಿಯಾ ಷೇರುಗಳು ಶೇಕಡ 2 ಕ್ಕೂ ಹೆಚ್ಚು ಕುಸಿದರೆ, ನಿಫ್ಟಿ ಆಟೋ, ಫೈನಾನ್ಶಿಯಲ್‌, ಮೆಟಲ್‌, ಫಾರ್ಮಾ, ತೈಲ ಮತ್ತು ಅನಿಲ ಕ್ಷೇತ್ರದ ಕಂಪನಿಗಳ ಷೇರು ಮೌಲ್ಯ ಶೇಕಡ 1 -2ರಷ್ಟು ಇಳಿಕೆಯಾಗಿದೆ.

ಷೇರುಪೇಟೆ ಕುಸಿತಕ್ಕೆ ಮಧ್ಯಪ್ರಾಚ್ಯ ಬಿಕ್ಕಟ್ಟು ಕಾರಣವೆ?

ಇಸ್ರೇಲ್ ಮೇಲೆ ಇರಾನ್ ಡ್ರೋನ್ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತು. ಸಿರಿಯಾದಲ್ಲಿ ಶಂಕಿತ ಇಸ್ರೇಲಿ ದಾಳಿಯು ಎರಡು ಇರಾನಿನ ಜನರಲ್‌ಗಳನ್ನು ಕಾನ್ಸುಲರ್ ಕಟ್ಟಡ ನಾಶಗೊಳಿಸಿದ ಎರಡು ವಾರದ ಬಳಿಕ, ಮೊದಲ ಬಾರಿಗೆ ಇರಾನ್‌ ನೇರವಾಗಿ ಇಸ್ರೇಲ್‌ ವಿರುದ್ಧ ಸೇನಾ ದಾಳಿ ಶುರುಮಾಡಿತು ಎಂದು ಟೆಲ್ ಅವಿವ್ ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ಇರಾನ್‌ ಉಡಾವಣೆ ಮಾಡಿದ 99 ಪ್ರತಿಶತ ಡ್ರೋನ್ ಮತ್ತು ಕ್ಷಿಪಣಿಗಳನ್ನು ತಡೆಹಿಡಿದು ತನ್ನ ರಕ್ಷಣೆಯಲ್ಲಿ ಇಸ್ರೇಲ್‌ ಯಶಸ್ಸನ್ನು ಶ್ಲಾಘಿಸಿತು. ಇರಾನಿನ ಉಡಾವಣೆಗಳು 300 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದವು ಎಂದು ಇಸ್ರೇಲ್‌ ಹೇಳಿಕೊಂಡಿದೆ. ಇದಾದ ಬೆನ್ನಿಗೆ ಷೇರುಪೇಟೆಯಲ್ಲಿ ಹೂಡಿಕೆದಾರರ ಭಾವನೆಗಳು ಇದಕ್ಕೆ ಸ್ಪಂದಿಸಿದ್ದು ಅಮೆರಿಕ ಸೇರಿ ವಿವಿಧ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂತು.

ಏಷ್ಯಾ ಮಾರುಕಟ್ಟೆಯಲ್ಲಿ ಏನಿದೆ ಪರಿಸ್ಥಿತಿ

ಮಧ್ಯಪ್ರಾಚ್ಯದ ಸಂಘರ್ಷಮಯ ಸನ್ನಿವೇಶದ ಕಾರಣ, ಏಷ್ಯಾದಲ್ಲಿನ ಮಾರುಕಟ್ಟೆಗಳು ಎಚ್ಚರಿಕೆಯ ಹೆಜ್ಜೆ ಹಾಕಿವೆ. ಏಷ್ಯಾ ಮಾರುಕಟ್ಟೆ ಜೊತೆಗೆ ಜಪಾನ್‌ನ ಹೊರತು ಪಡಿಸಿದ ಏಷ್ಯಾ-ಪೆಸಿಫಿಕ್ ಷೇರುಗಳ ಎಂಎಸ್‌ಸಿಐಯ ವಿಶಾಲ ಸೂಚ್ಯಂಕವು 0.7 ಪ್ರತಿಶತ ಕುಸಿದಿದ್ದರೆ ಜಪಾನ್‌ನ ನಿಕ್ಕಿ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿದೆ. ಆಸ್ಟ್ರೇಲಿಯಾದ ಎಸ್‌ಆಂಡ್‌ಪಿ/ಎಎಸ್‌ಎಕ್ಸ್ 200 ಸೂಚ್ಯಂಕವು ಶೇಕಡಾ 0.6 ರಷ್ಟು ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇಕಡಾ 0.8 ರಷ್ಟು ಕುಸಿದಿದೆ ಎಂದು ವರದಿ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.