ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆಜಾನ್ ಗ್ರೇಟ್ ಸಮ್ಮರ್‌ ಸೇಲ್‌ 2024; ಮೇ 2ರ ಮಧ್ಯಾಹ್ನದಿಂದ ಶುರು, ವಿವಿಧ ಉತ್ಪನ್ನಗಳ ಮೇಲೆ ವೈವಿಧ್ಯದ ಡೀಲ್‌ ಮತ್ತು ಡಿಸ್ಕೌಂಟ್‌

ಅಮೆಜಾನ್ ಗ್ರೇಟ್ ಸಮ್ಮರ್‌ ಸೇಲ್‌ 2024; ಮೇ 2ರ ಮಧ್ಯಾಹ್ನದಿಂದ ಶುರು, ವಿವಿಧ ಉತ್ಪನ್ನಗಳ ಮೇಲೆ ವೈವಿಧ್ಯದ ಡೀಲ್‌ ಮತ್ತು ಡಿಸ್ಕೌಂಟ್‌

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ಶುರುವಾಗಲು ಕ್ಷಣಗಣನೆ ಶುರುವಾಗಿದೆ. ಹೌದು ಇದು ಮೇ 2ರ ಮಧ್ಯಾಹ್ನದಿಂದ ಶುರು, ವಿವಿಧ ಉತ್ಪನ್ನಗಳ ಮೇಲೆ ವೈವಿಧ್ಯದ ಡೀಲ್‌ ಮತ್ತು ಡಿಸ್ಕೌಂಟ್‌ ಕೂಡಲ ಲಭ್ಯವಿದೆ. ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಈ ವರದಿಯಲ್ಲಿದೆ.

ಅಮೆಜಾನ್ ಗ್ರೇಟ್ ಸಮ್ಮರ್‌ ಸೇಲ್‌ 2024; ಮೇ 2ರ ಮಧ್ಯಾಹ್ನದಿಂದ ಶುರು, ವಿವಿಧ ಉತ್ಪನ್ನಗಳ ಮೇಲೆ ವೈವಿಧ್ಯದ ಡೀಲ್‌
ಅಮೆಜಾನ್ ಗ್ರೇಟ್ ಸಮ್ಮರ್‌ ಸೇಲ್‌ 2024; ಮೇ 2ರ ಮಧ್ಯಾಹ್ನದಿಂದ ಶುರು, ವಿವಿಧ ಉತ್ಪನ್ನಗಳ ಮೇಲೆ ವೈವಿಧ್ಯದ ಡೀಲ್‌

ಬೆಂಗಳೂರು: ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ಇನ್ನೇನು ಶುರುವಾಗಲಿದೆ. ಮೇ 2ರ ಮಧ್ಯಾಹ್ನ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಶುರುವಾಗಲಿದ್ದು, ಈ ಬೇಸಿಗೆಯಲ್ಲಿ ಗ್ರಾಹಕರು ಪಡೆಯಬಹುದಾದ ಅತ್ಯುತ್ತಮ ಡೀಲ್‌ ಮತ್ತು ಡಿಸ್ಕೌಂಟ್, ಆಫರ್‌ಗಳು ಗಮನಸೆಳೆಯತೊಡಗಿವೆ.

ಟ್ರೆಂಡಿಂಗ್​ ಸುದ್ದಿ

ಏರ್‌ಕಂಡಿಷನರ್‌ಗಳು, ಟೆಲಿವಿಷನ್‌, ಏರ್ ಕೂಲರ್‌, ಪೀಠೋಪಕರಣ, ಫ್ಯಾಷನ್, ಸೌಂದರ್ಯ ಮತ್ತು ಇನ್ನೂ ಹೆಚ್ಚಿನ ಉತ್ಪನ್ನಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ ಇರಲಿದ್ದು, ಹೆಚ್ಚಿನ ಉಳಿತಾಯಕ್ಕೆ ಅವಕಾಶ ಮಾಡಿಕೊಡಲಿದೆ. ಅಮೆಜಾನ್‌ನ ಈ ಗ್ರೇಟ್ ಸಮ್ಮರ್‌ ಸೇಲ್‌ ಮೇಳ ಬಹಳ ಜನಪ್ರಿಯವಾದುದು. ಈ ಅವಧಿಯಲ್ಲಿ ಅತ್ಯುತ್ತಮ ಬೆಲೆಯ ಡೀಲ್‌ಗಳು ಗಮನಸೆಳೆಯುತ್ತವೆ.

ಪ್ರೈಮ್ ಸದಸ್ಯರಿಗೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ಸ್ವಲ್ಪ ಮೊದಲೇ ಶುರುವಾಗುತ್ತದೆ. ಅಂದರೆ ಅವರು ಮೇ 2ರ ಮಧ್ಯಾಹ್ನದ ತನಕ ಕಾಯಬೇಕಾಗಿಲ್ಲ. ಮೇ 2 ಶುರುವಾಗುತ್ತಿದ್ದಂತೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024ರ ಆರಂಭಿಕ ಡೀಲ್‌ಗಳು ಪ್ರೈಮ್ ಸದಸ್ಯರಿಗೆ ಸಿಗುತ್ತದೆ. ಇದರಲ್ಲಿ, ಲ್ಯಾಪ್‌ಟಾಪ್‌, ಏರ್ ಕಂಡಿಷನರ್‌, ಟೆಲಿವಿಷನ್‌, ರೆಫ್ರಿಜರೇಟರ್‌, ವಾಷಿಂಗ್ ಮೆಷಿನ್‌ ಮತ್ತು ಇನ್ನೂ ಹೆಚ್ಚಿನ ಉತ್ಪನ್ನಗಳು ಸಿಗಲಿವೆ. ಅದೂ ಅಲ್ಲದೆ, ಮೆಚ್ಚಿನ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಹೆಚ್ಚಿನ ರಿಯಾಯಿತಿಯೂ ಸಿಗಲಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಅಮೆಜಾನ್‌ ವೆಬ್‌ಸೈಟ್‌ನ ಪ್ರತಿಯೊಂದು ವಿಭಾಗದಲ್ಲೂ ಈ ರಿಯಾಯಿತಿ, ಡಿಸ್ಕೌಂಟ್, ಡೀಲ್‌ಗಳು ಇರಲಿದೆ. ಹೆಡ್‌ಫೋನ್‌ಗಳಿಂದ ಟ್ಯಾಬ್ಲೆಟ್‌ಗಳವರೆಗೆ ಅಗತ್ಯವಿರುವ ಎಲ್ಲವನ್ನೂ ಖರೀದಿಸಬಹುದು. ಈ ಸಮ್ಮರ್ ಸೇಲ್‌ 2024 ರಲ್ಲಿ ದೊಡ್ಡ ಉಳಿತಾಯವೇ ಆಗಲಿದೆ ಎಂದು ಅಮೆಜಾನ್‌ ಪ್ರತಿಪಾದಿಸಿದೆ.

ಹೆಚ್ಚು ಮಾರಾಟವಾಗುವ ಏರ್ ಕಂಡಿಷನರ್ ಅನ್ನು ಪರಿಶೀಲಿಸಿ:

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಶುರು ಯಾವಾಗ?

ಅಮೆಜಾನ್‌ ಗ್ರೇಟ್ ಸಮ್ಮರ್ ಸೇಲ್ 2024 ರ ಮೇ 2 ರಂದು ಮಧ್ಯಾಹ್ನ ಪ್ರಾರಂಭವಾಗುತ್ತದೆ. ಅಮೆಜನಾನ್ ಪ್ರೈಮ್ (Amazon Prime) ಸದಸ್ಯರಿಗೆ ಇದಕ್ಕೂ 12 ಗಂಟೆಗಳ ಮೊದಲು ಈ ಸಮ್ಮರ್ ಸೇಲ್‌ 2024ರ ಆಫರ್‌ಗಳು ಲಭ್ಯವಾಗುತ್ತವೆ.

ಹೆಚ್ಚು ಮಾರಾಟವಾಗುವ ಲ್ಯಾಪ್‌ಟಾಪ್ ಅನ್ನು ಪರಿಶೀಲಿಸಿ:

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಯಾವ ರೀತಿಯ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಸಾಮಾನ್ಯವಾಗಿ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಫ್ಯಾಷನ್, ಸೌಂದರ್ಯ, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನ ವರ್ಗಗಳಲ್ಲಿ ಅತ್ಯುತ್ತಮ ಡೀಲ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಅಡಿಗೆ ವಸ್ತುಗಳು, ಫ್ಯಾಶನ್ ಉಡುಪುಗಳು ಮತ್ತು ಹೊರಾಂಗಣ ಬಳಕೆಯ ಉತ್ಪನ್ನಗಳಂತಹ ಜನಪ್ರಿಯ ವಸ್ತುಗಳ ಮೇಲೆ ಗ್ರಾಹಕರು ರಿಯಾಯಿತಿಗಳನ್ನು ನಿರೀಕ್ಷಿಸಬಹುದು.

ಹೆಚ್ಚು ಮಾರಾಟವಾಗುವ ಟಿವಿಗಳನ್ನು ಪರಿಶೀಲಿಸಿ:

ಅಮೆಜಾನ್ ಪ್ರೈಮ್‌ ಸದಸ್ಯರಿಗೆ ವಿಶೇಷ ಡೀಲ್‌ ಅಥವಾ ಕೊಡುಗೆಗಳಿವೆಯೇ?

ಹೌದು. ಅಮೆಜಾನ್ ಪ್ರೈಮ್ ಸದಸ್ಯರು ಎಲ್ಲರಿಗೂ 12 ಗಂಟೆಗಳ ಮೊದಲೇ ಈ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024ರ ಆಫರ್ ಪಡೆಯುತ್ತಾರೆ. ಅಷ್ಟೇ ಅಲ್ಲ, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನ ಲಾಭವನ್ನು ಪಡೆಯಲು ಹೆಚ್ಚುವರಿ ರಿಯಾಯಿತಿಗಳು ಮತ್ತು ಡೀಲ್‌ಗಳೊಂದಿಗೆ ಅನೇಕ ಕೊಡುಗೆಗಳೂ ಇವೆ.

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ರಲ್ಲಿ ಯಾವ ಬ್ಯಾಂಕ್ ಆಫರ್‌ಗಳು ಲಭ್ಯ ಇವೆ?

ಐಸಿಐಸಿಐ ಬ್ಯಾಂಕ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರು ಬಹು ಇಎಂಐ ಆಯ್ಕೆಗಳೊಂದಿಗೆ 10 ಪ್ರತಿಶತ ತ್ವರಿತ ರಿಯಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ ತಮ್ಮ ಶಾಪರ್‌ಗಳಿಗೆ, ಮೊದಲ ಬಾರಿಗೆ ಖರೀದಿಸುವವರಿಗೆ 20 ಪ್ರತಿಶತ ಕ್ಯಾಶ್‌ಬ್ಯಾಕ್‌ನಂತಹ ಹೆಚ್ಚಿನ ಕೊಡುಗೆಗಳನ್ನು ಒದಗಿಸುತ್ತಿದೆ. ಗ್ರಾಹಕರ ಮೆಚ್ಚಿನ ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್‌ಗಳ ಮೇಲೆ ಕಡಿಮೆ ಬಜೆಟ್‌ನಲ್ಲಿ ಶಾಪಿಂಗ್ ಮಾಡಲು ಸಹಾಯ ಮಾಡುವ ಅದ್ಭುತ ವಿನಿಮಯ ಕೊಡುಗೆಗಳೂ ಇವೆ.

ಅಮೆಜಾನ್ ಸೇಲ್‌ನಲ್ಲಿ ಗಮನಿಸಬೇಕಾದ ಟಾಪ್ 3 ಗೃಹೋಪಯೋಗಿ ವಸ್ತುಗಳು

ರೆಫ್ರಿಜರೇಟರ್‌, ವಾಷಿಂಗ್ ಮೆಷಿನ್‌ ಮತ್ತು ವ್ಯಾಕ್ಯೂಮ್ ಕ್ಲೀನರ್‌ಗಳ ಮೇಲೆ ಅದ್ಭುತ ಡೀಲ್‌ಗಳು ಮತ್ತು ಭಾರಿ ರಿಯಾಯಿತಿಗಳು ಲಭ್ಯವಿರುತ್ತವೆ. ಹೀಗಾಗಿ, ಈ ಮೂರು ಗೃಹೋಪಯೋಗಿ ವಸ್ತುಗಳನ್ನು ಅಮೆಜಾನ್ ಸೇಲ್‌ನಲ್ಲಿ ಗಮನಿಸುವುದು ಬೆಸ್ಟ್‌.

ಹೆಚ್ಚು ಮಾರಾಟವಾಗುವ ರೆಫ್ರಿಜರೇಟರ್ ಅನ್ನು ಪರಿಶೀಲಿಸಿ:

ಹಕ್ಕು ನಿರಾಕರಣೆ: ಹಿಂದೂಸ್ತಾನ್ ಟೈಮ್ಸ್‌ ಕನ್ನಡದ ಮೂಲಕ , ಇತ್ತೀಚಿನ ಟ್ರೆಂಡ್‌ಗಳು ಮತ್ತು ಉತ್ಪನ್ನಗಳ ವಿವರಗಳೊಂದಿಗೆ ಹೊಸ ಮಾಹಿತಿಯನ್ನು ಓದುಗರು ಪಡೆದುಕೊಳ್ಳುವುದಕ್ಕೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಇದರಲ್ಲಿ ಹಿಂದೂಸ್ತಾನ್ ಟೈಮ್ಸ್ ಸಹಭಾಗಿತ್ವವನ್ನು ಹೊಂದಿರುವುದರಿಂದ ನೀವು ಖರೀದಿ ಮಾಡಿದಾಗ ಆದಾಯದ ಒಂದು ಭಾಗವನ್ನು ನಾವು ಪಡೆಯಬಹುದು. ಉತ್ಪನ್ನಗಳಿಗೆ ಸಂಬಂಧಿಸಿ ಗ್ರಾಹಕ ಸಂರಕ್ಷಣಾ ಕಾಯಿದೆ, 2019 ಸೇರಿ, ಆದರೆ ಅದಕ್ಕೆ ಸೀಮಿತವಾಗಿರದೆ, ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಮಾಡಲಾಗುವ ಯಾವುದೇ ಕ್ಲೈಮ್‌ಗೆ ನಾವು ಜವಾಬ್ದಾರರಾಗಿರುವುದಿಲ್ಲ. ಈ ಲೇಖನದಲ್ಲಿ ಪಟ್ಟಿ ಮಾಡಲಾದ ಉತ್ಪನ್ನಗಳು ಯಾವುದೇ ನಿರ್ದಿಷ್ಟ ಆದ್ಯತೆಯ ಕ್ರಮದಲ್ಲಿಲ್ಲ ಎಂಬುದನ್ನು ಗಮನಿಸಬೇಕು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

IPL_Entry_Point