ಈ ಜನಪ್ರಿಯ ರೆಡ್ಮಿ 5ಜಿ ಸ್ಮಾರ್ಟ್‌ಫೋನ್‌ ಖರೀದಿಗೆ ಭರ್ಜರಿ ಡಿಸ್ಕೌಂಟ್‌... ಹೊಸ ವರ್ಷಕ್ಕೆ ನೀವು ಪ್ಲ್ಯಾನ್‌ ಮಾಡಬಹುದು!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಈ ಜನಪ್ರಿಯ ರೆಡ್ಮಿ 5ಜಿ ಸ್ಮಾರ್ಟ್‌ಫೋನ್‌ ಖರೀದಿಗೆ ಭರ್ಜರಿ ಡಿಸ್ಕೌಂಟ್‌... ಹೊಸ ವರ್ಷಕ್ಕೆ ನೀವು ಪ್ಲ್ಯಾನ್‌ ಮಾಡಬಹುದು!

ಈ ಜನಪ್ರಿಯ ರೆಡ್ಮಿ 5ಜಿ ಸ್ಮಾರ್ಟ್‌ಫೋನ್‌ ಖರೀದಿಗೆ ಭರ್ಜರಿ ಡಿಸ್ಕೌಂಟ್‌... ಹೊಸ ವರ್ಷಕ್ಕೆ ನೀವು ಪ್ಲ್ಯಾನ್‌ ಮಾಡಬಹುದು!

Redmi Note 13 Pro 5G Discount: ಈ ಹೊಸ ವರ್ಷದಲ್ಲಿ ನೀವು ಹೊಸ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ನಿಮಗಾಗಿ ಅದ್ಭುತವಾದ ಆಫರ್ ಕಾದಿದೆ. ರೆಡ್ಮಿ ನೋಟ್‌ 13 ಪ್ರೊ 5ಜಿ ಫೋನ್‌ ಖರೀದಿಗೆ ಉತ್ತಮ ರಿಯಾಯಿತಿ ನೀಡಲಾಗುತ್ತಿದೆ.

ರೆಡ್ಮಿ ನೋಟ್‌ 13 ಪ್ರೊ 5ಜಿ ಸ್ಮಾರ್ಟ್‌ಫೋನ್‌
ರೆಡ್ಮಿ ನೋಟ್‌ 13 ಪ್ರೊ 5ಜಿ ಸ್ಮಾರ್ಟ್‌ಫೋನ್‌ (Xiaomi)

ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ವೆಬ್‌ಸೈಟ್ ಮೊಬೈಲ್‌ ಖರೀದಿದಾರರಿಗೆ ಕೊಡುಗೆಗಳನ್ನು ನೀಡುವುದನ್ನು ಮುಂದುವರೆಸಿದೆ. ಹೊಸ ವರ್ಷದ ಸಂದರ್ಭದಲ್ಲಿ ಕೆಲವು ಮೊಬೈಲ್‌ಗಳಿಗೆ ಉತ್ತಮ ಡಿಸ್ಕೌಂಟ್‌ ಇದೆ. ರೆಡ್ಮಿ ನೋಟ್‌ 13 ಪ್ರೊ 5ಜಿ ಅವುಗಳಲ್ಲಿ ಒಂದು. ಶೇಕಡ 25ರಷ್ಟು ರಿಯಾಯಿತಿಯಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ. ಈ ಮೊಬೈಲ್‌ 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಆಯ್ಕೆ ಹೊಂದಿದೆ. ಇದರ ದರ 21,499 ರೂಪಾಯಿ ಇದೆ. ಇದರ ಜತೆಗೆ ಗ್ರಾಹಕರು ಬ್ಯಾಂಕ್‌ ಕೊಡುಗೆಗಳು, ಎಕ್ಸ್‌ಚೇಂಜ್‌ ಆಫರ್‌ ಮತ್ತು ಇತರೆ ಕೊಡುಗೆಗಳ ಮೂಲಕ ಹೆಚ್ಚು ಲಾಭ ಪಡೆಯಬಹುದು.

ರೆಡ್ಮಿ ನೋಟ್‌ 13 ಪ್ರೊ 5ಜಿ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 7ಎಸ್‌ ಜೆನ್‌ 2 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. 5100 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಬೆಂಬಲವೂ ಇದೆ. ಇದು 1080×2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್‌ ಹೊಂದಿದೆ. 6.67-ಇಂಚಿನ ಫುಲ್‌ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 120 ಎಚ್‌ಝಡ್‌ ರಿಫ್ರೆಶ್‌ ದರವನ್ನು ಬೆಂಬಲಿಸುತ್ತದೆ. 1000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. 1920 ಹಟ್ಸ್‌ ಹೈ-ಫ್ರೀಕ್ವೆನ್ಸಿ ಪಿಡಬ್ಲ್ಯುಎಂ ಡಿಮ್ಮಿಂಗ್ ಆಯ್ಕೆಯೂ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 13 ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ, 6 ಜಿಬಿ ರಾಮ್‌ ಜತೆಗೆ 128 ಜಿಬಿ ಮತ್ತು 256 ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಆಯ್ಕೆಯಲ್ಲಿಯೂ ಲಭ್ಯವಿದೆ. ಇವುಗಳ ದರ, ಡಿಸ್ಕೌಂಟ್‌ ಬೇರೆ ರೀತಿ ಇರುತ್ತದೆ.

ರೆಡ್ಮಿ ನೋಟ್‌ 13 ಪ್ರೊ 5ಜಿ ಫೋನ್‌ನ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರ ಪ್ರಾಥಮಿಕ ಕ್ಯಾಮೆರಾವು 200-ಮೆಗಾಪಿಕ್ಸೆಲ್ ಸೆನ್ಸಾರ್‌ ಆಗಿದೆ. ಆದರೆ ಸೆಕೆಂಡರಿ ಕ್ಯಾಮೆರಾವು 2-ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್‌ 5100 ಎಂಎಎಚ್‌ ಬ್ಯಾಟರಿ ಹೊಂದಿದೆ. ಇದು 67 ಡಬ್ಲ್ಯು ವೇಗದ ಚಾರ್ಜಿಂಗ್‌ಗೆ ಸಪೋರ್ಟ್‌ ನೀಡುತ್ತದೆ.

ಇಲ್ಲಿ ರೆಡ್ಮಿ ಸ್ಮಾರ್ಟ್‌ಫೋನ್‌ ಅನ್ನು ಉದಾಹರಣೆಯಾಗಿ ನೀಡಲಾಗಿದೆ. ಇದೇ ರೀತಿ ಸ್ಯಾಮ್‌ಸಂಗ್‌, ರಿಯಲ್‌ಮಿ, ಒಪ್ಪೊ ಸೇರಿದಂತೆ ವಿವಿಧ ಸ್ಮಾರ್ಟ್‌ಫೋನ್‌ಗಳಿಗೂ ದರ ಕಡಿತವಿದೆ. ಕಡಿಮೆ ದರವಿದೆ ಎಂದು ತಕ್ಷಣ ಖರೀದಿಸಬೇಡಿ. ಆ ಫೋನ್‌ಗೆ ಸಂಬಂಧಪಟ್ಟ ವಿಮರ್ಶೆ, ರೇಟಿಂಗ್‌, ಖರೀದಿದಾರರ ಅಭಿಪ್ರಾಯಗಳನ್ನು ಅವಲೋಕಿಸಿ ಮುಂದುವರೆಯಿರಿ.

ಗಮನಿಸಿ: ಆಫರ್‌ಗಳು ದಿನದಿಂದ ದಿನಕ್ಕೆ ಬದಲಾಗಬಹುದು. ಈ ಸ್ಮಾರ್ಟ್‌ಫೋನ್‌ನಲ್ಲಿ ಈಗಿನ ರಿಯಾಯಿತಿಯನ್ನು ಆಧರಿಸಿ ನಾವು ವಿವರಗಳನ್ನು ನೀಡಿದ್ದೇವೆ. ಭವಿಷ್ಯದಲ್ಲಿ ಈ ಬೆಲೆಗಳು ಬದಲಾಗಬಹುದು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.