ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟ ಜನವರಿ 14ರಿಂದ ಆರಂಭ, ಆ್ಯಪಲ್‌ ಐಫೋನ್‌ 16ಗೆ ಭರ್ಜರಿ ಡಿಸ್ಕೌಂಟ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟ ಜನವರಿ 14ರಿಂದ ಆರಂಭ, ಆ್ಯಪಲ್‌ ಐಫೋನ್‌ 16ಗೆ ಭರ್ಜರಿ ಡಿಸ್ಕೌಂಟ್‌

ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟ ಜನವರಿ 14ರಿಂದ ಆರಂಭ, ಆ್ಯಪಲ್‌ ಐಫೋನ್‌ 16ಗೆ ಭರ್ಜರಿ ಡಿಸ್ಕೌಂಟ್‌

Flipkart Monumental Sale: ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಸೇಲ್‌ ಇದೇ ಜನವರಿ 14ರಿಂದ ಆರಂಭವಾಗಲಿದೆ. ಫ್ಲಿಪ್‌ಕಾರ್ಟ್‌ ಪ್ಲಸ್‌, ವಿಐಪಿ ಬಳಕೆದಾರರು ಜನವರಿ 13ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಸೇಲ್‌ನಲ್ಲಿ ಖರೀದಿ ಆರಂಭಿಸಬಹುದು. ಆ್ಯಪಲ್‌ ಐಫೋನ್‌ಗೆ ಈ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಇರಲಿದೆ ಎಂದು ವರದಿಗಳು ತಿಳಿಸಿವೆ.

ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟ ಜನವರಿ 14ರಿಂದ ಆರಂಭ
ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟ ಜನವರಿ 14ರಿಂದ ಆರಂಭ

Flipkart Monumental Sale: ರಿಪಬ್ಲಿಕ್‌ ಡೇ ಸೇಲ್‌ಗೆ ಫ್ಲಿಪ್‌ಕಾರ್ಟ್‌ ಕಂಪನಿಯು ಮಾನ್ಯುಮೆಂಟಲ್‌ ಸೇಲ್‌ ಎಂದು ಕರೆಯುತ್ತದೆ. ಭರ್ಜರಿ ದರ ಕಡಿತದ ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಸೇಲ್‌ ಇದೇ ಜನವರಿ 14ರಿಂದ ಆರಂಭವಾಗಲಿದೆ. ಫ್ಲಿಪ್‌ಕಾರ್ಟ್‌ ಪ್ಲಸ್‌, ವಿಐಪಿ ಬಳಕೆದಾರರು ಜನವರಿ 13ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟದಲ್ಲಿ ಖರೀದಿ ಆರಂಭಿಸಬಹುದು. ಈ ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಟ್ಯಾಬ್ಲೆಟ್‌ಗಳು, ಗೃಹಬಳಕೆಯ ವಸ್ತುಗಳು ಸೇರಿದಂತೆ ಹಲವು ಪ್ರಾಡಕ್ಟ್‌ಗಳಿಗೆ ಈ ಸಮಯದಲ್ಲಿ ಭರ್ಜರಿ ಡಿಸ್ಕೌಂಟ್‌ ಇರಲಿದೆ. ರಶ್‌ ಅವರ್ಸ್‌, ಟಿಕ್‌ಟಾಕ್‌ ಡೀಲ್ಸ್‌, ರೆವಲ್ಯೂಷನರಿ ಡೀಲ್ಸ್‌ ಮುಂತಾದ ವಿಶೇಷ ವಿಭಾಗಗಳ ಮೂಲಕ ಫ್ಲಿಪ್‌ಕಾರ್ಟ್‌ ಈ ರಿಪಬ್ಲಿಕ್‌ ಡೇ ಸೇಲ್‌ ನಡೆಸಲಿದೆ. ಅಮೆಜಾನ್‌ ಕೂಡ ಇದೇ ಸಮಯದಲ್ಲಿ "ಅಮೆಜಾನ್‌ ರಿಪಬ್ಲಿಕ್‌ ಡೇ ಸೇಲ್‌ 2025"ಕ್ಕೆ ಚಾಲನೆ ನೀಡುತ್ತಿದೆ.

ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟ ಆರಂಭ ದಿನಾಂಕ: ಜನವರಿ 14

ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟ ಮುಕ್ತಾಯ ದಿನಾಂಕ: ಜನವರಿ 19

ಫ್ಲಿಪ್‌ಕಾರ್ಟ್‌ ಪ್ಲಸ್‌, ವಿಐಪಿ ಬಳಕೆದಾರರು ಜನವರಿ 13ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟದಲ್ಲಿ ಖರೀದಿ ಆರಂಭಿಸಬಹುದು. ನೀವು ಒಂದು ವರ್ಷದಲ್ಲಿ ನಾಲ್ಕು ಆರ್ಡರ್‌ ಪೂರ್ಣಗೊಳಿಸಿದರೆ ನಿಮ್ಮ ಅಕೌಂಟ್‌ ಫ್ಲಿಪ್‌ಕಾರ್ಟ್‌ ಪ್ಲಸ್‌ ಆಗಿ ಬದಲಾಗುತ್ತದೆ.

ಬ್ಯಾಂಕ್‌ ಆಫರ್‌ಗಳು, ಡಿಸ್ಕೌಂಟ್‌ಗಳು

  • ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ಗಳು ಅಥವಾ ಕ್ರೆಡಿಟ್‌ ಕಾರ್ಡ್‌ ಇಎಂಐ ಆಯ್ಕೆ ಮೂಲಕ ಖರೀದಿಸಿದರೆ ಶೇಕಡ 10 ಡಿಸ್ಕೌಂಟ್‌ ದೊರಕುತ್ತದೆ.
  • ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಶೇಕಡ 5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್‌ ಮತ್ತು 1000 ರೂಪಾಯಿಯ ಗಿಫ್ಟ್‌ ವೋಚರ್‌ ದೊರಕುತ್ತದೆ.
  • ಪ್ರಮುಖ ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ಗಳು ಮತ್ತು ಡೆಬಿಟ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ ನೋ ಕಾಸ್ಟ್‌ ಇಎಂಐ ಪಾವತಿ ಸೌಕರ್ಯ ದೊರಕುತ್ತದೆ.
  • ಪ್ರತಿದಿನ ಸಂಜೆ 6 ಗಂಟೆಗೆ ರೆವಲ್ಯೂಷನರಿ ಡೀಲ್ಸ್‌ ನಡೆಯುತ್ತದೆ. ಆ ಸಮಯದಲ್ಲಿ ನೀವು ಕೆಲವು ಐಟಂಗಳನ್ನು 76 ರೂಪಾಯಿಗೆ ಖರೀದಿಸಲು ಅವಕಾಶವಿರುತ್ತದೆ.
  • ರಶ್‌ ಅವರ್‌ನಲ್ಲಿ ಖರೀದಿಸಿದರೆ ಭರ್ಜರಿ ದರ ವಿನಾಯಿತಿ ದೊರಕುತ್ತದೆ.

ಐಫೋನ್‌ 16 ಸೀರಿಸ್‌ ಆಫರ್‌ಗಳು

ವರದಿಗಳ ಪ್ರಕಾರ ಆ್ಯಪಲ್‌ ಕಂಪನಿಯ ಇತ್ತೀಚಿನ ಐಫೋನ್‌ 16 ಸರಣಿಗೆ ಫ್ಲಿಪ್‌ಕಾರ್ಟ್‌ ಮಾನ್ಯುಮೆಂಟಲ್‌ ಮಾರಾಟದಲ್ಲಿ ದರ ಕಡಿತ ಇರಲಿದೆ. ಈ ಐಫೋನ್‌ ದರವು 79,900 ರೂಗೆ ಬದಲು 63,999 ರೂಪಾಯಿಗೆ ಮಾರಾಟವಾಗಲಿದೆ. ಇದೇ ಸಮಯದಲ್ಲಿ ಐಫೋನ್‌ 16 ಪ್ಲಸ್‌ ದರವು 89,900 ರೂಪಾಯಿ ಬದಲು 73,999 ರೂ ಇರಲಿದೆ ಎಂದು ವರದಿಗಳು ತಿಳಿಸಿವೆ.

ಇದೇ ಸಮಯದಲ್ಲಿ ಐಫೋನ್‌ 16 ಪ್ರೊ 1,02,900 ರೂಪಾಯಿಗೆ ಮಾರಾಟವಾಗಲಿದೆಯಂತೆ. ಈ ಸೇಲ್‌ಗೆ ಮೊದಲು ಇದರ ದರ 1,19,900 ರೂಪಾಯಿ ಇದೆ. ಇದೇ ಸಮಯದಲ್ಲಿ ಐಫೋನ್‌ 16 ಪ್ರೊ ಮ್ಯಾಕ್ಸ್‌ ದರವು 1,44,900 ರೂಗೆ ಬದಲು 1,27,900 ರೂಗೆ ಮಾರಾಟವಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.