Telangana exit polls: ತೆಲಂಗಾಣ ಚುನಾವಣೆ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳ ಬಗ್ಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್ ಗರಂ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Telangana Exit Polls: ತೆಲಂಗಾಣ ಚುನಾವಣೆ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳ ಬಗ್ಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್ ಗರಂ

Telangana exit polls: ತೆಲಂಗಾಣ ಚುನಾವಣೆ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳ ಬಗ್ಗೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್ ಗರಂ

Telangana exit polls 2023: ತೆಲಂಗಾಣ ವಿಧಾನ ಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದವು. ಬಹುತೇಕ ಸಮೀಕ್ಷೆಗಳು ಆಡಳಿತಾರೂಢ ಬಿಆರ್‌ಎಸ್ ಅಧಿಕಾರ ಕಳೆದುಕೊಳ್ಳಲಿದೆ ಎಂಬ ವರದಿ ನೀಡಿದ್ದು, ಪಕ್ಷದ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್ (ಕಡತ ಚಿತ್ರ)
ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್ (ಕಡತ ಚಿತ್ರ) (HT_PRINT)

ತೆಲಂಗಾಣದ ವಿಧಾನ ಸಭೆ ಚುನಾವಣೆಯಲ್ಲಿ ಬಿಆರ್‌ಎಸ್‌ ಈ ಸಲ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಮತಗಟ್ಟೆ ಸಮೀಕ್ಷೆ ಫಲಿತಾಂಶ ವರದಿಗಳನ್ನು ಪಕ್ಷದ ಕಾರ್ಯಾಧ್ಯಕ್ಷ ಕೆಟಿ ರಾಮ ರಾವ್‌ ಗುರುವಾರ (ನ.30) ತಿರಸ್ಕರಿಸಿದ್ದಾರೆ.

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸತತ ಮೂರನೇ ಅವಧಿಗೆ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ತನ್ನ ಬಳಿಯೇ ಉಳಿಸಿಕೊಳ್ಳಲಿದೆ ಎಂದು ಕೆಟಿ ರಾಮ ರಾವ್ ಪ್ರತಿಪಾದಿಸಿದರು.

ಮತದಾನ ಮುಗಿದು ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು ಪ್ರಕಟವಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆಟಿ ರಾಮ ರಾವ್‌, ಹೇಳಿದ ಕೆಲವು ಅಂಶಗಳಿವು.

ಕೆಟಿ ರಾಮ ರಾವ್ ಸುದ್ದಿಗೋಷ್ಠಿಯ 5 ಮುಖ್ಯಅಂಶಗಳಿವು

1. 2018ರಲ್ಲಿ ಕೂಡ ಕೆಲವು ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು ತಪ್ಪಾಗಿದ್ದವು. ಬಿಆರ್‌ಎಸ್ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಫಲಿತಾಂಶ ವ್ಯತಿರಿಕ್ತವಾಗಿತ್ತು ಎಂಬುದನ್ನು ನೆನಪಿಸಿದರು.

2. ಬಿಆರ್‌ಎಸ್‌ನ ಸ್ನೇಹಿತರಿಗೆ ಮತ್ತು ಯಾರು ಕೆಸಿಆರ್ ಪುನಃ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬೇಕು ಎಂದು ಬಯಸುತ್ತಾರೋ ಅವರಿಗೆ ಪ್ರಮಾಣ ಮಾಡಿ ಹೇಳುತ್ತೇನೆ, ಡಿಸೆಂಬರ್ 3ರಂದು (ಮತ ಎಣಿಕೆ ದಿನ) ನಾವು ಗೆದ್ದು ಬರುತ್ತೇವೆ. ನಾವು 70 ಸ್ಥಾನಕ್ಕಿಂತ ಹೆಚ್ಚು ಗೆದ್ದು ಆಡಳಿತ ಮುಂದುವರಿಸುತ್ತೇವೆ ಎಂದು ರಾಮ ರಾವ್ ಭರವಸೆಯ ಮಾತುಗಳನ್ನಾಡಿದರು.

3. ಎಕ್ಸಿಟ್ ಪೋಲ್‌ಗಳ ಹೆಸರಿನಲ್ಲಿ, ಉಪಟಳ ಕೊಡುವವರು ಮತ್ತು ಅಸಂಬದ್ಧತೆಯನ್ನು ಸೃಷ್ಟಿಸುವವರಿಗೆ ಎಚ್ಚರಿಕೆ ನೀಡುತ್ತೇನೆ. ನಿಮ್ಮ ಮುಖದ ಮೇಲೆ ಮೊಟ್ಟೆ ಬೀಳಲಿದೆ ಮತ್ತು ನಿಮ್ಮ ಖ್ಯಾತಿಗೆ, ವಿಶ್ವಾಸಾರ್ಹತೆಗೆ ಅಪಾಯ ಎದುರಾಗಲಿದೆ ಎಂದು ಕೆಟಿ ರಾಮರಾವ್ ಹೇಳಿದರು.

4. ಇದಕ್ಕೂ ಮೊದಲು, ಬಿಎಸ್‌ಆರ್‌ ಪಕ್ಷ 88ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ ಅಲ್ಲಿ ಇಲ್ಲಿ ಕೆಲವು ಸಮಸ್ಯೆಗಳಿಂದಾಗಿ ಅಂಕಿ-ಅಂಶ ಕಡಿಮೆಯಾಗಿದೆ. ಕೆಲವು ಸಮೀಕ್ಷೆ ಸಂಸ್ಥೆಗಳು ತಮ್ಮ ಭವಿಷ್ಯ ತಪ್ಪಿದರೆ ಕ್ಷಮೆ ಯಾಚಿಸಬೇಕು ಎಂದೂ ರಾಮರಾವ್ ಸಲಹೆ ನೀಡಿದರು.

5. ಚುನಾವಣಾ ಆಯೋಗ 5.30ಕ್ಕೇ ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟಿಸುವುದಕ್ಕೆ ಅನುಮತಿ ನೀಡಿತು. ಆಗ, ಮತದಾನ ಮಾಡುವುದಕ್ಕೆ ಮತದಾರರು ಇನ್ನೂ ಸರದಿಯಲ್ಲಿ ನಿಂತಿದ್ದರು. ಇದು ತಪ್ಪಲ್ಲವೇ ಎಂದು ಆಯೋಗದ ಕ್ರಮವನ್ನು ಪ್ರಶ್ನಿಸಿದರು.

ತೆಲಂಗಾಣದಲ್ಲಿ ಇಂದು ನಡೆದಿತ್ತು ಮತದಾನ

ತೆಲಂಗಾಣದಲ್ಲಿ 106 ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು (ನ.30) ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತ್ತು ನಕ್ಸಲ್ ಉಪಟಳ ಇರುವಂತಹ 13 ವಿಧಾನ ಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಿತು. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.