ಬಿಎಸ್‌ಎನ್‌ಎಲ್ 1 ವರ್ಷದ ರೀಚಾರ್ಜ್ ಯೋಜನೆ ಬೆಲೆ ರೂ 2000ಕ್ಕಿಂತ ಕಡಿಮೆ; 600ಜಿಬಿ ಡೇಟಾ ಜತೆಗೆ ಹಲವು ಪ್ರಯೋಜನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಎಸ್‌ಎನ್‌ಎಲ್ 1 ವರ್ಷದ ರೀಚಾರ್ಜ್ ಯೋಜನೆ ಬೆಲೆ ರೂ 2000ಕ್ಕಿಂತ ಕಡಿಮೆ; 600ಜಿಬಿ ಡೇಟಾ ಜತೆಗೆ ಹಲವು ಪ್ರಯೋಜನ

ಬಿಎಸ್‌ಎನ್‌ಎಲ್ 1 ವರ್ಷದ ರೀಚಾರ್ಜ್ ಯೋಜನೆ ಬೆಲೆ ರೂ 2000ಕ್ಕಿಂತ ಕಡಿಮೆ; 600ಜಿಬಿ ಡೇಟಾ ಜತೆಗೆ ಹಲವು ಪ್ರಯೋಜನ

BSNL Recharge Plan: ಬಿಎಸ್‌ಎನ್‌ಎಲ್‌ನಲ್ಲಿ ಒಂದು ವರ್ಷದ ವ್ಯಾಲಿಡಿಟಿ ಇರುವ ಉತ್ತಮ ರೀಚಾರ್ಜ್‌ ಯೋಜನೆ ಇದೆ. ಇದರ ಬೆಲೆ 2,000 ರೂ.ಗಿಂತ ಕಡಿಮೆ. ಒಮ್ಮೆ ರೀಚಾರ್ಜ್‌ ಮಾಡಿಸಿಕೊಂಡರೆ, 600GB ಡಾಟಾ ಸಿಗುತ್ತದೆ. ದೈನಂದಿನ ಲಿಮಿಟ್‌ ಇರುವುದಿಲ್ಲ.

ಬಿಎಸ್‌ಎನ್‌ಎಲ್ 1 ವರ್ಷದ ರೀಚಾರ್ಜ್ ಯೋಜನೆ ಬೆಲೆ ರೂ 2000ಕ್ಕಿಂತ ಕಡಿಮೆ
ಬಿಎಸ್‌ಎನ್‌ಎಲ್ 1 ವರ್ಷದ ರೀಚಾರ್ಜ್ ಯೋಜನೆ ಬೆಲೆ ರೂ 2000ಕ್ಕಿಂತ ಕಡಿಮೆ

ಇತ್ತೀಚೆಗೆ ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳು ರೀಚಾರ್ಜ್‌ ದರವನ್ನು ಹೆಚ್ಚಿಸಿವೆ. ಗ್ರಾಹಕರು ಕೂಡಾ ಮಾಸಿಕವಾಗಿ ದುಬಾರಿ ರೀಚಾರ್ಜ್‌ ಮಾಡಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ. ಬೆಲೆ ಜಾಸ್ತಿ ಇದ್ದರೂ ಅದರ ಪ್ರಯೋಜನ ಕಡಿಮೆ ಎಂಬಂತಾಗಿದೆ. ನಿಮಗೂ ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ದುಬಾರಿ ಎನಿಸಿದರೆ, ಬಿಎಸ್‌ಎನ್‌ಎಲ್‌ (BSNL) ಕಡೆಯಿಂದ ಉತ್ತಮ ರೀಚಾರ್ಜ್‌ ಯೋಜನೆ ಇದೆ. ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ಬಜೆಟ್ ಸ್ನೇಹಿ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ಇದು ಮಾಸಿಕ ರೀಚಾರ್ಜ್‌ ಯೋಜನೆ ಅಲ್ಲ. ಬದಲಾಗಿ ಒಂದು ಸಂಪೂರ್ಣ ವರ್ಷಕ್ಕೆ ಆಗುವ ರೀಚಾರ್ಜ್ ಪ್ಲಾನ್‌ ಇದಾಗಿದೆ.

ಬಿಎಸ್‌ಎನ್‌ಎಲ್‌ನಲ್ಲಿ ಒಂದು ವರ್ಷದವರೆಗೆ ವ್ಯಾಲಿಡಿಟಿ ಇರುವ ರೀಚಾರ್ಜ್‌ ಯೋಜನೆ ಇದೆ. ಇದರ ಬೆಲೆ 2,000 ರೂ.ಗಿಂತ ಕಡಿಮೆ. ಒಮ್ಮೆ ರೀಚಾರ್ಜ್‌ ಮಾಡಿಸಿಕೊಂಡರೆ, 600GB ಇಂಟರ್ನೆಟ್‌ ಮಾತ್ರವಲ್ಲದೆ ದಿನಕ್ಕೆ 100 SMS ಉಚಿತವಾಗಿ ಪಡೆಯಬಹುದು. ಮುಖ್ಯವಾಗಿ ಅನಿಯಮಿತ ಕರೆ ಪ್ರಯೋಜನ ಇದ್ದೇ ಇರುತ್ತದೆ.

ಬೆಲೆ ಏರಿಕೆಯ ನಡುವೆಯೂ ಬಿಎಸ್‌ಎನ್‌ಎಲ್ ಕೈಗೆಟುಕುವ ರೀಚಾರ್ಜ್ ಯೋಜನೆ ನೀಡುತ್ತದೆ. 2024ರ ಜುಲೈ ವೇಳೆಗೆ ಭಾರತದಲ್ಲಿರುವ ಪ್ರಮುಖ ಟೆಲಿಕಾಮ್‌ ಕಂಪನಿಗಳು ತಮ್ಮ ರೀಚಾರ್ಜ್ ಬೆಲೆಗಳನ್ನು ಹೆಚ್ಚಿಸಿವೆ. ಈ ನಡುವೆ BSNL ಹಳೆಯ ಹಾಗೂ ಮಧ್ಯಮ ಬೆಲೆಗೆ ರೀಚಾರ್ಜ್‌ ಯೋಜನೆಗಳನ್ನು ಉಳಿಸಿದೆ. ಹೀಗಾಗಿ ಅನೇಕ ಟೆಲಿಕಾಂ ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ದೀರ್ಘಾವಧಿಯ ರೀಚಾರ್ಜ್‌ ಯೋಜನೆಗಳಿಗೆ ಹೆಸರುವಾಸಿಯಾದ ಬಿಎಸ್‌ಎನ್‌ಎಲ್‌, ಟೆಲಿಕಾಂ ಉದ್ಯಮದಲ್ಲಿ ಕಡಿಮೆ ಬೆಲೆಯ ಆಯ್ಕೆಗಳಲ್ಲಿ ಒಂದು. ಇಂಥಾ ವೆಚ್ಚ-ಪರಿಣಾಮಕಾರಿ ಕೊಡುಗೆಗಳಿಂದಾಗಿ, ಬಿಎಸ್‌ಎನ್‌ಎಲ್‌ಗೆ ಕಳೆದ ಕೆಲವು ತಿಂಗಳುಗಳಲ್ಲಿ 50 ಲಕ್ಷ ಹೊಸ ಗ್ರಾಹಕರು ಬಂದಿದ್ದಾರೆ ಎಂದು ವರದಿಯಾಗಿದೆ.

1999 ರೂ. ರೀಚಾರ್ಜ್ ಯೋಜನೆ

ಬಿಎಸ್‌ಎನ್‌ಎಲ್‌ ಬಳಕೆದಾರರು ಒಮ್ಮೆ 1999 ರೂ. ರೀಚಾರ್ಜ್‌ ಮಾಡಿಸಿಕೊಂಡರೆ, ಒಂದು ವರ್ಷಗಳ ವ್ಯಾಲಿಡಿಟಿ ಸಿಗುತ್ತದೆ. 1 ವರ್ಷದ ಮಾನ್ಯತೆ, ಅಂದರೆ 12 ತಿಂಗಳವರೆಗೆ ಹೆಚ್ಚುವರಿ ರೀಚಾರ್ಜ್ ಮಾಡಿಸುವ ಅಗತ್ಯವಿಲ್ಲ. ಈಗ ಚಂದಾದಾರರಾದರೆ, ಮುಂದಿನ ರೀಚಾರ್ಜ್ 2026ರಲ್ಲಿ ಇರುತ್ತದೆ. ಈ ಯೋಜನೆಯಲ್ಲಿ, ಎಲ್ಲಾ ಸ್ಥಳೀಯ ಮತ್ತು ಎಸ್‌ಟಿಡಿ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಉಚಿತ ಕರೆ ಇರುತ್ತದೆ. ದೀರ್ಘಾವಧಿಯ ರೀಚಾರ್ಜ್‌ ಪ್ರಯೋಜನಗಳನ್ನು ಹುಡುಕುತ್ತಿರುವ ಬಳಕೆದಾರರಿಗೆ ಇದು ಉತ್ತಮ ಕೊಡುಗೆಯಾಗಿದೆ.

600GB ಡೇಟಾ; ದೈನಂದಿನ ಮಿತಿ ಇಲ್ಲ

ಬಿಎಸ್‌ಎನ್‌ಎಲ್‌ ಕಂಪನಿಯು ದೈನಂದಿನ ಬಳಕೆಯ ಮಿತಿಗಳಿಲ್ಲದೆ ಒಟ್ಟು 600GB ಡೇಟಾವನ್ನು ನೀಡುತ್ತದೆ. ಪ್ರತಿದಿನವೂ ಅನಿಯಮಿತ ಇಂಟರ್ನೆಟ್‌ ಬಳಸಬಹುದು. ನೀವು ಒಂದೇ ದಿನದಲ್ಲಿ ಎಲ್ಲಾ ಡೇಟಾವನ್ನು ಬಳಸಬಹುದು ಅಥವಾ ವರ್ಷವಿಡೀ ಬಳಸಬಹುದು. ನಿಮಗೆ ಅಗತ್ಯವಿಲ್ಲದಾಗ ಇಂಟರ್ನೆಟ್‌ ಬಳಕೆಗೆ ಮಿತಿ ಹಾಕಬಹುದು. ಈ ಆಯ್ಕೆ ನಿಮ್ಮದೇ ಆಗಿರುತ್ತದೆ. ಯೋಜನೆಯಲ್ಲಿ ದಿನಕ್ಕೆ 100 ಉಚಿತ ಎಸ್‌ಎಂಎಸ್‌ ಬರುತ್ತದೆ.

ಪದೇ ಪದೇ ರೀಚಾರ್ಜ್ ಮಾಡುವ ತೊಂದರೆ ತಪ್ಪಿಸಲು ಬಯಸುವವರು ವರ್ಷಕ್ಕೆ ಒಮ್ಮೆ 1999 ರೂ. ಖರ್ಚು ಮಾಡಿದರೆ, ಮತ್ತೆ ಚಿಂತೆ ಇರುವುದಿಲ್ಲ. ಪ್ರತಿ ತಿಂಗಳೂ ಮತ್ತೆ ಮತ್ತೆ ರೀಚಾರ್ಜ್‌ ಮಾಡುವ ಅಗತ್ಯವಿಲ್ಲ. ಪೂರ್ಣ ವರ್ಷದ ಮಾನ್ಯತೆಯೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಎಲ್ಲಾ ಅನುಕೂಲ ಸಿಗುತ್ತವೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.