ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ, ಮದುವೆಯ ಸೀಸನ್ ಹಿನ್ನೆಲೆಯಲ್ಲಿ ನವದಂಪತಿಗಳಿಗೆ ದೇವರ ದರ್ಶನದ ವಿಶಿಷ್ಟ ಅವಕಾಶವನ್ನು ನೀಡಲಾಗುತ್ತಿದೆ ಎಂದು ಹೇಳಿದೆ. ನವದಂಪತಿ ಕೋಟಾದಲ್ಲಿ ಎಷ್ಟು ಟಿಕೆಟ್‌ ಇವೆ, ದರ ಮತ್ತು ಇತರೆ ವಿವರ ಇಲ್ಲಿದೆ.

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ (ಸಾಂಕೇತಿಕ ಚಿತ್ರ)
ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ (ಸಾಂಕೇತಿಕ ಚಿತ್ರ)

ತಿರುಮಲ: ಸದ್ಯ ವಿವಾಹದ ಸೀಸನ್. ನವಜೋಡಿ ತಿರುಮಲ ತಿರುಪತಿ ದೇವರ ದರ್ಶನಕ್ಕೆ ಆಗಮಿಸುವುದು ಸಹಜ. ಅನೇಕರಿಗೆ ದೇವರ ದರ್ಶನ ಸುಲಭವಾಗಿ ಆಗುತ್ತಿಲ್ಲ ಎಂಬುದನ್ನು ಮನಗಂಡ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಹೊಸದಾಗಿ ಮದುವೆಯಾದ ಜೋಡಿಗೆ ವಿಶೇಷ ದೇವರ ದರ್ಶನ ಟಿಕೆಟ್ ಘೋಷಿಸಿದೆ.

ತಿರುಮಲ ತಿರುಪತಿ ದೇವಸ್ಥಾನವು ಮದುವೆಯ ಸೀಸನ್ ಹಿನ್ನೆಲೆಯಲ್ಲಿ ನವದಂಪತಿಗಳಿಗೆ ದೇವರ ದರ್ಶನದ ವಿಶಿಷ್ಟ ಅವಕಾಶವನ್ನು ನೀಡುತ್ತಿದೆ. ಇತ್ತೀಚೆಗೆ ವಿವಾಹವಾದ ಜೋಡಿಗಳು ಈಗ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ದೈವಿಕ ಆಶೀರ್ವಾದವನ್ನು ಪಡೆಯಬಹುದು ಎಂದು ಟಿಟಿಡಿ ಹೇಳಿದೆ.

ಮದುವೆಯಾದ ತತ್‌ಕ್ಷಣ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವುದು ಕೆಲವು ಸಮುದಾಯದವರ ಸಂಪ್ರದಾಯವಾಗಿದ್ದು, ಇದನ್ನು ಈಡೇರಿಸುವುದಕ್ಕೆ ಈಗ ಟಿಟಿಡಿ ಮುಂದಾಗಿದೆ. ಹೀಗಾಗಿಯೇ ನವಜೋಡಿಗೆ ದೇವರ ದರ್ಶನದ ಟಿಕೆಟ್ ಘೋಷಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ತಾನಮ್ಸ್ ಹೇಳಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ನವಜೋಡಿ ನೆನಪಿಡಬೇಕಾದ ಅಂಶ

ಮದುವೆಯಾದ ನವಜೋಡಿ, ತಮ್ಮ ಮದುವೆಯ ಉಡುಪನ್ನು ಧರಿಸಿಯೇ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲು ಹೋಗಬೇಕು. ಮದುವೆಯು ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಹೊಸ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ವೆಂಕಟೇಶ್ವರನ ಆಶೀರ್ವಾದವನ್ನು ಪಡೆಯುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿರುವ ವಿವರ ಹೇಳಿದೆ.

ನಂಬಿಕೆಗಳ ಪ್ರಕಾರ, ಭಕ್ತರಾದ ದಂಪತಿಗಳು ಶ್ರೀವಾರಿ ಕಲ್ಯಾಣೋತ್ಸವದಲ್ಲಿ ಭಾಗವಹಿಸಲು ದೇವಸ್ಥಾನಕ್ಕೆ ಬರುತ್ತಾರೆ. ವಿವಾಹಿತ ದಂಪತಿಗಳು ತಮ್ಮ ಜೀವನದಲ್ಲಿ ಅದೃಷ್ಟ, ಪ್ರೀತಿ, ಶಾಂತಿ ಮತ್ತು ಸಮೃದ್ಧಿಯಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ನವಜೋಡಿ ವಿಶೇಷ ದರ್ಶನ ಟಿಕೆಟ್ ಪಡೆಯಬೇಕಾದರೆ ಈ ಅಂಶಗಳು ಗಮನದಲ್ಲಿರಲಿ..

ಶ್ರೀವಾರಿ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಳ್ಳುವುದಕ್ಕೆ ನವದಂಪತಿಗಳು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇದು ನವವಿವಾಹಿತರ ಜೀವನದಲ್ಲಿ ಅದೃಷ್ಟ, ಪ್ರೀತಿ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದು ನಂಬಿಕೆ. ಒಂದು ವಾರದ ಹಿಂದೆ ವಿವಾಹವಾದ ದಂಪತಿಗಳು ತಿರುಮಲದಲ್ಲಿ ಕಲ್ಯಾಣೋತ್ಸವಂ ಸೇವೆಗೆ ಅರ್ಜಿ ಸಲ್ಲಿಸಬಹುದು.

ತಿರುಮಲ ತಿರುಪತಿ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ನವವಿವಾಹಿತ ದಂಪತಿಗಳಿಗೆ ದಿನಕ್ಕೆ 20 ಟಿಕೆಟ್‌ಗಳನ್ನು ಕಾಯ್ದಿರಿಸುತ್ತದೆ. ಟಿಕೆಟ್‌ನ ಬೆಲೆ 1000 ರೂಪಾಯಿ. ಟಿಕೆಟ್‌ಗಳು ಕಲ್ಯಾಣೋತ್ಸವ ಮತ್ತು ವಿಶೇಷ ದರ್ಶನ ಎರಡಕ್ಕೂ ಮಾನ್ಯವಾಗಿರುತ್ತವೆ.

ಈ ಟಿಕೆಟ್ ಪಡೆಯಲು, ಕೆಲವು ಅವಶ್ಯಕತೆಗಳನ್ನು ನವವಿವಾಹಿತ ಜೋಡಿ ಪೂರೈಸಬೇಕು. ಮೊದಲಿಗೆ, ನವವಿವಾಹಿತರು ಸಿಆರ್‌ಒ ಕಚೇರಿಯ ಆರ್ಜಿತ ಸೇವಾ ಲಕ್ಕಿ ಡಿಪ್ ಕೌಂಟರ್‌ಗೆ ಹೋಗಬೇಕು. ಅಲ್ಲಿ ಅವರು ತಮ್ಮ ಮದುವೆಯ ಫೋಟೋಗಳನ್ನು ಗುರುತಿನ ರೂಪದಲ್ಲಿ ತೋರಿಸಬೇಕು. ಇದಲ್ಲದೆ, ಅವರು ದೇವಸ್ಥಾನಕ್ಕೆ ಹೋಗುವ ಒಂದು ವಾರದ ಮೊದಲು ವಿವಾಹವಾಗಿರಬೇಕು. ವಾರಕ್ಕೂ ಮೊದಲು ವಿವಾಹವಾದವರಿಗೆ ಅವಕಾಶ ಇಲ್ಲ. ಗುರುತಿಗಾಗಿ ಆಧಾರ್ ಅನ್ನೂ ಒದಗಿಸಬೇಕು. ಇಷ್ಟಾದ ಬಳಿಕ ಟಿಕೆಟ್ ನೀಡುವ ಪ್ರಕ್ರಿಯೆಯನ್ನು ಟಿಟಿಡಿ ಪೂರ್ಣಗೊಳಿಸುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.