ರಿಲಯೆನ್ಸ್ ಜಿಯೋ ಡೌನ್: ನೆಟ್‌ವರ್ಕ್, ಇಂಟರ್‌ನೆಟ್ ಇಲ್ಲದೆ ಪರದಾಟ; ಸೋಷಿಯಲ್ ಮೀಡಿಯಾದಲ್ಲಿ ಜಿಯೋ ಮೀಮ್ಸ್ ಟ್ರೆಂಡಿಂಗ್
ದೇಶಾದ್ಯಂತ ರಿಲಯೆನ್ಸ್ ಜಿಯೋ ಬಳಕೆದಾರರು ಇಂದು ಜಿಯೋ ನೆಟ್‌ವರ್ಕ್ ಔಟೇಜ್ ತೊಂದರೆಯಿಂದ ಪರಿತಪಿಸಿದ್ದಾರೆ. ಜಿಯೋ ನೆಟ್‌ವರ್ಕ್ ಡೌನ್ ಆದ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜಿಯೋ ಮೀಮ್ಸ್‌ಗಳು ಟ್ರೆಂಡಿಂಗ್ ಆಗುತ್ತಿವೆ.
ಬೆಂಗಳೂರು: ದೇಶಾದ್ಯಂತ ರಿಲಯೆನ್ಸ್ ಜಿಯೋ ಬಳಕೆದಾರರು ಇಂದು ನೆಟ್‌ವರ್ಕ್ ಔಟೇಜ್ ತೊಂದರೆಯಿಂದ ಪರಿತಪಿಸಿದ್ದಾರೆ. ಸೆಪ್ಟೆಂಬರ್ 17ರ ಮಧ್ಯಾಹ್ನದ ವೇಳೆ ಸಾಕಷ್ಟು ಜನರು ಜಿಯೋ ಸಿಮ್‌ನಲ್ಲಿ ಯಾರಿಗಾದರೂ ಕಾಲ್ ಮಾಡಿದ್ರೆ "ಕರೆ ಕಡಿತ" ತೊಂದರೆಯಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೂರಿದ್ದಾರೆ. ಇದೇ ಸಮಯದಲ್ಲಿ ಜಿಯೋ ಇಂಟರ್‌ನೆಟ್ ತೊಂದರೆಯಾಗಿದೆ ಎಂದು ಸಾಕಷ್ಟು ಜನರು ಮಾಹಿತಿ ನೀಡಿದ್ದಾರೆ. ಜಿಯೋಫೈಬರ್‌ನಲ್ಲೂ ತೊಂದರೆಯುಂಟಾಗಿದೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ.
ನೆಟ್‌ವರ್ಕ್ ಔಟೇಜ್ ಟ್ರ್ಯಾಕಿಂಗ್ ಮಾಡುವ ಡೌನ್‌ಡಿಟೆಕ್ಟರ್ ವರದಿ ಪ್ರಕಾರ ದೇಶದ ಸಾಕಷ್ಟು ಕಡೆ ಜಿಯೋ ಡೌನ್ ಆಗಿದೆ. ಇಂದು ಮಧ್ಯಾಹ್ನದ ವೇಳೆಗೆ ಜಿಯೋ ನೆಟ್‌ವರ್ಕ್‌ನಲ್ಲಿ ದೊಡ್ಡಮಟ್ಟದ ಸಮಸ್ಯೆಯಾಗಿರುವುದನ್ನು ಗುರುತಿಸಿದೆ. ಈ ಗ್ರಾಫ್‌ನಲ್ಲಿ ಶೇಕಡ 67ರಷ್ಟು ಜನರು ನೋ ಸಿಗ್ನಲ್ ಎಂದು ವರದಿ ಮಾಡಿದೆ. ಶೇಕಡ 19ರಷ್ಟು ಜನರು ಮೊಬೈಲ್ ಇಂಟರ್‌ನೆಟ್ ಬರುತ್ತಿಲ್ಲ ಎಂದಿದ್ದಾರೆ. ಶೇಕಡ 14ರಷ್ಟು ಜನರು ಜಿಯೋಫೈಬರ್ ತೊಂದರೆಯಿದೆ ಎಂದು ಮಾಹಿತಿ ದಾಖಲಿಸಿದ್ದಾರೆ.
ಎಕ್ಸ್ (ಟ್ವಿಟ್ಟರ್)ನಲ್ಲೂ ಸಾವಿರಾರು ಜನರು ಜಿಯೋ ಡೌನ್ ಎಂದು ಪೋಸ್ಟ್ ಮಾಡಿದ್ದಾರೆ. ಇದೇ ಸಮಯದಲ್ಲಿ ಜಿಯೋ ಬಳಕೆದಾರರ ಪರಿಸ್ಥಿತಿ ಏನಾಗಿದೆ ಎಂದು ಮೀಮ್ಸ್‌ಗಳು ಹರಿದಾಡುತ್ತಿವೆ.
ಇದೇ ಸಮಯದಲ್ಲಿ ಜಿಯೋ ಡೇಟಾ ಸೆಂಟರ್‌ಗೆ ಫೈರ್‌ಗೆ ಬೆಂಕಿ ಬಿದ್ದಿದೆ ಎಂದು ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ.
ದೇಶದಲ್ಲೀಗ ದೊಡ್ಡ ಸಂಖ್ಯೆಯಲ್ಲಿ ಜಿಯೋ ಬಳಕೆದಾರರು ಇದ್ದು, ಇಂಟರ್‌ನೆಟ್ ವ್ಯತ್ಯಯದಿಂದ ತೊಂದರೆಗೀಡಾಗಿದ್ದಾರೆ. ಒಂದಿಷ್ಟು ಹೊತ್ತು ಸೋಷಿಯಲ್ ಮೀಡಿಯಾ, ವಾಟ್ಸಪ್ ವರ್ಕ್ ಆಗದೆ ಇದ್ದರೂ ಗಲಿಬಿಲಿಗೆ ಒಳಗಾಗುತ್ತಾರೆ. ಇದೇ ಸಮಯದಲ್ಲಿ ಜಿಯೋ ಹೊರತುಪಡಿಸಿ ಬೇರೆ ನೆಟ್‌ವರ್ಕ್ ಬಳಸುವವರು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಹಂಚಿಕೊಳ್ಳುತ್ತಿದ್ದಾರೆ.
ಇಂಟರ್‌ನೆಟ್ ಡೌನ್ ಸಮಯದಲ್ಲಿ ಕೆಲವರ ಮೀಮ್ಸ್ ಪೋಸ್ಟ್‌ಗಳು ನಗು ತರಿಸುತ್ತಿದೆ.
ರಿಲಯೆನ್ಸ್ ಕಂಪನಿಯು ಈ ಬಾರಿ ದೀಪಾವಳಿ ಹಬ್ಬದ ವೇಳೆಗೆ ತನ್ನ ಗ್ರಾಃಕರಿಗೆ 100 ಜಿಬಿ ಎಐ ಕ್ಲೌಡ್ ಸ್ಟೋರೇಜ್ ಉಚಿತವಾಗಿ ನೀಡಲು ಉದ್ದೇಶಿಸಿದೆ. ಈ ಕುರಿತ ವರದಿ ಇಲ್ಲಿದೆ.