ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆ ಮುಗಿದ ಕೂಡಲೇ ಏರ್‌ಟೆಲ್ ಜಿಯೋ ಟ್ಯಾರಿಫ್ ಹೆಚ್ಚಳ ನಿರೀಕ್ಷೆ; ಎಷ್ಟು ಏರಿಕೆ, ಯಾರು ಮೊದಲು ದರ ಏರಿಸುತ್ತಾರೆ

ಲೋಕಸಭಾ ಚುನಾವಣೆ ಮುಗಿದ ಕೂಡಲೇ ಏರ್‌ಟೆಲ್ ಜಿಯೋ ಟ್ಯಾರಿಫ್ ಹೆಚ್ಚಳ ನಿರೀಕ್ಷೆ; ಎಷ್ಟು ಏರಿಕೆ, ಯಾರು ಮೊದಲು ದರ ಏರಿಸುತ್ತಾರೆ

ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ದರ ಏರಿಕೆಯ ಶಾಕ್ ನೀಡಲು ಟೆಲಿಕಾಂ ಕಂಪನಿಗಳು ಸಜ್ಜಾಗುತ್ತಿರುವ ಸುದ್ದಿ ಬಹಿರಂಗವಾಗಿದೆ. ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ದರ ಏರಿಕೆ ಮಾಡಲಿದ್ದು, ಉಳಿದವು ಬೆನ್ನಿಗೆ ದರ ಏರಿಸಬಹುದು ಎಂದು ಆಂಟಿಕ್ ಸ್ಟಾಕ್ ಬ್ರೋಕಿಂಗ್ ವರದಿ ಹೇಳಿದೆ.

ಲೋಕಸಭಾ ಚುನಾವಣೆ ಮುಗಿದ ಬೆನ್ನಿಗೆ ಏರ್‌ಟೆಲ್ ಜಿಯೋ ಟ್ಯಾರಿಫ್ ಹೆಚ್ಚಳ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಮುಗಿದ ಬೆನ್ನಿಗೆ ಏರ್‌ಟೆಲ್ ಜಿಯೋ ಟ್ಯಾರಿಫ್ ಹೆಚ್ಚಳ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್ ಮತ್ತು ಜಿಯೋ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಮುಗಿಯುತ್ತಿರುವಂತೆಯೇ ತಮ್ಮ ಸೇವೆಗಳ ದರ ಏರಿಸುವ ಚಿಂತನೆ ನಡೆಸಿವೆ ಎಂದು ಆಂಟಿಕ್ ಸ್ಟಾಕ್ ಬ್ರೋಕಿಂಗ್ ಪರಿಣತರು ವಿಶ್ಲೇಷಣಾ ವರದಿಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಏಪ್ರಿಲ್ 19 ರಿಂದ ಜೂನ್ 1 ರ ತನಕ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಘೋಷಣೆಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಈ ಸಾರ್ವತ್ರಿಕ ಚುನಾವಣೆ ಮುಗಿಯುತ್ತಿದ್ದಂತೆ ಟೆಲಿಕಾಂ ಸೇವೆಗಳ ಬೆಲೆಗಳಲ್ಲಿ ಶೇಕಡ 15 ರಿಂದ ಶೇಕಡ 17ರಷ್ಟು ಏರಿಕೆಯಾಗಬಹುದು. ಭಾರ್ತಿ ಏರ್‌ಟೆಲ್‌ ಟೆಲಿಕಾಂ ಸೇವಾ ದರವನ್ನು ಮೊದಲು ಏರಿಸಬಹುದು. ಯಾಕೆಂದರೆ 2027ನೇ ಹಣಕಾಸು ವರ್ಷ ಅಂತ್ಯಕ್ಕೆ ಬಳಕೆದಾರನ ಮೂಲಕ ಸಂಗ್ರಹಿಸುವ ಸರಾಸರಿ ಆದಾಯ 208 ರೂಪಾಯಿಯಿಂದ 286ಕ್ಕೆ ತಲುಪಬೇಕು.

ಟೆಲಿಕಾಂ ಸೇವಾ ದರ ಏರಿಕೆ ಯಾಕೆ

2ಜಿ ಉನ್ನತೀಕರಣ, ಉದ್ಯಮ ಬೆಳವಣಿಗೆ, ಫೈಬರ್ ಟು ಹೋಮ್‌ ನೆಟ್‌ವರ್ಕ್‌, 5 ಜಿ ಸೇವೆ ಆರಂಭಿಸಿದ ಬಳಿಕ ಬಂಡವಾಳ ವೆಚ್ಚದಲ್ಲಿ ಆಗಿರುವ ಕುಸಿತಗಳನ್ನು ಮೀರಿ ಮುಂದಿನ ಮೂರು ವರ್ಷಗಳಲ್ಲಿ ಆದಾಯವನ್ನು ಎರಡು ಪಟ್ಟು ಹೆಚ್ಚಿಸಬೇಕಾದ ಅನಿವಾರ್ಯತೆಯಲ್ಲಿದೆ ಭಾರ್ತಿ ಏರ್‌ಟೆಲ್‌. ಹೀಗಾಗಿ ಸೇವಾ ದರಗಳ ಏರಿಕೆಯನ್ನು ನಿರೀಕ್ಷಿಸಬಹುದು ಎಂದು ವಿಶ್ಲೇಷಣಾ ವರದಿ ವಿವರಿಸಿದೆ.

ಭಾರ್ತಿ ಏರ್‌ಟೆಲ್‌ನ ಬಂಡವಾಳ ವೆಚ್ಚವು 2024- 26ರ ಅವಧಿಯಲ್ಲಿ 75,000 ಕೋಟಿ ರೂಪಾಯಿ ಅಂದಾಜಿಸಲಾಗುತ್ತಿದೆ. 5 ಜಿ ಸೇವೆ ಪರಿಚಯಿಸಿರುವುದರಿಂದ ಟೆಲಿಕಾಂ ಸೆಕ್ಟರ್‌ನಲ್ಲಿ ಒಂದು ಧನಾತ್ಮಕ ಬದಲಾವಣೆ ಆಗುವುದಾದರೂ, ಬಂಡವಾಳ ವೆಚ್ಚದಲ್ಲಿ ಭಾರಿ ಕಡಿತ ಉಂಟಾಗಲಿದೆ ಎಂದು ವರದಿ ಹೇಳಿದೆ.

ಭಾರ್ತಿ ಏರ್‌ಟೆಲ್‌ಗೆ ಹೆಚ್ಚು ಸವಾಲು

ಟೆಲಿಕಾಂ ವಲಯದ ಸವಾಲುಗಳನ್ನು ಇತರೆ ಕಂಪನಿಗಳಂತೆಯೇ ಭಾರ್ತಿ ಏರ್‌ಟೆಲ್ ಕೂಡ ಎದುರಿಸುತ್ತಿದೆ. ಆದಾಗ್ಯೂ, 5ಜಿ ಸೇವೆ ಪರಿಚಯಿಸುವ ಮೂಲಕ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾದ ಹಾದಿಯನ್ನು ಏರ್‌ಟೆಲ್ ತುಳಿದಿರುವುದು, ಸ್ಪರ್ಧೆಯಲ್ಲಿನ ಅದರ ಹಿಡಿತವನ್ನು ಹೆಚ್ಚಿಸಿದೆ. ಇದರಿಂದಾಗಿ ಭಾರ್ತಿ ಏರ್‌ಟೆಲ್‌ನ ಚಂದಾದಾರ ಸಂಖ್ಯೆ ಅಥವಾ ಬೆಳವಣಿಗೆ ಹೆಚ್ಚಾಗಲಿದೆ ಎಂಬ ನಂಬಿಕೆ ಅದರಲ್ಲಿ ಬಲವಾಗಿದೆ. ಈಗ ಮಾಡುತ್ತಿರುವ ಮೌಲ್ಯಮಾಪನವು ಉದಯೋನ್ಮುಖವಾಗಿರುವ ಸಕಾರಾತ್ಮಕ ಮ್ಯಾಕ್ರೋ ಟೆಲಿಕಾಂ ವಲಯವನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು ಕೂಡ ಅಷ್ಟೇ ನಿಜ ಎಂದು ಆಂಟಿಕ್ ಸ್ಟಾಕ್ ಬ್ರೋಕಿಂಗ್ ವರದಿ ಹೇಳಿದೆ.

ಕಳೆದ 5.5 ವರ್ಷಗಳ ಅವಧಿಯಲ್ಲಿ ವೊಡಾಫೋನ್ ಐಡಿಯಾ, ಬಿಎಸ್‌ಎನ್‌ಎಲ್‌ ಕಂಪನಿಗಳ ವೆಚ್ಚ ಏರಿಕೆ ಒಂದೆಡೆ ಗೋಚರಿಸಿದರೆ, ಇನ್ನೊಂದೆಡೆ, ಜಿಯೋ ಮತ್ತು ಏರ್‌ಟೆಲ್‌ಗಳ ಮಾರುಕಟ್ಟೆ ವಿಸ್ತರಣೆ ಢಾಳಾಗಿ ಗೋಚರಿಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಜಿಯೋ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರ ಪಾಲು ಶೇ 21.6 ರಿಂದ 39.7ಕ್ಕೆ ಏರಿಕೆಯಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ಓದಬಹುದಾದ ಇನ್ನಷ್ಟು ಸ್ಟೋರಿಗಳು

1) ನೀರಿನ ಸಮಸ್ಯೆ ನಿವಾರಿಸಲು ಪಣ; ಬೆಂಗಳೂರು ಪೂರ್ವ ಭಾಗದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಲಮಂಡಳಿ ತೀರ್ಮಾನ - ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

2) ಹಿರಿಯ ನಾಗರಿಕರಿಗಾಗಿ ಮನೆಯಿಂದ ಮತದಾನ ಎಷ್ಟು ದಿನ ನಡೆಯುತ್ತೆ? ನಿಮ್ಮ ಮನೆಗೆ ಬರುತ್ತೆ ಚುನಾವಣಾ ತಂಡ - ವರದಿ ಇಲ್ಲಿದೆ

3) ಕ್ರಿಕೆಟ್‌ ಪ್ರಿಯರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್; ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ದಿನ ರಾತ್ರಿ 11.30 ವರೆಗೆ ಮೆಟ್ರೊ ಸಂಚಾರ- ಪೂರ್ಣ ವಿವರ.

IPL_Entry_Point