Earthquake: ಫಿಲಿಪೈನ್ಸ್​​ನಲ್ಲಿ 7.5 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Earthquake: ಫಿಲಿಪೈನ್ಸ್​​ನಲ್ಲಿ 7.5 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

Earthquake: ಫಿಲಿಪೈನ್ಸ್​​ನಲ್ಲಿ 7.5 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ

ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.

ಫಿಲಿಪೈನ್ಸ್​​ನಲ್ಲಿ ಭೂಕಂಪ (ಪ್ರಾತಿನಿಧಿಕ ಚಿತ್ರ)
ಫಿಲಿಪೈನ್ಸ್​​ನಲ್ಲಿ ಭೂಕಂಪ (ಪ್ರಾತಿನಿಧಿಕ ಚಿತ್ರ)

ಮಿಂಡಾನಾವೊ: ಕಳೆದ ತಿಂಗಳಷ್ಟೇ ಭೂಕಂಪಕ್ಕೆ ತುತ್ತಾಗಿದ್ದ ಫಿಲಿಪೈನ್ಸ್‌ನಲ್ಲಿ ಇಂದು ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.

63 ಕಿಲೋ ಮೀಟರ್​ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ. ಭೂಕಂಪದ ನಂತರ ಯುಎಸ್ ಏಜೆನ್ಸಿಯು ಸುನಾಮಿ ಎಚ್ಚರಿಕೆಯನ್ನು ನೀಡಿದೆ.

ನವೆಂಬರ್​ ತಿಂಗಳ ಆರಂಭದಲ್ಲಿ ದಕ್ಷಿಣ ಫಿಲಿಪೈನ್ಸ್‌ನಲ್ಲಿ ಉಂಟಾದ 6.7 ತೀವ್ರತೆಯ ಭೂಕಂಪದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು.

'ಪೆಸಿಫಿಕ್ ರಿಂಗ್ ಆಫ್ ಫೈರ್' ಎಂಬ ದುರ್ಬಲ ವಲಯದಲ್ಲಿ ಫಿಲಿಪೈನ್ಸ್ ಇರುವುದರಿಂದ ಆಗಾಗ್ಗೆ ಈ ದೇಶವು ಭೂಕಂಪ ಹಾಗೂ ಜ್ವಾಲಾಮುಖಿಗೆ ಗುರಿಯಾಗುತ್ತಿರುತ್ತದೆ. ಯುಎಸ್​ ಭೂವೈಜ್ಞಾನಿಕ ಸಮೀಕ್ಷೆಯು ಫಿಲಿಪೈನ್ಸ್ ಅನ್ನು "ವಿಶ್ವದ ಅತ್ಯಂತ ಭೂಕಂಪನ ಮತ್ತು ಜ್ವಾಲಾಮುಖಿ ಸಕ್ರಿಯ ವಲಯ" ಎಂದು ಘೋಷಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.