Kamareddy Result: ಕಾಮರೆಡ್ಡಿಯಲ್ಲಿ ಅಚ್ಚರಿ ಫಲಿತಾಂಶ, ಕೆಸಿಆರ್‌, ರೇವಂತ ರೆಡ್ಡಿ ಪೈಪೋಟಿ, ರೇಸ್ ಗೆದ್ದ ಬಿಜೆಪಿಯ ಕೆವಿಆರ್ ರೆಡ್ಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kamareddy Result: ಕಾಮರೆಡ್ಡಿಯಲ್ಲಿ ಅಚ್ಚರಿ ಫಲಿತಾಂಶ, ಕೆಸಿಆರ್‌, ರೇವಂತ ರೆಡ್ಡಿ ಪೈಪೋಟಿ, ರೇಸ್ ಗೆದ್ದ ಬಿಜೆಪಿಯ ಕೆವಿಆರ್ ರೆಡ್ಡಿ

Kamareddy Result: ಕಾಮರೆಡ್ಡಿಯಲ್ಲಿ ಅಚ್ಚರಿ ಫಲಿತಾಂಶ, ಕೆಸಿಆರ್‌, ರೇವಂತ ರೆಡ್ಡಿ ಪೈಪೋಟಿ, ರೇಸ್ ಗೆದ್ದ ಬಿಜೆಪಿಯ ಕೆವಿಆರ್ ರೆಡ್ಡಿ

ತೆಲಂಗಾಣದ ಹೈಲೋವ್ಟೇಜ್‌ ಕ್ಷೇತ್ರ ಕಾಮರೆಡ್ಡಿ ಕ್ಷೇತ್ರ. ಇಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ ರೆಡ್ಡಿ ನಡುವೆ ನೇರ ಹಣಾಹಣಿ ಎಂದು ಬಿಂಬಿಸಲ್ಪಟ್ಟಿತ್ತು. ಆದರೆ, ಇವರಿಬ್ಬರ ನಡುವೆ ಮತದಾರನ ಆಯ್ಕೆ ಬೇರೆಯೇ ಎಂಬುದನ್ನು ತೋರಿಸುವ ಹಾಗಿದೆ ಫಲಿತಾಂಶ.

ಟಿಪಿಸಿಸಿ ಅಧ್ಯಕ್ಷ ಎ ರೇವಂತ ರೆಡ್ಡಿ, ಬಿಜೆಪಿ ಅಭ್ಯರ್ಥಿ ಕೆವಿಆರ್ ರೆಡ್ಡಿ, ಮುಖ್ಯಮಂತ್ರಿ ಕೆಸಿಆರ್‌
ಟಿಪಿಸಿಸಿ ಅಧ್ಯಕ್ಷ ಎ ರೇವಂತ ರೆಡ್ಡಿ, ಬಿಜೆಪಿ ಅಭ್ಯರ್ಥಿ ಕೆವಿಆರ್ ರೆಡ್ಡಿ, ಮುಖ್ಯಮಂತ್ರಿ ಕೆಸಿಆರ್‌

ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರ ಎಂದೆನಿಸಿಕೊಂಡಿದ್ದ ಕಾಮರೆಡ್ಡಿ ಕ್ಷೇತ್ರದಲ್ಲಿ ನಿರೀಕ್ಷೆಗಳೆಲ್ಲವೂ ತಲೆಕೆಳಗಾಗಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಎ ರೇವಂತ ರೆಡ್ಡಿ ನಡುವಿನ ನೇರ ಹಣಾಹಣಿ ಎಂದು ಬಿಂಬಿಸಲ್ಪಟ್ಟ ಕ್ಷೇತ್ರ ಇದು. ಆದರೆ ಇಲ್ಲಿ ಗೆಲುವು ದಕ್ಕಿದ್ದು ಬಿಜೆಪಿ ಅಭ್ಯರ್ಥಿ ಕೆವಿಆರ್ ರೆಡ್ಡಿಗೆ!

ಆರಂಭಿಕ ಸುತ್ತುಗಳ ಫಲಿತಾಂಶ ಘೋಷಣೆ ಆದಾಗ ಇದೇ ರೀತಿ ಫಲಿತಾಂಶ ಕಂಡುಬಂದಿತ್ತು. ಕೆಸಿಆರ್ ವಿರುದ್ಧ ರೇವಂತ ರೆಡ್ಡಿ ಮುನ್ನಡೆ ಕಾಯ್ದುಕೊಂಡಿದ್ದರು. 19 ಸುತ್ತುಗಳ ಮತ ಎಣಿಕೆ ಈ ಕ್ಷೇತ್ರದಲ್ಲಿ ನಿಗದಿಯಾಗಿದ್ದು, ಈಗ 19 ಸುತ್ತುಗಳ ಮತ ಎಣಿಕೆ ಆಗಿದೆ. ಈ ಫಲಿತಾಂಶದಂತೆ, ಇಲ್ಲಿ ಮುಂಚೂಣಿಯಲ್ಲಿರುವುದು ಎ ರೇವಂತ ರೆಡ್ಡಿ ಅಲ್ಲ, ಕೆಸಿಆರ್ ಕೂಡ ಅಲ್ಲ. ಬಿಜೆಪಿ ಅಭ್ಯರ್ಥಿ ಕಾಟಿಪಳ್ಳಿ ವೆಂಕಟ ರಮಣ ರೆಡ್ಡಿ (ಕೆವಿಆರ್ ರೆಡ್ಡಿ).

19 ಸುತ್ತುಗಳ ಮತ ಎಣಿಕೆ ಫಲಿತಾಂಶ ಹೀಗಿತ್ತು..

ಬಿಜೆಪಿಯ ಅಭ್ಯರ್ಥಿ ಕಾಟಿಪಳ್ಳಿ ವೆಂಕಟ ರಮಣ ರೆಡ್ಡಿ (ಕೆವಿಆರ್ ರೆಡ್ಡಿ) 66652 (+ 6741), ಮುಖ್ಯಮಂತ್ರಿ ಕೆಸಿಆರ್‌ 59911 ( -6741), ಟಿಪಿಸಿಸಿ ಅಧ್ಯಕ್ಷ ಎ ರೇವಂತ ರೆಡ್ಡಿ 54916 ( -11736) ಮತ ಗಳಿಸಿದ್ದರು.

ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್, ಟಿಪಿಸಿಸಿ ಅಧ್ಯಕ್ಷ ಎ ರೇವಂತ ರೆಡ್ಡಿ, ಬಿಜೆಪಿ ಅಭ್ಯರ್ಥಿ ಕೆವಿಆರ್ ರೆಡ್ಡಿ ಸೇರಿ 39 ಅಭ್ಯರ್ಥಿಗಳು ಕಣದಲ್ಲಿದ್ದರು.

ಕಾಮರೆಡ್ಡಿಯಲ್ಲಿ ಕೆವಿಆರ್ ರೆಡ್ಡಿ ಗೆಲ್ಲಲು ಕಾರಣವೇನು?

ಕಾಮರೆಡ್ಡಿ ಕ್ಷೇತ್ರದಲ್ಲಿ ಕೆವಿಆರ್ ರೆಡ್ಡಿ ಅಚ್ಚರಿಯ ಗೆಲುವು ದಾಖಲಾಗಿದ್ದು, ಬಿಆರ್‌ಎಸ್ ಮತ್ತು ಕಾಂಗ್ರೆಸ್ ಅನ್ನು ಕಂಗೆಡಿಸಿದೆ. ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಎರಡನೇ ಕ್ಷೇತ್ರವಾಗಿ ಕಾಮರೆಡ್ಡಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಕೆಸಿಆರ್‌ಗೆ ಸ್ಪರ್ಧೆ ಒಡ್ಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರೇವಂತ ರೆಡ್ಡಿ ಕೂಡ ಸ್ವಕ್ಷೇತ್ರದ ಜತೆಗೆ ಇಲ್ಲಿಂದ ಸ್ಪರ್ಧೆಗೆ ಇಳಿದರು.

ಬಿಜೆಪಿ ಲೋಕಲ್ ಆಗಿ ಪರಿಚತರಾಗಿರುವ ಕೆ ವೆಂಕಟ ರಮಣ ರೆಡ್ಡಿ ಅವರನ್ನು ಕಣಕ್ಕೆ ಇಳಿಸಿತ್ತು. ಸಮಾಜಮುಖಿಯಾಗಿ ಗುರುತಿಸಿಕೊಂಡ ಕೆವಿಆರ್ ರೆಡ್ಡಿ ಪರ ಮತದಾರರ ಒಲವು ಇದ್ದದನ್ನು ಗುರುತಿಸುವಲ್ಲಿ ಎರಡೂ ಪಕ್ಷಗಳು ವಿಫಲವಾಗಿದ್ದವು. ಮತ ಎಣಿಕೆಯ ಆರಂಭದ ಸುತ್ತುಗಳಲ್ಲಿ ರೇವಂತ ರೆಡ್ಡಿ ಮುನ್ನಡೆ ಕಾಯ್ದುಕೊಂಡ ಕಾರಣ ಕೆಸಿಆರ್ ಮತ್ತು ಎ ರೇವಂತ ರೆಡ್ಡಿ ನಡುವೆ ಭಾರಿ ಪೈಫೋಟಿ ಏರ್ಪಟ್ಟಂತೆ ಕಂಡು ಬಂದಿತ್ತು.

ಕೆಸಿಆರ್‌ ಸ್ಪರ್ಧಿಸುತ್ತಿರುವ ಗಜ್ವೇಲದಲ್ಲೂ 44 ಅಭ್ಯರ್ಥಿಗಳು

ಗಜ್ವೇಲದಲ್ಲೂ ಕೆಸಿಆರ್‌ ಸೇರಿ 44 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 10 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಅಂದು ಗಜ್ವೇಲ್ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು 145 ನಾಮಪತ್ರಗಳನ್ನು ಸಲ್ಲಿಕೆಯಾಗಿದ್ದವು. ಆದರೆ, ನವೆಂಬರ್ 13 ರಂದು ನಾಮಪತ್ರಗಳ ಪರಿಶೀಲನೆ ನಡೆದಾಗ ಸಂಖ್ಯೆ 114 ಕ್ಕೆ ಇಳಿದಿದೆ. ಬಳಿಕ ನಾಮಪತ್ರ ಹಿಂಪಡೆಯುವ ದಿನ 70 ನಾಮಪತ್ರ ವಾಪಸ್ ಪಡೆದಿದ್ದಾರೆ.

ಕೆಸಿಆರ್ ಸತತ ಮೂರನೇ ಬಾರಿಗೆ ಗಜ್ವೇಲ್‌ನಿಂದ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ಮಾಜಿ ಸಚಿವ ಈಟಾಲ ರಾಜೇಂದರ್ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಟಿ ನರಸಾ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.