PM Modi: 400 ದಿನಗಳಲ್ಲಿ ದೇಶದ ಪ್ರತಿ ಮತದಾರನನ್ನೂ ತಲುಪಲು ಪ್ರಯತ್ನಿಸಿ: ಕಾರ್ಯಕಾರಣಿ ಸಭೆಯಲ್ಲಿ ಮೋದಿ ಕರೆ
2024ರ ಸಾರ್ವತ್ರಿಕ ಚುನಾವಣೆಗಳಿಗೆ ಇನ್ನೂ ಕೇವಲ 400 ದಿನಗಳು ಉಳಿದಿದ್ದು, ದೇಶದ ಪ್ರತಿ ಮತದಾರರನ್ನೂ ತಲುಪಲು ಕಾರ್ಯಕರ್ತರು ಪ್ರಯತ್ನಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನರ ಸೇವೆಗಾಗಿ ನಾವು ಸಾಧ್ಯವಾದ ಎಲ್ಲವನ್ನೂ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.
ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಗಳಿಗೆ ಇನ್ನೂ ಕೇವಲ 400 ದಿನಗಳು ಉಳಿದಿದ್ದು, ದೇಶದ ಪ್ರತಿ ಮತದಾರರನ್ನೂ ತಲುಪಲು ಕಾರ್ಯಕರ್ತರು ಪ್ರಯತ್ನಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನರ ಸೇವೆಗಾಗಿ ನಾವು ಸಾಧ್ಯವಾದ ಎಲ್ಲವನ್ನೂ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮುಕ್ತಾಯವಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪ್ರಧಾನಿ ಮೋದಿ ಅವರ ಭಾಷಣದ ಕುರಿತು ಮಾಹಿತಿ ನೀಡಿದರು.
2024ರ ಲೋಕಸಭೆ ಚುನಾವಣೆಯಲ್ಲಿ ನಾವು ಇತಿಹಾಸವನ್ನು ರಚಿಸಬೇಕಾಗಿದೆ. ಇದಕ್ಕಾಗಿ ಜನರ ಮನಸ್ಸನ್ನು ಗೆಲ್ಲುವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಗೂ ಮೊದಲು ನಾವು ದೇಶದ ಪ್ರತಿ ಮತದಾರನನ್ನೂ ತಲುಪಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
18-25 ವಯಸ್ಸಿನ ಯುವಕರ ಬಗ್ಗೆ ನಾವು ಹೆಚ್ಚಿನ ಗಮನಹರಿಸಬೇಕು. ಯುವ ಸಮುದಾಯಕ್ಕೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಡಬೇಕು. ಭಾರತದ ಭವಿಷ್ಯವನ್ನು ಯುವ ಪೀಳಿಗೆ ನಿರ್ಮಿಸಲಿದ್ದು, ಅವರ ಕೈಗಳನ್ನು ನಾವು ಬಲಪಡಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾಗಿ ದೇವೇಂದ್ರ ಫಡ್ನವೀಸ್ ತಿಳಿಸಿದರು.
"ಯುವ ಸಮುದಾಯದವರಿಗೆ ಇತಿಹಾಸ ಮತ್ತು ಹಿಂದಿನ ಸರ್ಕಾರಗಳ ದುರಾಡಳಿತದ ಬಗ್ಗೆ ತಿಳಿದಿಲ್ಲ. ಅಲ್ಲದೇ ನಾವು ಉತ್ತಮ ಆಡಳಿತದ ಕಡೆಗೆ ಹೇಗೆ ಸಾಗುತ್ತಿದ್ದೇವೆ ಎಂಬುದರ ಬಗ್ಗೆ ಅವರಿಗೆ ಅರಿವಿನ ಕೊರತೆ ಇದೆ. ನಾವು ಅವರಲ್ಲಿ ಈ ಕುರಿತು ಅರಿವು ಮೂಡಿಸಬೇಕು ಮತ್ತು ಅವರಿಗೆ ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಪರಿಚಯಿಸಬೇಕು. ಯುವ ಸಮುದಾಯ ಉತ್ತಮ ಆಡಳಿತದ ಭಾಗವಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.." ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು ಎಂದು ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದರು.
ಗಡಿ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಸಂಘಟನೆಯನ್ನು ಬಲಪಡಿಸುವತ್ತ ಪಕ್ಷವು ಗಮನಹರಿಸಬೇಕು. ನಾಯಕರು ಎಲ್ಲಾ ಹಂತದ ಜನರನ್ನು ಭೇಟಿ ಮಾಡಬೇಕು. ಬಿಜೆಪಿಯು ಇನ್ನು ಮುಂದೆ ಕೇವಲ ರಾಜಕೀಯ ಚಳವಳಿಯಾಗಿರದೆ, ಸಾಮಾಜಿಕ ಆಂದೋಲನವಾಗಿ ಬದಲಾವಣೆ ಕಾಣಲಿದೆ. ಅದು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಪರಿವರ್ತಿಸಲು ಕೆಲಸ ಮಾಡುತ್ತದೆ ಎಂದು ಪ್ರಧಾನಿ ಮೋದಿ ಸೂಚ್ಯವಾಗಿ ಹೇಳಿದ್ದಾರೆ.
ಭಾರತದ ಅತ್ಯುತ್ತಮ ಯುಗ ("ಸರ್ವೋತ್ತಮ ಕಾಲ") ಬರಲಿದೆ ಮತ್ತು ನಾವು ಅದರ ಅಭಿವೃದ್ಧಿಗೆ ನಮ್ಮನ್ನು ಅರ್ಪಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು ಎಂದು ದೇವೇಂದ್ರ ಫಡ್ನವೀಸ್ ಹೇಳಿದರು.
ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಎರಡನೇ ದಿನದಂದು, ಪಕ್ಷವು ಮುಂದಿನ ವರ್ಷ ಜೂನ್‌ವರೆಗೆ ಪಕ್ಷದ ಮುಖ್ಯಸ್ಥರಾಗಿ ಜೆಪಿ ನಾಡಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಿತು. ಈ ವರ್ಷ ಒಂಬತ್ತು ರಾಜ್ಯಗಳ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಗಳಿಗೆ ಪಕ್ಷದ ಸಿದ್ಧತೆಗೆ ಇದು ಅನುಕೂಲ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ಸಂಬಂಧಿತ ಸುದ್ದಿ
Amit Shah: 2024ರಲ್ಲಿ ಭಾರೀ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರುವುದು ಖಚಿತ: ಅಮಿತ್ ಶಾ ಭರವಸೆಯ ನುಡಿ
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲಿದ್ದು,- ಈ ಕುರಿತು ಯಾರಿಗೂ ಅನುಮಾನ ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆಯ ಮಾತುಗಳನ್ನಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅಮಿತ್ ಶಾ, ಬಿಜೆಪಿ ಈ ದೇಶದ ಜನರ ಆಯ್ಕೆಯಾಗಿದೆ ಎಂದು ಹೇಳಿದರು. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ