ಕನ್ನಡ ಸುದ್ದಿ  /  Nation And-world  /  Tina Dabi's Ex-husband Ias Officer Athar Amir Khan Gets Engaged, Shares Photo

ಐಎಎಸ್‌ ಅಧಿಕಾರಿ ಟೀನಾ ದಾಬಿ ಮಾಜಿ ಪತಿಗೆ ನಿಶ್ಚಿತಾರ್ಥ, ಅಮಿರ್‌ ಖಾನ್‌ಗೆ ಎಂಗೇಜ್‌ ಆದ ವಧು ಯಾರು?

2015ರ ಬ್ಯಾಚ್‌ನ ಐಎಎಸ್‌ ಪರೀಕ್ಷೆಯಲ್ಲಿ ದೇಶಕ್ಕೆ ಅಗ್ರ ಎರಡನೇ ಸ್ಥಾನ ಪಡೆದಿದ್ದ ಅಥರ್‌ ಅಮೀರ್‌ ಖಾನ್‌ ಅವರು ಡಾ. ಮೆಹ್ರೀನ್‌ ಕಾಜ್‌ ಅವರೊಂದಿಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.

ಐಎಎಸ್‌ ಅಧಿಕಾರಿ ಟೀನಾ ದಾಬಿ ಮಾಜಿ ಪತಿಗೆ ನಿಶ್ಚಿತಾರ್ಥ, ಅಮಿರ್‌ಗೆ ಎಂಗೇಜ್‌ ಆದ ವಧು ಯಾರು?
ಐಎಎಸ್‌ ಅಧಿಕಾರಿ ಟೀನಾ ದಾಬಿ ಮಾಜಿ ಪತಿಗೆ ನಿಶ್ಚಿತಾರ್ಥ, ಅಮಿರ್‌ಗೆ ಎಂಗೇಜ್‌ ಆದ ವಧು ಯಾರು?

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಐಎಎಸ್‌ ಟಾಪರ್‌ಗಳ ವಿವಾಹವಾಗಿರುವ ಕಾರಣ ಸುದ್ದಿಯಲ್ಲಿದ್ದ ಟೀನಾ ದಾಬಿಯ ಮಾಜಿ ಪತಿಗೆ ಕೊನೆಗೂ ಮತ್ತೊಬ್ಬಳು ವಧು ದೊರಕಿದ್ದಾಳೆ. 2015ರ ಬ್ಯಾಚ್‌ನ ಐಎಎಸ್‌ ಪರೀಕ್ಷೆಯಲ್ಲಿ ದೇಶಕ್ಕೆ ಅಗ್ರ ಎರಡನೇ ಸ್ಥಾನ ಪಡೆದಿದ್ದ ಅಥರ್‌ ಅಮೀರ್‌ ಖಾನ್‌ ಅವರು ಡಾ. ಮೆಹ್ರೀನ್‌ ಕಾಜ್‌ ಅವರೊಂದಿಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಅಮೀರ್‌ ಖಾನ್‌ಗೆ ಡೈವೋರ್ಸ್‌ ನೀಡಿದ ಬಳಿಕ ಐಎಎಸ್‌ ಅಧಿಕಾರಿ ಟೀನಾ ದಾಬಿ ಅವರು ಡಾ. ಪ್ರದೀಪ್‌ ಗವಾಂಡೆ ಅವರನ್ನು ವಿವಾಹವಾಗಿದ್ದರು. ಇದೀಗ ಟೀನಾಳ ಮಾಜಿ ಪತಿಗೂ ಹೆಣ್ಣು ಸಿಕ್ಕಿದ್ದು ಶೀಘ್ರದಲ್ಲಿ ಮದುವೆಯಾಗುವ ನಿರೀಕ್ಷೆಯಿದೆ.

ಐಎಎಸ್‌ ಅಧಿಕಾರಿ ಅಮೀರ್‌ ಖಾನ್‌ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ವಧು ಡಾ. ಮೆಹ್ರೀನ್‌ ಕಾಜ್‌ ಕೂಡ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೊ ಹಂಚಿಕೊಂಡಿದ್ದಾರೆ. ಇದೇ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಟೀನಾ ದಾಬಿಗೆ ಮರುಮದುವೆಯಾಗಿತ್ತು. ಕೆಲವೇ ತಿಂಗಳಲ್ಲಿ ಟೀನಾ ಅವರ ಮಾಜಿ ಪತಿಯೂ ಎಂಗೇಜ್ಡ್‌ ಆಗಿದ್ದಾರೆ.

ಅಥರ್‌ ಅಮೀರ್‌ ಖಾನ್‌ ಅವರು ೨೦೧೮ರಲ್ಲಿ ಟೀನಾ ದಾಬಿಯನ್ನು ಮದುವೆಯಾಗಿದ್ದರು. ನವದೆಹಲಿಯಲ್ಲಿ ೨೦೧೫ರಲ್ಲಿ ನಡೆದ ಐಎಎಸ್‌ ಅಭಿನಂದನಾ ಸಮಾರಂಭದಲ್ಲಿ ಇವರಿಬ್ಬರು ಪರಸ್ಪರ ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲಿಯೇ ಲವ್‌ ಆಗಿ ಮದುವೆಯ ನಿರ್ಧಾರಕ್ಕೆ ಬಂದಿದ್ದರು. ಸುಂದರ ಮುಖದ ಟೀನಾ ದಾಬಿಯು ೨೦೧೫ರ ಐಎಎಸ್‌ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರಾಂಕ್‌ ಬಂದು ಸುದ್ದಿಯಾಗಿದ್ದರು. ಅಂತರ್‌ ಧರ್ಮೀಯ ಮದುವೆಯಲ್ಲಿ ಹಲವು ರಾಜಕಾರಣಿಗಳು ಭಾಗಿಯಾಗಿ ನವದಂಪತಿಗಳು ಶುಭಕೋರಿದ್ದರು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಒಂದಿಷ್ಟು ವರ್ಷಗಳ ಬಳಿಕ ಇವರಿಬ್ಬರು ಪರಸ್ಪರ ವಿಚ್ಛೇಧನ ನೀಡಲು ಮುಂದಾದರು. ನವೆಂಬರ್‌ ೨೦೨೦ರಲ್ಲಿ ಟೀನಾ ದಾಬಿ ಮತ್ತು ಅಥರ್‌ ಅವರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡೀವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ಅವರಿಗೆ ೨೦೨೧ರ ಆಗಸ್ಟ್‌ನಲ್ಲಿ ಡೀವೋರ್ಸ್‌ ದೊರಕಿತ್ತು.

ಇವರಿಬ್ಬರು ಮದುವೆಯಾದ ಸಂದರ್ಭದಲ್ಲಿ ನವದಂಪತಿಗಳಿಗೆ ಅನುಕೂಲವಾಗಲಿ ಎಂದು ಒಂದೇ ನಗರದಲ್ಲಿ ಇವರಿಬ್ಬರಿಗೆ ಹುದ್ದೆ ಹಂಚಿಕೆ ಮಾಡಲಾಗಿತ್ತು. ಇವರಿಬ್ಬರು ರಾಜಸ್ಥಾನದ ಬಿಲ್ವಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಟೀನಾ ಅವರನ್ನು ಚೀಫ್‌ ಎಕ್ಸಿಕ್ಯುಟಿವ್‌ ಅಧಿಕಾರಿಯಾಗಿ ಶ್ರೀಗಂಗಾನಗರಕ್ಕೆ ನೇಮಕ ಮಾಡಲಾಯಿತು. ಅಥರ್‌ ಅವರನ್ನು ಝಿಲ್‌ ಪರಿಷದ್‌ನ ಸಿಇಒ ಆಗಿ ಜೈಪುರಕ್ಕೆ ವರ್ಗಾಯಿಸಲಾಯಿತು. ಅಥರ್‌ ಅವರನ್ನು ರಾಜಸ್ಥಾನ ಕೇಡರ್‌ನಿಂದ ಜಮ್ಮು ಮತ್ತು ಕಾಶ್ಮೀರ ಕೇಡರ್‌ಗೆ ವರ್ಗಾಯಿಸಲಾಗಿತ್ತು. ಈಗ ಇವರು ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಟೀನಾ ದಾಬಿ ಅವರು ರಾಜಸ್ಥಾನ ಸರಕಾರದ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟೀನಾ ದಾಬಿ ಅವರ ಈಗಿನ ಪತಿ ಡಾ. ಪ್ರದೀಪ್‌ ಅವರು ೨೦೧೩ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದರು. ಇವರು ರಾಜಸ್ಥಾನದ ಆರ್ಕಿಯೊಲಜಿ ಮತ್ತು ಮ್ಯೂಸಿಯಂನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

IPL_Entry_Point

ವಿಭಾಗ