ಭಾರತಕ್ಕೆ ಸಟ್ಲೆಜ್ ನದಿ ನೀರು ಹರಿಯುವಿಕೆ ಇಳಿಕೆ, ತಡೆಯೊಡುತ್ತಿದೆಯೇ ಚೀನಾ ಎಂದು ಶಂಕಿಸಿದ್ದಾರೆ ತಜ್ಞರು, ವಿವರಣೆ
ಸದಾ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲುವ ಚೀನಾ ದೇಶವು ಸದ್ದಿಲ್ಲದೇ ಸಟ್ಲೆಜ್ ನದಿ ನೀರು ಭಾರತಕ್ಕೆ ಹರಿಯುವ ಪ್ರಮಾಣವನ್ನು ಇಳಿಕೆ ಮಾಡಿದೆಯೇ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಜಿಯೋಸ್ಪೇಷಿಯಲ್ ಸಂಶೋಧಕ ಮತ್ತು ನಾಸಾದ ಮಾಜಿ ಸ್ಟೇಷನ್ ಮ್ಯಾನೇಜರ್ ಡಾ ವೈ ನಿತ್ಯಾನಂದಮ್ ಅವರು ಈ ಶಂಕೆ ವ್ಯಕ್ತಪಡಿಸಿದ್ದು, ಆ ವಿವರ ಇಲ್ಲಿದೆ.

ಪಾಕಿಸ್ತಾನ ಕೇಂದ್ರಿತ ಭಯೋತ್ಪಾದಕರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಅಮಾಯಕ ಭಾರತೀಯರನ್ನು ಹತ್ಯೆ ಮಾಡಿದ ಬಳಿಕ ಭಾರತ ಸರ್ಕಾರ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದಕ್ಕಾಗಿ ರಾಜತಾಂತ್ರಿಕ ನಡೆಯನ್ನೂ ಅನುಸರಿಸಿರುವ ಭಾರತ ಸರ್ಕಾರ, ಪಾಕಿಸ್ತಾನದ ಜತೆಗಿನ ಸಿಂಧೂ ನದಿ ಒಪ್ಪಂದವನ್ನೂ ಅಮಾನತು ಮಾಡಿದೆ. ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಹರಿಯುವ ಪ್ರಮಾಣವನ್ನು ಇಳಿಕೆ ಮಾಡಿದೆ. ಈ ನಡುವೆ, ಸದಾ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲುವ ಚೀನಾ ದೇಶವು ಸದ್ದಿಲ್ಲದೇ ಸಟ್ಲೆಜ್ ನದಿ ನೀರು ಭಾರತಕ್ಕೆ ಹರಿಯುವ ಪ್ರಮಾಣವನ್ನು ಇಳಿಕೆ ಮಾಡಿದೆಯೇ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಜಿಯೋಸ್ಪೇಷಿಯಲ್ ಸಂಶೋಧಕ ಮತ್ತು ನಾಸಾದ ಮಾಜಿ ಸ್ಟೇಷನ್ ಮ್ಯಾನೇಜರ್ ಡಾ ವೈ ನಿತ್ಯಾನಂದಮ್ ಅವರು ಈ ಶಂಕೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಉಪಗ್ರಹ ದತ್ತಾಂಶವನ್ನು ಹಂಚಿಕೊಂಡಿದ್ದಾರೆ.
ಭಾರತಕ್ಕೆ ಸಟ್ಲೆಜ್ ನದಿ ಹರಿಯುವಿಕೆ ಇಳಿಕೆ, ತಡೆಯೊಡುತ್ತಿದೆಯೇ ಚೀನಾ ಎಂಬುದು ತಜ್ಞರ ಶಂಕೆ
ಜಿಯೋಸ್ಪೇಷಿಯಲ್ ಸಂಶೋಧಕ ಮತ್ತು ನಾಸಾದ ಮಾಜಿ ಸ್ಟೇಷನ್ ಮ್ಯಾನೇಜರ್ ಡಾ ವೈ ನಿತ್ಯಾನಂದಮ್ ಅವರು ಈ ವಿಚಾರವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಸಟ್ಲೆಜ್ ನದಿಯ ಮೂಲಕ ಭಾರತಕ್ಕೆ ಹರಿಯುವ ನೀರಿನ ಪ್ರಮಾಣ ಕಳೆದ 5 ವರ್ಷಗಳ ಅವಧಿಯಲ್ಲಿ ಶೇಕಡ 75 ಇಳಿಕೆಯಾಗಿದೆ. ಅಂದರೆ ಸರಿ ಸುಮಾರು 8000 ಗಿಗಾ ಲೀಟರ್ ಪ್ರಮಾಣದಿಂದ 2000 ಗಿಗಾ ಲೀಟರ್ ಪ್ರಮಾಣಕ್ಕೆ ಇಳಿದಿದೆ. ಇದನ್ನು ಗಮನಿಸಿ ಹೇಳುವುದಾದರೆ, ಭಾರತಕ್ಕೆ ಸಟ್ಲೆಜ್ ನದಿ ಹರಿಯುವಿಕೆಗೆ ಚೀನಾ ತಡೆಯೊಡುತ್ತಿದೆಯೇ ಎಂಬ ಸಂದೇಹವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಭಾರತಕ್ಕೆ ಸಟ್ಲೆಜ್ ನದಿ ಹರಿಯುವಿಕೆ ಇಳಿಕೆಗೇನು ಕಾರಣ ಇರಬಹುದು
ಪ್ರಾದೇಶಿಕ ಜಲ ರಾಜಕಾರಣ ಜೋರಾಗಿರುವ ಸಂದರ್ಭದಲ್ಲೇ ಭಾರತಕ್ಕೆ ಸಟ್ಲೆಜ್ ನದಿ ಹರಿಯುವಿಕೆ ಇಳಿಕೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಜಿಯೋಸ್ಪೇಷಿಯಲ್ ಸಂಶೋಧಕ ಮತ್ತು ನಾಸಾದ ಮಾಜಿ ಸ್ಟೇಷನ್ ಮ್ಯಾನೇಜರ್ ಡಾ ವೈ ನಿತ್ಯಾನಂದಮ್ ಅವರು ಜಿಯೋಸ್ಪೇಷಿಯಲ್ ಬುಲೆಟಿನ್ ತಕ್ಷಶಿಲಾ ತಾಣದಲ್ಲಿ ಈ ಕುರಿತು ಸಂಶೋಧನಾ ಪ್ರಬಂಧ ಪ್ರಸ್ತುತ ಮಾಡಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಅವರು, ಭಾರತಕ್ಕೆ ಸಟ್ಲೆಜ್ ನದಿ ಹರಿಯುವಿಕೆ ಇಳಿಕೆಗೇನು ಕಾರಣ ಇರಬಹುದು ಎಂದು ಊಹಿಸುತ್ತ ಎರಡು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
1) ಭಾರತಕ್ಕೆ ಸಟ್ಲೆಜ್ ನದಿ ಹರಿಯುವಿಕೆ ಇಳಿಕೆ ಕಾರಣ (1) ಸಟ್ಲೆಜ್ ನದಿ ತಿರುವು ಯೋಜನೆ ಅಥವಾ ನೀರಿನ ಹರಿಯುವಿಕೆಯನ್ನು ತಿರುಗಿಸುವ ಕೆಲಸವನ್ನು ಚೀನಾ ಮಾಡಿರಬಹುದು
2) ಎರಡನೇ ಕಾರಣ ನೈಸರ್ಗಿಕ ಸವಕಳಿ. ಆದರೆ, ಹಿಮನದಿಗಳು ಕರಗುವಿಕೆಯೊಂದಿಗೆ, ಹರಿವು ಹೆಚ್ಚಾಗಬೇಕಲ್ಲವೇ?
ಈ ಎರಡು ಸಂದೇಹದ ಕಾರಣಗಳನ್ನು ನಿತ್ಯಾನಂದಮ್ ಅವರು ಮುಂದಿಟ್ಟಿದ್ದಾರೆ.
ಟಿಬೆಟ್‌ನಲ್ಲಿ ದೊಡ್ಡ ಅಣೆಕಟ್ಟು, ಜಲವಿದ್ಯುತ್ ಮೂಲಸೌಕರ್ಯ ನಿರ್ಮಾಣ
ಚೀನಾವು ತನ್ನ ಅಧೀನಕ್ಕೆ ಬಂದ ಟಿಬೆಟ್‌ನ ಜಾಡಾ ಕಣಿವೆಯಲ್ಲಿ ಬೃಹತ್ ಅಣೆಕಟ್ಟೆ, ಜಲವಿದ್ಯುತ್ ಮೂಲಸೌಕರ್ಯ ನಿರ್ಮಿಸಿದೆ. ಇದು ಸಟ್ಲೆಜ್ ನದಿ ನೀರು ಭಾರತಕ್ಕೆ ಹರಿಯವುದನ್ನು ನಿಯಂತ್ರಿಸುವಲ್ಲಿ ಚೀನಾಕ್ಕೆ ನೆರವಾಗುತ್ತಿದೆ. ಸಟ್ಲೆಜ್ ನದಿ ನೀರು ಸಂಬಂಧಿಸಿ ಭಾರತ ಮತ್ತು ಚೀನಾ ನಡುವೆ ಕೇವಲ ದತ್ತಾಂಶ ಹಂಚಿಕೆ ಒಪ್ಪಂದ ಇತ್ತು. ಅದು 2023ರಲ್ಲಿ ಕೊನೆಯಾಗಿದ್ದು, ನವೀಕರಣಗೊಂಡಿಲ್ಲ. ಸಟ್ಲೆಜ್ ನದಿ ನೀರನ್ನು ಅದು ಹೇಗೆ ವಿನಿಯೋಗಿಸುತ್ತಿದೆ ಎಂಬ ಪೂರ್ಣ ವಿವರ ನೀಡುವುದಕ್ಕೆ ಚೀನಾಕ್ಕೆ ಹಲವು ಅಡೆತಡೆಗಳಿವೆ ಎಂಬುದರ ಕಡೆಗೆ ಅಧ್ಯಯನ ವರದಿ ಬೆಳಕು ಚೆಲ್ಲಿದೆ.
ಜಿಯೋಸ್ಪೇಷಿಯಲ್ ಸಂಶೋಧಕ ಮತ್ತು ನಾಸಾದ ಮಾಜಿ ಸ್ಟೇಷನ್ ಮ್ಯಾನೇಜರ್ ಡಾ ವೈ ನಿತ್ಯಾನಂದಮ್ ಅವರ ಟ್ವೀಟ್ ಇಲ್ಲಿದೆ.
ಚೀನಾ ಉದ್ದೇಶ ಪೂರ್ವಕವಾಗಿ ಭಾರತಕ್ಕೆ ಸಟ್ಲೆಜ್ ನದಿ ನೀರು ಹರಿಯುವಿಕೆಯನ್ನು ತಡೆಯುತ್ತಿದೆ ಎಂದು ಹೇಳುವುದಕ್ಕೆ ಸಾರ್ವಜನಿಕ ಸಾಕ್ಷ್ಯಗಳೇನು ಸಿಕ್ಕಿಲ್ಲ. ಆದಾಗ್ಯೂ, ಪಾರದರ್ಶಕ ಒಪ್ಪಂದ ಭಾರತ ಮತ್ತು ಚೀನಾ ನಡುವೆ ಇಲ್ಲದ ಕಾರಣ, ಚೀನಾದ ನಿಯಂತ್ರಣ ಸಾಮರ್ಥ್ಯವನ್ನು ಈ ಅಧ್ಯಯನ ವರದಿ ಎತ್ತಿ ತೋರಿಸಿದೆ. ಅದೇ ರೀತಿ, ಸಟ್ಲಜೆ ನದಿಯ ಹರಿಯುವಿಕೆಯು ಹಿಮನದಿಯ ಕರಗುವಿಕೆಯನ್ನು ಕೂಡ ಅವಲಂಬಿಸಿದೆ. ಇದು 1980ರ ದಶಕಕ್ಕೆ ಹೋಲಿಸಿದರೆ ಈಗ ಶೇಕಡ 21 ಕಡಿಮೆಯಾಗಿದೆ. ಇನ್ನು ಶೇಕಡ 2050ರ ವೇಳೆಗೆ ಇದು ಶೇಕಡ 55ಕ್ಕೆ ಇಳಿಯಬಹುದು ಎಂದು ಹೇಳಲಾಗುತ್ತಿದೆ ಎಂಬುದರ ಕಡೆಗೂ ವರದಿ ಗಮನಸೆಳೆದಿದೆ.