ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್; 395 ರೀಚಾರ್ಜ್‌ಗೆ 56 ದಿನಗಳ ಮಾನ್ಯತೆ, ಪ್ರಯೋಜನ ಹೀಗಿವೆ
ಟೆಲಿಕಾಂ ಸಂಸ್ಥೆ ಏರ್‌ಟೆಲ್, ಜೂನ್ ತಿಂಗಳಲ್ಲಿ ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದೆ. 395 ರೀಚಾರ್ಜ್ ಮಾಡಿದರೆ ಹಲವು ಪ್ರಯೋಜನಗಳು ಗ್ರಾಹಕರಿಗೆ ಸಿಗುತ್ತದೆ. ಈ ರೀಚಾರ್ಜ್ ಪ್ಲಾನ್ ವಿವರಗಳು ಹೀಗಿವೆ.
ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾದ ಏರ್‌ಟೆಲ್, ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. 395 ರೂಪಾಯಿ ರೀಚಾರ್ಜ್‌ನೊಂದಿಗೆ ಈ ಪ್ಲಾನ್ ಸಕ್ರಿಯಗೊಳಿಸಬಹುದು. ಏರ್‌ಟೆಲ್ ಕಂಪನಿಯ ಪ್ರಮುಖ ಸ್ಪರ್ಧಿ ರಿಲಯನ್ಸ್ ಜಿಯೋನ ಅಸ್ತಿತ್ವದಲ್ಲಿರುವ ಪ್ಲಾನ್‌ಗೆ ಏರ್‌ಟೆಲ್ ತನ್ನ ಬಳಕೆದಾರರಿಗೆ ಅದೇ ಬೆಲೆಯಲ್ಲಿ ಪರ್ಯಾಯವನ್ನು ರೀಚಾರ್ಜ್ ಆಯ್ಕೆ ನೀಡಿದೆ. ಹಾಗಿದ್ದರೂ, ಈ ಎರಡು ಪ್ಯಾಕ್‌ಗಳಲ್ಲಿ ಕೆಲವೊಂದು ವ್ಯತ್ಯಾಸಗಳಿವೆ.
ಜಿಯೋಗೆ ಸೆಡ್ಡು ಹೊಡೆಯಲು ಏರ್‌ಟೆಲ್ ಕೂಡಾ ಕಸರತ್ತು ನಡೆಸುತ್ತದೆ. ಹೀಗಾಗಿ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿರುತ್ತದೆ. ಹಾಗಿದ್ದರೆ, ಏರ್‌ಟೆಲ್ ಪರಿಚಯಿಸಿರುವ 395 ರೀಚಾರ್ಜ್ ಪ್ಲಾನ್ ಹೇಗಿದೆ ಎಂಬುದನ್ನು ನೋಡೋಣ.
ಬೆಲೆ : 395 ರೂಪಾಯಿ
ಮಾನ್ಯತೆ : 56 ದಿನ
ಪ್ರಯೋಜನಗಳು
- ಅನಿಯಮಿತ ಧ್ವನಿ ಕರೆ
- ಡಾಟಾ: 6GB ಡೇಟಾ
- 56 ದಿನಗಳವರೆಗೆ 600 ಎಸ್‌ಎಂಎಸ್ ಉಚಿತ.
- ಒಂದು ವೇಳೆ ಉಚಿತ ಎಸ್‌ಎಂಎಸ್‌ಗಳನ್ನು ಬಳಸಿದರೆ, ಬಳಕೆದಾರರಿಗೆ ಸ್ಥಳೀಯ ಎಸ್‌ಎಂಎಸ್‌ಗೆ ರೂ 1 ಮತ್ತು ಎಸ್‌ಟಿಡಿ ಎಸ್‌ಎಂಎಸ್‌ಗೆ ರೂ 1.5ರಂದು ಶುಲ್ಕ ವಿಧಿಸಲಾಗುತ್ತದೆ.
- ಅಪೊಲೊ 24|7 ಸರ್ಕಲ್, ವಿಂಕ್ ಮ್ಯೂಸಿಕ್ ಮತ್ತು ಉಚಿತ ಹೆಲೋಟ್ಯೂನ್ ಸಬ್ಸ್ಕ್ರಿಪ್ಷನ್.
- ಬಳಕೆದಾರರು ನಿಯಮಿತ ಡಾಟಾ ಬಳಕೆ ಮೀರಿದರೆ ಮತ್ತು ಬೇರೆ ಯಾವುದೇ ಅನಿಯಮಿತ 5G ಡೇಟಾವನ್ನು ಪ್ಯಾಕ್ ಇಲ್ಲದಿದ್ದರೆ ಹೆಚ್ಚುವರಿ ಇಂಟರ್ನೆಟ್ ಬಳಕೆಗಾಗಿ ಡೇಟಾ ಟಾಪ್-ಅಪ್ ರೀಚಾರ್ಜ್ ಅಗತ್ಯವಿರುತ್ತದೆ.
ಇದನ್ನೂ ಓದಿ | ಆಧಾರ್ ಕಾರ್ಡ್ ಅಪ್ಡೇಟ್‌ಗೆ ಗಡುವು; ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವ ಸರಳ ಹಂತ ಇಲ್ಲಿದೆ
ಏರ್‌ಟೆಲ್ vs ಜಿಯೋ ಹೋಲಿಕೆ
ಏರ್‌ಟೆಲ್ ಜೊತೆಗೆ ಜಿಯೋ ಕೂಡಾ ಅದೇ ಬೆಲೆಯಲ್ಲಿ ಪ್ರಿಪೇಯ್ಡ್ ಯೋಜನೆ ಕೊಡುತ್ತಿದೆ. ಆದರೆ, ಏರ್‌ಟೆಲ್‌ಗೆ ಹೋಲಿಸಿದರೆ ಜಿಯೋ ಕೊಡುಗೆಯು 84 ದಿನಗಳ ದೀರ್ಘಾವಧಿಯ ಪ್ರಯೋಜನ ಸಿಗುತ್ತದೆ. ಆದರೆ, ಏರ್‌ಟೆಲ್ ಕೇವಲ 56 ದಿನಗಳ ಪ್ರಯೋಜನ ಮಾತ್ರ ಕೊಡುತ್ತಿದೆ. ಅತ್ತ ಜಿಯೋ ದಿನಕ್ಕೆ 100 ಎಸ್‌ಎಂಎಸ್ ಉಚಿತವಾಗಿ ಕೊಡುತ್ತಿದೆ. ಅಲ್ಲದೆ ಜಿಯೋದಲ್ಲಿ ಡಾಟಾ ಯೋಜನೆಯು ಅನಿಯಮಿತ 5G ಡೇಟಾದೊಂದಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಎಲ್ಲಾ ಹೋಲಿಕೆ ನೋಡಿದರೆ, ಹೊಸ ರೀಚಾರ್ಜ್ ಪ್ರಿಪೇಯ್ಡ್ ಯೋಜನೆಯು ಹೆಚ್ಚು ಮೌಲ್ಯಯುತವಾಗಿದೆ.
ಏರ್‌ಟೆಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಜಿಯೋ vs ಏರ್‌ಟೆಲ್: ಅನಿಯಮಿತ ಕರೆ, ಇಂಟರ್ನೆಟ್ ಜೊತೆಗೆ ಒಟಿಟಿ ಚಂದಾದಾರಿಕೆ; ಬೆಸ್ಟ್ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಯಾವುದು?