ಸೂಪರ್‌ಫಾಸ್ಟ್, ಎಕ್ಸ್​​ಪ್ರೆಸ್ ಟು ಪ್ಯಾಸೆಂಜರ್ ರೈಲು; 1 ಕಿಮೀ ಕ್ರಮಿಸಲು ಟ್ರೈನ್​ಗೆ ಎಷ್ಟು ಲೀಟರ್ ಡೀಸೆಲ್ ಬೇಕು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸೂಪರ್‌ಫಾಸ್ಟ್, ಎಕ್ಸ್​​ಪ್ರೆಸ್ ಟು ಪ್ಯಾಸೆಂಜರ್ ರೈಲು; 1 ಕಿಮೀ ಕ್ರಮಿಸಲು ಟ್ರೈನ್​ಗೆ ಎಷ್ಟು ಲೀಟರ್ ಡೀಸೆಲ್ ಬೇಕು?

ಸೂಪರ್‌ಫಾಸ್ಟ್, ಎಕ್ಸ್​​ಪ್ರೆಸ್ ಟು ಪ್ಯಾಸೆಂಜರ್ ರೈಲು; 1 ಕಿಮೀ ಕ್ರಮಿಸಲು ಟ್ರೈನ್​ಗೆ ಎಷ್ಟು ಲೀಟರ್ ಡೀಸೆಲ್ ಬೇಕು?

Train and Mileage: ವಿದ್ಯುತ್ ಸಂಪರ್ಕವಿಲ್ಲದ ರೈಲುಗಳು ಡೀಸೆಲ್ ಬಳಸಿ ಚಲಿಸಲಿದ್ದು, ಈ ರೈಲುಗಳು ತಮ್ಮ ವರ್ಗೀಕರಣದ ಆಧಾರದ ಮೇಲೆ ವಿಭಿನ್ನ ಮೈಲೇಜ್ ನೀಡುತ್ತವೆ. ಜೊತೆಗೆ ತೂಕ, ಶಕ್ತಿ ಮತ್ತು ಪ್ರಯಾಣದ ದೂರವೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸೂಪರ್‌ಫಾಸ್ಟ್, ಎಕ್ಸ್​​ಪ್ರೆಸ್ ಟು ಪ್ಯಾಸೆಂಜರ್ ರೈಲು; 1 ಕಿಮೀ ಕ್ರಮಿಸಲು ಟ್ರೈನ್​ಗೆ ಎಷ್ಟು ಲೀಟರ್ ಡೀಸೆಲ್ ಬೇಕು?
ಸೂಪರ್‌ಫಾಸ್ಟ್, ಎಕ್ಸ್​​ಪ್ರೆಸ್ ಟು ಪ್ಯಾಸೆಂಜರ್ ರೈಲು; 1 ಕಿಮೀ ಕ್ರಮಿಸಲು ಟ್ರೈನ್​ಗೆ ಎಷ್ಟು ಲೀಟರ್ ಡೀಸೆಲ್ ಬೇಕು?

ಬೈಕ್, ಕಾರು ಅಥವಾ ಇತರ ಯಾವುದೇ ಹೊಸ ವಾಹನ ಖರೀದಿಸುವ ವೇಳೆ ಒಂದು ಲೀಟರ್ ಪೆಟ್ರೋಲ್/ಡೀಸೆಲ್​ಗೆ ಮೈಲೇಜ್ ಎಷ್ಟು ಕಿಮೀ ನೀಡುತ್ತದೆ ಎಂಬುದು ಎಲ್ಲರ ಸಹಜ ಪ್ರಶ್ನೆಯಾಗಿರುತ್ತದೆ. ಬಹುತೇಕರಿಗೆ ಯಾವ ವಾಹನದ ಮೈಲೇಜ್ ಎಷ್ಟಿರುತ್ತದೆ ಎಂಬ ಅಂದಾಜು ಇರುತ್ತದೆ. ಒಂದು ಕಿಮೀ​ ಚಲಿಸಲು ರೈಲಿಗೆ ಎಷ್ಟು ಇಂಧನ ಬೇಕಾಗುತ್ತದೆ? ಆದರೆ, ಈ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ರೈಲ್ವೆ ಸಾರಿಗೆ (Indian Railway) ಸಂಪರ್ಕವು ಬಹುತೇಕ ವಿದ್ಯುದೀಕರಣಗೊಂಡಿದೆ. ಆದರೆ, ವಿದ್ಯತ್ ಸಂಪರ್ಕವಿಲ್ಲದ ರೈಲುಗಳು ಡೀಸೆಲ್ ಬಳಸಿ ಚಲಿಸಲಿದ್ದು, ಈ ರೈಲುಗಳು ತಮ್ಮ ವರ್ಗೀಕರಣದ ಆಧಾರದ ಮೇಲೆ ವಿಭಿನ್ನ ಮೈಲೇಜ್ (Mileage of a Train) ನೀಡುತ್ತವೆ. ಜೊತೆಗೆ ತೂಕ, ಶಕ್ತಿ ಮತ್ತು ಪ್ರಯಾಣದ ದೂರವೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಉದಾಹರಣೆಗೆ, 12 ಕೋಚ್‌ ಹೊಂದಿರುವ ಪ್ಯಾಸೆಂಜರ್ ರೈಲಿಗೆ ಒಂದು ಕಿಲೋಮೀಟರ್ ಕ್ರಮಿಸಲು 6 ಲೀಟರ್ ಇಂಧನ ಬೇಕಾಗುತ್ತದೆ. ಅದೇ ರೀತಿ, 24 ಕೋಚ್‌ಗಳನ್ನು ಹೊಂದಿರುವ ಸೂಪರ್‌ಫಾಸ್ಟ್ ರೈಲು ಕೂಡ ಒಂದು ಕಿಲೋಮೀಟರ್ ಮೈಲೇಜ್ ಸಾಧಿಸಲು 6 ಲೀಟರ್‌ ಇಂಧನ ಬೇಕು. 12 ಬೋಗಿಗಳ ಎಕ್ಸ್‌ಪ್ರೆಸ್ ರೈಲಿಗೆ ಅದರ ಕಾರ್ಯಾಚರಣೆಗೆ ಪ್ರತಿ ಕಿಲೋಮೀಟರ್‌ಗೆ 4.5 ಲೀಟರ್ ಇಂಧನ ಅಗತ್ಯ ಇದೆ. ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಭಾರತೀಯ ರೈಲ್ವೆಯಲ್ಲಿ ಪ್ರಸ್ತುತ ಯಾವುದೇ ರೈಲು ಪ್ರತಿ ಲೀಟರ್ ಡೀಸೆಲ್‌ಗೆ ಒಂದು ಕಿಲೋಮೀಟರ್ ಮೈಲೇಜ್ ಕ್ರಮಿಸುವುದಿಲ್ಲ. ರೈಲುಗಳ ಡೀಸೆಲ್ ಇಂಜಿನ್‌ಗಳ ಟ್ಯಾಂಕ್ ತುಂಬಾ ದೊಡ್ಡದು.​ ಡೀಸೆಲ್ ಇಂಜಿನ್‌ಗಳನ್ನು ಅವುಗಳ ಪರ್ಫಾಮೆನ್ಸ್​ ಆಧಾರದ ಮೇಲೆ 3 ವಿಧಗಳಾಗಿ ವಿಂಗಡಣೆ ಮಾಡಲಾಗುತ್ತದೆ.

ಎಷ್ಟು ಲೀಟರ್ ಸಾಮರ್ಥ್ಯ ಇರುತ್ತದೆ?

ಡೀಸೆಲ್ ಇಂಜಿನ್​ ಟ್ಯಾಂಕ್‌ಗಳು 5000 ಲೀಟರ್, 5,500 ಲೀಟರ್ ಮತ್ತು 6,000 ಲೀಟರ್ ಸಾಮರ್ಥ್ಯದ 3 ವಿಧಗಳು ಇರಲಿವೆ. ಸುದೀರ್ಘ ಪ್ರಯಾಣ ಬೆಳೆಸುವ ಕಾರಣ ಟ್ಯಾಂಕ್​ಗಳು ಅತ್ಯಧಿಕ ಸಾಮರ್ಥ್ಯವನ್ನು ಹೊಂದಿರುತ್ತವೆ. ರೈಲಿನಲ್ಲಿರುವ ಕೋಚ್‌ಗಳು ಅಥವಾ ಕಂಪಾರ್ಟ್​​ಮೆಂಟ್‌ಗಳ ಸಂಖ್ಯೆಯು ಅದರ ಮೈಲೇಜ್ ಮೇಲೆ ಪ್ರಭಾವ ಬೀರುತ್ತದೆ. ಕಡಿಮೆ ಕಂಪಾರ್ಟ್‌ಮೆಂಟ್‌ ಹೊಂದಿರುವ ರೈಲುಗಳಲ್ಲಿ ಕಡಿಮೆ ಇಂಧನ ಬಳಕೆಯಾಗುತ್ತದೆ. ಒಂದೊಂದು ರೈಲು ಸಹ ಒಂದೊಂದು ರೀತಿಯ ಇಂಧನ ದಕ್ಷತೆಯನ್ನು ಜೊಂದಿರುತ್ತದೆ. ಉದಾಹರಣೆಗೆ ಎಕ್ಸ್‌ಪ್ರೆಸ್ ಅಥವಾ ಸೂಪರ್‌ಫಾಸ್ಟ್ ರೈಲುಗಳಿಗಿಂತ ಪ್ಯಾಸೆಂಜರ್ ರೈಲುಗಳು ಹೆಚ್ಚು ವೇಗವಾಗಿ ಇಂಧನ ಖಾಲಿ ಮಾಡುತ್ತವೆ. ಅದಕ್ಕೆ ನಿಖರವಾದ ಕಾರಣವೂ ಇದೆ ನೋಡಿ.

ಪ್ಯಾಸೆಂಜರ್ ರೈಲುಗಳು ಸಂಚರಿಸುವ ತಮ್ಮ ಮಾರ್ಗಗಳಲ್ಲಿ ಕಡಿಮೆ ಅಂತರದಲ್ಲೇ ನಿಲುಗಡೆಗಳನ್ನು ಹೊಂದಿರುತ್ತದೆ. ಹೀಗಾಗಿ ವ್ಯತ್ಯಾಸ ಉದ್ಭವಿಸುತ್ತದೆ. ನಿಲುಗಡೆಗಳ ಅವಶ್ಯಕತೆಯು ಹೆಚ್ಚಿನ ವೇಗವನ್ನು ಪಡೆಯುವ ಲೊಕೊಮೊಟಿವ್‌ನ ಸಾಮರ್ಥ್ಯ ಮಿತಿಗೊಳಿಸುತ್ತದೆ. ಇದು ವೇಗವರ್ಧಕ ಮತ್ತು ಬ್ರೇಕ್‌ಗಳ ಬಳಕೆ ಹೆಚ್ಚಿಸಲಿರುವ ಕಾರಣ ಇಂಧನ ಬಳಕೆ ಪ್ರಮಾಣ ದುಪ್ಪಟ್ಟಾಗುವಂತೆ ಮಾಡುತ್ತದೆ. ಇದರಿಂದ ಮೈಲೇಜ್ ಕೂಡ ಕಡಿಯಾಗುತ್ತದೆ. ಆದರೆ, ಎಕ್ಸ್‌ಪ್ರೆಸ್ ರೈಲುಗಳು, ಕಡಿಮೆ ನಿಲುಗಡೆಗಳನ್ನು ಹೊಂದಿರಲಿದ್ದು, ಹೆಚ್ಚಿನ ಮೈಲೇಜ್ ನೀಡುತ್ತವೆ. ಏಕೆಂದರೆ ಈ ರೈಲುಗಳು ದೀರ್ಘಾವಧಿ ಪ್ರಯಾಣ ಬೆಳೆಸಲಿದ್ದು, ಸ್ಥಿರವಾದ ವೇಗವನ್ನು ನಿರ್ವಹಿಸುತ್ತವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.