ಲೋಕಸಭಾ ಫಲಿತಾಂಶ; ತಮಿಳುನಾಡಿನಲ್ಲಿ ಡಿಎಂಕೆ ಪ್ರಾಬಲ್ಯ, ವಿಜೇತರ ಪೂರ್ಣ ಪಟ್ಟಿ, ಪಕ್ಷವಾರು ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಫಲಿತಾಂಶ; ತಮಿಳುನಾಡಿನಲ್ಲಿ ಡಿಎಂಕೆ ಪ್ರಾಬಲ್ಯ, ವಿಜೇತರ ಪೂರ್ಣ ಪಟ್ಟಿ, ಪಕ್ಷವಾರು ವಿವರ ಇಲ್ಲಿದೆ

ಲೋಕಸಭಾ ಫಲಿತಾಂಶ; ತಮಿಳುನಾಡಿನಲ್ಲಿ ಡಿಎಂಕೆ ಪ್ರಾಬಲ್ಯ, ವಿಜೇತರ ಪೂರ್ಣ ಪಟ್ಟಿ, ಪಕ್ಷವಾರು ವಿವರ ಇಲ್ಲಿದೆ

ಲೋಕಸಭಾ ಫಲಿತಾಂಶ ಪ್ರಕಟವಾಗುತ್ತಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಪ್ರಾಬಲ್ಯ ಕಂಡುಬಂದಿದೆ. ಏಪ್ರಿಲ್ 19ರಂದು ಇಲ್ಲಿ ಮತದಾನ ನಡೆಯಿತು. ಆಡಳಿತಾರೂಢ ಡಿಎಂಕೆ ಹೊರತಾಗಿ, ವಿಪಕ್ಷ ಎಐಎಡಿಎಂಕೆ, ಕಾಂಗ್ರೆಸ್ ಕೂಡ ಇಲ್ಲಿ ಗೆಲುವು ದಾಖಲಿಸಿದೆ. ತಮಿಳುನಾಡಿನ 39 ಕ್ಷೇತ್ರಗಳ ವಿಜೇತರ ಪೂರ್ಣ ಪಟ್ಟಿ, ಪಕ್ಷವಾರು ವಿವರ ಇಲ್ಲಿದೆ.

ಲೋಕಸಭಾ ಫಲಿತಾಂಶ; ತಮಿಳುನಾಡಿನಲ್ಲಿ ಡಿಎಂಕೆ ಪ್ರಾಬಲ್ಯ, ವಿಜೇತರ ಪೂರ್ಣ ಪಟ್ಟಿ, ಪಕ್ಷವಾರು ವಿವರ (ಸಾಂಕೇತಿಕ ಚಿತ್ರ)
ಲೋಕಸಭಾ ಫಲಿತಾಂಶ; ತಮಿಳುನಾಡಿನಲ್ಲಿ ಡಿಎಂಕೆ ಪ್ರಾಬಲ್ಯ, ವಿಜೇತರ ಪೂರ್ಣ ಪಟ್ಟಿ, ಪಕ್ಷವಾರು ವಿವರ (ಸಾಂಕೇತಿಕ ಚಿತ್ರ)

ಚೆನ್ನೈ: ದ್ರಾವಿಡ ರಾಜಕೀಯದ ಕೋಟೆಯಾಗಿರುವ ತಮಿಳುನಾಡು ಇಂದಿಗೂ ಪಕ್ಷ ಸಂಘಟನೆ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿಯೇ ಉಳಿದಿದೆ. 10 ವರ್ಷಗಳ ಮೋದಿ ಅಲೆಯ ಪ್ರಭಾವ ಕಡಿಮೆಯಾಗಿದ್ದು, ತಮಿಳುನಾಡಿನಲ್ಲಿ ಬಹುಕಾಲದ ಎನ್‌ಡಿಎ ಮಿತ್ರ ಪಕ್ಷ ಎಐಎಡಿಎಂಕೆಯ ಜೊತೆಗೆ ಮೈತ್ರಿಯನ್ನೂ ಕಡಿದುಕೊಂಡಿದೆ. ಇಲ್ಲಿ 39 ಲೋಕಸಭಾ ಕ್ಷೇತ್ರಗಳಿದ್ದು, ಇಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಇಲ್ಲಿ ಡಿಎಂಕೆ ಪ್ರಭಾವಿಯಾಗಿದ್ದು, ಬಹುತೇಕ ಸ್ಥಾನಗಳನ್ನು ಗೆದ್ದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಈ ನಡುವೆ, ಬಿಜೆಪಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು, ಈ ಚುನಾವಣೆಯನ್ನು ದೊಡ್ಡ ಸವಾಲಾಗಿ ತೆಗೆದುಕೊಂಡಿದ್ದರು. ಅವರು ಕೂಡ ಕೊಯಮತ್ತೂರಿನಿಂದ ಸ್ಪರ್ಧಿಸಿದ್ದು, ಸೋಲುವ ಹಾದಿಯಲ್ಲಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ; ತಮಿಳುನಾಡು ಲೋಕಸಭಾ ಚುನಾವಣಾ ವಿಜೇತರ ಪಟ್ಟಿ

ಕ್ಷೇತ್ರವಿಜೇತ ಅಭ್ಯರ್ಥಿಪಕ್ಷ
ಚೆನ್ನೈ ಉತ್ತರಡಾ. ಕಲಾನಿಧಿ ವೀರಸ್ವಾಮಿಡಿಎಂಕೆ
ಕಾಂಚೀಪುರಂಸೆಲ್ವಂ ಡಿಡಿಎಂಕೆ
ಕೊಯಮತ್ತೂರುಗಣಪತಿ ರಾಜ್ ಕುಮಾರ್ ಪಿಡಿಎಂಕೆ
ವೆಲ್ಲೂರುಡಿಎಂ ಕದಿರ್ ಆನಂದ್ ಡಿಎಂಕೆ
ಕೃಷ್ಣಗಿರಿಗೋಪಿನಾಥ್ ಕೆಕಾಂಗ್ರೆಸ್
ಧರ್ಮಪುರಿಮಣಿ ಎ ಡಿಎಂಕೆ
ಸೇಲಂಸೆಲ್ವಗಣಪತಿ ಟಿಎಂಡಿಎಂಕೆ
ನಾಮಕ್ಕಲ್ ಮದೇಶ್ವರನ್ ವಿ ಎಸ್ಡಿಎಂಕೆ
ದಿಂಡಿಗಲ್  ಸಚ್ಚಿದಾನಂದಂ ಆರ್‌ಸಿಪಿಐ (ಎಂ)
ಕರೂರ್ಜ್ಯೋತಿಮಣಿ ಎಸ್ಕಾಂಗ್ರೆಸ್
ಅರಕ್ಕೋಣಂಎಸ್ ಜಗತ್‌ರಚ್ಚಕನ್ಡಿಎಂಕೆ
ಅರಣಿ ಧರಣಿವೇನ್‌ತಾನ್ ಎಂಎಸ್ ಡಿಎಂಕೆ
ಚೆನ್ನೈ ಸೆಂಟ್ರಲ್ದಯಾನಿಧಿ ಮಾರನ್ ಡಿಎಂಕೆ
ಚೆನ್ನೈ ದಕ್ಷಿಣಟಿ ಸುಮತಿಡಿಎಂಕೆ
ಚಿದಂಬರಂತಿರುಮಾವಲವನ್ ಥೋಲ್ವಿಸಿಕೆ
ಕಡಲೂರುಎಂ ಕೆ ಕೃಷ್ಣ ಪ್ರಸಾದ್ ಕಾಂಗ್ರೆಸ್
ಈರೋಡ್‌ಕೆ ಇ ಪ್ರಕಾಶ್ಡಿಎಂಕೆ
ಕಳ್ಳಕುರಿಚಿಮಲೈಯರಸನ್ ಡಿಡಿಎಂಕೆ
ಕನ್ಯಾಕುಮಾರಿ ವಿಜಯಕುಮಾರ್ (ವಿಜಯ ವಸಂತ್)ಕಾಂಗ್ರೆಸ್
ಮಧುರೈವೆಂಕಟೇಶನ್ ಎಸ್ ಸಿಪಿಐ (ಎಂ)
ಮಯಿಲಾಡುತುರೈಸುಧಾ ಆರ್ಕಾಂಗ್ರೆಸ್
ನಾಗಪಟ್ಟಣಂಸೆಲ್ವರಾಜ್ ಪಿಸಿಪಿಐ
ನೀಲಗಿರೀಸ್ಎ. ರಾಜಾ ಡಿಎಂಕೆ
ಪೆರುಂಬಲೂರುಅರುಣ್ ನೆಹರೂಡಿಎಂಕೆ
ಪೊಳ್ಳಾಚಿಈಶ್ವರ ಸ್ವಾಮಿ ಕೆಡಿಎಂಕೆ
ರಾಮನಾಥಪುರಂನವಾಸ್‌ಕಣಿ ಕೆಐಯುಎಂಎಲ್‌
ಶಿವಗಂಗಾಕಾರ್ತಿ ಚಿದಂಬರಂಕಾಂಗ್ರೆಸ್
ಶ್ರೀಪರೆಂಬದೂರುಟಿ ಆರ್ ಬಾಲುಡಿಎಂಕೆ
ತೇನ್‌ಕಾಸಿಡಾ ರಾಣಿ ಶ್ರೀಕುಮಾರ್ಡಿಎಂಕೆ
ತಂಜಾವೂರ್ಮುರಸೋಳಿ ಎಸ್ ಡಿಎಂಕೆ
ಥೇಣಿತಂಗ ತಮಿಳ್‌ಸೆಲ್ವನ್ಡಿಎಂಕೆ
ತಿರುವಲ್ಲೂರುಸಸಿಕಾಂತ್ ಸೆಂಥಿಲ್ಕಾಂಗ್ರೆಸ್
ತೂತುಕುಡಿಕನ್ನಿಮೊಳಿ ಕರುಣಾನಿಧಿಡಿಎಂಕೆ
ತಿರುಚಿರಾಪಳ್ಳಿದುರೈ ವೈಕೊಎಂಡಿಎಂಕೆ
ತಿರುನೆಲ್ವೇಲಿರಾಬರ್ಟ್ ಬ್ರೂಸ್ ಸಿಕಾಂಗ್ರೆಸ್
ತಿರುಪ್ಪೂರ್ಸುಬ್ಬರಾಯನ್ ಕೆಸಿಪಿಐ
ತಿರುವಣ್ಣಾಮಲೈಅಣ್ಣಾದುರೈ ಸಿಎನ್‌ಡಿಎಂಕೆ
ವಿಲುಪ್ಪುರಂರವಿಕುಮಾರ್ ಡಿ ವಿಸಿಕೆ
ವಿರುಧನಗರ್ಮಣಿಕ್ಕಂ ಟಾಗೋರ್ ಬಿಕಾಂಗ್ರೆಸ್

ತಮಿಳುನಾಡಿನಲ್ಲಿ ಏಪ್ರಿಲ್ 19ರಂದು ಚುನಾವಣೆ

ತಮಿಳುನಾಡಿನ 39 ಸ್ಥಾನಗಳಿಗೆ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಇಲ್ಲಿ ಪ್ರಾದೇಶಿಕ ಪಕ್ಷಗಳದ್ಧೇ ಕಾರುಬಾರು. ಆಡಳಿತಾರೂಢ ಡಿಎಂಕೆ, ವಿಪಕ್ಷ ಎಐಎಡಿಎಂಕೆ, ಕಾಂಗ್ರೆಸ್ ಮತ್ತು ಇತರೆ ಸಣ್ಣಪುಷ್ಟ ಪಕ್ಷಗಳಿವೆ. ಬಿಜೆಪಿಗೆ ಇಲ್ಲಿ ನೆಲೆ ವಿಸ್ತರಿಸುವುದು ತ್ರಾಸದಾಯಕವಾಗಿ ಉಳಿದಿದೆ.

ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.