ಭುವಿಗಿಳಿದ ಗಗನಯಾನಿಗಳು: ಸುನೀತಾ ವಿಲಿಯಮ್ಸ್, ಬಚ್ ವಿಲ್ಮೋರ್ ಅಂತರಿಕ್ಷ ನಿಲ್ದಾಣದಲ್ಲಿ 9 ತಿಂಗಳು ಏನು ತಿನ್ನುತ್ತಿದ್ದರು?
Sunita Williams return: ಭೂಮಿಯಿಂದ ಭೂಮಿಯಿಂದ 254 ಮೈಲುಗಳು (409 ಕಿ.ಮೀ) ಎತ್ತರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತೇಲುತ್ತ ಬರೋಬ್ಬರಿ ಒಂಬತ್ತು ತಿಂಗಳ ಕಾಲ ಬದುಕುಳಿದ ಬಂದ ಸುನೀತಾ ವಿಲಿಯಮ್ಸ್, ಬಚ್ ವಿಲ್ಮೋರ್ ಅವರ ಆಹಾರ ಕ್ರಮದ ವಿವರ ಇಲ್ಲಿದೆ.

Sunita Williams return: ಭೂಮಿಯಿಂದ ಹಲವು ಕಿಲೋಮೀಟರ್ ದೂರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತೇಲುತ್ತ ಬರೋಬ್ಬರಿ ಒಂಬತ್ತು ತಿಂಗಳ ಕಾಲ ಬದುಕುಳಿದ ಬಂದ ಸುನೀತಾ ವಿಲಿಯಮ್ಸ್, ಬಚ್ ವಿಲ್ಮೋರ್ ಎಂಬ ಗಗನಯಾನಿಗಳು ಇಂದು ಎಲ್ಲರ ಆಕರ್ಷಣೆಯ ಕೇಂದ್ರಬಿಂದು. ಅಂತರಿಕ್ಷದಲ್ಲಿ ಸೀಮಿತ ಸೌಲಭ್ಯಗಳು ಇರುತ್ತವೆ. ತಿನ್ನಲು ಆಹಾರ, ಕುಡಿಯಲು ಪಾನೀಯ ಸೀಮಿತವಾಗಿರುತ್ತದೆ. ಅಂತರಿಕ್ಷ ನಿಲ್ದಾಣದಲ್ಲಿ ಕೆಲವು ದಿನಗಳು ಅಥವಾ ಕೆಲವು ತಿಂಗಳು ಇದ್ದು ಬಂದಾಗ ಸ್ನಾಯುಗಳ ನಷ್ಟ, ದೇಹದಲ್ಲಿ ನಿರ್ಜಲೀಕರಣ, ಮೂತ್ರಪಿಂಡದ ಕಲ್ಲುಗಳು, ದೃಷ್ಟಿ ಸಮಸ್ಯೆಗಳು ಮತ್ತು ಸಮತೋಲನ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಆದರೆ, ಈ ಇಬ್ಬರು ಗಗನಯಾನಿಗಳು ಒಂದು ವಾರದಲ್ಲಿ ವಾಪಸ್ ಬರಲೆಂದು ಹೋದವರು ಅನಿವಾರ್ಯ ಕಾರಣಗಳಿಂದ ಒಂಬತ್ತು ತಿಂಗಳು ಅಲ್ಲೇ ಇರಬೇಕಾಯಿತು. ಇಷ್ಟು ಸಮಯ ಅವರು ಹೊಟ್ಟೆಗೆ ಏನು ತಿನ್ನುತ್ತಿದ್ದರು? ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು.
ಭುವಿಗಿಳಿದ ಗಗನಯಾನಿಗಳು
ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಮಂಗಳವಾರ (ಅಮೆರಿಕಾದ ಸ್ಥಳೀಯ ಸಮಯ) ಫ್ಲೋರಿಡಾದ ಕರಾವಳಿಯಲ್ಲಿ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್‌ನಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಬೋಯಿಂಗ್‌ನ ಸ್ಟಾರ್‌ಲೈನರ್ ಕ್ರಾಫ್ಟ್‌ನ ಸಮಸ್ಯೆಗಳಿಂದಾಗಿ ಐಎಸ್‌ಎಸ್‌ನಲ್ಲಿ ಇವರು ಒಂದು ವಾರದ ಬದಲು ಒಂಬತ್ತು ತಿಂಗಳ ನಂತರ ಭೂಮಿಗೆ ಮರಳದ್ದಾರೆ.
ಭೂಮಿಯಿಂದ 254 ಮೈಲುಗಳು (409 ಕಿ.ಮೀ) ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿ ಇವರು ಕಾಲ ಕಳೆದಿದ್ದಾರೆ. ಈ ನಿಲ್ದಾಣವು ಸುಮಾರು 25 ವರ್ಷಗಳಿಂದ ಜಗತ್ತಿನಾದ್ಯಂತ ಇರುವ ಗಗನಯಾತ್ರಿಗಳಿಗೆ ಆತಿಥ್ಯ ವಹಿಸಿದೆ. ಯುಎಸ್ ಮತ್ತು ರಷ್ಯಾದ ಈ ಫುಟ್ಬಾಲ್ ಮೈದಾನದ ಗಾತ್ರದ ಸಂಶೋಧನಾ ಪ್ರಯೋಗಾಲಯದಲ್ಲಿ ವಾಸಿಸುವುದು ಅಂದುಕೊಂಡಷ್ಟು ಸುಲಭವಲ್ಲ.
ವಿಲ್ಮೋರ್ ಮತ್ತು ವಿಲಿಯಮ್ಸ್ ನೌಕಾಪಡೆಯ ಪರೀಕ್ಷಾ ಪೈಲಟ್‌ಗಳು. ಬಳಿಕ ಇವರು ನಾಸಾಕ್ಕೆ ಸೇರಿದ್ದರು. 62 ವರ್ಷದ ವಿಲ್ಮೋರ್ ಟೆನ್ನೆಸ್ಸೀಯಲ್ಲಿ ಪ್ರೌಢಶಾಲಾ ಮತ್ತು ಕಾಲೇಜು ಫುಟ್‌ಬಾಲ್ ಆಟಗಾರರಾಗಿದ್ದರು. 59 ವರ್ಷದ ಸುನಿತಾ ವಿಲಿಯಮ್ಸ್ ಮ್ಯಾಸಚೂಸೆಟ್ಸ್‌ನ ನೀಡಮ್‌ನಲ್ಲಿ ಈಜುಗಾರ್ತಿ ಮತ್ತು ಲಾಂಗ್ ರೇಸರ್. ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಇಂಟರ್ನೆಟ್ ಕರೆಗಳ ಮೂಲಕ ತನ್ನ ಪತಿ, ತಾಯಿ ಮತ್ತು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದರು. ತನ್ನ ಆರೋಗ್ಯದ ಬಗ್ಗೆ ಇವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು.
ತಿಂಗಳುಗಟ್ಟಲೆ ಬಾಹ್ಯಾಕಾಶದಲ್ಲಿ ವಾಸಿಸುವುದರಿಂದ ಸ್ನಾಯು ಮತ್ತು ಮೂಳೆ ನಷ್ಟ, ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುವ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಸಂಬಂಧಪಟ್ಟಂತೆ ಗಗನಯಾನಿಗಳಿಗೆ ಸೂಕ್ತವಾದ ತರಬೇತಿ ನೀಡಲಾಗುತ್ತದೆ. ಈ ಇಬ್ಬರು ಗಗನಯಾನಿಗಳು ಅನುಭವಿ ಗಗನಯಾನಿಗಳು. ಇದೇ ಕಾರಣದಿಂದ ಒಂಬತ್ತು ತಿಂಗಳ ಕಾಲ ಅಲ್ಲೇ ಉಳಿಯುವ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆಹಾರ
ಕಳೆದ ವರ್ಷ ನವೆಂಬರ್ 18 ರಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ ಪ್ರಕಾರ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಪಿಜ್ಜಾ, ಹುರಿದ ಕೋಳಿಮಾಂಸ ಮತ್ತು ಸೀಗಡಿ ಕಾಕ್‌ಟೇಲ್‌ಗಳನ್ನು ತಿನ್ನುತ್ತಿದ್ದರು ಎಂದು ವರದಿ ಮಾಡಿತ್ತು. ಗಗನಯಾನಿಗಳು ತಿನ್ನುವ ಆಹಾರಕ್ಕೂ ಭೂಮಿಯಲ್ಲಿ ನಾವು ತಿನ್ನುವ ಆಹಾರಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಗುರುತ್ವವಿಲ್ಲದ ಅಂತರಿಕ್ಷ ನಿಲ್ದಾಣದಲ್ಲಿ ಬದುಕುಳಿಯುವ ಉದ್ದೇಶದಿಂದ ಆಹಾರ ಸೇವನೆ ಮಾಡಲಾಗುತ್ತದೆ.


