ಸುನೀತಾ ವಿಲಿಯಮ್ಸ್ ಭೂಮಿಗೆ ಬೇಗ ವಾಪಸಾಗಲಿದ್ದಾರೆ, ಮಾರ್ಚ್ ಅಂತ್ಯಕ್ಕಲ್ಲ, ಮಧ್ಯಭಾಗದಲ್ಲೇ ಬರಲಿದ್ದಾರೆ ಎಂದಿದೆ ನಾಸಾ, ಆದರೆ ಸುಲಭವಲ್ಲ..
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸುನೀತಾ ವಿಲಿಯಮ್ಸ್ ಭೂಮಿಗೆ ಬೇಗ ವಾಪಸಾಗಲಿದ್ದಾರೆ, ಮಾರ್ಚ್ ಅಂತ್ಯಕ್ಕಲ್ಲ, ಮಧ್ಯಭಾಗದಲ್ಲೇ ಬರಲಿದ್ದಾರೆ ಎಂದಿದೆ ನಾಸಾ, ಆದರೆ ಸುಲಭವಲ್ಲ..

ಸುನೀತಾ ವಿಲಿಯಮ್ಸ್ ಭೂಮಿಗೆ ಬೇಗ ವಾಪಸಾಗಲಿದ್ದಾರೆ, ಮಾರ್ಚ್ ಅಂತ್ಯಕ್ಕಲ್ಲ, ಮಧ್ಯಭಾಗದಲ್ಲೇ ಬರಲಿದ್ದಾರೆ ಎಂದಿದೆ ನಾಸಾ, ಆದರೆ ಸುಲಭವಲ್ಲ..

NASA Updates: ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಮಾರ್ಚ್‌ ಮಧ್ಯಭಾಗದಲ್ಲೇ ಭೂಮಿಗೆ ವಾಪಸಾಗಲಿದ್ದಾರೆ ಎಂದು ನಾಸಾ ಹೇಳಿದೆ. ಈ ಹಿಂದೆ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರ ಭೂಮಿಗೆ ಬರಲಿದ್ದಾರೆ ಎಂದು ಹೇಳಲಾಗಿತ್ತು.

ಸುನೀತಾ ವಿಲಿಯಮ್ಸ್ ಭೂಮಿಗೆ ಬೇಗ ವಾಪಸಾಗಲಿದ್ದಾರೆ, ಮಾರ್ಚ್ ಅಂತ್ಯಕ್ಕಲ್ಲ, ಮಧ್ಯಭಾಗದಲ್ಲೇ ಬರಲಿದ್ದಾರೆ ಎಂದು ನಾಸಾ ಹೇಳಿದೆ.
ಸುನೀತಾ ವಿಲಿಯಮ್ಸ್ ಭೂಮಿಗೆ ಬೇಗ ವಾಪಸಾಗಲಿದ್ದಾರೆ, ಮಾರ್ಚ್ ಅಂತ್ಯಕ್ಕಲ್ಲ, ಮಧ್ಯಭಾಗದಲ್ಲೇ ಬರಲಿದ್ದಾರೆ ಎಂದು ನಾಸಾ ಹೇಳಿದೆ.

NASA Updates: ಕಳೆದ ಸೆಪ್ಟೆಂಬರ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್, ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಮುಂಚಿತವಾಗಿಯೇ ಭೂಮಿಗೆ ಮರಳಬಹುದು ಎಂದು ನಾಸಾ ಹೇಳಿದೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಮಾರ್ಚ್ ಮಧ್ಯಭಾಗದಲ್ಲೇ ಭೂಮಿಗೆ ವಾಪಸಾಗಲಿದ್ದಾರೆ. ಈ ಹಿಂದೆ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರ ಭೂಮಿ ಮರಳಬಹುದು ಎಂದು ಅಂದಾಜಿಸಲಾಗಿತ್ತು ಎಂಬುದನ್ನು ನಾಸಾ ನೆನಪಿಸಿಕೊಂಡಿದೆ.

ಗಗನಯಾತ್ರಿಗಳು ವಾಪಸ್ ಭೂಮಿ ಬರುವ ಸ್ಪೇಸ್‌ಕ್ರಾಫ್ಟ್‌ಗಳ ಕ್ಯಾಪ್ಸುಲ್‌ಗಳನ್ನು ಒದಗಿಸುವುದಕ್ಕೆ ನಾಸಾ ಮತ್ತು ಸ್ಪೇಸ್ ಎಕ್ಸ್ ಜಂಟಿಯಾಗಿ ತೀರ್ಮಾನಿಸಿದ ಬಳಿಕ ಈ ತೀರ್ಮಾನ ಪ್ರಕಟವಾಗಿದೆ. ಮುಂಬರುವ ಗಗನಯಾತ್ರಿಗಳ ವಿಮಾನಗಳಿಗಾಗಿ ಕ್ಯಾಪ್ಸುಲ್ಗಳನ್ನು ಬದಲಾಯಿಸಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಕರೆ ಮಾಡಿದ ನಂತರ ಈ ನಿರ್ಧಾರ ಬರುತ್ತದೆ. ಹೊಸ ಯೋಜನೆಯು ವಿಲ್ಮೋರ್ ಮತ್ತು ವಿಲಿಯಮ್ಸ್ ಅವರ ಬಾಹ್ಯಾಕಾಶದಲ್ಲಿ ಉಳಿದುಕೊಂಡಿರುವ ಉದ್ದೇಶವನ್ನು ಹೊಂದಿದೆ, ಇದು ಕಳೆದ ವಾರ ಎಂಟು ತಿಂಗಳ ಅಂಕವನ್ನು ತಲುಪಿತು. ಈ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ 8 ತಿಂಗಳನ್ನು ಕಳೆದ ವಾರ ಪೂರೈಸಿದ್ದರು.

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುವ ಸಮಯಕ್ಕೆ ದಿನಗಣನೆ ಶುರು

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಿಂದ ಭೂಮಿಗೆ ವಾಪಸಾಗುವುದಕ್ಕೆ ದಿನಗಣನೆ ಶುರುವಾಗಿದೆ. ಈ ಇಬ್ಬರೂ ಗಗನಯಾತ್ರಿಗಳು ಜೂನ್ ತಿಂಗಳಲ್ಲೇ ಭೂಮಿಗೆ ಬಂದು ಇಳಿಯಬೇಕಾಗಿತ್ತು. ತಾಂತ್ರಿಕ ಕಾರಣಗಳಿಂದ ಇವರು ಭೂಮಿಗೆ ಮರಳುವ ಯೋಜನೆ ಮುಂದೂಲಟ್ಟಿದೆ. ಬೇಗ ಹಿಂದಿರುಗುತ್ತಾರಾದರೂ, ಆ ಪ್ರಯಾಣವು ಸುಲಭವಲ್ಲ. ಸುನಿತಾ ವಿಲಿಯಮ್ಸ್ ಅವರು ಎದುರಿಸಬೇಕಾಗುವ ದೊಡ್ಡ ಸವಾಲು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಜತೆಗೆ ಶರೀರವನ್ನು ಹೊಂದಿಸಿಕೊಳ್ಳುವುದೇ ಆಗಿದೆ. ಭೂಮಿ ಮೇಲೆ ಇಳಿಯುತ್ತಿದ್ದಂತೆ ಅವರಿಗೆ ಈ ಸವಾಲುಗಳು ಎದುರಾಗಲಿವೆ.

“ಗುರುತ್ವವು ತುಂಬಾ ಕಷ್ಟ. ನಾವು ಹಿಂತಿರುಗಿದಾಗ ಅದು ನಮ್ಮನ್ನು ಕೆಳಕ್ಕೆ ಎಳೆಯಲು ಪ್ರಾರಂಭಿಸುತ್ತದೆ. ದೇಹದ ದ್ರವಗಳು ಕೆಳಗಿಳಿಯಲು ಪ್ರಾರಂಭಿಸುತ್ತವೆ. ಪೆನ್ಸಿಲ್ ಕೂಡ ಮೇಲೆತ್ತುವುದು ನಮಗೆ ಕಷ್ಟವಾಗಲಿದೆ” ಎಂದು ಬುಚ್ ವಿಲ್ಮೋರ್ ಹೇಳಿಕೊಂಡಿದ್ದಾರೆ.

ಇಲ್ಲಿ ನಮ್ಮ ಸ್ನಾಯುಗಳು ವೇಗವಾಗಿ ಸ್ಪಂದಿಸುವುದಕ್ಕೆ ತಕ್ಕಂತೆ ಮರುಹೊಂದಿಸುವುದು ಅಗತ್ಯ. ಇದು ನಿತ್ಯದ ಪ್ರಕ್ರಿಯೆ. ಭೂಮಿಗೆ ಮರಳುವುದು, ಅದರ ನಂತರದ ಬದುಕು ಸುಲಭವಲ್ಲ ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.

ಸುನೀತಾ ವಿಲಿಯಮ್ಸ್‌ಗೆ ಏಕೆ ತೊಂದರೆಗಳಾಗಬಹುದು

ಐಎಸ್‌ಎಸ್‌ನಲ್ಲಿ ದೀರ್ಘಾವಧಿ ಇದ್ದ ಗಗನಯಾತ್ರಿಗಳು ವಿವಿಧ ರೀತಿ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳ ಪೈಕಿ ಸ್ನಾಯು ದೌರ್ಬಲ್ಯ, ಮೂಳೆ ಸಾಂದ್ರತೆಯ ಕುಸಿತ, ಶರೀರ ದ್ರವಗಳ ಅಸಮತೋಲನ ಮುಂತಾದವು ಸೇರಿಕೊಂಡಿವೆ. ಗುರುತ್ವಾಕರ್ಷಣೆಯೊಳಗೆ ಇಲ್ಲದ ಮೂಳೆಗಳ ಸಾಂದ್ರತೆ ದಿನಕಳೆದಂತೆ, ತಿಂಗಳು ಕಳೆದಂತೆ ಕಡಿಮೆಯಾಗುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿರುವಾಗ ಭೂಮಿಯ ಗುರುತ್ವಾಕರ್ಷಣೆಯ ವ್ಯಾಪ್ತಿಯಿಂದ ಹೊರಗಿರುತ್ತಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಭೂಮಿಗೆ ಬಂದ ಬಳಿಕ ಸುನೀತಾ ವಿಲಿಯಮ್ಸ್ ದಿನಚರಿ ಹೇಗಿರಬಹುದು

ಗಗನಯಾತ್ರೆ ಮುಗಿಸಿ ಬಂದ ನಂತರದಲ್ಲಿ ಸುನಿತಾ ವಿಲಿಯಮ್ಸ್ ತಮ್ಮ ಶರೀರವನ್ನು ಭೂಮಿಯ ಪರಿಸ್ಥಿತಿಗೆ ಹೊಂದಿಸಿಕೊಳ್ಳಬೇಕು. ಇದಕ್ಕಾಗಿ, ಮತ್ತೆ ಕಟ್ಟುನಿಟ್ಟಾದ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಬಾಹ್ಯಾಕಾಶದಲ್ಲಿರುವಾಗ ಶರೀರದ ದ್ರವಗಳು ಮುಖ, ತಲೆಯ ಭಾಗಕ್ಕೆ ಹೋಗುತ್ತದೆ. ಹೀಗಾಗಿ, ಕೈ, ಕಾಲು ತೆಳ್ಳಗಾಗುತ್ತವೆ. ಭೂಮಿಗೆ ಮರಳಿದ ಬಳಿಕ ಶರೀರ ಮತ್ತೆ ಸಹಜ ಸ್ಥಿತಿಗೆ ಬರಬೇಕಾದರೆ ಸ್ವಲ್ಪ ದಿನಗಳು ಬೇಕಾಗಬಹುದು.

ಈ ಸವಾಲುಗಳ ಹೊರತಾಗಿಯೂ, ವಿಲಿಯಮ್ಸ್ ಮತ್ತು ವಿಲ್ಮೋರ್ ಇಬ್ಬರೂ ತಮ್ಮ ಮರಳುವಿಕೆಯ ಬಗ್ಗೆ ಉತ್ಸುಕರಾಗಿದ್ದಾರೆ. ಇದಕ್ಕೂ ಮುಂಚೆಯೇ, ಅವರು ಅಂತಹ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಈ ಬಾರಿ ಅವರ ದೇಹವು ಶೀಘ್ರದಲ್ಲೇ ಭೂಮಿಯ ಸ್ಥಿತಿಗೆ ಬರಲಿದೆ ಎಂದು ಆಶಿಸುತ್ತಿದ್ದಾರೆ. ವಿಲ್ಮೋರ್ ತಮಾಷೆಯಾಗಿ, "ಬಾಹ್ಯಾಕಾಶದಲ್ಲಿ ಈಜುವುದು ತುಂಬಾ ಖುಷಿಯಾಗಿದೆ, ನನ್ನ ಹಾರುವ ಕೂದಲನ್ನು ನಾನು ತುಂಬಾ ಇಷ್ಟಪಡುತ್ತೇನೆ" ಎಂದು ಹೇಳಿದರು. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಮಾರ್ಚ್ 19 ರಂದು ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ (ಅಮೆರಿಕಕ್ಕೆ) ವಾಪಸ್ ಬರಲಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.