Terrorist attack in Poonch: ಸೇನಾಪಡೆ ಮೇಲೆ ಉಗ್ರ ದಾಳಿ; ಹುತಾತ್ಮರಾದ ಐವರು ಯೋಧರು
Terrorist attack in Poonch: ಜಮ್ಮು-ಕಾಶ್ಮೀರದ ಪೂಂಛ್‌ನಲ್ಲಿ ರಾಷ್ಟ್ರೀಯ ರೈಫಲ್ಸ್ ಘಟಕದ ವಾಹನದ ಮೇಲೆ ಉಗ್ರ ದಾಳಿ ನಡೆದಿದೆ. ಐವರು ಯೋಧರು ಹುತಾತ್ಮರಾಗಿದ್ದು, ಒಬ್ಬ ಯೋಧ ಗಾಯಗೊಂಡಿರುವುದಾಗಿ ವರದಿ ಹೇಳಿದೆ.
ಜಮ್ಮು/ನವದೆಹಲಿ: ಜಮ್ಮು ಮತ್ತು ಕಾಶ್ಮೀರ (Jammu And Kashmir)ದ ಪೂಂಛ್ (Poonch) ಜಿಲ್ಲೆಯಲ್ಲಿ ಸೇನಾಪಡೆ (Army Unit) ಮೇಲೆ ಉಗ್ರ ದಾಳಿ ನಡೆದಿದ್ದು, ಐವರು ಯೋಧರು (Army soldiers) ಹುತಾತ್ಮರಾದರು. ದಾಳಿಯಲ್ಲಿ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಪೂಂಛ್‌ನ ಅಧಿಕಾರಿಗಳು ತಿಳಿಸಿದ್ದಾಗಿ ಪಿಐಟಿ ವರದಿ ಮಾಡಿದೆ.
ಉಗ್ರ ನಿಗ್ರಹ ಕಾರ್ಯಾಚರಣೆ (counterterror operations) ಗಾಗಿ ನಿಯೋಜಿತ ರಾಷ್ಟ್ರೀಯ ರೈಫಲ್ ಘಟಕ (Rashtriya Rifles unit)ಕ್ಕೆ ಸೇರಿದ ಯೋಧರು ತೆರಳುತ್ತಿದ್ದ ವಾಹನದ ಮೇಲೆ ಈ ದಾಳಿ ನಡೆದಿರುವಂಥದ್ದು ಎಂದು ಸೇನೆ ಹೇಳಿದೆ.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಈ ವಿದ್ಯಮಾನದ ವಿವರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದ್ದಾರೆ.
ಸೈನಿಕರು ಪ್ರಯಾಣಿಸುತ್ತಿದ್ದ ವಾಹನವು ಅಪರಿಚಿತ ಭಯೋತ್ಪಾದಕರಿಂದ ಗುಂಡಿನ ದಾಳಿಗೆ ಒಳಗಾಯಿತು. ದಾಳಿಗೆ ಗ್ರೆನೇಡ್ ಬಳಕೆ ಮಾಡಿದ್ದರಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಸೇನೆ ಹೇಳಿದೆ.
"ರಾಜೌರಿ ಸೆಕ್ಟರ್‌ನಲ್ಲಿ ಭಿಂಬರ್‌ಗಲಿ ಮತ್ತು ಪೂಂಚ್ ನಡುವೆ ಚಲಿಸುತ್ತಿದ್ದ ಒಂದು ಸೇನಾ ವಾಹನದ ಮೇಲೆ ಗುರುವಾರ ಅಪರಾಹ್ನ 3 ಗಂಟೆ ಸುಮಾರಿಗೆ ಅಪರಿಚಿತ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಭಾರೀ ಮಳೆ ಮತ್ತು ಪ್ರದೇಶದಲ್ಲಿನ ಕಡಿಮೆ ಗೋಚರತೆಯ ಲಾಭವನ್ನು ಪಡೆದು ಈ ದಾಳಿ ನಡೆಸಲಾಗಿದೆ. ಭಯೋತ್ಪಾದಕರು ಗ್ರೆನೇಡ್‌ಗಳನ್ನು ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ" " ಎಂದು ಸೇನೆ ಹೇಳಿದೆ.
ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕದ ಐವರು ಸಿಬ್ಬಂದಿ ಘಟನೆಯಲ್ಲಿ ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡಿದ್ದಾರೆ. ವಾಹನದಲ್ಲಿದ್ದ ಒಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ರಾಜೌರಿಯ ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ. ದುಷ್ಕರ್ಮಿಗಳನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ಹೇಳಿದೆ.
ಸೇನೆಯ ಆರಂಭಿಕ ಹೇಳಿಕೆಯಲ್ಲಿ, ವಾಹನಕ್ಕೆ ಬೆಂಕಿ ಹೊತ್ತಿಕೊಂಡ ನಂತರ ಐವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಪೂರ್ಣ ಮತ್ತು ನಿಖರ ವಿವರ ಸ್ಥಳ ಪರಿಶೀಲನೆ ಬಳಿಕ ಸಿಗಲಿದೆ ಎಂದು ಹೇಳಲಾಗಿತ್ತು.
ಇಂದಿನ ಪ್ರಮುಖ ವಿದ್ಯಮಾನಗಳು
ಲಿಂಗಾಯತ ಮುಖಂಡರ ಸಭೆ ನಡೆಸಿದ ಯಡಿಯೂರಪ್ಪ; ಚುನಾವಣಾ ಪೂರ್ವದಲ್ಲಿ ಕುತೂಹಲ ಕೆರಳಿಸಿದ ಬಿಎಸ್‌ವೈ ತಂತ್ರಗಾರಿಕೆ
ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್ ಮುಂತಾದವರು ಪಕ್ಷ ತೊರೆದ ಬೆನ್ನಿಗೆ ಲಿಂಗಾಯತ ನಾಯಕರ ಜತೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದರು. ರಾಜಕೀಯವಾಗಿ ಈ ಸಭೆ ಕುತೂಹಲ ಕೆರಳಿಸಿದೆ. ಚುನಾವಣೆ ಮೇಲೆ ಪ್ರಭಾವ ಬೀರುವ ಸಭಾ ವಿದ್ಯಮಾನದ ವಿವರ ಹೀಗಿದೆ ನೋಡಿ
ಸಿದ್ದರಾಮಯ್ಯ ಮುಸಲ್ಮಾನರ ನಾಯಕ, ಡಿ.ಕೆ.ಶಿವಕುಮಾರ್ ಕ್ರಿಮಿನಲ್‍ಗಳ ನೇತಾರ; ಶೋಭಾ ಕರಂದ್ಲಾಜೆ ಕಿಡಿನುಡಿ
ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಹಿಂದೂ ವಿರೋಧಿ ಮತ್ತು ಮುಸಲ್ಮಾನರ ನಾಯಕ, ಡಿ.ಕೆ.ಶಿವಕುಮಾರ್ ಕ್ರಿಮಿನಲ್‍ಗಳ, ರಸ್ತೆಯಲ್ಲಿ ಗೋಹತ್ಯೆ ಮಾಡುವವರ ನೇತಾರ ಎಂದು ಕೇಂದ್ರ ಸಚಿವೆ ಮತ್ತು ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಂಚಾಲಕರಾದ ಕು.ಶೋಭಾ ಕರಂದ್ಲಾಜೆ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ನಾಯಕರು ಅಪರಾಧಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಕೇಂದ್ರ ಸಚಿವೆ ಆರೋಪಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಎಚ್ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.