UGC NET 2023 June: ಯುಜಿಸಿ ನೆಟ್ ಎಕ್ಸಾಂಗೆ ಮೇ 31ರ ಮೊದಲು ಅರ್ಜಿ ಸಲ್ಲಿಸಿ, ಇಲ್ಲಿದೆ ಹೆಚ್ಚಿನ ವಿವರ
UGC NET 2023 June: ಯುಜಿಸಿ ನೆಟ್ 2023 ಜೂನ್ ಅವಧಿಯ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸದೆ ಇರುವವರು ಮೇ 31ರ ಮೊದಲು ಅರ್ಜಿ ಸಲ್ಲಿಸಬಹುದು.
ರಾಷ್ಟ್ರೀಯ ಪರೀಕ್ಷಾಏಜೆನ್ಸಿಯು ಯುಜಿಸಿ ನೆಟ್ 2023 ಪರೀಕ್ಷೆಗೆ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ಮೇ 10ರಿಂದ ನೆಟ್ ಎಕ್ಸಾಂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮೇ 31ರ ಸಂಜೆ 5 ಗಂಟೆಗೆ ಮೊದಲು ugcnet.nta.nic.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೆಟ್ ಪರೀಕ್ಷೆಯು ಜೂನ್ 13-22 ರಂದು ನಡೆಯಲಿದೆ. ನೆಟ್ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಜೂನ್ ತಿಂಗಳ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಕೆಲವು ದಿನಗಳ ಹಿಂದೆ ಯುಜಿಸಿ ಚೇರ್ಮನ್ ಎಂ ಜಗದೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದರು.
ಡಿಸೆಂಬರ್ 2018ರ ಬಳಿಕ ಕಂಪ್ಯೂಟರ್ ಆಧರಿತ ಪರೀಕ್ಷೆ(ಸಿಬಿಟಿ) ಯ ಮೂಲಕ ಯುಜಿಸಿ ನೆಟ್ ಪರೀಕ್ಷೆ ನಡೆಸಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ನೆಟ್ ಪರೀಕ್ಷೆ ನಡೆಯುತ್ತದೆ. ಅಂದರೆ, ಡಿಸೆಂಬರ್ ಮತ್ತು ಜೂನ್ ತಿಂಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ.
ಭಾರತದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಜೂನಿಯರ್ ರಿಸರ್ಚ್ ಫೆಲೋಷಿಪ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹತೆ ಪರೀಕ್ಷೆಯಾಗಿ ಯುಜಿಸಿ ನೆಟ್ ನಡೆಸಲಾಗುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ/ ಮೀಸಲೇತರ ಅಭ್ಯರ್ಥಿಗಳು 1500 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಜನರಲ್ ವಿಭಾಗದಲ್ಲಿ ಇಡಬ್ಲ್ಯುಎಸ್/ಒಬಿಸಿ-ಎನ್‌ಸಿಎಲ್ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 325 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ugcnet.nta.nic.in ವೆಬ್‌ಸೈಟ್‌ಗೆ ಪ್ರವೇಶಿಸಿ
- ಮುಖಪುಟದಲ್ಲಿ UGC-NET JUNE 2023 ಲಿಂಕ್ ಕ್ಲಿಕ್ ಮಾಡಿ
- ಬಳಿಕ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಿ ಯುಜಿಸಿ ನೆಟ್ ಪರೀಕ್ಷೆಗೆ ನೋಂದಣಿ ಮಾಡಿ.
- ಸಂಬಂಧಪಟ್ಟ ದಾಖಲೆಪತ್ರಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ | 10 ಮೇ 2023 ರಿಂದ 31 ಮೇ 2023 (ಸಂಜೆ 05:00 ರವರೆಗೆ) |
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ | 01 ಜೂನ್ 2023 (ರಾತ್ರಿ 11:50 ವರೆಗೆ) |
ಅರ್ಜಿ ತಿದ್ದುಪಡಿಗೆ ಅವಕಾಶ | 02 – 03 ಜೂನ್ 2023 (ರಾತ್ರಿ 11:50 ವರೆಗೆ) |
ಪರೀಕ್ಷಾ ಕೇಂದ್ರ ಸಿಟಿ ಮಾಹಿತಿ | ಜೂನ್ ಮೊದಲ ವಾರ |
ಅಡ್ಮಿಟ್ ಕಾರ್ಡ್ ಬಿಡುಗಡೆ | ಜೂನ್ ಎರಡನೇ ವಾರ |
ಪರೀಕ್ಷೆ ನಡೆಯುವ ದಿನಾಂಕ | 13 ಜೂನ್ 2023 to 22 ಜೂನ್ 2023 |
ಪರೀಕ್ಷಾ ಕೇಂದ್ರ ಎಲ್ಲಿ? | ಅಡ್ಮಿಟ್ ಕಾರ್ಡ್‌ನಲ್ಲಿ |
ಆನ್ಸರ್ ಕೀ ಪ್ರಕಟ | ಮುಂದಿನ ದಿನಗಳಲ್ಲಿ ಯುಜಿಸಿ ವೆಬ್‌ನಲ್ಲಿ ಮಾಹಿತಿ ಪ್ರಕಟವಾಗಲಿದೆ |