ಕನ್ನಡ ಸುದ್ದಿ  /  Karnataka  /  Tumakuru News Congress Leader Rahul Gandhi Stopped His Speech During Azaan In Tumakuru Public Rally Video Rsm

Rahul Gandhi: ತುಮಕೂರು ಸಾರ್ವಜನಿಕ ಸಭೆ ವೇಳೆ ಆಜಾನ್‌ ಶುರುವಾಗುತ್ತಿದ್ದಂತೆ ಭಾಷಣ ನಿಲ್ಲಿಸಿದ ರಾಹುಲ್‌ ಗಾಂಧಿ; ವಿಡಿಯೋ

ತುಮಕೂರಿನ ಮೈದಾನವೊಂದರಲ್ಲಿ ರಾಹುಲ್‌ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಈ ವೇಳೆ ಸಮೀಪದಲ್ಲೇ ಇದ್ದ ಮಸೀದಿಯಲ್ಲಿ ಆಜಾನ್‌ ಆರಂಭವಾಗಿದೆ. ಆಜಾನ್‌ ಆರಂಭವಾಗುತ್ತಿದ್ದಂತೆ ರಾಹುಲ್‌ ಗಾಂಧಿ, ಗೌರವ ಸೂಚಿಸುವ ಉದ್ಧೇಶದಿಂದ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

ತುಮಕೂರಿನ ಸಾರ್ವಜನಿಕ ಸಭೆಯಲ್ಲಿ ರಾಹುಲ್‌ ಗಾಂಧಿ
ತುಮಕೂರಿನ ಸಾರ್ವಜನಿಕ ಸಭೆಯಲ್ಲಿ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ಸುರಿವ ಮಳೆಯಲ್ಲೇ ಭಾಷಣ ಮಾಡಿ ಸುದ್ದಿ ಆಗಿದ್ದರು. ಇದೀಗ ಅವರು ಆಜಾನ್‌ ವೇಳೆ ತಾವು ಮಾಡುತ್ತಿದ್ದ ಭಾಷಣವನ್ನು ಮಧ್ಯದಲ್ಲೇ ನಿಲ್ಲಿಸಿ ಗಮನ ಸೆಳೆದಿದ್ದಾರೆ. ತುಮಕೂರಿನಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಭೆ ವೇಳೆ ಈ ಘಟನೆ ನಡೆದಿದೆ.

ರಾಹುಲ್‌ ಗಾಂಧಿ ಸದ್ಯಕ್ಕೆ ತುಮಕೂರು ಪ್ರವಾಸದಲ್ಲಿದ್ದಾರೆ. ತುಮಕೂರಿನ ಮೈದಾನವೊಂದರಲ್ಲಿ ರಾಹುಲ್‌ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಈ ವೇಳೆ ಸಮೀಪದಲ್ಲೇ ಇದ್ದ ಮಸೀದಿಯಲ್ಲಿ ಆಜಾನ್‌ ಆರಂಭವಾಗಿದೆ. ಆಜಾನ್‌ ಆರಂಭವಾಗುತ್ತಿದ್ದಂತೆ ರಾಹುಲ್‌ ಗಾಂಧಿ, ಗೌರವ ಸೂಚಿಸುವ ಉದ್ಧೇಶದಿಂದ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಎಎನ್‌ಐ ನ್ಯೂಸ್‌ ಏಜೆನ್ಸ್‌ ಈ ವಿಡಿಯೋವನ್ನು ಹಂಚಿಕೊಂಡಿದೆ.

ಭಾಷಣ ಮಾಡುವಾಗ ಹಿರಿಯ ಕಾಂಗ್ರೆಸ್‌ ನಾಯಕ ಕೆ.ಸಿ. ವೇಣುಗೋಪಾಲ್‌, ರಾಹುಲ್‌ ಗಾಂಧಿ ಬಳಿ ಬಂದು ಅವರ ಭುಜವನ್ನು ತಟ್ಟಿ ಭಾಷಣ ನಿಲ್ಲಿಸುವಂತೆ ಸೂಚಿಸುತ್ತಾರೆ. ಸರಿ ಎಂಬಂತೆ ತಲೆ ಆಡಿಸುವ ರಾಹುಲ್‌ ಗಾಂಧಿ ತಕ್ಷಣವೇ ಮಾತನಾಡುವುದನ್ನು ನಿಲ್ಲಿಸುತ್ತಾರೆ. ಆಜಾನ್‌ ಮುಗಿಯುತ್ತಿದ್ದಂತೆ ಮತ್ತೆ ಮಾತನಾಡಲು ಆರಂಭಿಸುತ್ತಾರೆ. ಈ ವಿಡಿಯೋ ಈಗ ವೈರಲ್‌ ಆಗುತ್ತಿದ್ದು ರಾಹುಲ್‌ ಗಾಂಧಿ ಅವರ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಅನೇಕ ಬಾರಿ ಆಜಾನ್‌ ಸದ್ದು ಕೇಳುತ್ತಿದ್ದಂತೆ ತಮ್ಮ ಭಾಷಣವನ್ನು ನಿಲ್ಲಿಸಿದ್ದರು. ಈ ನಡುವೆ ಕರ್ನಾಟಕ ಹಿರಿಯ ಬಿಜೆಪಿ ನಾಯಕ ಕೆ.ಎಸ್.‌ ಈಶ್ವರಪ್ಪ ಆಜಾನ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಶ್ವರಪ್ಪ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು.

ಇತ್ತೀಚೆಗೆ ಮಂಗಳೂರಿನಲ್ಲಿ ಸೀ ಫುಡ್‌ ಸವಿದಿದ್ದ ರಾಹುಲ್‌ ಗಾಂಧಿ

ಏಪ್ರಿಲ್‌ 27 ರಂದು ರಾಹುಲ್‌ ಗಾಂಧಿ ದಿನಪೂರ್ತಿ ಚುನಾವಣಾ ಪ್ರಚಾರ ನಡೆಸಿದರು. ಭರ್ಜರಿ ಪ್ರಚಾರದ ಬಳಿಕ ಸಂಜೆ ವೇಳೆ ಕರಾವಳಿಯ ವಿಶೇಷ ಸ್ವಾದದ ಸಮುದ್ರಾಹಾರಕ್ಕೆ ಮನಸೋತರು. ಕೈ ನಾಯಕರೊಂದಿಗೆ ಮಂಗಳೂರಿನಲ್ಲಿ ಪ್ರಮುಖ ಸೀಫುಡ್‌ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿದ ರಾಹುಲ್‌, ಬಳಿಕ ಪಬ್ಬಾಸ್‌ ಐಸ್‌ಕ್ರೀಮ್‌ ಸವಿದು ಖುಷಿಪಟ್ಟರು.

ಮೀನಿನ ಊಟಕ್ಕೆ ಮಂಗಳೂರು ಫೇಮಸ್.‌ ಅಂತೆಯೇ ಬಗೆಬಗೆಯ ಐಸ್‌ಕ್ರೀಮ್‌ ಉಣಬಡಿಸುವಲ್ಲೇ ಭಾರತದಲ್ಲೇ ಮಂಗಳೂರು ನಂಬರ್‌ ಒನ್.‌ ಮಂಗಳೂರನ್ನು ಭಾರತದ ಐಸ್‌ಕ್ರೀಮ್‌ಗಳ ತವರು (Ice Cream Capital of India) ಎಂದು ಕರೆಯಲಾಗುತ್ತದೆ. ಮಂಗಳೂರಿಗೆ ಬಂದು ಸಮುದ್ರಾಹಾರ ಹಾಗೂ ಐಸ್‌ಕ್ರೀಮ್‌ ಸವಿಯದೆ ಇದ್ದರೆ, ಅ ಪ್ರಯಾಣ ಅಪೂರ್ಣ. ಹೀಗಾಗಿ ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ಇತರ ನಾಯಕರೊಂದಿಗೆ ಮಂಗಳೂರಿನಲ್ಲಿ ವಿಶೇಷ ಆಹಾರ ಹಾಗೂ ಪಬ್ಬಾಸ್‌ ಐಸ್‌ಕ್ರೀಮ್‌ ಸವಿದು ಖುಷಿಪಟ್ಟಿದ್ದರು.

ಮಹಿಳೆಯರಿಗೆ ಉಚಿತ ಬಸ್ ಸೇವೆ ಭರವಸೆ ನೀಡಿದ ರಾಗಾ

ಇತ್ತೀಚೆಗೆ ಮಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ “ನಾವು ಈಗಾಗಲೇ ನಾಲ್ಕು ಭರವಸೆಗಳನ್ನು ನೀಡಿದ್ದೇವೆ. ಈಗ ಅದಕ್ಕೆ ಮತ್ತೊಂದು ಭರವಸೆಯನ್ನು ಸೇರಿಸುತ್ತಿದ್ದೇನೆ. ನಮ್ಮ ಸರ್ಕಾರ ರಚನೆಯಾದ ಮೊದಲ ದಿನದಿಂದಲೇ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಿಗಲಿದೆ” ಎಂದು ಹೊಸ ಭರವಸೆ ನೀಡಿದ್ದಾರೆ.

IPL_Entry_Point