Sony TV Discount: ಸೋನಿ ಬ್ರಾವಿಯಾ ಸ್ಮಾರ್ಟ್ ಟಿವಿ ಖರೀದಿಗೆ ಬೊಂಬಾಟ್ ಆಫರ್, ಶೇಕಡ 33 ಡಿಸ್ಕೌಂಟ್
Sony BRAVIA 2 Discount: ಹೊಸ ವರ್ಷದಲ್ಲಿ ನೀವು ಸ್ಮಾರ್ಟ್ ಟಿವಿ ಖರೀದಿಸಲು ಬಯಸಿದರೆ ನಿಮಗಾಗಿ ಉತ್ತಮ ಕೊಡುಗೆ ಇದೆ. 43 ಇಂಚಿನ ಸೋನಿ ಬ್ರಾವಿಯಾ ಟಿವಿ ಖರೀದಿಗೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಉತ್ತಮ ಸ್ಮಾರ್ಟ್ ಟಿವಿ ಖರೀದಿಸಲು ನೀವು ಯೋಜನೆ ರೂಪಿಸಿರಬಹುದು. ಆನ್‌ಲೈನ್‌ನಲ್ಲಿ ಯಾವುದಾದರೂ ಹೊಸ ಆಫರ್ ಇರುವುದೇ ಎಂದು ಹುಡುಕಾಟ ನಡೆಸುತ್ತಿರಬಹುದು. ನಿಮಗಾಗಿ ಒಂದು ಸೂಪರ್ ಆಫರ್ ಇದೆ. 43 ಇಂಚಿನ ಸ್ಮಾರ್ಟ್ ಟಿವಿಯೊಂದರ ದರ ಕಡಿಮೆಯಾಗಿದೆ. ಅಮೆಜಾನ್ ನ್ಯೂ ಇಯರ್ ಸೇಲ್ ಮೂಲಕ ಸೋನಿ ಟಿವಿ ಖರೀದಿಸಬಹುದು. ಸೋನಿ ಬ್ರಾವಿಯಾ ಟಿವಿ ಅಮೆಜಾನ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ. ಈ ಸೋನಿ ಟಿವಿಯಲ್ಲಿ ಉತ್ತಮ ಫೀಚರ್‌ಗಳು ಇವೆ. ಇದು 4ಕೆ ಅಲ್ಟ್ರಾ ಎಚ್‌ಡಿ ದೃಶ್ಯಗಳನ್ನು ನೀಡುತ್ತದೆ. ಸೋನಿ ಬ್ರಾವಿಯಾ 2 ಸರಣಿಯ ಟಿವಿ ಪ್ರಸ್ತುತ ಅಮೆಜಾನ್‌ನಲ್ಲಿ 39,990 ರೂ.ಗೆ ಮಾರಾಟವಾಗುತ್ತಿದೆ.
ಸೋನಿ ಬ್ರಾವಿಯಾ 2 ದರವೆಷ್ಟು?
ಸೋನಿ ಬ್ರಾವಿಯಾ 2 ಅಲ್ಟ್ರಾ ಎಚ್‌ಡಿ 43 ಇಂಚಿನ ಸ್ಮಾರ್ಟ್ ಟಿವಿ ಖರೀದಿಗೆ ಅಮೆಜಾನ್ ಕಂಪನಿಯು ಸೀಮಿತ ಅವಧಿಯ ಕೊಡುಗೆ ನೀಡಿದೆ. ಸೋನಿ ಬ್ರ್ಯಾಂಡ್ ಟಿವಿ ಖರೀದಿಗೆ ಶೇಕಡ 33 ರಿಯಾಯಿತಿ ಘೋಷಿಸಿದೆ. ಆದ್ದರಿಂದ ನೀವು ಈ ಸ್ಮಾರ್ಟ್ ಟಿವಿಯನ್ನು 39990 ರೂಪಾಯಿಗೆ ಖರೀದಿಸಬಹುದು. ಇದರ ಮೂಲ ಬೆಲೆ 59900 ರೂಪಾಯಿ ಇರುತ್ತದೆ. ಬ್ರಾವಿಯಾ 2 ಟಿವಿಗೆ ಈಗ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಇದರೊಂದಿಗೆ ಟಿವಿ ಖರೀದಿ ಸಮಯದಲ್ಲಿ 1000 ರಿಯಾಯಿತಿ ಕೂಪನ್ ಸಿಗಲಿದೆ. ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2000 ರೂಪಾಯಿ ರಿಯಾಯಿತಿ ಪಡೆಯಬಹುದು.
ಫೀಚರ್‌ಗಳು
ಹೊಸ ಸೋನಿ ಬ್ರಾವಿಯಾ 2 ಸರಣಿಯ ಟಿವಿಗಳ ಎಲ್ಲಾ ವರ್ಷನ್‌ಗಳು ಎಕ್ಸ್1 ಪಿಕ್ಚರ್ ಪ್ರೊಸೆಸರ್‌ನೊಂದಿಗೆ 4ಕೆ ಎಲ್‌ಇಡಿ ಸ್ಕ್ರೀನ್ ಹೊಂದಿದೆ. ಪೂರ್ಣ ಎಚ್‌ಡಿ, 2ಕೆ ಅನ್ನು 4K ರೆಸಲ್ಯೂಶನ್‌ಗೆ ಹೆಚ್ಚಿಸಲು ಸಹಾಯ ಮಾಡಲು ಈ ಟಿವಿ 4ಕೆ ಎಕ್ಸ್-ರಿಯಾಲಿಟಿ ಪ್ರೊ ಅಲ್ಗಾರಿದಮ್ ಅನ್ನು ಬಳಸುತ್ತದೆ. ಸೋನಿ ಕಂಪೊನಿಯ ಈ ಟಿವಿಗಳು ಲೈವ್ ಕಲರ್ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತವೆ.
ಸೋನಿ ಬ್ರಾವಿಯಾ 2 ಸರಣಿಯ ಟಿವಿ ಮಾದರಿಯು ಸ್ಮಾರ್ಟ್ ಸಂಪರ್ಕಕ್ಕಾಗಿ ಗೂಗಲ್ ಟಿವಿ ಫೀಚರ್ ಹೊಂದಿದೆ. ಒಟಿಟಿ ಅಪ್ಲಿಕೇಶನ್‌ಗಳು, ಆಟಗಳು ಸೇರಿದಂತೆ ಸಾವಿರಾರು ಟಿವಿ ಅಪ್ಲಿಕೇಶನ್‌ಗಳನ್ನು ಈ ಮೂಲಕ ಪಡೆಯಬಹುದು. ಗೂಗಲ್ ಅಸಿಸ್ಟೆಂಟ್ ಮೂಲಕ ಧ್ವನಿ ಆಜ್ಞೆಗಳನ್ನು ಸಹ ಬೆಂಬಲಿಸುತ್ತದೆ. ಐಫೋನ್ ಬಳಕೆದಾರರು ಆಪಲ್ ಏರ್ ಪ್ಲೇ, ಆಪಲ್ ಹೋಮ್ ಕಿಟ್‌ಗಳನ್ನು ಬಳಸಬಹುದು. ಹೊಸ ಸೋನಿ ಟಿವಿಗಳು ಡಾಲ್ಬಿ ಆಡಿಯೊಗೆ ಹೊಂದಿಕೆಯಾಗುವ 20ಡಬ್ಲ್ಯು ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿವೆ. ಸೋನಿ ಬ್ರಾವಿಯಾ 2 ಸರಣಿಯು ಆಟೋ ಎಚ್‌ಡಿಆರ್ ಟೋನ್ ಮ್ಯಾಪಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಈ ಟಿವಿಗಳನ್ನು ಅತ್ಯುತ್ತಮ ಗೇಮಿಂಗ್ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಸೋನಿ ಬ್ರಾವಿಯಾ 2 ಎಲ್‌ಇಡಿ ಟಿವಿಯು 3840×2160 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್, 60 ಹಟ್ಸ್ ಡಿಸ್‌ಪ್ಲೇ ರಿಫ್ರೆಶ್ ರೇಟ್ ಹೊಂದಿದೆ. ಈ ಟಿವಿ 20 ವ್ಯಾಟ್‌ಗಳ ಧ್ವನಿ ಉತ್ಪಾದನೆಯನ್ನು ಹೊಂದಿದೆ. ಇದು ಎಕ್ಸ್-ಬ್ಯಾಲೆನ್ಸ್ಡ್ ಸ್ಪೀಕರ್, ಬಾಸ್ ರಿಫ್ಲೆಕ್ಸ್ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಜೊತೆಗೆ ಆಂಬಿಯೆಂಟ್ ಆಪ್ಟಿಮೈಸೇಶನ್‌ನಂತಹ ಫೀಚರ್‌ಗಳನ್ನು ಹೊಂದಿದೆ. ಸೋನಿ ಟಿವಿ ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ.
ಡಿಸ್‌ಕ್ಲೈಮರ್: ಇದು ಸದ್ಯ ಲಭ್ಯವಿರುವ ಆಫರ್‌ಗಳನ್ನು ಆಧರಿಸಿದ ಬರಹ. ಭವಿಷ್ಯದಲ್ಲಿ ಈ ಡಿಸ್ಕೌಂಟ್ ಬದಲಾಗಬಹುದು.