ಕನ್ನಡ ಸುದ್ದಿ  /  Nation And-world  /  Three Back-to-back Earthquakes Jolt Uttarkashi

Uttarkashi earthquakes: ಉತ್ತರಕಾಶಿಯಲ್ಲಿ ಸತತವಾಗಿ ಮೂರು ಬಾರಿ ಭೂಕಂಪ, ಮತ್ತೆ ಭಯದಲ್ಲಿ ಉತ್ತರಾಖಂಡದ ಜನತೆ

ಕೇವಲ 21 ನಿಮಿಷಗಳ ಅಂತರದಲ್ಲಿ ಮೂರು ಬಾರಿ ಭೂಕಂಪನ ಸಂಭವಿಸಿದೆ. ತಡರಾತ್ರಿ 12.40 ಗಂಟೆಗೆ ಮೊದಲ ಬಾರಿ ಭೂಕಂಪನವಾಗಿದೆ. ಕಿಟಕಿ ಗಾಜುಗಳ ಸದ್ದಿನಿಂದ ಜನರು ಭಯದಿಂದ ಹೊರಕ್ಕೆ ಬಂದಿದ್ದಾರೆ. ಬಳಿಕ 12:45 ಕ್ಕೆ ಮತ್ತು ಮತ್ತೊಮ್ಮೆ 1:01 ಗಂಟೆಗೆ ಭೂಕಂಪನವಾಗಿದೆ.

Uttarkashi earthquakes: ಉತ್ತರಕಾಶಿಯಲ್ಲಿ ಸತತವಾಗಿ ಮೂರು ಬಾರಿ ಭೂಕಂಪ (Representative Image)
Uttarkashi earthquakes: ಉತ್ತರಕಾಶಿಯಲ್ಲಿ ಸತತವಾಗಿ ಮೂರು ಬಾರಿ ಭೂಕಂಪ (Representative Image) (HT_PRINT)

ಉತ್ತರಕಾಶಿ: ನಿನ್ನೆ ರಾತ್ರಿ ಉತ್ತರಾಖಂಡದ ಉತ್ತರಕಾಶಿಯಲ್ಲಿ ಸತತವಾಗಿ ಮೂರುಬಾರಿ ಭೂಕಂಪನಗಳು ಸಂಭವಿಸಿವೆ. ಇದರಿಂದ ಭಯಬಿದ್ದ ಜನರು ಮನೆಯಿಂದ ಹೊರಕ್ಕೆ ಬಂದು ನೋಡಿದ್ದಾರೆ. ಕೇವಲ 21 ನಿಮಿಷಗಳ ಅಂತರದಲ್ಲಿ ಮೂರು ಬಾರಿ ಭೂಕಂಪನ ಸಂಭವಿಸಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.5ರಷ್ಟಿತ್ತು. ಭೂಕಂಪನದಿಂದ ಯಾವುದೇ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಆದರೆ, ಇತ್ತೀಚೆಗೆ ಭೂಕುಸಿತ ಇತ್ಯಾದಿ ನೈಸರ್ಗಿಕ ವಿಪತ್ತುಗಳಿಗೆ ಸಾಕ್ಷಿಯಾಗಿದ್ದ ಉತ್ತರಾಖಂಡದ ಜನತೆಯು ಇಂತಹ ಕಂಪನಗಳಿಂದ ಭಯಗೊಂಡಿದ್ದಾರೆ.

ಭೂಕಂಪನದ ಸಮಯದಲ್ಲಿ ಜನರು ಭಯದಿಂದ ಹೊರಕ್ಕೆ ಬಂದಿದ್ದಾರೆ. ನಿನ್ನೆ ತಡರಾತ್ರಿ 12.40 ಗಂಟೆಗೆ ಮೊದಲ ಬಾರಿ ಭೂಕಂಪನವಾಗಿದೆ. ಕಿಟಕಿ ಗಾಜುಗಳ ಸದ್ದಿನಿಂದ ಜನರು ಭಯದಿಂದ ಹೊರಕ್ಕೆ ಬಂದಿದ್ದಾರೆ. ಬಳಿಕ 12:45 ಕ್ಕೆ ಮತ್ತು ಮತ್ತೊಮ್ಮೆ 1:01 ಗಂಟೆಗೆ ಭೂಕಂಪನದ ಅನುಭವವಾಗಿದೆ.

ಉತ್ತರ ಕಾಶಿಯ ತಹಸಿಲ್‌ ಭಟ್ವಾಡಿಯ ಸಿರೋಹ್‌ ಅರಣ್ಯದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುತೇಕರು ಭೂಕಂಪನಗಳ ಬಳಿಕ ಮನೆಯ ಹೊರಗೆಯೇ ರಾತ್ರಿಯಿಡಿ ಕಳೆದರು.

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ ಫೆಬ್ರವರಿ ಕೊನೆಯ ವಾರದ ಭಾನುವಾರ ಮಧ್ಯಾಹ್ನ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ ಸುಮಾರು 5 ಸೆಂಟಿಮೀಟರ್ ಚಲಿಸುತ್ತಿದೆ. ಇದು ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಮುಖ ಹವಾಮಾನ ವಿಜ್ಞಾನಿ ಮತ್ತು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ.

ಹೈದರಾಬಾದ್ ಮೂಲದ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ಮುಖ್ಯ ವಿಜ್ಞಾನಿ ಮತ್ತು ಭೂಕಂಪಶಾಸ್ತ್ರಜ್ಞ ಡಾ ಎನ್ ಪೂರ್ಣಚಂದ್ರ ರಾವ್ ಮಂಗಳವಾರ ಎಎನ್‌ಐ ಜತೆ ಈ ವಿಚಾರ ಹಂಚಿಕೊಂಡಿದ್ದಾರೆ.

ಭೂಮಿಯ ಮೇಲ್ಮೈ ನಿರಂತರವಾಗಿ ಚಲನೆಯಲ್ಲಿರುವ ವಿವಿಧ ಪ್ಲೇಟ್‌ಗಳನ್ನು ಒಳಗೊಂಡಿದೆ. ಭಾರತೀಯ ಟೆಕ್ಟೋನಿಕ್ ಪ್ಲೇಟ್ ಪ್ರತಿ ವರ್ಷ 5 ಸೆಂಟಿಮೀಟರ್‌ ಚಲಿಸುತ್ತಿದೆ. ಹಿಮಾಲಯದ ಉದ್ದಕ್ಕೂ ಒತ್ತಡದ ಶೇಖರಣೆಗೆ ಕಾರಣವಾಗುತ್ತದೆ ಮತ್ತು ದೊಡ್ಡ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೂಕಂಪನದಲ್ಲಿ ಹಲವು ಸಾವಿರ ಜನರು ಮೃತರಾಗಿದ್ದಾರೆ.

ಟರ್ಕಿಯಲ್ಲಿ 72, 879 ಮಂದಿ ಗಾಯಗೊಂಡಿದ್ದರೆ, ಸಿರಿಯಾದಲ್ಲಿ 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅನೇಕ ಆಸ್ಪತ್ರೆಗಳು ಕುಸಿದು ಬಿದ್ದಿದ್ದು, ಚಿಕಿತ್ಸೆ ಕೊಡಿಸಲೂ ಪರದಾಡುವಂತಾಗಿದೆ.

2011ರಲ್ಲಿ ಜಪಾನ್​ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 18,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇದಕ್ಕಿಂತ ಭೀಕರ ಪರಿಸ್ಥಿತಿ ಟರ್ಕಿಗೆ ಬಂದೊದಗಿದೆ.

ಫೆಬ್ರವರಿ 6 ರಂದು ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಲಕ್ಷಾಂತರ ಮನೆಗಳು ಕುಸಿದಿವೆ. ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿವೆ.