ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

ಭಾರತದ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು ನಡೆಯಲಿದ್ದು, ಮೇ ತಿಂಗಳ ಉತ್ಸವ ವೇಳಾಪಟ್ಟಿಯನ್ನು ಟಿಟಿಡಿ ಪ್ರಕಟಿಸಿದೆ. ಅದರ ವಿವರ ಇಲ್ಲಿದೆ.

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು ನಡೆಯಲಿದ್ದು, ಮೇ ತಿಂಗಳ ಉತ್ಸವ ವೇಳಾಪಟ್ಟಿಯನ್ನು ಟಿಟಿಡಿ ಪ್ರಕಟಿಸಿದೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು ನಡೆಯಲಿದ್ದು, ಮೇ ತಿಂಗಳ ಉತ್ಸವ ವೇಳಾಪಟ್ಟಿಯನ್ನು ಟಿಟಿಡಿ ಪ್ರಕಟಿಸಿದೆ. (HT Telugu)

ತಿರುಮಲ: ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರತಿ ತಿಂಗಳು ಕೂಡ ಒಂದಿಲ್ಲೊಂದು ವಿಶೇಷ ಉತ್ಸವಗಳು ನಿರಂತರ ನಡೆಯುತ್ತಿರುತ್ತದೆ. ಈ ಉತ್ಸವಗಳ ವೇಳಾಪಟ್ಟಿಯನ್ನು ದೇವಸ್ಥಾನದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಹಿಂದಿನ ತಿಂಗಳೇ ಪ್ರಕಟಿಸುತ್ತದೆ. ಇದರಂತೆ, ಈ ತಿಂಗಳ ( ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮೇ ತಿಂಗಳ ಉತ್ಸವ ವೇಳಾಪಟ್ಟಿ) ಉತ್ಸವ ವೇಳಾಪಟ್ಟಿಯನ್ನು ಟಿಟಿಡಿ ಪ್ರಕಟಿಸಿದೆ.

ಟ್ರೆಂಡಿಂಗ್​ ಸುದ್ದಿ

ಇನ್ನು ಕಳೆದ ತಿಂಗಳ ಅಂದರೆ ಏಪ್ರಿಲ್ ಕೊನೆಯ ಭಾಗದಲ್ಲಿ ವಿಶೇಷವಾಗಿ ಏಪ್ರಿಲ್ 28ರಂದು 86,241 ಭಕ್ತರು ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯವರ ದರ್ಶನ ಪಡೆದರು. ಈ ಪೈಕಿ31,730 ಭಕ್ತರು ವಿವಿಧ ಪ್ರಮುಖ ಸೇವೆಗಳನ್ನು ಸಲ್ಲಿಸಿದರು. ಹುಂಡಿಗೆ 3.65 ಕೋಟಿ ರೂಪಾಯಿ ಕಾಣಿಕೆ ಬಂದಿದೆ. ಸದ್ಯ ಸರ್ವದರ್ಶನ ಸರದಿ ಕಾಯುವಿಕೆ ಅವಧಿ 8 ಗಂಟೆ ಇದೆ ಎಂದು ಟಿಟಿಡಿ ತಿಳಿಸಿದೆ.

ಮೇ ತಿಂಗಳ ತಿರುಮಲ ಉತ್ಸವ (Tirumala Festivals) ವೇಳಾಪಟ್ಟಿ

ಮೇ 3 - ಭಾಷ್ಯಕರ ಉತ್ಸವ

ಮೇ 4 - ಸರ್ವೈಕಾದಶಿ

ಮೇ 10 - ಅಕ್ಷಯ ತೃತೀಯ

ಮೇ 12 - ಭಾಷ್ಯಕರ ಸತ್ತುಮೋರ, ರಾಮಾನುಜ ಜಯಂತಿ, ಶಂಕರ ಜಯಂತಿ

ಮೇ 17 ರಿಂದ 19 ರ ತನಕ - ಪದ್ಮಾವತಿ ಪರಿಣಯೋತ್ಸವಂ

ಮೇ 22 - ನೃಸಿಂಹ ಜಯಂತಿ, ತರಿಗೊಂಡ ವೆಂಗಮಾಂಬ ಜಯಂತಿ

ಮೇ 23 - ಅನ್ನಮಾಚಾರ್ಯ ಜಯಂತಿ, ಕೂರ್ಮ ಜಯಂತಿ

ಮೇ 22 ರಿಂದ 24 ರವರೆಗೆ ತಿರುಚಾನೂರು ಪದ್ಮಾವತಿ ಅಮ್ಮವಾರಿ ವಸಂತೋತ್ಸವ

ತಿರುಚಾನೂರು ಶ್ರೀ ಪದ್ಮಾವತಿ ಅಮ್ಮವಾರಿ ದೇವಸ್ಥಾನ (ತಿರುಚನೂರು ಪದ್ಮಾವತಿ ದೇವಸ್ಥಾನ)ದ ವಸಂತೋತ್ಸವ ಮೇ 22 ರಿಂದ 24 ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಇದಕ್ಕಾಗಿ ಮೇ 21 ರಂದು ಸಂಜೆ 6 ಗಂಟೆಗೆ ಅಂಕುರಾರ್ಪಣೆ ನಡೆಯಲಿದೆ. ಭಕ್ತರು ತಲಾ 150 ರೂಪಾಯಿ ಪಾವತಿಸಿ ವಸಂತೋತ್ಸವದಲ್ಲಿ ಭಾಗವಹಿಸಬಹುದು. ಈ ಮಹೋತ್ಸವದ ಅಂಗವಾಗಿ ಮೇ 23ರಂದು ಬೆಳಗ್ಗೆ 7.45ಕ್ಕೆ ಚಿನ್ನದ ರಥೋತ್ಸವ ನಡೆಯಲಿದೆ.

ವಸಂತೋತ್ಸವ ನಡೆಯುವ ಮೂರು ದಿನಗಳ ಪೈಕಿ ಶುಕ್ರವಾರ ಉದ್ಯಾನದಲ್ಲಿ ಅಪರಾಹ್ನ 2.30 ರಿಂದ ಸಂಜೆ 4.30 ರವರೆಗೆ ಅಮ್ಮವಾರಿ ಉತ್ಸವದ ಉತ್ಸವಾದಿಗಳಿಗೆ ಸ್ನಪನ ತಿರುಮಂಜನ ನಡೆಯಲಿದೆ. ಸಂಜೆ 7.30 ರಿಂದ 8.30 ರವರೆಗೆ ದೇವಸ್ಥಾನದ ನಾಲ್ಕು ಮದಗ ಬೀದಿಗಳಲ್ಲಿ ಅಮ್ಮನವರು ಭಕ್ತರಿಗೆ ದರ್ಶನ ನೀಡಲಿದ್ದಾರೆ.

ಮೇ 14 ರಂದು ಕೋಯಿಲ್ ಆಳ್ವಾರ್ ತಿರುಮಂಜನಂ

ಶ್ರೀ ಪದ್ಮಾವತಿ ದೇವಿಯ ವಾರ್ಷಿಕ ವಸಂತೋತ್ಸವದ ನಿಮಿತ್ತ ಮೇ 14 ರಂದು ದೇವಸ್ಥಾನದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನವನ್ನು ಆಯೋಜಿಸಲಾಗಿದೆ. ಬೆಳಗ್ಗೆ ದೇವಿಯನ್ನು ಎಬ್ಬಿಸಿದ ನಂತರ 6 ರಿಂದ 9ರವರೆಗೆ ಕೊಯಿಲ್ ಆಳ್ವಾರ್ ತಿರುಮಂಜನ ನಡೆಯಲಿದೆ.

ಇದರಲ್ಲಿ ದೇವಾಲಯದ ಆವರಣ, ಗೋಡೆಗಳು, ಛಾವಣಿ, ಪೂಜಾ ಸಾಮಗ್ರಿಗಳು ಮುಂತಾದವುಗಳನ್ನು ನೀರಿನಿಂದ ಶುದ್ಧೀಕರಿಸಲಾಗುವುದು. ನಾಮಕೋಪು, ಶ್ರೀಚೂರ್ಣಂ, ಕಸ್ತೂರಿ ಅರಿಶಿನ, ಪಚ್ಚಕು, ಗಡ್ಡ ಕರ್ಪೂರ, ಶ್ರೀಗಂಧದ ಪುಡಿ, ಕುಂಕುಮ ಮತ್ತು ಕಿಚ್ಚಿಲಿಗಡ್ಡ ಮಸಾಲೆಗಳೊಂದಿಗೆ ಪವಿತ್ರ ನೀರನ್ನು ದೇವಾಲಯದಾದ್ಯಂತ ಪ್ರತಿಷ್ಠಾಪಿಸಲಾಗುತ್ತದೆ.

ಬೆಳಗ್ಗೆ 9 ಗಂಟೆಯಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಬ್ಬಗಳ ಕಾರಣ ಮೇ 14, ಮೇ 21 ರಿಂದ 24 ರ ತನಕ ಕಲ್ಯಾಣೋತ್ಸವ, ಸಹಸ್ರದೀಪಾಲಂಕರಸೇವೆ, ಮೇ 23 ರಂದು ತಿರುಪ್ಪವಾಡ ಸೇವೆ ಮತ್ತು ಮೇ 24 ರಂದು ಲಕ್ಷ್ಮೀ ಪೂಜೆ ಆರ್ಜಿತಸೇವೆಯನ್ನು ಟಿಟಿಡಿ ರದ್ದುಗೊಳಿಸಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

IPL_Entry_Point