ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Apple Wwdc 2023: ಆಪಲ್ ಪ್ರಿಯರಿಗೆ ರೋಮಾಂಚನ, ಹಲವು ಹೊಸ ಸಾಧನಗಳ ಆಗಮನ, ಇಲ್ಲಿದೆ ಗಮನ ಸೆಳೆದ 5 ಪ್ರಾಡಕ್ಟ್‌ಗಳ ವಿವರ

Apple WWDC 2023: ಆಪಲ್ ಪ್ರಿಯರಿಗೆ ರೋಮಾಂಚನ, ಹಲವು ಹೊಸ ಸಾಧನಗಳ ಆಗಮನ, ಇಲ್ಲಿದೆ ಗಮನ ಸೆಳೆದ 5 ಪ್ರಾಡಕ್ಟ್‌ಗಳ ವಿವರ

ಆ್ಯಪಲ್ ಕಂಪನಿಯ ವಿಶ್ವ ಡೆವಲಪರ್‌ ಸಮ್ಮೇಳನದ (Apple WWDC 2023) ಮೊದಲ ದಿನದ ಕಾರ್ಯಕ್ರಮ ಸಾಂಗವಾಗಿ ನಡೆದಿದ್ದು, ಹಲವು ಪ್ರಮುಖ ಉತ್ಪನ್ನಗಳ ಘೋಷಣೆಗೆ ಸಾಕ್ಷಿಯಾಯಿತು. ಮೊದಲ ದಿನ ಆ್ಯಪಲ್ ಘೋಷಿಸಿದ ಪ್ರಮುಖ ಉತ್ಪನ್ನಗಳಲ್ಲಿ ಅತ್ಯಂತ ಪ್ರಮುಖವೆನಿಸಿದ ಐದು ಅನೌನ್ಸ್‌ಮೆಂಟ್‌ಗಳ ವಿವರ ಇಲ್ಲಿದೆ.


Apple WWDC 2023: ಆ್ಯಪಲ್ ಪ್ರಿಯರಿಗೆ ರೋಮಾಂಚನ, ಹಲವು ಹೊಸ ಸಾಧನಗಳ  ಆಗಮನ, ಇಲ್ಲಿದೆ ಗಮನ ಸೆಳೆದ 5 ಪ್ರಾಡಕ್ಟ್‌ಗಳ ವಿವರ
Apple WWDC 2023: ಆ್ಯಪಲ್ ಪ್ರಿಯರಿಗೆ ರೋಮಾಂಚನ, ಹಲವು ಹೊಸ ಸಾಧನಗಳ ಆಗಮನ, ಇಲ್ಲಿದೆ ಗಮನ ಸೆಳೆದ 5 ಪ್ರಾಡಕ್ಟ್‌ಗಳ ವಿವರ (REUTERS)

ಜಗತ್ತಿನಾದ್ಯಂತ ಇರುವ ಆ್ಯಪಲ್ ಪ್ರಿಯರು ರೋಮಾಂಚನಗೊಂಡಿದ್ದಾರೆ. ಆ್ಯಪಲ್ ಕಂಪನಿಯ ವಿಶ್ವ ಡೆವಲಪರ್‌ ಸಮ್ಮೇಳನದಲ್ಲಿ ಹಲವು ಹೊಸ ಪ್ರಾಡಕ್ಟ್‌ಗಳನ್ನು ಘೋಷಿಸಲಾಗಿದೆ. ಬಹುನಿರೀಕ್ಷಿತ ಎಆರ್‌/ವಿಆರ್‌ ಹೆಡ್‌ಸೆಟ್‌ ವಿಷನ್‌ ಪ್ರೊ (Vision Pro) ಜನರಲ್ಲಿ ಹೊಸ ಕ್ರೇಜ್‌ ಹುಟ್ಟುಹಾಕಿದೆ. Worldwide Developer Conference 2023ನಲ್ಲಿ ಆ್ಯಪಲ್ ಘೋಷಿಸಿದ ಹಲವು ಪ್ರಾಡಕ್ಟ್‌ಗಳಲ್ಲಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಅತ್ಯಾಕರ್ಷಕವಾಗಿ ಕಂಡ ಕೆಲವು ಘೋಷಣೆಗಳನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

15 ಇಂಚಿನ ಮೆಕ್‌ಬುಕ್‌ ಏರ್‌ (15-inch MacBook Air)

ಆ್ಯಪಲ್ ಸಹಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರು ಮೊದಲ ಮೆಕ್‌ಬುಕ್‌ ಏರ್‌ ಪರಿಚಯಿಸಿದ ಹದಿನೈದು ವರ್ಷಗಳ ತರುವಾಯ ಮೆಕ್‌ಬುಕ್‌ ಹಲವು ಅಪ್‌ಡೇಟ್‌ಗಳನ್ನು ಕಂಡಿದೆ. ಇದೀಗ ಆ್ಯಪಲ್ ಕಂಪನಿಯು ಹದಿನೈದು ಇಂಚಿನ ಹಗುರ ಮೆಕ್‌ಬುಕ್‌ ಪರಿಚಯಿಸಿದೆ. ಹಳೆಯ ಮೆಕ್‌ಬುಕ್‌ನಂತೆಯೇ ಇದು ತೆಳ್ಳಗಿದೆ. ಆದರೆ, ಡಿಸ್‌ಪ್ಲೇ ದೊಡ್ಡದಾಗಿದೆ. ಈದರಲ್ಲಿ ಎಂ2 ಪ್ರೊಸೆಸ್‌ ಇದೆ. ಅತ್ಯುತ್ತಮ ಬ್ಯಾಟರಿ ಲೈಫ್‌ ಗ್ಯಾರಂಟಿ ಎನ್ನಲಾಗಿದೆ. ಬೇಸ್‌ ಆವೃತ್ತಿಯು 8 ಜಿಬಿ ರಾಮ್‌ ಮತ್ತು 256 ಜಿಗ್ಸ್‌ ಸ್ಟೋರೇಜ್‌ ಹೊಂದಿದೆ. ಮಿಡ್‌ನೈಟ್‌, ಸ್ಟಾರ್‌ಲೈಟ್‌, ಸಿಲ್ವರ್‌ ಮತ್ತು ಆಕಾಶ ಕಂದು ಬಣ್ಣಗಳಲ್ಲಿ ದೊರಕುವ ಈ ಮೆಕ್‌ಬುಕ್‌ ಆರಂಭಿಕ ದರ 1,34,900 ರೂಪಾಯಿ ಇದೆ. ಶೈಕ್ಷಣಿಕ ಡಿಸ್ಕೌಂಟ್‌ನಲ್ಲಿ ಖರೀದಿಸಿದರೆ 1,24,900 ರೂಪಾಯಿಗೆ ಲಭ್ಯ.

ಮೆಕ್‌ ಸ್ಟುಡಿಯೋ ಮತ್ತು ಮೆಕ್‌ ಪ್ರೊ (Mac Studio and Mac Pro)

ಆ್ಯಪಲ್ ಕಂಪನಿಯು ಎಂ2 ಅಲ್ಟ್ರಾ ಪ್ರೊಸೆಸರ್‌ ಪರಿಚಯಿಸಿದೆ. ಇದು ಮೆಕ್‌ ಸ್ಟುಡಿಯೋ ಮತ್ತು ಮೆಕ್‌ ಪ್ರೊಗೆ ಶಕ್ತಿ ತುಂಬಲಿದೆ. ಇವೆರಡು ಕಂಪನಿಯ ಅತಿವೇಗದ ಮತ್ತು ಶಕ್ತಿಶಾಲಿ ಕಂಪ್ಯೂಟರ್‌ಗಳಾಗಿವೆ. ಇವೆರಡೂ 192 ಜಿಬಿ RAM ಹೊಂದಿವೆ. ಇದು ನಿಜಕ್ಕೂ ಭಯಂಕರ. ಗ್ರಾಫಿಕ್‌ ವಿನ್ಯಾಸಕರಿಗೆ, ಡೆವಲಪರ್‌ಗಳಿಗೆ, 3ಡಿ ಕಲಾವಿದರು ಸೇರಿದಂತೆ ಸಾಕಷ್ಟು ಜನರಿಗೆ ಇದು ನೆರವಾಗಲಿದೆ. ಇಂಟೆಲ್‌ ಮೂಲದ 27 ಇಂಚಿನ ಐಮ್ಯಾಕ್‌ಗೆ ಹೋಲಿಸಿದರೆ ನೂತನ ಮೆಕ್‌ ಸ್ಟುಡಿಯೋ ಆರು ಪಟ್ಟು ಹೆಚ್ಚಿನ ವೇಗ ಹೊಂದಿರಲಿದೆ. ಮೆಕ್‌ ಸ್ಟುಡಿಯೋ ಆರಂಭಿಕ ದರ 2,09,900 ರೂಪಾಯಿ. ಮೆಕ್‌ ಪ್ರೊ ಆರಂಭಿಕ ದರ 7,79,900 ರೂಪಾಯಿ.

ಐಒಎಸ್‌ 17 ಮತ್ತು ಐಪಾಡ್‌ಒಎಸ್‌ 17 (iOS 17 and iPadOS 17)

ಐಒಎಸ್‌ 17 ಮತ್ತು ಐಪಾಡ್‌ಒಎಸ್‌ 17ನ ಭಾರೀ ಅಪ್‌ಡೇಟ್‌ ಇದು. ಇದು ಐಫೋನ್‌ಗೆ ಮಾತ್ರವಲ್ಲದೆ ಫೋನ್‌, ಮೆಸೆಜ್‌, ಆರ್‌ಡ್ರಾಪ್‌ಗೂ ಅನ್ವಯ. ಫೋನ್‌ ಆಪ್‌ಗೆ ಕಾಂಟ್ಯಾಕ್ಟ್‌ ಪೋಸ್ಟರ್‌ ಎಂಬ ಫೀಚರ್‌ ದೊರಕಿದೆ. ವಾಯ್ಸ್‌ ಮೈಲ್‌ನ ಟ್ರಾನ್ಸ್‌ಸ್ಕ್ರಿಪ್ಷನ್‌ ಸಾಧ್ಯವಾಗಿದೆ. ಮೆಸೆಜ್‌ ಆಪ್‌ನಲ್ಲಿ ಚೆಕ್‌ಇನ್‌ ಎಂಬ ಹೊಸ ಫೀಚರ್‌ ಬಂದಿದೆ. ನೀವು ನಿಗದಿತ ಸ್ಥಳವನ್ನು ಸುರಕ್ಷಿತವಾಗಿ ತಲುಪಿದಾಗ ಇದು ನಿಮ್ಮ ಕುಟುಂಬದ ನಂಬಿಕಸ್ಥ ಸದಸ್ಯರು ಅಥವಾ ಸ್ನೇಹಿತರಿಗೆ ನೋಟಿಫಿಕೇಷನ್‌ ನೀಡುತ್ತದೆ. ಎಲ್ಲಾದರೂ ನೀವು ಮೂವ್‌ ಆಗುತ್ತಿಲ್ಲ ಎಂದಾದರೆ ಈ ಸದಸ್ಯರಿಗೆ ನಿಮ್ಮ ಸಾಧನದ ಲೊಕೆಷನ್‌, ಬ್ಯಾಟರಿ ಲೆವೆಲ್‌ ಇತ್ಯಾದಿಗಳನ್ನು ತೋರಿಸುತ್ತದೆ. ಇಂತಹ ಹಲವು ಫೀಚರ್‌ಗಳು ನೂತನ ಅಪ್‌ಡೇಟ್‌ನಲ್ಲಿ ದೊರಕುತ್ತದೆ.

ವಾಚ್‌ಒಎಸ್‌ 10 (watchOS 10)

ಆ್ಯಪಲ್ ವಾಚ್‌ ಸೀರಿಸ್‌ 4ಗೆ watchOS 10 ಬೆಂಬಲ ದೊರಕಲಿದೆ. ವೆದರ್‌, ಸ್ಟಾಕ್‌, ಹೋಮ್‌, ಮ್ಯಾಮ್‌, ವರ್ಲ್‌ ಕ್ಲಾರ್ಕ್‌ ಇತ್ಯಾದಿ ಹಲವು ಆಪ್‌ಗಳ ಸೇರ್ಪಡೆಯಾಗಲಿದೆ. ಸೈಕ್ಲಿಸ್ಟ್‌ಗಳಿಗೆ ಹೆಚ್ಚಿನ ವಿವರ ನೀಡುವ ಕಾಡೆನ್ಸ್‌ ಸೆನ್ಸರ್‌ ಕೂಡ ವಾಚ್‌ಒಎಸ್‌ 10ನಲ್ಲಿರಲಿದೆ.

ಮಾಕ್‌ಒಎಸ್‌ ಸೊನೊಮಾ (macOS Sonoma)

ಆ್ಯಪಲ್ ಕಂಪ್ಯೂಟರ್‌ಗಳಿಗೆ ನೂತನ ಆವೃತ್ತಿಯ ಆಪರೇಟಿಂಗ್‌ ಸಿಸ್ಟಮ್‌ ದೊರಕುತ್ತಿದ್ದು, ಹೊಸ ಅನುಭವ ದೊರಕಲಿದೆ. ಡೆಸ್ಕ್‌ಟಾಪ್‌ನ ಬಲಭಾಗದಲ್ಲಿ ವಿಡ್ಜೆಟ್‌ಗಳನ್ನು ಬಲಬದಿಯಲ್ಲಿ ಜೋಡಿಸುವುದು, ಒಂದೇ ಕ್ಲಿಕ್‌ ಮೂಲಕ ಬಳಕೆ ಮಾಡುವುದು, ಪ್ರೆಸೆಂಟರ್‌ ಓವರ್‌ಲೇ, ವರ್ಕ್‌ ಮತ್ತು ಹೋಮ್‌ ಪ್ರೊಫೈಲ್‌ ನಡುವೆ ಸ್ವಿಚ್‌ ಸೇರಿದಂತೆ ಹಲವು ಹೊಸತುಗಳು ಈ ಅಪ್‌ಡೇಟ್‌ ಮೂಲಕ ದೊರಕಲಿದೆ.

ಆ್ಯಪಲ್ ವಿಷನ್‌ ಪ್ರೊ

ಇದು ಕಂಪನಿಯ ಭವಿಷ್ಯದ ಪ್ರಾಡಕ್ಟ್‌. ಈಗ ಟೆಸ್ಟ್‌ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ವರ್ಚ್ಯುಯಲ್‌ ರಿಯಾಲಿಟಿ ಬಯಸುವವರಿಗೆ ಈ ಕನ್ನಡಕದಂತಹ ವಿಷನ್‌ ಪ್ರೊ ಹೊಸ ಅನುಭವ ನೀಡಲಿದೆ. ಇದನ್ನು ಕಂಪನಿ ಆಧ್ಯಾತ್ಮ ನಡಿಗೆ ಎಂದಿದೆ. ಈ ಕನ್ನಡಕ ಧರಿಸಿ ನಡೆದಾಡಿದರೆ ಹೊಸ ಜಗತ್ತು ಕಾಣಲಿದೆ.

ಟಿ20 ವರ್ಲ್ಡ್‌ಕಪ್ 2024