DeepSeek: ಭಾರತದಲ್ಲಿ ಡೀಪ್‌ಸೀಕ್‌ ಬಳಕೆ ಸುರಕ್ಷಿತವೇ? ಚೀನಾದ ಎಐ ಕುರಿತು ಸರಕಾರದ ನಿಲುವೇನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Deepseek: ಭಾರತದಲ್ಲಿ ಡೀಪ್‌ಸೀಕ್‌ ಬಳಕೆ ಸುರಕ್ಷಿತವೇ? ಚೀನಾದ ಎಐ ಕುರಿತು ಸರಕಾರದ ನಿಲುವೇನು

DeepSeek: ಭಾರತದಲ್ಲಿ ಡೀಪ್‌ಸೀಕ್‌ ಬಳಕೆ ಸುರಕ್ಷಿತವೇ? ಚೀನಾದ ಎಐ ಕುರಿತು ಸರಕಾರದ ನಿಲುವೇನು

ಕಳೆದ ಕೆಲವು ದಿನಗಳಿಂದ ಡೀಪ್‌ಸೀಕ್‌ ಎಂಬ ಚೀನಾದ ಎಐ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಇದನ್ನು ಭಾರತದಲ್ಲಿ ಬಳಸಬಹುದೇ? ಇದು ಸುರಕ್ಷಿತವೇ? ಎಂಬೆಲ್ಲ ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಇರಬಹುದು. ಇದೀಗ ವರದಿಗಳ ಪ್ರಕಾರ ಇದು ಭಾರತದಲ್ಲಿ ಬಳಸಲು ಸುರಕ್ಷಿತವಾಗಿದೆಯಂತೆ.

DeepSeek: ಭಾರತದಲ್ಲಿ ಡೀಪ್‌ಸೀಕ್‌ ಬಳಕೆ ಸುರಕ್ಷಿತವೇ?
DeepSeek: ಭಾರತದಲ್ಲಿ ಡೀಪ್‌ಸೀಕ್‌ ಬಳಕೆ ಸುರಕ್ಷಿತವೇ? (REUTERS)

ಕಳೆದ ಕೆಲವು ದಿನಗಳಿಂದ ಡೀಪ್‌ಸೀಕ್‌ ಎಂಬ ಚೀನಾದ ಎಐ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಡೀಪ್‌ಸೀಕ್‌ ಎಐ ಡೌನ್‌ಲೋಡ್‌ ಮಾಡುತ್ತಿದ್ದಾರೆ. ಭಾರತೀಯರೂ ಈ ಎಐ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಟೆಸ್ಟ್‌ ಮಾಡುತ್ತಿದ್ದಾರೆ. ಚಾಟ್‌ಜಿಪಿಟಿ, ಜೆಮಿನಿ ಎಐಗಳಿಗೆ ಹೋಲಿಸಿದರೆ ಡೀಪ್‌ಸೀಕ್‌ ಸಾಕಷ್ಟು ಉತ್ತಮವಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಡೀಪ್‌ಸೀಕ್‌ ಎಐನಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುತ್ತದೆ. ಯಾಂತ್ರಿಕ ಭಾಷೆಯಂತೆ ಅಲ್ಲದೆ ಮನುಷ್ಯರಂತೆ ಹೋಗುತ್ತೆ, ಬರುತ್ತೆ ಎಂಬ ಸಹಜ ಶೈಲಿಯಲ್ಲಿ ಉತ್ತರಿಸಲು ಪ್ರಯತ್ನಿಸುತ್ತದೆ. ಇದೇ ಸಮಯದಲ್ಲಿ ಕೆಲವರು ಡೀಪ್‌ಸೀಕ್‌ ಬಳಕೆ ಸುರಕ್ಷಿತವೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ಸರಕಾರದ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದನ್ನು ಮಾಡಿದೆ. "ಭಾರತದಲ್ಲಿ ಚೀನಾದ ಡೀಪ್‌ಸೀಕ್‌ ಎಐ ಬಳಸಲು ಸುರಕ್ಷಿತವಾಗಿದೆ" ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

"ಇದು ಭಾರತದಲ್ಲಿ ಬಳಸಲು ಸುರಕ್ಷಿತವಾಗಿದೆ. ಚಾಟ್‌ಬಾಟ್‌ ಬಳಸಿ ಭಾರತೀಯರ ಮಾಹಿತಿಯನ್ನು ಇದು ಚೀನಾಕ್ಕೆ ಕಳುಹಿಸದು" ಎಂದು ಸರಕಾರವೊಂದರ ಮೂಲವನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಡೀಪ್‌ಸೀಕ್‌ ಎನ್ನುವುದು ಚೀನಾದ ಸ್ಟಾರ್ಟ್‌ಅಪ್‌ವೊಂದರ ಅಪ್ಲಿಕೇಷನ್‌. ಜಾಗತಿಕ ಟೆಕ್‌ ಕಂಪನಿಗಳು ಕಡಿಮೆ ದರದಲ್ಲಿ ಎಐ ಮಾಡೆಲ್‌ ರೂಪಿಸಲು ಇದು ನೆರವು ನೀಡಬಹುದು. ಇದರ ಕಾರ್ಯ ಗೂಗಲ್‌ನ ಜೆಮಿನಿ ಮತ್ತು ಓಪನ್‌ಎಐನಂತೆಯೇ ಇದೆ.

ಜನವರಿ 30ರಂದು ಡೀಪ್‌ಸೀಕ್‌ನ ಹೊಸ ವರ್ಷನ್‌ ಬಿಡುಗಡೆ ಮಾಡಲಾಗಿದೆ. ಇದು ಎಐ ತಜ್ಞರ ಗಮನ ಸೆಳೆದಿದೆ. ಡೀಪ್‌ಸೀಕ್‌ ಎಐಯು ಓಪನ್‌ಎಐ ಆಧರಿತವಾಗಿದೆ ಎಂದು ಹೇಳುವವರಿಗೆ ಉತ್ತರ ನೀಡುವಂತೆ ಈ ಎಐ ವರ್ಷನ್‌ ಇದೆ ಎನ್ನಲಾಗುತ್ತಿದೆ.

ಡೀಪ್‌ಸೀಕ್‌ ಎಐ ಆಗಮನವು ಜಗತ್ತಿನ ಪ್ರಮುಖ ಟೆಕ್‌ ಕಂಪನಿಗಳಿಗೆ ಆಘಾತವನ್ನು ಉಂಟು ಮಾಡಿದೆ. ವಿಶೇಷವಾಗಿ ಅಮೆರಿಕದ ಷೇರು ಮಾರುಕಟ್ಟೆಯನ್ನು ಒಂದಿಷ್ಟು ತಲ್ಲಣಗೊಳಿಸಿದೆ. ಸೋಮವಾರ ಒಂದೇ ದಿನ ಎನ್‌ವಿಡಿಯಾವು 600 ಶತಕೋಟಿ ಡಾಲರ್‌ ಮಾರುಕಟ್ಟೆ ಪಾಲು ಕಳೆದುಕೊಂಡಿತತು. ಡೀಪ್‌ಸೀಕ್‌ ಬಿಡುಗಡೆಯು ಎಚ್ಚರಿಕೆಯ ಕರೆಗಂಟೆ ಎಂದು ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಕೆಲವು ವರದಿಗಳ ಪ್ರಕಾರ ಡೀಪ್‌ಸೀಕ್‌ ಎಐಯು ಓಪನ್‌ಎಐನ ಒ1 ಮಾಡೆಲ್‌ನಷ್ಟೇ ಶಕ್ತಿಶಾಲಿಯಾಗಿದೆ. ಓಪನ್‌ಎಐಯು ಕಳೆದ ವರ್ಷ ಬಿಡುಗಡೆಯಾಗಿತ್ತು. ಗಣಿತದ ಲೆಕ್ಕಾಚಾರ, ಕೋಡಿಂಗ್‌ ಇತ್ಯಾದಿ ಕಾರ್ಯಗಳನ್ನು ಓಪನ್‌ಎಐ ಮಾಡುತ್ತಿತ್ತು ಓಪನ್‌ಎಐನ ಒ1ನಂತೆ ಡೀಪ್‌ಸೀಕ್‌ನ ಆರ್‌1 ಮಾಡೆಲ್‌ ರೀಸನಿಂಗ್‌ ಮಾಡೆಲ್‌ ಆಗಿದೆ. ಅಂದರೆ ಯಾವುದಾದರೂ ಸಮಸ್ಯೆ ಅಥವಾ ಐಡಿಯಾದ ವಿಚಾರಗಳನ್ನು ಕೇಳಿದಾಗ ಮನುಷ್ಯರಂತೆ ವಿಶ್ಲೇಷಣಾತ್ಮಕವಾಗಿ ಯೋಚಿಸಿ ಉತ್ತರಿಸುತ್ತದೆ. ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಡೀಪ್‌ಸೀಕ್‌ ಕಡಿಮೆ ಪ್ರಮಾಣದಲ್ಲಿ ಮೆಮೊರಿ ಬಳಸುತ್ತದೆ. ವಿಶೇಷವೆಂದರೆ ಡೀಪ್‌ಸೀಕ್‌ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸುವಾಗ ಜಾಣತನ ಪ್ರದರ್ಶಿಸುತ್ತದೆ. ವಿಶೇಷವಾಗಿ ರಾಜಕೀಯ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿದಾಗ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.