Instagram Down: ಇನ್‌ಸ್ಟಾಗ್ರಾಂ ಸರ್ವರ್ ಡೌನ್; ಪದೇ ಪದೇ ಲಾಗಾಫ್, ಫೋಟೊ ಅಪ್‌ಲೋಡ್ ಆಗದೇ ಬಳಕೆದಾರರ ಪರದಾಟ
ಇತ್ತೀಚಗಷ್ಟೇ ಮೆಟಾ ಒಡೆತನದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಸರ್ವರ್ ಡೌನ್ ಆಗಿ ಸಾವಿರಾರು ಬಳಕೆದಾರರು ಸಮಸ್ಯೆ ಎದುರಿಸಿದ್ದರು. ಇದೀಗ ಮತ್ತೆ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿದೆ. ಫೋಟೊ ಆಪ್‌ಲೋಡ್ ಆಗದೇ, ಪದೇ ಪದೇ ಲಾಗಾಫ್ ಆಗುವ ಮೂಲಕ ತೊಂದರೆ ನೀಡುತ್ತಿದೆ ಇನ್‌ಸ್ಟಾ.

ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿದೆ. ಪ್ರಪಂಚದಾದ್ಯಂತ ಸಾವಿರಾರು ಗ್ರಾಹಕರು ಸರ್ವರ್ ಡೌನ್ ಕಾರಣದಿಂದ ಸಮಸ್ಯೆ ಎದುರಿಸಿದ್ದಾರೆ. ಫೋಟೊ ಆಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಒಂದಿಷ್ಟು ಮಂದಿ ಹೇಳಿದರೆ, ಕೆಲವರು ಪದೇ ಪದೇ ಇನ್‌ಸ್ಟಾಗ್ರಾಂ ಲಾಗೌಟ್ ಆಗುತ್ತಿದೆ ಎಂದು ದೂರುತ್ತಿದ್ದಾರೆ. ಔಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್ ಡಿಟೆಕ್ಟರ್ ಡಾಮ್ ಕಾಮ್ ಈ ವಿಷಯವನ್ನು ಬಹಿರಂಗ ಪಡಿಸಿದೆ. ಇದರ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ 5000ಕ್ಕೂ ಅಧಿಕಬಳಕೆದಾರರು ಫೋಟೊ ಅಪ್‌ಲೋಡ್ ಮಾಡಲು ಹಾಗೂ ಇನ್‌ಸ್ಟಾಗ್ರಾಂ ಲಾಗೌಟ್ ಸಮಸ್ಯೆ ಎದುರಿಸಿದ್ದಾರೆ.
ಡೌನ್‌ಡಿಟೆಕ್ಟರ್ ಪ್ರಕಾರ ಪ್ರಪಂಚದಾದ್ಯಂತ ಸುಮಾರು ಶೇ 70 ರಷ್ಟು ಮಂದಿ ಲಾಗಿನ್ ಸಮಸ್ಯೆ ಎದುರಿಸಿದ್ದಾರೆ. ಶೇ 11 ರಷ್ಟು ಮಂದಿ ನಿರಂತರ ಸರ್ವರ್ ಡೌನ್ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅಂದರೆ ಮಾರ್ಚ್ 5 ರಂದು ಪ್ರಪಂಚದಾದ್ಯಂತ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಸಮಸ್ಯೆ ಎದುರಾಗಿತ್ತು. ಅಂದು ಕೂಡ ಬಹುತೇಕ ಗ್ರಾಹಕರು ಲಾಗಿನ್ ಸಮಸ್ಯೆ ಎದುರಿಸಿದ್ದರು. ಕೆಲವರು ಇನ್‌ಸ್ಟಾಗ್ರಾಂ ರಿಫ್ರೆಶ್ ಆಗುತ್ತಿಲ್ಲ ಎಂದು ದೂರಿದ್ದರು.