ಕನ್ನಡ ಸುದ್ದಿ  /  Nation And-world  /  Tiktok Ceo Labels India's Ban 'Hypothetical' While Facing Us Congress

TikTok ban: ಭಾರತ ಟಿಕ್‌ಟಾಕ್‌ ನಿಷೇಧಿಸಿದ್ದು ಯಾಕೆ? ಯುಎಸ್‌ ಕಾಂಗ್ರೆಸ್‌ ಪ್ರಶ್ನೆಗೆ "ಕಾಲ್ಪನಿಕ" ಉತ್ತರ ನೀಡಿದ ಟಿಕ್‌ಟಾಕ್‌ ಸಿಇಒ

ಈ ವಿಚಾರಣೆ ಸಂದರ್ಭದಲ್ಲಿ ಭಾರತವು ಟಿಕ್‌ಟಾಕ್‌ ಮೇಲೆ ನಿಷೇಧ ಹೇರಿರುವ ಕುರಿತೂ ಪ್ರಶ್ನಿಸಲಾಯಿತು. ಶಾಸಕ ಡೆಬ್ಬಿ ಲೆಸ್ಕೊ ತನ್ನ ವಿಚಾರಣೆಯ ಸಮಯದಲ್ಲಿ ಭಾರತ ಮತ್ತು ಇತರೆ ಕೆಲವು ದೇಶಗಳು ಟಿಕ್‌ಟಾಕ್ ಮೇಲೆ ನಿಷೇಧ ಹೇರಿರುವ ಕುರಿತು ಪ್ರಶ್ನಿಸಿದ್ದಾರೆ.

TikTok ban: ಭಾರತ ಟಿಕ್‌ಟಾಕ್‌ ನಿಷೇಧಿಸಿದ್ದು ಯಾಕೆ? ಯುಎಸ್‌ ಕಾಂಗ್ರೆಸ್‌ ಪ್ರಶ್ನೆಗೆ "ಕಾಲ್ಪನಿಕ" ಉತ್ತರ ನೀಡಿದ ಟಿಕ್‌ಟಾಕ್‌ ಸಿಇಒ REUTERS/Evelyn Hockstein
TikTok ban: ಭಾರತ ಟಿಕ್‌ಟಾಕ್‌ ನಿಷೇಧಿಸಿದ್ದು ಯಾಕೆ? ಯುಎಸ್‌ ಕಾಂಗ್ರೆಸ್‌ ಪ್ರಶ್ನೆಗೆ "ಕಾಲ್ಪನಿಕ" ಉತ್ತರ ನೀಡಿದ ಟಿಕ್‌ಟಾಕ್‌ ಸಿಇಒ REUTERS/Evelyn Hockstein (REUTERS)

ವಾಷಿಂಗ್ಟನ್‌: ವಿವಿಧ ದೇಶಗಳಲ್ಲಿ ಟಿಕ್‌ಟಾಕ್‌ ಆಪ್‌ ನಿಷೇಧಿಸಲಾಗುತ್ತಿದ್ದು, ಇದೀಗ ಅಮೆರಿಕವೂ ಟಿಕ್‌ಟಾಕ್‌ ಅನ್ನು ವಿಚಾರಣೆ ನಡೆಸುತ್ತಿದೆ. ಟಿಕ್‌ಟಾಕ್‌ ಅನ್ನು ಚೀನಿ ಸರಕಾರ ನಿಯಂತ್ರಿಸುತ್ತಿದೆ ಎಂಬ ಅನುಮಾನ, ಭದ್ರತಾ ಕಾಳಜಿಗಳಿಂದ ಅಮೆರಿಕದಲ್ಲಿ ಟಿಕ್‌ಟಾಕ್‌ಗೆ ನಿಷೇಧ ಹೇರುವ ಕುರಿತು ಪರಿಶೀಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಟಿಕ್‌ಟಾಕ್‌ ಸಿಇಒ ಶೌ ಝಿ ಚೆವ್ ಅವರು ಯುಎಸ್‌ ಕಾಂಗ್ರೆಸ್‌ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಯುಎಸ್‌ ಕಾಂಗ್ರೆಸ್‌ನ ಹೌಸ್‌ ಎನರ್ಜಿ ಆಂಡ್‌ ಕಾಮರ್ಸ್‌ ಕಮಿಟಿಯಿಂದ ಕೇಳಲಾದ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಚೆವ್‌ ಪ್ರಯತ್ನಿಸಿದರು. ಅಮೆರಿಕಕ್ಕೆ ಟಿಕ್‌ಟಾಕ್‌ನಿಂದ ರಾಷ್ಟ್ರೀಯ ಭದ್ರತೆಗೆ ತೊಂದರೆ ಉಂಟಾಗದು ಎಂದು ಭರವಸೆ ನೀಡಲು ಅವರು ಪ್ರಯತ್ನಿಸಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆದಿದೆ. ಈ ಸಮಯದಲ್ಲಿ ಚೀನಾದ ಟೆಕ್‌ ಕಂಪನಿ ಬೈಟ್‌ಡಾನ್ಸ್‌ ಒಡೆತನದ ಕಂಪನಿಯು ಹಲವು ಸಮರ್ಥನೆಗಳನ್ನು ನೀಡಿದೆ. ವಿಶೇಷವಾಗಿ, ವಿಚಾರಣೆಯ ಸಮಯದಲ್ಲಿ ಚೆವ್‌ ಅವರು "ಚೀನಾ ಸರಕಾರದೊಂದಿಗೆ ಅಮೆರಿಕದ ಬಳಕೆದಾರರ ಡೇಟಾ ಹಂಚಿಕೊಳ್ಳುವುದಿಲ್ಲ ಮತ್ತು ಟಿಕ್‌ಟಾಕ್‌ ಅಪಾಯವನ್ನು ಉಂಟುಮಾಡುವುದಿಲ್ಲ" ಎಂದು ಸಮರ್ಥನೆಗಳನ್ನು ನೀಡಿದ್ದಾರೆ.

ಈ ವಿಚಾರಣೆ ಸಂದರ್ಭದಲ್ಲಿ ಭಾರತವು ಟಿಕ್‌ಟಾಕ್‌ ಮೇಲೆ ನಿಷೇಧ ಹೇರಿರುವ ಕುರಿತೂ ಪ್ರಶ್ನಿಸಲಾಯಿತು. ಶಾಸಕ ಡೆಬ್ಬಿ ಲೆಸ್ಕೊ ತನ್ನ ವಿಚಾರಣೆಯ ಸಮಯದಲ್ಲಿ ಭಾರತ ಮತ್ತು ಇತರೆ ಕೆಲವು ದೇಶಗಳು ಟಿಕ್‌ಟಾಕ್ ಮೇಲೆ ನಿಷೇಧ ಹೇರಿರುವ ಕುರಿತು ಉಲ್ಲೇಖಿಸಿದ್ದಾರೆ.

"ಮಿಸ್ಟರ್‌ ಚೆವ್‌ ಅವರೇ, ಟಿಕ್‌ಟಾಕ್‌ ಅಂತಿಮವಾಗಿ ಚೀನಾ ಸರಕಾರದ ನಿಯಂತ್ರಣದಲ್ಲಿರುವ ಒಂದು ಸಾಧನ. ಇದರಿಂದಾಗಿ ರಾಷ್ಟ್ರೀಯ ಭದ್ರತೆಯ ಕುರಿತು ಪ್ರಶ್ನೆಗಳು ಉಂಟಾಗುತ್ತವೆ. ಟಿಕ್‌ಟಾಕ್‌ ಕುರಿತು ನಿಷೇಧ ಹೇರಿರುವ ಈ ಎಲ್ಲಾ ದೇಶಗಳು, ಮಾತ್ರವಲ್ಲದೆ ನಮ್ಮ ಎಫ್‌ಬಿಐ ನಿರ್ದೇಶಕರ ಅಭಿಪ್ರಾಯ ಹೇಗೆ ತಪ್ಪಾಗಿರಬಹುದು?ʼʼ ಎಂದು ಲೆಸ್ಕೋ ಪ್ರಶ್ನಿಸಿದ್ದಾರೆ.

"ಈ ರೀತಿ ಅಪಾಯ ಇದೆ ಎಂದು ಭಾವಿಸಿರುವುದು ಕಾಲ್ಪನಿಕ ಮತ್ತು ಸೈದ್ಧಾಂತಿಕ ಅಪಾಯ ಎಂದು ನಾನು ಭಾವಿಸುತ್ತೇನೆ. ಟಿಕ್‌ಟಾಕ್‌ನಿಂದ ಅಪಾಯ ಉಂಟಾಗುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳನ್ನು ನಾನು ನೋಡಿಲ್ಲ" ಎಂದು ಚೆವ್‌ ಪ್ರತಿಕ್ರಿಯೆ ನೀಡಿದ್ದಾರೆ.

"ಭಾರತವು ಟಿಕ್‌ಟಾಕ್‌ ಅನ್ನು 2020ರಲ್ಲಿ ನಿಷೇಧಿಸಿದೆ. ಟಿಕ್‌ಟಾಕ್‌ ಬಳಸಿದ ಭಾರತೀಯ ನಾಗರಿಕರ ಡೇಟಾವನ್ನು ಕಂಪನಿಯ ಉದ್ಯೋಗಿಗಳು ಮತ್ತು ಕಂಪನಿಯ ಬೀಜಿಂಗ್‌ ಮೂಲಕದ ಪೋಷಕ ಕಂಪನಿ ನೋಡಬಹುದು ಎನ್ನುವುದನ್ನು ಫೋರ್ಬ್ಸ್‌ ಲೇಖನವು ಬಹಿರಂಗಪಡಿಸಿದೆ. ಕಂಪನಿಯ ಟೂಲ್‌ಗಳ ಸಾಮಾನ್ಯ ಆಕ್ಸೆಸ್‌ ಹೊಂದಿರುವ ಯಾರು ಬೇಕಾದರೂ ಬಳಕೆದಾರರ ಸಂಪರ್ಕ ಮತ್ತು ಸೂಕ್ಷ್ಮ ಮಾಹಿತಿಗಳನ್ನು ನೋಡಬಹುದು" ಎಂದು ಲೆಸ್ಕೋ ತನ್ನ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ.

2020ರಲ್ಲಿ ಖಾಸಗಿತನ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುವ ಕಾರಣಕ್ಕಾಗಿ ಭಾರತವು ಟಿಕ್‌ಟಾಕ್‌ ಮತ್ತು ಹಲವು ಚೀನಿ ಆಪ್‌ಗಳ ಮೇಲೆ ನಿಷೇಧ ಹೇರಿದೆ. ವಿಚಾಟ್‌, ಟಿಕ್‌ಟಾಕ್‌ ಸೇರಿದಂತೆ ಹಲವು ಆಪ್‌ಗಳ ಮೇಲೆ ನಿಷೇಧ ಹೇರಳಾಗಿದೆ. ಭಾರತ ಮತ್ತು ಚೀನಿ ಪಡೆಗಳಿಗೆ ಗಡಿಯಲ್ಲಿ ಕದನವಾದ ಬಳಿಕ ಈ ನಿಷೇಧ ಹೇರಲಾಗಿತ್ತು. ಖಾಸಗಿತನ ಮತ್ತು ಭದ್ರತೆ ಅಗತ್ಯಗಳಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಲು ಈ ಕಂಪನಿಗಳಿಗೆ ಅವಕಾಶ ನೀಡಲಾಗಿತ್ತು. 2021ರ ಜನವರಿಯಲ್ಲಿ ಈ ಆಪ್‌ಗಳ ಮೇಲೆ ಕಾಯಂ ನಿಷೇಧ ಹೇರಲಾಗಿತ್ತು.

IPL_Entry_Point