BSNL Recharge Plan: 1 ವರ್ಷ ವ್ಯಾಲಿಡಿಟಿಗೆ ಬಿಎಸ್‌ಎಲ್‌ನಲ್ಲಿ ಅತಿ ಕಡಿಮೆ ರಿಚಾರ್ಜ್ ಪ್ಲಾನ್; ದಿನಕ್ಕೆ ಕೇವಲ 6 ರೂಪಾಯಿ ಖರ್ಚು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bsnl Recharge Plan: 1 ವರ್ಷ ವ್ಯಾಲಿಡಿಟಿಗೆ ಬಿಎಸ್‌ಎಲ್‌ನಲ್ಲಿ ಅತಿ ಕಡಿಮೆ ರಿಚಾರ್ಜ್ ಪ್ಲಾನ್; ದಿನಕ್ಕೆ ಕೇವಲ 6 ರೂಪಾಯಿ ಖರ್ಚು

BSNL Recharge Plan: 1 ವರ್ಷ ವ್ಯಾಲಿಡಿಟಿಗೆ ಬಿಎಸ್‌ಎಲ್‌ನಲ್ಲಿ ಅತಿ ಕಡಿಮೆ ರಿಚಾರ್ಜ್ ಪ್ಲಾನ್; ದಿನಕ್ಕೆ ಕೇವಲ 6 ರೂಪಾಯಿ ಖರ್ಚು

ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್‌ಗ ಬೆಲೆಯನ್ನು ಹೆಚ್ಚಿಸಿವೆ. ಇದರಿಂದ ಸಾಕಷ್ಟು ಮಂದಿ ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಆದರೆ ಈ ಸಾರ್ವಜನಿಕ ವಲಯದ ಸಂಸ್ಥೆಯಿಂದ ಒಂದು ಯೋಜನೆ ಉತ್ತಮವಾಗಿದೆ. ಅದರ ವಿವರಗಳನ್ನು ತಿಳಿಯೋಣ.

1 ವರ್ಷ ವ್ಯಾಲಿಡಿಟಿಗೆ ಬಿಎಸ್‌ಎಲ್‌ನಲ್ಲಿ ಅತಿ ಕಡಿಮೆ ರಿಚಾರ್ಜ್ ಪ್ಲಾನ್; ದಿನಕ್ಕೆ ಕೇವಲ 6 ರೂಪಾಯಿ ಖರ್ಚು
1 ವರ್ಷ ವ್ಯಾಲಿಡಿಟಿಗೆ ಬಿಎಸ್‌ಎಲ್‌ನಲ್ಲಿ ಅತಿ ಕಡಿಮೆ ರಿಚಾರ್ಜ್ ಪ್ಲಾನ್; ದಿನಕ್ಕೆ ಕೇವಲ 6 ರೂಪಾಯಿ ಖರ್ಚು

ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ (Airtel Recharge Plan), ಜಿಯೋ (Jio Recharge Plan) ಹಾಗೂ ವಿಐ (ವೊಡಾಫೋನ್ ಐಡಿಯಾ) (VI Recharge Plan) ತಮ್ಮ ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಡೇಟಾ ಪ್ಯಾಕ್‌ಗಳ ಬೆಲೆಯನ್ನು ಹೆಚ್ಚಿಸಿವೆ. ಜಿಯೋ ತನ್ನ ಪೋರ್ಟ್‌ಫೋಲಿಯೊದಿಂದ ಹಳೆಯ ಬೆಲೆಯಲ್ಲಿ ಲಭ್ಯವಿರುವ ಅನೇಕ ಯೋಜನೆಗಳನ್ನು ತೆಗೆದುಹಾಕಿದೆ. ಈಗ ಬಳಕೆದಾರರಿಗೆ ಹೊಸ ಪ್ಲಾನ್‌ನಲ್ಲಿ ರಿಚಾರ್ಜ್ ಮಾಡುವುದನ್ನ ಬಿಟ್ಟರೆ ಬೇರೆ ಆಯ್ಕೆಗಳೇ ಇಲ್ಲ. ಈ ಮೂರು ಕಂಪನಿಗಳ ಯೋಜನೆಗಳು ಈಗ ದುಬಾರಿಯಾಗಿವೆ. ಇಂತಹ ಸಂದರ್ಭಗಳಲ್ಲಿ ಅನೇಕ ಗ್ರಾಹಕರು ಬಿಎಸ್‌ಎನ್‌ಎಲ್ (BSNL) ಕಡೆಗೆ ಮುಖಮಾಡುತ್ತಿದ್ದಾರೆ. ನೀವು ದೀರ್ಘಾವಧಿಯ ಉತ್ತಮ ರಿಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ ಬಿಎಸ್‌ಎನ್‌ಎಲ್ (BSNL Recharge Plan) ನಿಮಗಾಗಿ ಉತ್ತಮ ಯೋಜನೆಯನ್ನು ನೀಡುತ್ತದೆ. ಬಿಎಸ್‌ಎನ್‌ಎಲ್ 395 ದಿನಗಳ ವಿಶೇಷ ಮಾನ್ಯತೆಯೊಂದಿಗೆ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದೆ. ಈ ಯೋಜನೆಯ ಬಗ್ಗೆ ಎಲ್ಲಾ ವಿವರಗಳನ್ನು ಇಲ್ಲಿ ನೀಡಿದ್ದೇವೆ.

ಬಿಎಸ್‌ಎನ್‌ಎಲ್ 2,399 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್

ಬಿಎಸ್‌ಎನ್‌ಎಲ್‌ನ ಈ ರಿಚಾರ್ಜ್ ಪ್ಲಾನ್ 395 ದಿನಗಳ ಅನನ್ಯ ಮಾನ್ಯತೆಯೊಂದಿಗೆ ಬರುತ್ತದೆ. ಈ ವ್ಯಾಲಿಡಿಟಿ ಬೇರೆ ಯಾವುದೇ ಕಂಪನಿಯ ಯೋಜನೆಯಲ್ಲಿ ಲಭ್ಯವಿಲ್ಲ. ಈ ಪ್ಲಾನ್ ಬೆಲೆ ಕೇವಲ 2399 ರೂಪಾಯಿ. ಈ ಪ್ಲಾನ್‌ನಲ್ಲಿ ದೈನಂದಿನ ವೆಚ್ಚ ಸುಮಾರು 6 ರೂಪಾಯಿ ಆಗುತ್ತೆ. ಈ ಯೋಜನೆಯಲ್ಲಿ ಬಳಕೆದಾರರು ಎಲ್ಲಾ ನೆಟ್‌ವರ್ಕ್‌ಗಳೊಂದಿಗೆ ಅನಿಯಮಿತ ಕರೆಗಳನ್ನು (ಸ್ಥಳೀಯ + ಎಸ್‌ಟಿಡಿ + ರೋಮಿಂಗ್) ಪಡೆಯಬಹುದು. ಅಷ್ಟೇ ಅಲ್ಲದೆ, ಗ್ರಾಹಕರು ಈ ಪ್ಯಾಕ್‌ನಲ್ಲಿ ದಿನಕ್ಕೆ 2 ಜಿಬಿ ಡೇಟಾವನ್ನು ಪಡೆಯುತ್ತಾರೆ. ಅಂದರೆ ಒಟ್ಟು ವ್ಯಾಲಿಡಿಟಿಯಲ್ಲಿ 790 ಜಿಬಿ ಡೇಟಾ ಲಭ್ಯವಿದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರವೂ ನೀವು 40 kbps ವೇಗದಲ್ಲಿ ಇಂಟರ್ನೆಟ್ ಬಳಸುವುದನ್ನು ಮುಂದುವರಿಸಬಹುದು.

ಈ ಯೋಜನೆಯು ಜಿಂಗ್ ಮ್ಯೂಸಿಕ್, ಬಿಎಸ್ಎನ್ಎಲ್ ಟ್ಯೂನ್ಸ್, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಗೇಮೆನ್ ಆಸ್ಟ್ರೋಟೆಲ್ ನಂತಹ ಪ್ರಯೋಜನಗಳನ್ನು 395 ದಿನಗಳವರೆಗೆ ನೀಡುತ್ತದೆ. ಬಿಎಸ್‌ಎನ್‌ಎಲ್‌ನ 365 ದಿನಗಳ ಮಾನ್ಯತೆಯೊಂದಿಗೆ ಕೆಲವು ಇತರ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಅವರ ಬಗ್ಗೆಯೂ ವಿವರವಾಗಿ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಬಿಎಸ್‌ಎನ್‌ಎಲ್ 1,999 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್

ಈ ರಿಚಾರ್ಜ್ ಪ್ಲಾನ್ 365 ದಿನಗಳ ಮಾನ್ಯತೆಯಾಗಿರುತ್ತದ. ಯೋಜನೆಯ ದೈನಂದಿನ ವೆಚ್ಚ ಸುಮಾರು 5.47 ರೂಪಾಯಿ. ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 ಎಸ್‌ಎಂಎಸ್ ಹಾಗೂ 600 ಬಿಬಿ ಡೇಟಾವನ್ನು ನೀಡಲಾಗುತ್ತದೆ. ಈ ಪ್ಲಾನ್‌ನಲ್ಲಿ ಜಿಂಗ್ ಮ್ಯೂಸಿಕ್, ಬಿಎಸ್‌ಎನ್‌ಎಲ್ ಟ್ಯೂನ್ಸ್, ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಗೇಮೆನ್ ಆಸ್ಟ್ರೋಟೆಲ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.

ಬಿಎಸ್‌ಎನ್‌ಎಲ್ 2,999 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್

ಈ ಯೋಜನೆಯ ಮಾನ್ಯತೆ 365 ದಿನಗಳು. ಇದರಲ್ಲಿ ದೈನಂದಿನ ವೆಚ್ಚ ಸುಮಾರು 8.21 ರೂ. ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 ಎಸ್‌ಎಂಎಸ್‌, ದಿನಕ್ಕೆ 3 ಜಿಬಿ ಡೇಟಾ. ದೈನಂದಿನ ಡೇಟಾ ಮಿತಿ ಮುಗಿದ ನಂತರ, ನೀವು 40 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು.

ಏರ್‌ಟೆಲ್ 1,999 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್

ಈ ಯೋಜನೆಯ ಮಾನ್ಯತೆ 365 ದಿನಗಳು. ಅನಿಯಮಿತ ಕರೆ, ಒಂದು ಬಾರಿ 24 GB ಡೇಟಾ, ಪ್ರತಿದಿನ 100 ಎಸ್‌ಎಂಎಸ್‌. ಈ ಯೋಜನೆಯು ಅನಿಯಮಿತ 5G ಡೇಟಾ ಮತ್ತು ಒಟಿಟಿ ಪ್ರಯೋಜನಗಳನ್ನು ಒಳಗೊಂಡಿಲ್ಲ.

ಏರ್‌ಟೆಲ್ 3,999 ರೂಪಾಯಿ ಪ್ರಿಪೇಯ್ಡ್ ಪ್ಲಾನ್

ಈ ಯೋಜನೆಯ 365 ದಿನಗಳವರೆಗೆ ಮಾನ್ಯತೆಯಾಗಿದೆ. ದಿನಕ್ಕೆ 2.5 GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್. ಈ ಯೋಜನೆಯ ಬಳಕೆದಾರರು ಅನಿಯಮಿತ 5G ಡೇಟಾವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೊಬೈಲ್‌ಗಳ ಚಂದಾದಾರಿಕೆಯು ಒಂದು ವರ್ಷಕ್ಕೆ ಲಭ್ಯವಿದೆ.

ಏರ್‌ಟೆಲ್ 3,599 ರೂಪಾಯಿಗಳ ಪ್ರಿಪೇಯ್ಡ್ ಯೋಜನೆ

ಈ ಯೋಜನೆಯ ಮಾನ್ಯತೆ 365 ದಿನಗಳು. ದಿನಕ್ಕೆ 2GB ಡೇಟಾ, ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಕರೆಗಳು ಇರುತ್ತವೆ. ಈ ಯೋಜನೆಯ ಬಳಕೆದಾರರು ಅನಿಯಮಿತ 5G ಡೇಟಾವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಇದರಲ್ಲಿ ಯಾವುದೇ ಒಟಿಟಿ ಪ್ರಯೋಜನಗಳು ಇರುವುದಿಲ್ಲ.

ಜಿಯೋ 365 ದಿನಗಳ ಪ್ರಿಪೇಯ್ಡ್ ಯೋಜನೆ

ಈ ಯೋಜನೆಯು 365 ದಿನಗಳವರೆಗೆ ಇರುತ್ತದೆ. 3,599 ರೂಪಾಯಿಗಳೊಂದಿಗೆ ರೀಚಾರ್ಜ್ ಮಾಡಿ. ಈ ಯೋಜನೆಯು 2.5 GB ಡೇಟಾವನ್ನು (ಒಟ್ಟು 912.5 GB), ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯ ಬಳಕೆದಾರರು ಅನಿಯಮಿತ 5G ಡೇಟಾವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ರಿಚಾರ್ಜ್ ಪ್ಲಾನ್‌ನಲ್ಲಿ ನೀವು ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾಗೆ ಪ್ರವೇಶ ಪಡೆಯಬಹುದು. ಈ ಎಲ್ಲಾ ಪ್ಲಾನ್‌ಗಳಿಗೆ ಹೋಲಿಸಿದರೆ ಬಿಎಸ್‌ಎನ್‌ಎಲ್ ಬೆಸ್ಟ್ ಎಂಬುದು ಕೆಲವರ ವಾದವಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.