ಕನ್ನಡ ಸುದ್ದಿ  /  Nation And-world  /  Telangana Election Who Is Sunil Kanugol Poll Strategist Congress Totally Depends On Him For Victory Uks

Sunil Kanugolu: ತೆಲಂಗಾಣ ಚುನಾವಣೆ ಗೆಲ್ಲಲು ಕಾಂಗ್ರೆಸ್‌ಗೆ 6 ಗ್ಯಾರೆಂಟಿ ಆಸರೆ, ಸುನಿಲ್ ಕನುಗೋಲು ‘ಚಾಣಕ್ಯ ತಂತ್ರ’

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಕ್ಕೆ ಮತದಾರ ಆಡಳಿತ ಚುಕ್ಕಾಣಿ ನೀಡುವಂತೆ ಮಾಡಿದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ತೆಲಂಗಾಣ ಚುನಾವಣೆಯಲ್ಲೂ ತಮ್ಮ ತಂತ್ರಗಾರಿಕೆಯ ಚಮತ್ಕಾರ ನೋಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಲೂ 5 ಗ್ಯಾರೆಂಟಿಯನ್ನೇ ಕಾಂಗ್ರೆಸ್‌ಗೆ ಗೆಲುವಿನ ಆಸರೆಯನ್ನಾಗಿ ಹಿಡಿಯಲು ಸಲಹೆ ನೀಡಿದ್ದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಕರ್ನಾಟಕ ಮಾದರಿಯಲ್ಲಿ ತೆಲಂಗಾಣ ಚುನಾವಣೆ ಗೆಲ್ಲಲು ಕಾಂಗ್ರೆಸ್‌ಗೆ 6 ಗ್ಯಾರೆಂಟಿ ಆಸರೆಯನ್ನು ನೀಡಿರುವ ಸುನಿಲ್ ಕನುಗೋಲು ತಮ್ಮ ‘ಚುನಾವಣಾ ತಂತ್ರ’ವನ್ನು ಅಲ್ಲೂ ಪಣಕ್ಕೊಡ್ಡಿದ್ದಾರೆ.
ಕರ್ನಾಟಕ ಮಾದರಿಯಲ್ಲಿ ತೆಲಂಗಾಣ ಚುನಾವಣೆ ಗೆಲ್ಲಲು ಕಾಂಗ್ರೆಸ್‌ಗೆ 6 ಗ್ಯಾರೆಂಟಿ ಆಸರೆಯನ್ನು ನೀಡಿರುವ ಸುನಿಲ್ ಕನುಗೋಲು ತಮ್ಮ ‘ಚುನಾವಣಾ ತಂತ್ರ’ವನ್ನು ಅಲ್ಲೂ ಪಣಕ್ಕೊಡ್ಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಗದ್ದುಗೆಯಲ್ಲಿ ಕೂರಿಸಿದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ತೆಲಂಗಾಣ ಚುನಾವಣೆಯಲ್ಲೂ ತಮ್ಮ ತಂತ್ರಗಾರಿಕೆಯ ಚಮತ್ಕಾರ ನೋಡಲು ಪ್ರಯತ್ನಿಸುತ್ತಿದ್ದಾರೆ. ತೆಲಂಗಾಣದಲ್ಲಿ ನಾಳೆ (ನ.30) ಮತದಾನ ನಡೆಯುತ್ತಿದ್ದು, ಕರ್ನಾಟಕ ಮಾದರಿಯಲ್ಲೆ ಮತದಾರರಿಗೆ ಕಾಂಗ್ರೆಸ್ ಪಕ್ಷ ನೀಡಿದ 5 ಗ್ಯಾರೆಂಟಿ ಹೇಗೆ ಕೆಲಸ ಮಾಡಲಿದೆ ಎಂಬುದರ ನಿರ್ಣಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.

ತೆಲಂಗಾಣದಲ್ಲಿ 6 ಗ್ಯಾರೆಂಟಿಯ ಅಭಯಹಸ್ತ

1. ಕರ್ನಾಟಕ ಮಾದರಿ ತಂತ್ರಗಾರಿಕೆ - ಸುನಿಲ್ ಕನುಗೋಲು ಮತ್ತು ಅವರ ತಂಡ ಕರ್ನಾಟಕದ 5 ಗ್ಯಾರೆಂಟಿ ಮಾದರಿಯಲ್ಲೇ 6 ಗ್ಯಾರೆಂಟಿಗಳನ್ನು ತೆಲಂಗಾಣದಲ್ಲೂ ಕಾಂಗ್ರೆಸ್‌ ಪ್ರಚಾರ ಅಭಿಯಾನಕ್ಕೆ ಬಳಸಲು ಸಲಹೆ ನೀಡಿದೆ. 6 ಗ್ಯಾರೆಂಟಿಗಳು ಎಂದರೆ ಅಭಯ ಹಸ್ತ ಎಂದೇ ಕಾಂಗ್ರೆಸ್ ಬಿಂಬಿಸಿದ್ದು, ತೆಲಂಗಾಣದಲ್ಲಿ ಇದು ಯಾವ ರೀತಿ ಪವಾಡ ಮಾಡಲಿದೆ ಎಂಬ ಕುತೂಹಲ ಕೆರಳಿಸಿದೆ.

2. ಆಡಳಿತ ವಿರೋಧಿ ಅಲೆಯ ಸೃಷ್ಟಿ - ತೆಲಂಗಾಣ ರಾಜ್ಯ ರಚನೆಯಾದ ಅಂದಿನಿಂದ ಅಂದರೆ 2014ರಿಂದ ಕೆ.ಚಂದ್ರ ಶೇಖರ ರಾವ್ ಅವರೇ ಮುಖ್ಯಮಂತ್ರಿಯಾಗಿದ್ದು, ಅವರ ಪಕ್ಷ ಆಡಳಿತದಲ್ಲಿದೆ. ಆದರೆ ಇದೇ ಮೊದಲ ಸಲ ಆಡಳಿತ ವಿರೋಧಿ ಅಲೆ ನಿರ್ಮಾಣವಾಗಿದ್ದು, ಅದರ ಪ್ರಯೋಜನ ಪಡೆಯಲು ಕಾಂಗ್ರೆಸ್ ಕೂಡ ಮುಂದಾಗಿದೆ. ಕರ್ನಾಟಕದ ಗೆಲುವು ಇದಕ್ಕೆ ಉತ್ತೇಜನ ನೀಡಿದೆ.

3. ಕಾಂಗ್ರೆಸ್ ಸಿದ್ಧಾಂತ ಮತ್ತು ರಾಜಕೀಯ ತಂತ್ರಗಾರಿಕೆ - ಚುನಾವಣಾ ತಂತ್ರಗಾರಿಕೆಯಲ್ಲಿ ಸುನಿಲ್ ಕನಗೋಲು ಅವರಿಗೆ ಇರುವ ಪರಿಣತಿಯನ್ನು ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಬಳಸುತ್ತಿದೆ. ಹೀಗಾಗಿ ಪಕ್ಷದ ಅತಿಮುಖ್ಯ ಸಭೆ ಮತ್ತು ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲೂ ಸುನಿಲ್ ಅಲ್ಲಿ ಹಾಜರಿದ್ದರು.

4. ಐದು ಸದಸ್ಯರ ಚುರುಕು ತಂಡ - ಸುನಿಲ್ ಕನಗೋಲು ಅವರ ತಂಡದಲ್ಲಿರುವುದು ಐವರು. ಈ 5 ಸದಸ್ಯರು ಚುನಾವಣೆಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಆಯಾ ರಾಜ್ಯದ ರಾಜಕೀಯ, ಭೌಗೋಳಿಕ, ಸಾಮಾಜಿಕ ವಿಷಯಗಳನ್ನು ಕಲೆಹಾಕಿ ಅವುಗಳನ್ನು ಬಳಸಿಕೊಂಡು ರಾಜಕೀಯ ಅವಕಾಶಗಳನ್ನು ಸೃಷ್ಟಿಸಿ ಚುನಾವಣೆ ಗೆಲ್ಲುವುದಕ್ಕೆ ಯೋಜನೆ ರೂಪಿಸುವುದರಲ್ಲಿ ಈ ತಂಡ ಸೈ ಎನಿಸಿಕೊಂಡಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಹುಭಾಗ ಈ ತಂಡದ ಕೊಡುಗೆ.

5. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅತ್ಯಂತ ಜನಪ್ರಿಯವಾದ ಭಾರತ ಜೋಡೋ ಯಾತ್ರೆಯಲ್ಲಿ ಇವರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೈತ್ರಿಗೆ ಕಾರಣವೂ ಇದೇ ಸುನಿಲ್. ಈ ಎಲ್ಲ ಕಾರಣಕ್ಕೆ ತೆಲಂಗಾಣದಲ್ಲೂ ಪಕ್ಷವನ್ನು ಮತ್ತೆ ತಳಮಟ್ಟದಿಂದ ಸಂಘಟಿಸಲು ಕಾಂಗ್ರೆಸ್ ಸುನಿಲ್ ಮೊರೆ ಹೋಗಿದೆ.

ಸುನಿಲ್ ಕನುಗೋಲು ಯಾರು, ಎಲ್ಲಿಯವರು

ಸುನೀಲ್ ಕನುಗೋಲು ಅವರು ಮೂಲತಃ ಕರ್ನಾಟಕದ ಬಳ್ಳಾರಿಯವರು. ಹುಟ್ಟಿದ್ದು ಬೆಳೆದದ್ದು ಎಲ್ಲ ಚೆನ್ನೈನಲ್ಲಿ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಸುನಿಲ್ ಕನುಗೋಲು ಬಳಿಕ ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆ ಮೆಕ್ಕಿನ್ಸೆಯಲ್ಲಿ ಉದ್ಯೋಗಿಯಾಗಿದ್ದರು.

ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ ಬಳಿಕ ಗುಜರಾತ್‌ನಲ್ಲಿ ರಾಜಕೀಯ ತಂತ್ರಗಾರಿಕೆ ಕೆಲಸಗಳಲ್ಲಿ ಭಾಗಿಯಾದರು. ಅವರು ಹಿರಿಯ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ತಂಡದಲ್ಲಿ ಈ ಹಿಂದೆ ಕೆಲಸ ಮಾಡಿ ಅನುಭವ ಪಡೆದವರು. ಅಸೋಸಿಯೇಷನ್ ಆಫ್ ಬಿಲಿಯನ್ ಮೈಂಡ್ಸ್‌ ಅನ್ನು ಮುನ್ನಡೆಸಿದರು.

ತೆಲಂಗಾಣ ಚುನಾವಣೆಯಲ್ಲಿ ತಂತ್ರಗಾರಿಕೆ ಅಳವಡಿಸುವ ಮೊದಲು ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ, ಪ್ರಚಾರಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿದ್ದರು. ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿನ ಹಿಂದೆ ಇವರ ತಂತ್ರಗಾರಿಕೆ ಬಹಳ ಕೆಲಸ ಮಾಡಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿಯೂ ಕೆಲಸ ಮಾಡಿರುವ ಇವರು 2017ರಲ್ಲಿ ಸಿಎಂ ಯೋಗಿ ಆದಿತ್ಯನಾಥ ಅವರ ಭರ್ಜರಿ ಗೆಲುವಿನ ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿ 2019ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್‌ ಜತೆಗೆ ಕೆಲಸ ಮಾಡಿದ್ದು, ನಮ್ಮಕ್ಕು ನಾಮೇ (ನಮಗೆ ನಾವೇ) ಪ್ರಚಾರ ಅಭಿಯಾನ ನಡೆಸಿಕೊಟ್ಟರು. ಪರಿಣಾಮ ಡಿಎಂಕೆ ಮೈತ್ರಿಕೂಟ 39 ಲೋಕಸಭಾ ಸ್ಥಾನಗಳಲ್ಲಿ 38 ಗೆದ್ದುಕೊಂಡಿತು.