ಕನ್ನಡ ಸುದ್ದಿ  /  Nation And-world  /  Tamil Nadu News Real Heros Shanmugaiah And Kurunthamma Brave Act Averts Train Accident On Time Near Bhagavathipuram Uks

Real Heroes: ನಸುಕಿನ ವೇಳೆ ಸಂಭಾವ್ಯ ಭಾರಿ ರೈಲು ದುರಂತ ತಪ್ಪಿಸಿದ ತಮಿಳು ನಾಡಿನ ವೃದ್ಧ ದಂಪತಿ; ವ್ಯಾಪಕ ಪ್ರಶಂಸೆಗೆ ಒಳಗಾದ ರಿಯಲ್ ಹೀರೋಸ್

Real Heroes: ಸೆಂಗೋಟೈ ಭಗವತಿಪುರಂ ರೈಲು ನಿಲ್ಧಾಣದ ಸಮೀಪ ನಸುಕಿನ ವೇಳೆ ಸಂಭಾವ್ಯ ಭಾರಿ ರೈಲು ದುರಂತ ತಪ್ಪಿಸಿದ ತಮಿಳು ನಾಡಿನ ವೃದ್ಧ ದಂಪತಿ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ರಿಯಲ್ ಹೀರೋಸ್ ವ್ಯಾಪಕ ಪ್ರಶಂಸೆಗೆ ಒಳಗಾದರು.

Real Heroes: ಸೆಂಗೋಟೈ ಭಗವತಿಪುರಂ ರೈಲು ನಿಲ್ಧಾಣದ ಸಮೀಪ ನಸುಕಿನ ವೇಳೆ ಸಂಭಾವ್ಯ ಭಾರಿ ರೈಲು ದುರಂತ ತಪ್ಪಿಸಿದ ತಮಿಳು ನಾಡಿನ ವೃದ್ಧ ದಂಪತಿ ದೇಶದ ಗಮನಸೆಳೆದಿದ್ದಾರೆ. ಅವರ ನಡೆ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದು ರಿಯಲ್ ಹೀರೋಸ್ ಎಂಬ ಪ್ರಶಂಸೆಗೆ ಒಳಗಾದರು.
Real Heroes: ಸೆಂಗೋಟೈ ಭಗವತಿಪುರಂ ರೈಲು ನಿಲ್ಧಾಣದ ಸಮೀಪ ನಸುಕಿನ ವೇಳೆ ಸಂಭಾವ್ಯ ಭಾರಿ ರೈಲು ದುರಂತ ತಪ್ಪಿಸಿದ ತಮಿಳು ನಾಡಿನ ವೃದ್ಧ ದಂಪತಿ ದೇಶದ ಗಮನಸೆಳೆದಿದ್ದಾರೆ. ಅವರ ನಡೆ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದು ರಿಯಲ್ ಹೀರೋಸ್ ಎಂಬ ಪ್ರಶಂಸೆಗೆ ಒಳಗಾದರು. (@AskAnshul)

ಚೆನ್ನೈ: ತಮಿಳುನಾಡಿನ ಸೆಂಗೋಟೈ ಭಗವತಿಪುರಂ ರೈಲು ನಿಲ್ಧಾಣದ ಸಮೀಪದ ವಾಸಿಗಳಾದ ವಯೋವೃದ್ಧ ದಂಪತಿಯ ಸಮಯ ಪ್ರಜ್ಞೆಯ ಕಾರಣ ಭಾರಿ ರೈಲು ದುರಂತ ತಪ್ಪಿದೆ. ಭಾನುವಾರ ನಸುಕಿನಲ್ಲಿ ರೈಲು ಹಳಿಗೆ ಬಂದು ಲೋಕೋಪೈಲಟ್‌ನ ಗಮನಸೆಳೆದ ಕಾರಣ ಸಂಭಾವ್ಯ ಅನಾಹುತ ತಪ್ಪಿದೆ.

ವೃದ್ಧ ದಂಪತಿಯನ್ನು ಷಣ್ಮುಗಯ್ಯ ಮತ್ತು ಕುರುಂತಮ್ಮಾಳ್‌ ಎಂದು ಗುರುತಿಸಲಾಗಿದೆ. ಅವರ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಇದು ಗಮನಸೆಳೆದಿದ್ದು, ನಟಿ ಖುಷ್ಭೂ ಸುಂದರ್ ಈ ದಂಪತಿಯನ್ನು ರಿಯಲ್ ಲೈಫ್ ಹೀರೋಗಳು ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ವೃದ್ಧ ದಂಪತಿಯ ಫೋಟೋ ಮತ್ತು ರೈಲು ಹಳಿಗಳ ಮೇಲೆ ಬಿದ್ದಿರುವ ಲಾರಿಯ ಚಿತ್ರಗಳನ್ನು ಎಕ್ಸ್‌ನಲ್ಲಿ ಶೇರ್ ಮಾಡಿರುವ ಅನ್ಶುಲ್ ಸಕ್ಸೇನಾ, ತಮಿಳುನಾಡಿನ ತೇನ್‌ಕಾಶಿಯ ಷಣ್ಮುಗಯ್ಯ ಮತ್ತು ಕುರುಂತಮ್ಮ ಎಂಬ ವೃದ್ಧ ದಂಪತಿ ರೈಲ್ವೆ ಹಳಿ ಮೇಲೆ ಟ್ರಕ್ ಬಿದ್ದಿರುವುದನ್ನು ಕಂಡು ನಸುಕಿನಲ್ಲಿ ಓಡಿ, ರೈಲಿನ ಲೋಕೋಪೈಲಟ್‌ಗೆ ಟಾರ್ಚ್‌ಲೈಟ್ ಬೀರಿ ರೈಲನ್ನು ನಿಲ್ಲಿಸಿದರು. ಅವರು ಸಂಭಾವ್ಯ ದುರಂತವನ್ನು ತಪ್ಪಿಸಿದರು ಮತ್ತು ಅನೇಕ ಜೀವಗಳನ್ನು ಉಳಿಸಿದರು ಎಂದು ಬರೆದು ಮೆಚ್ಚುಗೆ ಸೂಚಿಸಿದ್ದಾರೆ.

ವೃದ್ಧ ದಂಪತಿಯ ಸಮಯ ಪ್ರಜ್ಞೆ

ಕೇರಳದಿಂದ ಫ್ಲೈವುಡ್ ಹೇರಿಕೊಂಡು ಸಾಗುತ್ತಿದ್ದ ಟ್ರಕ್‌ ಕುಂಭಕೋಣಂ ಕಡೆಗೆ ಹೋಗುತ್ತತಿತ್ತು. ಘಾಟಿ ರಸ್ತೆಯಾದ ಕಾರಣ ಟ್ರಕ್ ನಿಯಂತ್ರಣ ತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದಿತ್ತು. ಭಾರಿ ಶಬ್ದಕ್ಕೆ ಎಚ್ಚರವಾದ ವೃದ್ಧ ದಂಪತಿ ಷಣ್ಮುಗಯ್ಯ ಮತ್ತು ಕುರುಂತಮ್ಮಾಳ್‌ ಕೂಡಲೇ ರೈಲ್ವೆ ಹಳಿಗೆ ಓಡಿ ಬಂದು ಟಾರ್ಚ್‌ ಲೈಟ್‌ ಹಿಡಿದು ನಡೆದುದೇನು ಎಂಬುದನ್ನು ಗಮನಿಸಿದ್ದಾರೆ.

ಭಗವತಿಪುರಂ ಮತ್ತು ಆರ್ಯಂಕಾವು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಭಾನುವಾರ ನಸುಕಿನ 1 ಗಂಟೆ ಸಮಯಕ್ಕೆ ಟ್ರಕ್ ಅಪಘಾತವಾಗಿದ್ದು, 18 ಅಡಿ ಎತ್ತರದಿಂದ ರೈಲ್ವೆ ಹಳಿಗೆ ಬಿದ್ದುದನ್ನು ಗಮನಿಸಿದರು.

ಅದೇ ವೇಳೆ ಅಲ್ಲಿ ರೈಲು ಬರುತ್ತಿದ್ದ ಶಬ್ದ ಕೇಳಿಸಿದ ಕಾರಣ ಅವರು ಒಂದಷ್ಟು ದೂರ ರೈಲು ಹಳಿಯಲ್ಲೇ ಓಡಿ ಹೋಗಿ ಟಾರ್ಚ್ ಲೈಟ್ ಅನ್ನು ಲೋಕೋಪೈಲಟ್‌ ಕಡೆಗೆ ಬೀರಿದರು. ಇದರಿಂದಾಗಿ ರೈಲಿನ ವೇಗವನ್ನು ತಗ್ಗಿಸಿದ ಚಾಲಕ ಅವರಿಂದ ಸ್ವಲ್ಪ ದೂರದಲ್ಲಿ ರೈಲು ನಿಲ್ಲಿಸಿದ್ದರು.

ಬೆಳಗ್ಗೆ 6 ಗಂಟೆಗೆ ರೈಲು ಸಂಚಾರ ಸುಗಮ

ಆ ಹಳಿಯಲ್ಲಿ ಬಂದ ರೈಲು ಘಾಟ್ ಸೆಕ್ಷನ್ ಆದ ಕಾರಣ ಗಂಟೆಗೆ 30 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು. ಖಾಲಿ ಇದ್ದ ಗೂಡ್ಸ್ ರೈಲು ಪುನಲೂರು ಕಡೆಗೆ ಹೋಗುತ್ತಿತ್ತು. ದಂಪತಿ ನೀಡಿದ ಎಚ್ಚರಿಕೆಯ ಕಾರಣ ಸುರಕ್ಷಿತ ದೂರದಲ್ಲಿ ರೈಲು ನಿಲ್ಲುವಂತಾಯಿತು ಎಂದು ಹಿರಿಯ ರೈಲ್ವೆ ಅಧಿಕಾರಿ ಹೇಳಿದ್ದಾಗಿ ದ ಹಿಂದೂ ವರದಿ ಮಾಡಿದೆ.

ಅರ್ತ್ ಮೂವರ್‌ಗಳನ್ನು ಬಳಸಿ ಲಾರಿಯ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಗೆ ರೈಲು ಸಂಚಾರ ಸುಗಮವಾಗಿ ಮುಂದುವರಿದಿದೆ. ಈ ವಿದ್ಯಮಾನದಿಂದಾಗಿ ಚೆನ್ನೈ ಎಗ್ಮೋರ್ ಕೊಲ್ಲಂ ಎಕ್ಸ್‌ಪ್ರೆಸ್‌ ರಯಲು ಎರಡು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ ಸಂಚರಿಸಿತು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point