Telangana Exit Poll: ತೆಲಂಗಾಣ ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟ, ಆಡಳಿತಾರೂಢ ಬಿಆರ್‌ಎಸ್‌ಗೆ ಕಾಂಗ್ರೆಸ್ ತೀವ್ರ ಪೈಪೋಟಿ
ತೀವ್ರ ಕುತೂಹಲ ಕೆರಳಿಸಿರುವ ತೆಲಂಗಾಣ ಚುನಾವಣೆಯಲ್ಲಿ ಆಡಳಿತಾರೂಢ ಬಿಆರ್‌ಎಸ್‌ಗೆ ಇದೇ ಮೊದಲ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತೀವ್ರ ಪೈಪೋಟಿ ಎದುರಾಗಿದೆ. ಈ ಸಲದ ತೆಲಂಗಾಣ ವಿಧಾನ ಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ ಅಥವಾ ಎಕ್ಸಿಟ್ ಪೋಲ್ ಫಲಿತಾಂಶವು ಡಿ.3ರಂದು ಪ್ರಕಟವಾಗುವ ಫಲಿತಾಂಶಕ್ಕೆ ದಿಕ್ಸೂಚಿಯಾಗುವುದೇ ಎಂದು ನೋಡಬೇಕಷ್ಟೆ.
ತೆಲಂಗಾಣ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ನಡೆದಿದ್ದು, ಬೆಳಗ್ಗೆ 7ಕ್ಕೆ ಶುರುವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. 119 ವಿಧಾನಸಭಾ ಕ್ಷೇತ್ರಗಳಲ್ಲಿರುವ 32.6 ದಶಲಕ್ಷ ಮತದಾರರು 2290 ಅಭ್ಯರ್ಥಿಗಳ ಭವಿಷ್ಯಈಗ ತೆಲಂಗಾಣದ ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಆರ್‌ಎಸ್‌ಗೆ ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ನೀಡಿರುವುದು ಕಂಡುಬಂದಿದೆ.
ತೆಲಂಗಾಣ ವಿಧಾನ ಸಭೆ ಚುನಾವಣೆಗೆ ಆಡಳಿತಾರೂಢ ಬಿಆರ್‌ಎಸ್ 119 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿ 111 ಕ್ಷೇತ್ರಗಳಲ್ಲಿ, ಮಿತ್ರ ಪಕ್ಷ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ 8 ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಪಕ್ಷ 118 ಮತ್ತು ಸಿಪಿಐ 1 ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಈಗ ಡಿಸೆಂಬರ್ 3 ರಂದು ಪ್ರಕಟವಾಗುವ ಫಲಿತಾಂಶಕ್ಕೆ ಎದುರು ನೋಡುತ್ತಿವೆ.
ಪೋಲ್‌ಸ್ಟ್ರಾಟ್ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಬಿಆರ್‌ಎಸ್ 48-58
ಕಾಂಗ್ರೆಸ್ 49 -59
ಬಿಜೆಪಿ 05- 10
ಇತರರು - 06-08
ಎಐಎಂಐಎಂ 00
ಸಿ ಪ್ಯಾಕ್ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಬಿಆರ್‌ಎಸ್ 41
ಕಾಂಗ್ರೆಸ್ 65
ಬಿಜೆಪಿ 04
ಇತರರು - 00
ಎಐಎಂಐಎಂ 09
ಜನ್ ಕೀ ಬಾತ್ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಜನ್ ಕೀ ಬಾತ್ ತೆಲಂಗಾಣದ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಸಂಜೆ 5 ಗಂಟೆ ತನಕ ಮತದಾನದ ತಾತ್ಕಾಲಿಕ ಅಂದಾಜಿನ ಪ್ರಕಾರ ಮತ ಗಳಿಕೆ ಪ್ರಮಾಣವನ್ನೂ ಅಂದಾಜಿಸಿದೆ.
ಇದರ ಪ್ರಕಾರ, ಬಿಆರ್‌ಎಸ್‌ಗೆ ಶೇಕಡ 37-40, ಕಾಂಗ್ರೆಸ್‌ಗೆ ಶೇಕಡ 38 - 39, ಬಿಜೆಪಿಗೆ ಶೇಕಡ 13-15, ಇತರರಿಗೆ ಶೇಕಡ 6- 12 ಮತ ಗಳಿಕೆ ಇರಲಿದೆ.
ಗೆಲ್ಲುವ ಸಾಧ್ಯತೆ
ಬಿಆರ್‌ಎಸ್ 40 - 55
ಕಾಂಗ್ರೆಸ್ 48 - 64
ಬಿಜೆಪಿ 07- 13
ಎಐಎಂಐಎಂ 4- 7
ಇತರರು 00
ಚಾಣಕ್ಯ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಬಿಆರ್‌ಎಸ್ - 22-31
ಕಾಂಗ್ರೆಸ್ 67-78
ಬಿಜೆಪಿ: 06-09
ಎಐಎಂಐಎಂ 00
ಇತರರು: 06-07
ಎಎನ್‌ಎಸ್ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಬಿಆರ್‌ಎಸ್ – 43
ಕಾಂಗ್ರೆಸ್ – 62
ಎಐಎಂಐಎಂ – 5
ಬಿಜೆಪಿ – 02
ಇತರರು - 00
ಸುದರ್ಶನ್ ನ್ಯೂಸ್ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಬಿಆರ್‌ಎಸ್ – 51- 59
ಕಾಂಗ್ರೆಸ್ – 40-44
ಬಿಜೆಪಿ – 06 - 08
ಎಐಎಂಐಎಂ/ ಇತರರು - 01-08
ಮ್ಯಾಟ್ರಿಝ್ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಬಿಆರ್‌ಎಸ್ – 37 - 51
ಕಾಂಗ್ರೆಸ್ – 58 - 71
ಎಐಎಂಐಎಂ – 06 -09
ಬಿಜೆಪಿ – 02 - 06
ಇತರರು - 00
ಸಿಎನ್‌ಎಕ್ಸ್ ತೆಲಂಗಾಣ ಚುನಾವಣಾ ಮತಗಟ್ಟೆ ಸಮೀಕ್ಷೆ ಫಲಿತಾಂಶ
ಬಿಆರ್‌ಎಸ್ - 31-47
ಕಾಂಗ್ರೆಸ್ - 63-79
ಬಿಜೆಪಿ - 2-4
ಎಐಎಂಐಎಂ - 5-7
ಎಲ್ಲ ಮತಗಟ್ಟೆ ಸಮೀಕ್ಷೆ ಫಲಿತಾಂಶ ಹೀಗಿದೆ ನೋಡಿ..
ತೆಲಂಗಾಣ ಚುನಾವಣೆ ಮತಗಟ್ಟೆ ಸಮೀಕ್ಷೆ ಫಲಿತಾಂಶ 2023
ಏಜೆನ್ಸಿ | ಬಿಆರ್‌ಎಸ್ | ಕಾಂಗ್ರೆಸ್ | ಬಿಜೆಪಿ | ಎಐಎಂಐಎಂ | ಇತರರು |
ಪೋಲ್‌ಸ್ಟ್ರಾಟ್ | 48-58 | 49 -59 | 05- 10 | 00 | 06-08 |
ಸಿ ಪ್ಯಾಕ್ | 41 | 65 | 04 | 09 | 00 |
ಜನ್ ಕೀ ಬಾತ್ | 40 - 55 | 48 - 64 | 07- 13 | 04 - 07 | 00 |
ಚಾಣಕ್ಯ | 22-31 | 67-78 | 06-09 | 00 | 06-07 |
ಎಎನ್‌ಎಸ್ | 43 | 62 | 05 | 02 | 00 |
ಮ್ಯಾಟ್ರಿಝ್ | 37 - 51 | 58 - 71 | 02 - 06 | 06 - 09 | 00 |
ಸಿಎನ್‌ಎಕ್ಸ್ | 31-47 | 63-79 | 02 - 04 | 05 - 07 | 00 |
ಸುದರ್ಶನ್ ನ್ಯೂಸ್ | 51- 59 | 40-44 | 06 - 08 | 01-08 |
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಸಾಧ್ಯತೆ
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಾಧ್ಯತೆಯನ್ನು ಬಹುತೇಕ ಮತಗಟ್ಟೆ ಸಮೀಕ್ಷೆ ಫಲಿತಾಂಶ ತೋರಿಸಿವೆ.
ತೆಲಂಗಾಣ ರಾಜ್ಯ ರಚನೆ ಆದಲ್ಲಿಂದ ಸತತ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದ ಕೆ ಚಂದ್ರಶೇಖರ ರಾವ್ ಅವರಿಗೆ ಹಿನ್ನಡೆಯಾಗುವ ಸೂಚನೆಯನ್ನು ಮತಗಟ್ಟೆ ಸಮೀಕ್ಷೆ ಫಲಿತಾಂಶಗಳು ತೋರಿಸಿವೆ. ಎರಡು ಸಮೀಕ್ಷೆಗಳಲ್ಲಿ ಮಾತ್ರವೇ ಬಿಆರ್‌ಎಸ್‌ಗೆ ಮುನ್ನಡೆ ಕಂಡುಬಂದಿದೆ. ಉಳಿದೆಲ್ಲ ಮತಗಟ್ಟೆ ಸಮೀಕ್ಷೆ ಫಲಿತಾಂಶಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಮೇಲುಗೈ ದಾಖಲಾಗಿದೆ.
ಮತಗಳಿಕೆ ಪ್ರಮಾಣದಲ್ಲಿ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಸ್ವಲ್ಪ ಉತ್ತಮ ಸಾಧನೆ ತೋರಿಸಿರುವನ್ನು ಜನ್ ಕೀ ಬಾತ್ ಮತಗಟ್ಟೆ ಸಮೀಕ್ಷೆ ಉಲ್ಲೇಖಿಸಿದೆ. ಈ ವಿದ್ಯಮಾನದೊಂದಿಗೆ ಕೆಸಿಆರ್ ಸಾಮ್ರಾಜ್ಯದ ಪತನ ಸನ್ನಿಹಿತವಾಗುತ್ತಿರುವ ಸುಳಿವು ಸಿಕ್ಕಿದಂತಾಗಿದೆ.
(ಏಜೆನ್ಸಿ ಮಾಹಿತಿಯೊಂದಿಗೆ)