ಕನ್ನಡ ಸುದ್ದಿ  /  Nation And-world  /  Tamil Nadu News Lemon Put On Shiva Head At Shivagiri In Erode District For Shivaratri Purchased For 35000 Rupees Bid Kub

Tamil Nadu News: ತಮಿಳುನಾಡು ದೇಗುಲದಲ್ಲಿ ನಿಂಬೆಹಣ್ಣು 35,000 ರೂ.ಗೆ ಹರಾಜು !

ತಮಿಳುನಾಡಿನ ಶಿವಗಿರಿ ದೇಗುಲದಲ್ಲಿ ನಿಂಬೆಹಣ್ಣ ಈ ಬಾರಿಯ ಶಿವರಾತ್ರಿಯಲ್ಲಿ ಭಾರೀ ಬೆಲೆಗೆ ಮಾರಾಟವಾಗಿದೆ.

ಶಿವಗಿರಿನಲ್ಲಿ ನಿಂಬೆಹಣ್ಣನ್ನು ಭಾರಿ ಬೆಲೆ ನೀಡಿ ಭಕ್ತರೊಬ್ಬರು ಖರೀದಿಸಿದ್ದಾರೆ.
ಶಿವಗಿರಿನಲ್ಲಿ ನಿಂಬೆಹಣ್ಣನ್ನು ಭಾರಿ ಬೆಲೆ ನೀಡಿ ಭಕ್ತರೊಬ್ಬರು ಖರೀದಿಸಿದ್ದಾರೆ.

ಈರೋಡ್‌: ಒಂದು ನಿಂಬೆಹಣ್ಣಿನ ಬೆಲೆ ಎಷ್ಟಿರಬಹುದು. 1 ರೂ. ಇಲ್ಲವೇ 2 ರೂ. 5 ರೂ. ಕೂಡ ಇರಬಹುದು. ಒಳ್ಳೆಯ ಗಾತ್ರದ ನಾಟಿ ತಳಿ ನಿಂಬೆ ಹಣ್ಣಿನ ಬೆಲೆ 10 ರೂ. ಕೂಡ ಆಗಬಹುದು. ನಿಮ್ಮ ಊಹೆ ತಪ್ಪಿದೆ. ಆ ನಿಂಬೆಹಣ್ಣಿನ ದರ ಕೇಳಿದರೆ ನೀವೇ ದಂಗಾಬಹುದು. ಏಕೆಂದರೆ ಒಂದು ನಿಂಬೆಹಣ್ಣು ಮಾರಾಟವಾಗಿದ್ದು ಬರೋಬ್ಬರಿ 35,000 ರೂ.ಗೆ. ಇದು ಸಾಮಾನ್ಯ ನಿಂಬೆಹಣ್ಣು ಖಂಡಿತಾ ಅಲ್ಲ. ದೇವರ ಪೂಜೆ ಮಾಡಿದ ನಿಂಬೆಹಣ್ಣು ಎನ್ನುವ ಕಾರಣಕ್ಕೆ ಇದು ಭಾರೀ ಬೆಲೆಗೆ ಮಾರಾಟವಾಗಿದೆ.

ಇದು ನಡೆದಿರುವುದು ತಮಿಳುನಾಡಿ ಈರೋಡ್‌ ಜಿಲ್ಲೆಯಲ್ಲಿ. ಶಿವಗಿರಿ ಗ್ರಾಮದಲ್ಲಿರುವ ಪಾಝಪೂಸಯಿನ್‌ ದೇಗುಲದಲ್ಲಿ ಈ ರೀತಿ ಭಾರೀ ಬೆಲೆಗೆ ನಿಂಬೆ ಹಣ್ಣು ಮಾರಾಟವಾಗಿದೆ.

ಪ್ರತಿ ಶಿವರಾತ್ರಿಗೆ ಶಿವಗಿರಿ ಗ್ರಾಮದ ಪುರಾತನ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಶಿವಗಿರಿ ಗ್ರಾಮದವರು ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮದವರು, ದೂರದಿಂದಲೂ ಭಕ್ತರು ಆಗಮಿಸುತ್ತಾರೆ. ಈರೋಡ್‌ ನಗರದಿಂದಲೂ ಹಲವಾರು ಭಕ್ತರು ಈ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಾರೆ. ಶಿವರಾತ್ರಿಗಂತೂ ತಪ್ಪಿಸಿಕೊಳ್ಳುವುದೇ ಇಲ್ಲ. ಶಿವರಾತ್ರಿ ವೇಳೆ ಇಲ್ಲಿ ನಿಂಬೆ ಹಣ್ಣನ್ನು ಪೂಜೆ ಮಾಡಿ ಭಕ್ತರಿಗೆ ಕೊಡುವುದು ವಾಡಿಕೆ. ನಿಂಬೆಹಣ್ಣನ್ನು ಹಾಗೆಯೇ ಕೊಡುವುದಿಲ್ಲ. ಹರಾಜಿಗೆ ಇಡುತ್ತಾರೆ. ಭಕ್ತರು ದರ ನಿಗದಿ ಮಾಡಿ ನಿಂಬೆ ಹಣ್ಣು ಖರೀದಿ ಮಾಡಬೇಕು.

ಈ ನಿಂಬೆಹಣ್ಣನ್ನು ಶಿವರಾತ್ರಿಗೆ ಶಿವನಿಗೆ ಧರಿಸಿ ಇಟ್ಟಿರುತ್ತಾರೆ. ವಿಶೇಷ ಪೂಜೆಯನ್ನು ಅರ್ಚಕರು ಮಾಡಿರುತ್ತಾರೆ. ಈ ನಿಂಬೆಹಣ್ಣು ಖರೀದಿಸಿದರೆ ನಂಬಿಕೆಯಾಗುತ್ತದೆ ಎನ್ನುವುದು ನಂಬಿಕೆ. ಈ ಕಾರಣದಿಂದಲೇ ನಾ ಮುಂದು ತಾ ಮುಂದು ಎಂದು ಭಕ್ತರು ಹರಾಜು ಕೂಗಿ ನಿಂಬೆ ಹಣ್ಣನ್ನು ಖರೀದಿ ಮಾಡುತ್ತಾರೆ. ಈ ಸಂಪ್ರದಾಯ ಶಿವಗಿರಿ ದೇಗುಲದಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಯಾರೂ ಇಷ್ಟು ಮೊತ್ತಕ್ಕೆ ನಿಂಬೆಹಣ್ಣು ಖರೀದಿಸಿದ ಉದಾಹರಣೆಯಿಲ್ಲ. ಈ ಬಾರಿಯೂ 15 ಭಕ್ತರು ನಿಂಬೆಹಣ್ಣಿನ ಖರೀದಿಗೆ ಮುಂದಾಗಿದ್ದರು. ಕೊನೆಗೆ ಈರೋಡ್‌ನ ಭಕ್ತರು ಅತ್ಯಧಿಕ 35,000 ರೂ. ಕೂಗಿ ನಿಂಬೆಹಣ್ಣು ಖರೀದಿಸಿದರು.

ಪ್ರತಿ ವರ್ಷದಂತೆಯೆ ಈ ಬಾರಿಯೂ ದೇವರ ನಿಂಬೆಹಣ್ಣಿನ ಖರೀದಿಗೆ ಶಿವಗಿರಿಯಲ್ಲಿ ಬೇಡಿಕೆಯಿತ್ತು. ಭಕ್ತರೊಬ್ಬರು 35,000 ರೂ.ಗೆ ಹರಾಜು ಕೂಗಿ ನಿಂಬೆಹಣ್ಣು ಪಡೆದುಕೊಂಡರು. ಈ ನಿಂಬೆ ಹಣ್ಣು ಪಡೆದವರಿಗೆ ಆದಾಯ ಹಾಗೂ ಆಯಸ್ಸು ವೃದ್ದಿಯಾಗುತ್ತದೆ ಎನ್ನುವ ನಂಬಿಕೆ ಇರುವುದರಿಂದ ಹಲವರು ಖರೀದಿಗೆ ಬರುತ್ತಾರೆ ಎನ್ನುವುದು ದೇವಸ್ಥಾನದ ಅಧಿಕಾರಿಗಳು ನೀಡುವ ಮಾಹಿತಿ.

ನಿಂಬೆಹಣ್ಣಿನ ಜತೆಗೆ ಬಾಳೆಹಣ್ಣು ಸಹಿತ ದೇವರಿಗೆ ಪೂಜೆ ಮಾಡಿದ್ದ ಹಲವು ಹಣ್ಣುಗಳನ್ನು ಕೂಡ ಹರಾಜಿಗೆ ಇಡಲಾಗಿತ್ತು. ಅದನ್ನೂ ಸಹಾ ಭಕ್ತರು ಖರೀದಿ ಮಾಡಿದ್ದಾರೆ ಂದು ಅರ್ಚಕರು ಹೇಳಿದರು.

IPL_Entry_Point