ತಿರುಮಲ ದೇಗುಲದ ಮಹಾದ್ವಾರ ತನಕವೂ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ವಿಡಿಯೋ ವೈರಲ್, ವ್ಯಾಪಕ ಟೀಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಮಲ ದೇಗುಲದ ಮಹಾದ್ವಾರ ತನಕವೂ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ವಿಡಿಯೋ ವೈರಲ್, ವ್ಯಾಪಕ ಟೀಕೆ

ತಿರುಮಲ ದೇಗುಲದ ಮಹಾದ್ವಾರ ತನಕವೂ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ವಿಡಿಯೋ ವೈರಲ್, ವ್ಯಾಪಕ ಟೀಕೆ

Slippers In Tirupati Temple: ತಿರುಮಲ ತಿರುಪತಿ ದೇವಸ್ಥಾನದ ಮಹಾದ್ವಾರದ ತನಕ ಮೂವರು ಭಕ್ತರು ಚಪ್ಪಲಿ ಧರಿಸಿ ಹೋಗಿರುವುದು ಟೀಕೆಗೆ ಗುರಿಯಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಟೀಕೆ, ಅಸಮಾಧಾನ ವ್ಯಕ್ತವಾಗಿದೆ.

ತಿರುಮಲ ದೇಗುಲದ ಮಹಾದ್ವಾರ ತನಕವೂ ಮೂವರು ಭಕ್ತರು ಚಪ್ಪಲಿ ಧರಿಸಿ ಹೋದ ವಿಡಿಯೋ ವೈರಲ್ ಆಗಿದೆ.
ತಿರುಮಲ ದೇಗುಲದ ಮಹಾದ್ವಾರ ತನಕವೂ ಮೂವರು ಭಕ್ತರು ಚಪ್ಪಲಿ ಧರಿಸಿ ಹೋದ ವಿಡಿಯೋ ವೈರಲ್ ಆಗಿದೆ.

Slippers In Tirupati Temple: ಆಂಧ್ರ ಪ್ರದೇಶದ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದ ಆಡಳಿತ ಸಡಿಲವಾಗಿದೆ ಎಂಬ ಟೀಕೆ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾಗಿದ್ದು ಒಂದು ವೈರಲ್ ವಿಡಿಯೋ. ಹೌದು, ತಿರುಮಲ ತಿರುಪತಿ ದೇವಸ್ಥಾನದ ಮಹಾದ್ವಾರದ ತನಕ ಮೂವರು ಭಕ್ತರು ಚಪ್ಪಲಿ ಧರಿಸಿ ಹೋದ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಟಿಟಿಡಿ ಆಡಳಿತ ಹಿಡಿತ ತಪ್ಪಿದೆ ಎಂಬ ಅಸಮಾಧಾನ, ಆಕ್ಷೇಪಗಳು ಕಂಡುಬಂದಿವೆ.

ತಿರುಮಲ ಮಹಾದ್ವಾರ ತನಕ ಚಪ್ಪಲಿ ಧರಿಸಿ ಹೋದ 3 ಭಕ್ತರ ವಿಡಿಯೋ ವೈರಲ್

ತಿರುಮಲ ತಿರುಪತಿ ದೇವಸ್ಥಾನದ ಮಹಾದ್ವಾರದ ತನಕ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ನಡೆ ಕೂಡ ಅಸಮಾಧಾನಕ್ಕೆ ಕಾರಣವಾಗಿದೆ. ದೇವಸ್ಥಾನದ ಸಂಪ್ರದಾಯ, ಅಚರಣೆಗಳ ಅರಿವು ಇಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಸಾಮಾಜಿಕ ತಾಣಗಳಲ್ಲಿ ಕಂಡುಬಂದಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯದಲ್ಲಿ, ದೇವಸ್ಥಾನದ ಮಹಾದ್ವಾರದ ಸಮೀಪ ಮೂವರು ಭಕ್ತರು ಬಿಳಿ ಚಪ್ಪಲಿ ಧರಿಸಿ ಸರದಿಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಚಪ್ಪಲಿ ಬಿಟ್ಟು ದೇವಸ್ಥಾನದೊಳಗೆ ಹೋಗುವಂತೆ ಸೂಚಿಸಿದರು. ಕೂಡಲೇ ಆ ಮೂವರು ಚಪ್ಪಲಿಯನ್ನು ಎಲ್ಲಿದ್ದರೋ ಅಲ್ಲೇ ಬಿಟ್ಟು ಮುಂದೆ ಸಾಗುತ್ತಿರುವ ದೃಶ್ಯವಿದೆ. ಬಳಿಕ ಕ್ಯಾಮೆರಾ ಆ ಚಪ್ಪಲಿಗಳನ್ನು ಫೋಕಸ್ ಮಾಡಿದೆ.

ಶ್ರೀವಾಣಿ ಟಿಕೆಟ್ಸ್ ಪಡೆದು ಬಂದ ಶ್ರೀಮಂತ ಭಕ್ತರು

ಮಾಧ್ಯಮ ವರದಿಗಳ ಪ್ರಕಾರ, ಈ ಮೂವರು ಶ್ರೀಮಂತ ಭಕ್ತರು ಶ್ರೀವಾಣಿ ಟಿಕೆಟ್ ಪಡೆದು ಬಾಲಾಜಿ ದರ್ಶನಕ್ಕೆ ಆಗಮಿಸಿದ್ದರು. ಅವರು ವೈಕುಂಠ ಕ್ಯೂ ಕಾಂಪ್ಲೆಕ್ಸ್‌ನ ಎರಡು ಭದ್ರತಾ ತಡೆ ದಾಟಿ ಮಹಾದ್ವಾರದ ಸಮೀಪ ಬಂದಿದ್ದರು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಈ ಮೂವರು ಚಪ್ಪಲಿ ಧರಿಸಿರುವುದನ್ನು ಗಮನಿಸಿರಲಿಲ್ಲವೇ ? ಎಂಬ ಸಂದೇಹ ವ್ಯಕ್ತವಾಗಿದೆ. ಅಲ್ಲದೆ ಭದ್ರತಾ ಲೋಪ ಇದು ಎಂಬ ಮಾತೂ ಕೇಳಿಬಂದಿದೆ. ಸಾಮಾನ್ಯವಾಗಿ ಭಕ್ತರು ಕೂಡ ಈ ರೀತಿ ಬೇರೆ ಭಕ್ತರು ಚಪ್ಪಲಿ ಧರಿಸಿ ಬಂದರೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲಿ ಅಂತಹ ಘಟನೆಗಳಾಗಿರುವ ಮಾಹಿತಿ ಇಲ್ಲ. ಇವೆಲ್ಲವೂ ಸಂದೇಹಗಳಿಗೆ ಕಾರಣವಾಗಿದೆ.

ರಾಜಕೀಯ ವಾಕ್ಸಮರಕ್ಕೆ ಕಾರಣವಾಯಿತು ಘಟನೆ

ತಿರುಮಲ ತಿರುಪತಿ ದೇವಸ್ಥಾನದ ಮಹಾದ್ವಾರದ ತನಕ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ನಡೆ ರಾಜಕೀಯ ವಾಕ್ಸಮರಕ್ಕೂ ಕಾರಣವಾಯಿತು. ವೈಎಸ್‌ಆರ್‌ಸಿಪಿ ಈ ಘಟನೆಯನ್ನು ಖಂಡಿಸಿದ್ದು, ಟಿಟಿಡಿ ಆಡಳಿತ ಹಿಡಿತ ಕಳೆದುಕೊಂಡಿದೆ. ದೇವಸ್ಥಾನದಲ್ಲಿ ಭದ್ರತಾ ಲೋಪವಾಗಿದೆ. ನಿಗಾ ವೈಫಲ್ಯ ಮತ್ತು ಭದ್ರತಾ ಸಿಬ್ಬಂದಿಗಳ ಲೋಪ ಎಂದು ಟೀಕಿಸಿದೆ.

ಈ ಘಟನೆಯು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಆಡಳಿತದ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿದೆ, ಅನೇಕರು ದೇವಾಲಯದ ಭದ್ರತೆ ಮತ್ತು ಜಾಗರೂಕತೆಯ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ. ಪವಿತ್ರ ದೇವಾಲಯದ ಪಾವಿತ್ರ್ಯವನ್ನು ರಕ್ಷಿಸಲು ಭಕ್ತರು ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ರಾಜಕೀಯ ಪಕ್ಷಗಳ ನಾಯಕರೂ ಈ ಬಗ್ಗೆ ಜಾಗೃತವಾಗುವಂತೆ ಟಿಟಿಡಿಯನ್ನು ಒತ್ತಾಯಿಸಿದ್ಧಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.