ಯಾವ ಷೇರು ಖರೀದಿಸಲಿ: ಈ 8 ಷೇರುಗಳನ್ನು ಖರೀದಿಸಲು 3 ಎಕ್ಸ್‌ಪರ್ಟ್‌ಗಳು ಶಿಫಾರಸು ಮಾಡುತ್ತಾರೆ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯಾವ ಷೇರು ಖರೀದಿಸಲಿ: ಈ 8 ಷೇರುಗಳನ್ನು ಖರೀದಿಸಲು 3 ಎಕ್ಸ್‌ಪರ್ಟ್‌ಗಳು ಶಿಫಾರಸು ಮಾಡುತ್ತಾರೆ ನೋಡಿ

ಯಾವ ಷೇರು ಖರೀದಿಸಲಿ: ಈ 8 ಷೇರುಗಳನ್ನು ಖರೀದಿಸಲು 3 ಎಕ್ಸ್‌ಪರ್ಟ್‌ಗಳು ಶಿಫಾರಸು ಮಾಡುತ್ತಾರೆ ನೋಡಿ

ಷೇರುಪೇಟೆ ಏರುಗತಿಯಲ್ಲಿದ್ದರೂ ಆಗಾಗ ಕುಸಿತ ಕಾಣುತ್ತಿರುವ ಕಾರಣ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಮಾಡುವುದು ಅಗತ್ಯ. ಸ್ವತಃ ಅಧ್ಯಯನ ನಡೆಸಿ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕಾಗಿ ಪರಿಣತರ ಸಲಹೆಯನ್ನೂ ಪಡೆಯಬಹುದು. ಇಂದು ಈ 8 ಷೇರುಗಳನ್ನು ಖರೀದಿಸಲು 3 ಎಕ್ಸ್‌ಪರ್ಟ್‌ಗಳು ಶಿಫಾರಸು ಮಾಡುತ್ತಾರೆ ನೋಡಿ. ಅದರ ವಿವರ ಇಲ್ಲಿದೆ.

 8 ಷೇರುಗಳನ್ನು ಖರೀದಿಸಲು 3 ಎಕ್ಸ್‌ಪರ್ಟ್‌ಗಳು ಶಿಫಾರಸು ಮಾಡುತ್ತಾರೆ
8 ಷೇರುಗಳನ್ನು ಖರೀದಿಸಲು 3 ಎಕ್ಸ್‌ಪರ್ಟ್‌ಗಳು ಶಿಫಾರಸು ಮಾಡುತ್ತಾರೆ

ನವದೆಹಲಿ: ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗಾಗಿ ಪರಿಣತರು ಸಲಹೆ ನೀಡುವುದು ಸಾಮಾನ್ಯ. ಪರಿಣತರು ಕೆಲವು ಸ್ಟಾಕ್‌ಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ಖರೀದಿ/ ಮಾರಾಟದ ಸಲಹೆ ನೀಡುತ್ತಿರುತ್ತಾರೆ. ಈ ದಿನಕ್ಕೆ ಸಂಬಂಧಿಸಿ ಮೂವರು ಪರಿಣತರು ಖರೀದಿಸಬಹುದಾದ 8 ಷೇರುಗಳ ಮಾಹಿತಿ ಒದಗಿಸಿದ್ದಾರೆ. ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು 2 ಸ್ಟಾಕ್ ಪಿಕ್‌ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಆನಂದ್ ರಾಠಿಯ ತಾಂತ್ರಿಕ ಸಂಶೋಧನೆಯ ಹಿರಿಯ ಮ್ಯಾನೇಜರ್ ಗಣೇಶ್ ಡೋಂಗ್ರೆ, ಇಂದಿಗೆ ಇನ್ನೂ ಮೂರು ಸ್ಟಾಕ್ ಗಮನಿಸಿ ಎಂದಿದ್ದಾರೆ. ಇವುಗಳಲ್ಲಿ ಜ್ಯೋತಿ ಲ್ಯಾಬ್ಸ್ ಲಿಮಿಟೆಡ್, ವರ್ಲ್‌ಪೂಲ್ ಆಫ್ ಇಂಡಿಯಾ ಲಿಮಿಟೆಡ್, ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್ ಸೇರಿವೆ. ಅದೇ ಸಮಯದಲ್ಲಿ, ಅವರ ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ, ಚಂದನ್ ಟಪಾರಿಯಾ ಅವರು ಮೂರು ಷೇರುಗಳನ್ನು ಅಂದರೆ ಎನ್‌ಟಿಪಿಸಿ, ಫೆಡರಲ್ ಬ್ಯಾಂಕ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಖರೀದಿಸಲು ಸಲಹೆ ನೀಡಿದ್ದಾರೆ.

ಸುಮೀತ್ ಬಗಾಡಿಯಾ ಟಿಪ್ಸ್ ಹೀಗಿದೆ

ಜ್ಯೋತಿ ಲ್ಯಾಬ್ಸ್ ಲಿಮಿಟೆಡ್: ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು ಜ್ಯೋತಿ ಲ್ಯಾಬ್ಸ್ ಲಿಮಿಟೆಡ್ ಅನ್ನು 558 ರೂಪಾಯಿಗೆ ಖರೀದಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಸ್ಟಾಪ್ ಲಾಸ್‌ ಗುರಿಯನ್ನು 541 ರೂಪಾಯಿಗೆ ಮತ್ತು ಏರಿಕೆ ಮಟ್ಟವನ್ನು 592 ರೂಪಾಯಿ ಎಂದು ಅಂದಾಜಿಸಿ ಖರೀದಿಸಲು ಶಿಫಾರಸು ಮಾಡಿದ್ದಾರೆ.

ವಿರ್ಲ್‌ಪೂಲ್ ಆಫ್ ಇಂಡಿಯಾ ಲಿಮಿಟೆಡ್: ಸುಮಿತ್ ಬಗಾಡಿಯಾ ಅವರು ವಿರ್ಲ್‌ಪೂಲ್ ಆಫ್ ಇಂಡಿಯಾ ಷೇರನ್ನು 2289.6 ರೂಪಾಯಿಗೆ ಖರೀದಿಸಬಹುದು ಎಂದು ಶಿಫಾರಸು ಮಾಡಿದ್ದಾರೆ. ಇದಕ್ಕೆ ಸ್ಟಾಪ್ ಲಾಸ್ ಗುರಿ 2220 ರೂಪಾಯಿ ಮತ್ತು ಏರಿಕೆ ಅಂದರೆ ಗರಿಷ್ಠ 2427 ರೂಪಾಯಿ ತಲುಪುವಾಗ ಮಾರಾಟ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಣೇಶ್ ಡೋಂಗ್ರೆ ಗಮನಿಸಿದ ಷೇರುಗಳು

ಎಚ್‌ಡಿಎಫ್‌ಸಿ ಲೈಫ್: ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಕಂಪನಿಯ ಷೇರನ್ನು 745 ರೂಪಾಯಿ ಗುರಿ ಬೆಲೆ ಇರಿಸಿಕೊಂಡು 718 ರೂಪಾಯಿಗೆ ಖರೀದಿಸಬಹುದು. ನಷ್ಟ ತಪ್ಪಿಸುವುದಕ್ಕಾಗಿ ಸ್ಟಾಪ್ ಲಾಸ್ ಗುರಿ 695 ರೂಪಾಯಿ ಇಟ್ಟುಕೊಳ್ಳಬಹುದು ಎಂದು ಗಣೇಶ್ ಡೋಂಗ್ರೆ ಶಿಫಾರಸು ಮಾಡುತ್ತಾರೆ.

ರಿಲಯನ್ಸ್ ಇಂಡಸ್ಟ್ರೀಸ್: ರಿಲಯನ್ಸ್ ಇಂಡಸ್ಟ್ರೀಸ್ ಷೇರನ್ನು 2960 ರೂಪಾಯಿಗೆ ಖರೀದಿಸಲು ಗಣೇಶ್ ಡೋಂಗ್ರೆ ಶಿಫಾರಸು ಮಾಡುತ್ತಾರೆ. ಇದರ ಗುರಿ 3040 ರೂಪಾಯಿ ಮತ್ತು ಸ್ಟಾಪ್ ಲಾಸ್ ಗುರಿ 2900 ರೂಪಾಯಿ ಇಟ್ಟುಕೊಳ್ಳಿ ಎಂದಿದ್ದಾರೆ.

ಲಾರ್ಸೆನ್ & ಟೂಬ್ರೊ: ಲಾರ್ಸೆನ್ & ಟೂಬ್ರೊ ಲಿಮಿಟೆಡ್ ಷೇರುಗಳನ್ನು 3600 ರೂಪಾಯಿ ಸ್ಟಾಪ್ ಲಾಸ್‌ನೊಂದಿಗೆ 3680 ರೂಪಾಯಿಗೆ ಖರೀದಿಸಬಹುದು. 3950 ರೂಪಾಯಿ ಟಾರ್ಗೆಟ್ ಪ್ರೈಸ್ ಇಟ್ಟುಕೊಳ್ಳಬಹುದು ಎಂದು ಡೋಂಗ್ರೆ ಶಿಫಾರಸು ಮಾಡುತ್ತಾರೆ.

ಚಂದನ್ ಟಪಾರಿಯಾ ಗಮನಿಸಿದ ಷೇರುಗಳು

ಎನ್‌ಟಿಪಿಸಿ: 430 ರೂಪಾಯಿ ಸ್ಟಾಪ್ ಲಾಸ್ ಮತ್ತು ಟಾರ್ಗೆಟ್ ಪ್ರೈಸ್ 465 ರೂಪಾಯಿ ಬೆಲೆಯೊಂದಿಗೆ ಖರೀದಿಸಬಹುದು.

ಫೆಡರಲ್ ಬ್ಯಾಂಕ್‌: 190 ರೂಪಾಯಿ ಸ್ಟಾಪ್ ಲಾಸ್ ಮತ್ತು 210 ರೂಪಾಯಿ ಟಾರ್ಗೆಟ್ ಪ್ರೈಸ್ ಎಂದಿದ್ದಾರೆ.

ಜೆಎಸ್‌ಡಬ್ಲ್ಯು ಸ್ಟೀಲ್: 1,005 ರೂಪಾಯಿ ಸ್ಟಾಪ್ ಲಾಸ್ ಮತ್ತು 1080 ರೂಪಾಯಿ ಟಾರ್ಗೆಟ್ ಬೆಲೆಯೊಂದಿಗೆ ಷೇರು ಖರೀದಿ ಮಾಡಬಹುದು ಎಂದು ಚಂದನ್ ಟಪಾರಿಯಾ ಶಿಫಾರಸು ಮಾಡುತ್ತಾರೆ.

ಗಮನಿಸಿ: ತಜ್ಞರ ಶಿಫಾರಸುಗಳು, ಸಲಹೆಗಳು, ವೀಕ್ಷಣೆಗಳು ಮತ್ತು ಅಭಿಪ್ರಾಯಗಳು ಅವರದ್ದೇ ಆಗಿದ್ದು, ಅವುಗಳು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಶಿಫಾರಸುಗಳಲ್ಲ. ಸಲಹೆಯೂ ಅಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅಪಾಯಗಳಿಗೆ ಒಳಪಟ್ಟಿದ್ದು, ಹೂಡಿಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.