King Cobra: ತಮಿಳುನಾಡಿನಲ್ಲಿ ಪತ್ತೆಯಾಯ್ತು 15 ಅಡಿ ಉದ್ದದ ಭಾರೀ ಕಾಳಿಂಗ ಸರ್ಪ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  King Cobra: ತಮಿಳುನಾಡಿನಲ್ಲಿ ಪತ್ತೆಯಾಯ್ತು 15 ಅಡಿ ಉದ್ದದ ಭಾರೀ ಕಾಳಿಂಗ ಸರ್ಪ

King Cobra: ತಮಿಳುನಾಡಿನಲ್ಲಿ ಪತ್ತೆಯಾಯ್ತು 15 ಅಡಿ ಉದ್ದದ ಭಾರೀ ಕಾಳಿಂಗ ಸರ್ಪ

heavy King cobra ತಮಿಳುನಾಡಿನ( Tamilnadu) ದಕ್ಷಿಣ ಭಾಗದ ತೆಂಕಾಸಿ ( Tenkasi) ಪಟ್ಟಣದ ಗೋವಿಂದಪುರಂ ಎಂಬಲ್ಲಿ ಭಾರೀ ಗಾತ್ರದ ಕಾಳಿಂಗಸರ್ಪ( King Cobra) ಸಿಕ್ಕಿದ್ದು ಅದನ್ನು ಅರಣ್ಯ ಇಲಾಖೆಯವರು( Tamilnadu Forest department) ಸೆರೆ ಹಿಡಿದಿದ್ದಾರೆ.

ತಮಿಳುನಾಡಿನ ತೆಂಕಾಸಿ ಸಮೀಪದ ಪತ್ತೆಯಾದ ಭಾರೀ ಗಾತ್ರದ ಕಾಳಿಂಗ ಸರ್ಪ
ತಮಿಳುನಾಡಿನ ತೆಂಕಾಸಿ ಸಮೀಪದ ಪತ್ತೆಯಾದ ಭಾರೀ ಗಾತ್ರದ ಕಾಳಿಂಗ ಸರ್ಪ (daily thanti)

ಚೆನ್ನೈ: ಇದು ಭಾರೀ ಗಾತ್ರದ ಕಾಳಿಂಗ ಸರ್ಪ. ಅದು ಎಷ್ಟು ಉದ್ದ ಇತ್ತು ಎಂದರೆ ಅದನ್ನು ಹಿಡಿಯಲು ಕನಿಷ್ಟ ಐದು ಮಂದಿಯಾದರೂ ಬೇಕು. ಇದು ಇತ್ತೀಚಿನ ವರ್ಷಗಳಲ್ಲಿ ಕಂಡ ಭಾರೀ ಗಾತ್ರದ ಹಾಗೂ ಅತಿ ಉದ್ದದ ಕಾಳಿಂಗ ಸರ್ಪ.

ಇದು ಕಂಡು ಬಂದಿರುವುದು ತಮಿಳುನಾಡಿನಲ್ಲಿ. ಅದೂ ತಮಿಳು ನಾಡಿನ ತೆಂಕಾಶಿ ಜಿಲ್ಲೆಯಲ್ಲಿ. ಕಪ್ಪು ಹಳದಿ ಮಿಶ್ರಿತ ಕಾಳಿಂಗ ಸರ್ಪ ವೀಕ್ಷಿಸಿದವರು ಇದನ್ನು ಯಾವುದೋ ಚಿತ್ರದಲ್ಲಿ ನೋಡುತ್ತಿದ್ದೆವೋ, ನಿಜವಾಗಿ ನೋಡುತ್ತಿದ್ದೇವೋ ಎಂದು ಆಶ್ಚರ್ಯ ಪಟ್ಟುಕೊಂಡರು.

ತೆಂಕಾಶಿ ಜಿಲ್ಲೆಯ ಕಡಯಂ ಪುರಸಭೆ ವ್ಯಾಪ್ತಿಯ ಗೋವಿಂದಪುರಿಯ ಖಾಸಗಿ ಕಾರ್ಖಾನೆ ಆವರಣದಲ್ಲಿ ಭಾರೀ ಗಾತ್ರದ ವಸ್ತು ಮಿಸುಕಾಡುತ್ತಿರುವುದು ಕಂಡು ಬಂದಿತು. ಅದನ್ನು ಗಮನಿಸಿದರು ಅಲ್ಲಿ ಕಾಳಿಂಗ ಸರ್ಪ ಇದೆ ಎಂದು ಖಚಿತಪಡಿಸಿಕೊಂಡರು. ಕೊನೆಗೆ ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹಾವು ಹಿಡಿಯುವ ತಜ್ಞರನ್ನೂ ಕರೆಸಲಾಯಿತು. ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸುಸಜ್ಜಿತ ವಾಹನದೊಂದಿಗೆ ಅಲ್ಲಿಗೆ ಆಗಮಿಸಿದರು.

ಕೊನೆಗೆ ಆ ಹಾವಿನ ಗಾತ್ರವನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆರ್ಶರ್ಯ. ಬುಸುಗುಟ್ಟುತ್ತಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಅದನ್ನು ಹಿಂಬಾಲಿಸಿಕೊಂಡೇ ಹೋದರು. ಅಲ್ಲಿಯೇ ಪೊದೆಯಲ್ಲಿ ತಪ್ಪಿಸಿಕೊಳ್ಳಲು ಹಾವು ಪ್ರಯತ್ನಿಸುತ್ತಿತ್ತು. ಸಿಬ್ನಂದಿಗಳು ಹಾಗೂ ಉರಗ ತಜ್ಞ ಸಹಕಾರದಿಂದ ಅದನ್ನು ಕೊನೆಗೆ ಸೆರೆ ಹಿಡಿಯಲಾಯಿತು.

ಕಾಳಿಂಗ ಸರ್ಪ ಎತ್ತಿ ಹಿಡಿಯಲು ಅರಣ್ಯ ಇಲಾಖೆ ಐದಾರು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೊನೆಗೆ ಭಾರೀ ಗಾತ್ರದ ಬ್ಯಾಗ್‌ನಲ್ಲಿ ಹರಸಾಹಸ ಪಟ್ಟು ಕಾಳಿಂಗ ಸರ್ಪವನ್ನು ತುಂಬಿಕೊಂಡರು. ಬಳಿಕ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಳಿಂಗ ಸರ್ಪವನ್ನು ಬಂಧಮುಕ್ತಗೊಳಿಸಲಾಯಿತು.

ಕೆಲ ದಿನಗಳ ಹಿಂದೆ ತಮಿಳುನಾಡಿನ ಗಡಿ ಜಿಲ್ಲೆಯಾದ ಕನ್ಯಾಕುಮಾರಿಯಲ್ಲೂ ಇಂತಹುದೇ ಗಾತ್ರದ ಕಾಳಿಂಗ ಸರ್ಪ ಕಂಡು ಬಂದಿತ್ತು. ಅದನ್ನು ಸೆರೆ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿತ್ತು.

ಪಶ್ಚಿಮಘಟ್ಟಗಳ ಸಾಲಿನಲ್ಲಿ ಇಂತಹ ಕಾಳಿಂಗ ಸರ್ಪಗಳು ಅಧಿಕವಾಗಿವೆ. ಕರ್ನಾಟಕ. ಕೇರಳ, ತಮಿಳುನಾಡಿನ ದಟ್ಟಾರಣ್ಯದಲ್ಲಿ ಇರುವ ಕಾಳಿಂಗ ಸರ್ಪಗಳು ಕೆಲವೊಮ್ಮೆ ಊರುಗಳಲ್ಲಿ ಆಹಾರ ಅರಸಿ ಬಂದು ಸಿಕ್ಕಿ ಬೀಳುತ್ತವೆ. ಜನ ದಾಳಿ ಮಾಡದೇ ಮಾಹಿತಿ ನೀಡಿದಾಗ ಅವುಗಳನ್ನು ರಕ್ಷಿಸಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.