ಕನ್ನಡ ಸುದ್ದಿ  /  Nation And-world  /  Technology News Instagram, Facebook Down Globally Users Urged To Log In Again Change Password Rst

ಪ್ರಪಂಚದಾದ್ಯಂತ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌; ರೀಲ್ಸ್‌, ಸ್ಟೋರಿ ನೋಡಲು ಸಾಧ್ಯವಾಗದೆ ಜನರ ಪರದಾಟ

ಭಾರತದ ಸೇರಿದಂತೆ ಪ್ರಪಂಚದಾದ್ಯಂತ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸರ್ವರ್‌ ಡೌನ್‌ ಆಗಿದೆ. ರೀಲ್ಸ್‌, ಸ್ಟೋರಿ ಹಾಗೂ ಫೇಸ್‌ಬುಕ್‌ ಸ್ಟೋರಿಗಳನ್ನು ನೋಡಲು ಸಾಧ್ಯವಾಗದೆ ಜನರು ಪರದಾಡುತ್ತಿದ್ದಾರೆ. ಕೆಲವರು ಇಂಟರ್‌ನೆಟ್‌ ಸಮಸ್ಯೆ ಎಂದುಕೊಂಡು ನೆಟ್‌ ಆಫ್‌-ಆನ್‌ ಮಾಡುತ್ತಿದ್ದಾರೆ. ಕೆಲವರಿಗೆ ಪಾಸ್‌ವರ್ಡ್‌ ಬದಲಿಸುವ ಆಯ್ಕೆ ಕೂಡ ಕೇಳಿದೆ.

ಪ್ರಪಂಚದಾದ್ಯಂತ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌
ಪ್ರಪಂಚದಾದ್ಯಂತ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌

ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿದೆ. ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ರೀಲ್ಸ್‌ ಹಾಗೂ ಸ್ಟೋರಿಗಳನ್ನು ನೋಡಲು ಸಾಧ್ಯವಾಗಲೇ ಜನರು ಪರದಾಡುತ್ತಿದ್ದಾರೆ. ಇನ್‌ಸ್ಟಾಗ್ರಾಂ ರಿಫ್ರೆಶ್‌ ಮಾಡಲು ಆಗುತ್ತಿಲ್ಲ. ಫೇಸ್‌ಬುಕ್‌ ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಈ ಎರಡೂ ಫ್ಲ್ಯಾಟ್‌ಫಾರಂನಲ್ಲಿ ಲಾಗಿನ್‌ ಸಮಸ್ಯೆ ಎದುರಿಸುತ್ತಿದ್ದಾರೆ ಗ್ರಾಹಕರು. ಕೆಲವರಿಗೆ ಪಾಸ್‌ವರ್ಡ್‌ ಬದಲಿಸುವ ಆಯ್ಕೆ ಕೂಡ ಬರುತ್ತಿದೆ. ಇದಾಗಿ ಕೆಲ ಹೊತ್ತಿನಲ್ಲಿ ಯೂಟ್ಯೂಬ್‌ ಗ್ರಾಹಕರು ಕೂಡ ಸಮಸ್ಯೆ ಎದುರಿಸಿದ್ದಾರೆ.

ʼಪುನಃ ಲಾಗಿನ್‌ ಆಗಿ, ಸೆಷನ್‌ ಎಕ್ಸ್‌ಪೈಯರ್ಡ್‌, ರಿಫ್ರೆಶ್‌ ಮಾಡಲು ಆಗುತ್ತಿಲ್ಲʼ ಎನ್ನುವ ಸಂದೇಶಗಳನ್ನು ಗ್ರಾಹಕರು ಸ್ವೀಕರಿಸುತ್ತಿದ್ದಾರೆ. ಇದು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಎರಡೂ ಕಡೆ ಕಾಣಿಸಿದೆ.

ಔಟೇಜ್‌ ಟ್ರ್ಯಾಕಿಂಗ್‌ ವೆಬ್‌ಸೈಟ್‌ ಆಗಿರುವ Downdetector.com ನೂರಾರು ಗ್ರಾಹಕರು ಮೆಟಾ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಡೌನ್ ಆಗಿರುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಫೇಸ್‌ಬುಕ್‌ನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಈ ಸಮಸ್ಯೆ ಎದುರಿಸಿದ್ದರೆ, ಇನ್‌ಸ್ಟಾಗ್ರಾಂನಲ್ಲಿ 2ಲಕ್ಷಕ್ಕೂ ಅಧಿಕ ಮಂದಿ ಸಮಸ್ಯೆ ಎದುರಿಸಿದ್ದಾರೆ. 

ಹಲವಾರು ಗ್ರಾಹಕರು ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ಮಾಡಿದ್ದಾರೆ. ತಾವು ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ. ʼಮೆಟಾ ಸರ್ವರ್‌ ಡೌನ್‌ ಆಗಿದೆಯೇ ಅಥವಾ ನನ್ನ ಅಕೌಂಟ್‌ ಅನ್ನು ಹ್ಯಾಕ್‌ ಮಾಡಲಾಗಿದೆಯೇʼ ಎಂದು ಎಕ್ಸ್‌ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.  ನನ್ನ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಎರಡೂ ಲೋಡ್‌ ಆಗುತ್ತಿಲ್ಲ. ಸೆಶನ್‌ ಲಾಗ್‌ಔಟ್‌ ಎಂದು ಬರುತ್ತಿದೆʼ ಎಂದು ಬಳಕೆದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ. ʼಒಂದು ಕ್ಷಣ ನಾನು ನನ್ನ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆ ಎಂದು ಗಾಬರಿ ಪಟ್ಟೆʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. 

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point